ಫೆ.10 ರಂದು ಬಿಡುಗಡೆಯಾಗಲಿರುವ “ಪಿಲಿ” ತುಳು ಸಿನಿಮಾ ಥಿಯೇಟರ್ ಗಳಲ್ಲಿ ಪ್ರದರ್ಶಿಸದಂತೆ ನ್ಯಾಯಾಲಯ ತಡೆ ನೀಡಿದೆ.
ಈ ಚಿತ್ರಕ್ಕೆ 40 ಲಕ್ಷ ರೂ.ಬಂಡವಾಳ ಹೂಡಿದ್ದ ನಿರ್ಮಾಪಕ ಮಂಜೀತ್ ನಾಗರಾಜ್ ಅವರ ಬದಲು ಪುತ್ತೂರಿನ ಭರತ್ ಭಂಡಾರಿ ಎಂಬಾತ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು ಇದಕ್ಕೆ ತಡೆ ನೀಡುವಂತೆ ನಿರ್ಮಾಪಕ ಮಂಜೀತ್ ನಾಗರಾಜ್ ಅವರು ನ್ಯಾಯಾಲಯದ ಮೊರೆಹೋಗಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ನಾಳೆ ಬಿಡುಗಡೆಗೊಳ್ಳಲಿರುವ “ಪಿಲಿ” ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.