Uncategorized

ಯೋಜನೆ, ಉದ್ಯೋಗ ಯುಪಿ ಜನರಿಗೆ ಗುಡ್‌ ನ್ಯೂಸ್ ಕೊಟ್ಟ ಸಿಎಂ

ಲಕ್ನೋ ಮಾರ್ಚ್ 31: ಹೊಸ ಯೋಜನೆಗಳಿಂದ ಜನರು ಸಂತೋಷಪಡಿಸುವುದು ಹಾಗೂ ಉದ್ಯೋಗಾವಕಾಶಗಳು ಹೆಚ್ಚಿಸುವುದು ನಮ್ಮ ಗುರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 6 ವರ್ಷ ಅಧಿಕಾರವನ್ನು ಪೂರೈಸಿದ್ದಾರೆ. ಇದನ್ನು ಇಡೀ ರಾಜ್ಯದಲ್ಲಿ ಬಿಜೆಪಿ ಸಂಭ್ರಮಿಸುತ್ತಿದೆ. ಈ ಮೊದಲು ಯಾರೂ ಸತತ 6 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರಲಿಲ್ಲ. ಯೋಗಿ ಆದಿತ್ಯನಾಥನ್ ಈಗ ಈ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಇದನ್ನು ಸಂಭ್ರಮಿಸಲು ಹಲವು ಹೊಸ ಯೋಜನೆಗಳನ್ನು ಘೋಷಿಸುತ್ತಿದೆ.

Read More »

ಮಂಗಳೂರಿನ ಲಾಡ್ಜ್‌ನಲ್ಲಿ ಆತ್ಯಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು

ಮಂಗಳೂರು, ಮಾರ್ಚ್‌, 31: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ನಡೆದಿದೆ. ದೇವೇಂದ್ರ (48), ನಿರ್ಮಲಾ(48), ಚೈತ್ರಾ(09), ಚೈತನ್ಯ (09), ಆತ್ಮಹತ್ಯೆ ಶರಣಾದವರಾಗಿದ್ದಾರೆ. ಇವರು ಮೂಲತಃ ಮೈಸೂರಿನ ವಿಜಯನಗರ ಮೂಲದವರಾಗಿದ್ದು, ಸಾಲ ತೀರಿಸಲಾಗದೇ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಇಬ್ಬರು ಅವಳಿ ಹೆಣ್ಣುಮಕ್ಕಳು ಕೂಡ ಇದ್ದಾರೆ ಎನ್ನಲಾಗಿದೆ.

Read More »

ಕರ್ನಾಟಕ ಚುನಾವಣೆ; ಕೊಪ್ಪಳದ ಮತಗಟ್ಟೆ, ಒಟ್ಟು ಮತದಾರರ ಮಾಹಿತಿ

ಕೊಪ್ಪಳ, ಮಾರ್ಚ್ 30; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯದಲ್ಲಿ ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಪತ್ರಿಕಾಗೋಷ್ಠಿ ನಡೆಸಿದರು. ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಮಾರ್ಚ್‌ 29ರ ಬೆಳಗ್ಗೆ 11.30 ರಿಂದ ಅನ್ವಯವಾಗುವಂತೆ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಮಾದರಿ ನೀತಿ …

Read More »

IPL 2023: ಈ ಬಾರಿಯ ಐಪಿಎಲ್ ಗೆಲ್ಲುವ ತಂಡವನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ

16ನೇ ಅವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ವಿಶ್ಲೇಷಕರು ತಮ್ಮದೇ ಲೆಕ್ಕಾಚಾರಗಳೊಂದಿಗೆ ಭವಿಷ್ಯ ನಡಿಯುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಯಾವ ತಂಡ ಗೆಲುವು ಸಾಧಿಸಬಹುದು ಎಂಬುದರ ಬಗ್ಗೆ ಸಾಕಷ್ಟು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ತಮ್ಮ ವಿಶ್ಲೇಷಣೆ ಮಾಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಗೆಲುವು ಸಾಧಿಸಲಿದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಈ ಅನಿಸಿಕೆಗೆ ಅವರು ಮೂರು ಪ್ರಮುಖ ಕಾರಣಗಳನ್ನು …

