December 8, 2024
WhatsApp Image 2023-02-06 at 10.37.43 AM

ಬೆಂಗಳೂರು: ಕೊನೆಗೂ ಕಾಂತಾರ ಸಿನೆಮಾದ ಎರಡೇ ಭಾಗದ ಕುತೂಹಲಕ್ಕೆ ರಿಷಬ್ ಶೆಟ್ಟಿ ತೆರೆ ಎಳೆದಿದ್ದಾರೆ. ಕಾಂತಾರ ಶತದಿನ ಸಂಭ್ರದಲ್ಲಿ ಮಾತನಾಡಿದ ಅವರು ಎಲ್ಲರೂ ಕೇಳುತ್ತಿದ್ದಾರೆ?. ” ಕಾಂತಾರ ಭಾಗ 2″ ಯಾವಾಗ ಎಂದು? ಆದರೆ ನೀವು ನೋಡಿರುವುದೇ “ಭಾಗ 2”. “ಕಾಂತಾರ ಭಾಗ 1” ಮುಂದೆ ಬರಲಿದೆ ಎಂದು ತಿಳಿಸಿದರು.

ಕಳೆದವರ್ಷ ತೆರೆಕಂಡು ಕರ್ನಾಟಕ, ಭಾರತ ಮಾತ್ರವಲ್ಲದೆ ಭಾರತದಾಚೆಗೂ ಜನಪ್ರಿಯವಾದ, ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರ ‘ಕಾಂತಾರ’ ಕ್ಕೆ ಈಗ ಶತದಿನದ ಸಡಗರ, ಇತ್ತೀಚೆಗೆ ಈ ಚಿತ್ರದ ಶತದಿನೋತ್ಸವ ಸಮಾರಂಭವನ್ನು ಬೆಂಗಳೂರಿನ ಬಂಟರ ಸಂಘದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅದ್ದೂರಿಯಾಗಿ ಆಯೋಜಿಸಿದ್ದರು. ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾದ ಮುಂದಿನ ಭಾಗದ ಕಥೆ ಏನು ಎನ್ನುವ ಕುತೂಹಲಕ್ಕೆ ಸ್ವತಃ ಅವರೇ ಉತ್ತರಿಸಿದ್ದಾರೆ. “ಕಾಂತಾರದ ಗೆಲುವು ಖುಷಿ ಕೊಟ್ಟಿದೆ. ಈ ಕಥೆಯನ್ನು ಮೊದಲು ಕಾರ್ತಿಕ್ ಗೌಡ ಅವರ ಹತ್ತಿರ, ಆನಂತರ ವಿಜಯ್ ಸರ್ ಅವರ ಬಳಿ ಕಥೆ ಹೇಳಿದೆ. ತಕ್ಷಣ ಒಪ್ಪಿಗೆ ನೀಡಿ ನಿರ್ಮಾಣಕ್ಕೆ ಮುಂದಾದರು.

ಚಿತ್ರವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಯಶಸ್ಸಿಗೆ ಕಾರಣರಾದ ನನ್ನ ಚಿತ್ರತಂಡ, ಮಾಧ್ಯಮದ ಮಿತ್ರರಿಗೆ ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದ. ನನ್ನ ಮಡದಿ ಪ್ರಗತಿ ಅವರಿಗೆ ವಿಶೇಷ ಧನ್ಯವಾದ. ಎಲ್ಲರೂ ಕೇಳುತ್ತಿದ್ದಾರೆ?. ” ಕಾಂತಾರ ಭಾಗ 2″ ಯಾವಾಗ ಎಂದು? ಆದರೆ ನೀವು ನೋಡಿರುವುದೇ “ಭಾಗ 2”. “ಕಾಂತಾರ ಭಾಗ 1” ಮುಂದೆ ಬರಲಿದೆ ಎಂದು ತಿಳಿಸಿದರು. ಮಾಹಿತಿಯಂತೆ ರಿಷಬ್‌ ಸದ್ಯ ಪ್ರೀಕ್ವೆಲ್‌ನ ಸ್ಕ್ರಿಪ್ಟ್‌ ಕಾರ್ಯಗಳನ್ನು ಆರಂಭಿಸಿದ್ದು, ಜೂನ್‌ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ

About The Author

Leave a Reply

Your email address will not be published. Required fields are marked *

You cannot copy content of this page.