ಉಡುಪಿ

ಉಡುಪಿ : ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸಾವು

ಉಡುಪಿ ಮತ್ತು ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್‌) ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಹೇರೂರು ನಿವಾಸಿ ಕೃಷ್ಣ ಗಾಣಿಗ ಎಂದು ಗುರುತಿಸಲಾಗಿದ್ದು, ಸಂತೆಕಟ್ಟೆಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿ ರಸ್ತೆಯನ್ನು ಏಕ ಪಥಕ್ಕೆ ಇಳಿಸಿದ ಘಟನೆ ನಡೆದಿದೆ. ದುರದೃಷ್ಟವಶಾತ್ ಎದುರಿನಿಂದ ಬರುತ್ತಿದ್ದ ಲಾರಿಗೆ ಕೃಷ್ಣ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೃಷ್ಣ ಅವರು ಉಡುಪಿ ನಗರ ಪಾಲಿಕೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು …

Read More »

ಕಾರ್ಕಳ: ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ಲಕ್ಷಾಂತರ ರೂ ವಂಚನೆ

ಕಾರ್ಕಳ: ಕ್ರೆಡಿಟ್ ಕಾರ್ಡ್ ಅಕ್ಟಿವ್ ಮಾಡುವ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳದ ಮೂರ್ತಿ ಕೆ.ಆರ್ (34) ಎಂಬವರಿಗೆ ಕ್ರೆಡಿಟ್ ಕಾರ್ಡ್ ಅಕ್ಟಿವ್ ಮಾಡುವ ಬಗ್ಗೆ ಲಿಂಕ್ ಬಂದಿದ್ದು, ಅದನ್ನು ನಂಬಿದ ಮೂರ್ತಿ, ಲಿಂಕ್ ಒತ್ತಿದ್ದರು. ಅಗ ಒಟಿಪಿ ಬಂದಿದ್ದು ಕ್ರೆಡಿಟ್ ಕಾರ್ಡ್‌ನಿಂದ 1,67,657ರೂ ಹಣ ಕಡಿತವಾಯಿತು. ಈ ಮೂಲಕ ಮೂರ್ತಿ ಅವರಿಗೆ ವಂಚನೆ ಎಸಗಿರುವ ಬಗ್ಗೆ ದೂರಲಾಗಿದೆ.

Read More »

ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ

ಮಣಿಪಾಲದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಶ್ರೀ ಗೋಪಿನಾಥ್ ರಾವ್ ಸರ್ವದೇ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್. ಪುಸ್ತಕ ಬಿಡುಗಡೆಗೊಳಿಸಿದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಪುಸ್ತಕದ ಬಗ್ಗೆ ಮಾತನಾಡಿ, ಲೇಖಕರು ಕೆ ಇ ಬೀ ನೌಕರರ ಕೆಲಸ ಕಾರ್ಯದ ಬಗ್ಗೆ …

Read More »

ಉಡುಪಿ: ಮತ ಹಕ್ಕು ಚಲಾಯಿಸಿ ಇಹಲೋಕ ತ್ಯಜಿಸಿದ ಅಜ್ಜಿ

ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೋರ್ವರು ಮನೆಯಲ್ಲೇ ಮತದಾನ ಮಾಡಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಘಟನೆ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರದ ಶ್ಯಾನುಭೋಗರ ಮನೆಯಲ್ಲಿ ಸಂಭವಿಸಿದೆ. ನಿವೃತ್ತ ಗ್ರಾಮಲೆಕ್ಕಾಧಿಕಾರಿ ದಿ| ನಾರಾಯಣ ಉಪಾಧ್ಯ ಅವರ ಪತ್ನಿ ಪಿ. ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟವರು.ಅವರಿಗೆ ಪ್ರಮಾಣದ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಹಿರಿಯ ನಾಗರೀಕರ ಕಾರ್ಯಕ್ರಮದಡಿ ಅವರಿಗೆ ಮನೆಯಿಂದಲೇ ಮತದಾನಕ್ಕೆ ಸಮಯ ನಿಶ್ಚಯವಾಗಿತ್ತು. ಆದ್ದರಿಂದ ಮತದಾನ ಮುಗಿಸಿಯೇ ನಾನು ಆಸ್ಪತ್ರೆಗೆ ತೆರಳುವುದು ಎಂದು ಹೇಳಿದ್ದರಂತೆ.ಬಳಿಕ ಮತದಾನ ಮಾಡಿ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ …

Read More »

ಎ. 24ರಂದು ಉಡುಪಿ ನಗರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೇಟಿ

ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿಗೆ ಆಗಮಿಸಲಿದೆ. ಎ. 19ರಂದು ಉಪ್ಪೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ಹಾಗೂ ಸಂಸದೆ ಸುಮಲತಾ, ಎ. 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಎ. 21ರಂದು ಕಾಪುವಿಗೆ ಸಂಸದ ಪ್ರತಾಪ್‌ ಸಿಂಹ, ಎ. 22ರಂದು ಹಿರಿಯಡಕಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಎ. 24ರಂದು ಉಡುಪಿ ನಗರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ …

Read More »