Read More »

 ನಾಲ್ವರು ಆರೋಪಿಗಳ ಗಡಿಪಾರು; 10 ಜನರ ಗಡಿಪಾರಿಗೆ ಸಿದ್ಧತೆ

ಕೋಲಾರ: ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಕೋಲಾರದಿಂದ ನಾಲ್ವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಕೋಲಾರದಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಗಡಿಪಾರು ಮಾಡಲಾಗಿದ್ದು, ಇನ್ನೂ ಹತ್ತು ಜನರ ಗಡಿಪಾರಿಗೆ ಸಿದ್ಧತೆ ನಡೆಸಲಾಗಿದೆ. 598 ರೌಡಿ ಶೀಟರ್ ಗಳ ಮೇಲೆ ನಿಗಾ ವಹಿಸಲಾಗಿದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಬಾಂಡ್ ಬರೆಸಿಕೊಳ್ಳಲಾಗಿದ್ದು, ಭಾಗಿಯಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋಲಾರ ಎಸ್ ಪಿ ಎಂ.ನಾರಾಯಣ ಎಚ್ಚರಿಕೆ ನೀಡಿದ್ದಾರೆ.

Read More »

ಥಟ್ಟಂತ ಮಾಡಬಹುದು ‘ಎಗ್ ಬ್ರೆಡ್ ಟೋಸ್ಟ್

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಥಟ್ಟಂತ ಆಗುವ ರೆಸಿಪಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವಂತಹ ಎಗ್ ಬ್ರೆಡ್ ಟೋಸ್ಟ್ ಇದೆ. ಇದು ಬೇಗ ಆಗುವುದಲ್ಲದೇ ಹೊಟ್ಟೆಯೂ ತುಂಬುತ್ತದೆ. ಬೇಕಾಗುವ ಸಾಮಗ್ರಿಗಳು: 2 ಸ್ಲೈಸ್ ಬ್ರೆಡ್, 1 ಮೊಟ್ಟೆ, 1 ಸಣ್ಣ – ಈರುಳ್ಳಿ, 1 – ಸಣ್ಣ ಟೊಮೆಟೊ, 2 – ಹಸಿಮೆಣಸು, ಚೀಸ್ – 2 ಸ್ಲೈಸ್, ಉಪ್ಪು – ರುಚಿಗೆ ತಕ್ಕಷ್ಟು, ಚಿಟಿಕೆ – ಅರಿಶಿನ, 1 ಟೇಬಲ್ ಸ್ಪೂನ್ – ಕೊತ್ತಂಬರಿ ಸೊಪ್ಪು, 2 ಟೀ ಸ್ಪೂನ್ – …

Read More »

ಮುಖದ ಕಾಂತಿ ಹೆಚ್ಚಲು ನೆರವಾಗುತ್ತೆ ‘ವೀಳ್ಯದೆಲೆ’

ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಕಡೆ ಪಾನ್ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡ್ತಾರೆ. ಈ ವೀಳ್ಯದೆಲೆಯನ್ನು ಪಾನ್ ರೂಪದಲ್ಲಿ ಸೇವನೆ ಮಾಡುವ ಜೊತೆಗೆ ಶುಭ ಕಾರ್ಯಗಳಲ್ಲಿ ದೇವರ ಮುಂದಿಡುತ್ತಾರೆ. ಆದ್ರೆ ವೀಳ್ಯದೆಲೆ ಅಷ್ಟಕ್ಕೆ ಸೀಮಿತವಲ್ಲ. ಚರ್ಮದ ಕಾಂತಿ ಹೆಚ್ಚಿಸುತ್ತದೆ ವೀಳ್ಯದೆಲೆ. ವೀಳ್ಯದೆಲೆಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತವೆ. ಮುಖದ ಚರ್ಮ, ಕಾಂತಿ ಪಡೆಯಲು ನೆರವಾಗುತ್ತವೆ. ಐದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಅದನ್ನು ಸ್ವಚ್ಛವಾಗಿ ತೊಳೆಯಿರಿ. ನಂತ್ರ ವೀಳ್ಯದೆಲೆಯನ್ನು ರುಬ್ಬಿ ಒಂದು ಟೀ ಚಮಚ ಜೇನು ತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. …

Read More »

ʼಚಹಾʼ ಪದೇ ಪದೇ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…?