ಉಡುಪಿ: ಆನ್‌ಲೈನ್‌ ಮೂಲಕ ಮಹಿಳೆಗೆ ಲಕ್ಷಾಂತರ ರೂ. ವಂಚನೆ- ಪ್ರಕರಣ ದಾಖಲು

ಉಡುಪಿ: ಆನ್‌ಲೈನ್‌ ಮೂಲಕ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ. ವೀಣಾ ಎಂಬವರ ವಾಟ್ಸಾಪ್‌ ಸಂಖ್ಯೆಗೆ “ನೀವು ಒಂದು ಗೂಗಲ್‌ ರಿವ್ಯೂ ಮಾಡಿದರೆ 50 ರೂ. ನೀಡಲಾಗುವುದು ಎಂಬ ಸಂದೇಶ ಬಂದಿತ್ತು. ಅದನ್ನು ನಂಬಿದ ಅವರು ಗೂಗಲ್‌ ರಿವ್ಯೂ ಮಾಡಿದ್ದು, ಮೊದಲು 150 ರೂ. ಪಡೆದಿದ್ದರು.ಅನಂತರ ಆರೋಪಿಯು ವೀಣಾರಿಗೆ ವಿವಿಧ ಟಾಸ್ಕ್ ಗಳನ್ನು ನೀಡಿ ನಂಬಿಸಿ ಒಟ್ಟು 2,21,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಉಡುಪಿ: ನಾಲ್ವರ ಕೊಲೆ ಪ್ರಕರಣ – ಜೂನ್ 13 ರಿಂದ ಸಾಕ್ಷಿಗಳ ವಿಚಾರಣೆ ಆರಂಭ

ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆರೋಪಿ ಪ್ರವೀಣ್ ಚೌಗುಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ಪ್ರಕರಣವನ್ನು ಉಡುಪಿ ಸೆಷನ್ಸ್ ಕೋರ್ಟ್ ನಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಆರೋಪಿ ಪರ ವಕೀಲರು ಮೆಮೋ ಸಲ್ಲಿಕೆ ಮಾಡಿದ್ದರೂ ನ್ಯಾಯಪೀಠ ಅಂಗೀಕರಿಸಿಲ್ಲ. ಸಾಕ್ಷಿಗಳಿಗೆ ಸಮನ್ಸ್ ನೀಡಿ, ಮುಂದಿನ ವಿಚಾರಣೆಯು ಜೂನ್ 13ರಿಂದ 15ರ ಅವಧಿಯಲ್ಲಿ ನಡೆಯಲಿದೆ. ಮೊದಲನೇ ದಿನ ಒಬ್ಬರು ಹಾಗೂ ಉಳಿದ ದಿನಗಳಲ್ಲಿ ತಲಾ ಇಬ್ಬರಂತೆ ಮೂರು ದಿನಗಳ ಕಾಲ 5 …

Read More »

ಎಳೆವೆಯಲ್ಲಿಯೇ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು- ರವಿರಾಜ್ ಹೆಚ್ ಪಿ.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಸುನಾಗ್ ಆಸ್ಪತ್ರೆ ಆಶ್ರಯದಲ್ಲಿ ಸುನಾಗ್ ನವ್ಯಹಿತ ಬೇಸಿಗೆ ಶಿಬಿರವು ಉಡುಪಿ ಕುಂಜಿಬೆಟ್ಟು ಪರಿಸರದ ಐಡನ್ ಸ್ಟೆ ಹೂಮ್ ನಲ್ಲಿ ಗುರುವಾರ ಉದ್ಘಾಟನೆಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಶಿಬಿರಗಳಿಗೆ ಸಹಕಾರವನ್ನು ನೀಡುತ್ತಿದ್ದು, ಈ ಶಿಬಿರದ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ನಾಡಿನ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಆಗಮಿಸುತ್ತಿದ್ದು ಒಂದು ಪರಿಪೂರ್ಣ ಶಿಬಿರವಾಗುತ್ತದೆ .ಆಟದ ಮೂಲಕ …

Read More »

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಭೀಕರ ಅಪಘಾತ ಪ್ರಕರಣ: ದಂಪತಿ ಸಾವು- ಬದುಕುಳಿದ ಮಗ

ಕುಂದಾಪುರ: ಬೊಬ್ಬರ್ಯನಕಟ್ಟೆ ಎದುರಿನ ಮೇಲ್ಸೇತುವೆ ಮೇಲೆ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದು, ಅವರ ಪುತ್ರ ಬದುಕುಳಿದಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ವೇಗವಾಗಿ ಬಂದ ಕಾರು ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಬಿದ್ದಿದೆ. ಮೃತರನ್ನು ಕೇರಳದ ಕಣ್ಣೂರು ಮೂಲದ ಮುನ್ನಾವರ್ (49), ಅವರ ಪತ್ನಿ ಸಮೀರ (41) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅವರ ಪುತ್ರ ಸುಹೇಲ್ (18) ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ. ಅವರ ಪತ್ನಿ ಸಮೀರಾ ಕೇರಳದ ಕಣ್ಣೂರಿನವರಾದ ಕಾರಣ ಮುನ್ನಾವರ್ ಮತ್ತು ಅವರ ಕುಟುಂಬ ಕೊಲ್ಲಾಪುರದಿಂದ ಕಣ್ಣೂರಿಗೆ ಪ್ರಯಾಣಿಸುತ್ತಿದ್ದರು. …

Read More »

ಕುಂದಾಪುರ : ಭೀಕರ ಅಪಘಾತ -ಮೂವರ ಸ್ಥಿತಿ ಗಂಭೀರ

ಕುಂದಾಪುರ :ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ನಡೆದಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಪಾಂಡಿಚೇರಿ ಮಾಹಿತಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಭಕ್ತರು ಪ್ರಯಾಣಿಸುತ್ತಿದ್ದ ಟೊಯೋಟೊ ಇನ್ನೋವಾ ಕಾರು ಅಪಘಾತಗೀಡಾಗಿದೆ. ಕುಂದಾಪುರ ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಸಮೀಪದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ಫ್ಲೈ …

Read More »

You cannot copy content of this page.