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ.? ಒಮ್ಮೆ ಪುಡಿ ಅಥವಾ ಎಲೆ ಹಾಕಿ ಸಕ್ಕರೆ ಬೆರಸಿ ಕುದಿಸಿ ಸೋಸಿ ಕುಡಿಯುವ ಚಹಾ ಆ ಕ್ಷಣದಲ್ಲೇ ಮುಗಿದುಬಿಡಬೇಕು. ಸ್ವಲ್ಪ ಉಳಿಯಿತೆಂದು ಹಾಗೇ ಮುಚ್ಚಿಟ್ಟು ತಣ್ಣಗಾದ ಬಳಿಕ ಮತ್ತೆ ಕುದಿಸಿ ಅಥವಾ ಬಿಸಿ ಮಾಡಿ ಕುಡಿಯುವುದರಿಂದ ಆರೋಗ್ಯ ಹಾನಿಯಾಗುವ ಸಾಧ್ಯತೆಯಿದೆ. ಚಹಾದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚು. ಒಮ್ಮೆ ಮಾಡಿದ ಸಕ್ಕರೆ ಮತ್ತು ಹಾಲು ಬೆರೆಸಿದ ಚಹಾವನ್ನು ನಾಲ್ಕು ಗಂಟೆಗಳ …

Read More »

ಎಲೆಕ್ಟ್ರಿಕ್ ವಾಹನ ಸೇರಿದಂತೆ 19 ಮಾದರಿ ಕಾರು ಬಿಡುಗಡೆಗೆ ಬಿಎಂಡಬ್ಲ್ಯು ಚಿಂತನೆ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಬಿಎಂಡಬ್ಲ್ಯು ಈ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ 19 ಕಾರು ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ, ಇದು ದೇಶದಲ್ಲಿ ಎರಡಂಕಿಯ ಮಾರಾಟದ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ದೇಶದಲ್ಲಿ ಇದುವರೆಗಿನ ಮಾರಾಟದ ವಿಷಯದಲ್ಲಿ 2023 ಅತ್ಯುತ್ತಮವಾಗಿದೆ ಎಂದು ನಿರೀಕ್ಷಿಸುತ್ತಿರುವ ಕಾರು ತಯಾರಕರು, ಈ ವರ್ಷ ತನ್ನ ಒಟ್ಟಾರೆ ಮಾರಾಟದಲ್ಲಿ ಸುಮಾರು 15 ಪ್ರತಿಶತದಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ಈ ವರ್ಷ ಭಾರತದಲ್ಲಿ BMW Motorrad ವ್ಯಾಪಾರದ ಅಡಿಯಲ್ಲಿ ಮೂರು ಬೈಕ್ ಮಾದರಿಗಳನ್ನು ಪರಿಚಯಿಸಲು ಕಂಪೆನಿ ಯೋಜಿಸಿದೆ. …

Read More »

ನೂತನ ಸಂಸತ್ ಭವನಕ್ಕೆ ‘ಪ್ರಧಾನಿ ಮೋದಿ’ ದಿಢೀರ್ ಭೇಟಿ

ನವದೆಹಲಿ : ಪ್ರಧಾನಿ ಮೋದಿ ಗುರುವಾರ ತಡರಾತ್ರಿ ಹೊಸ ಸಂಸತ್ ಭವನಕ್ಕೆ ದಿಢೀರ್ ಭೇಟಿ ನೀಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಳೆದು ವಿವಿಧ ಕಾಮಗಾರಿಗಳನ್ನ ಪರಿಶೀಲಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಬರುತ್ತಿರುವ ಸೌಲಭ್ಯಗಳನ್ನ ವೀಕ್ಷಿಸಿದರು. ಪ್ರಧಾನಿಯವರು ಕಟ್ಟಡ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಪ್ರಧಾನಿ ಜೊತೆ ಉಪಸ್ಥಿತರಿದ್ದರು. 10 ಡಿಸೆಂಬರ್ 2020 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನದ ಶಂಕುಸ್ಥಾಪನೆ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ …

Read More »

You cannot copy content of this page.