ತಾಜಾ ಸುದ್ದಿ

ಮಲ್ಪೆ : ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋದ ಮೂವರು ಪ್ರವಾಸಿಗರು : ಓರ್ವ ಮೃತ್ಯು…!!

ಉಡುಪಿ: ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂರು ಜನರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್ ನಲ್ಲಿ  ಸಂಭವಿಸಿದೆ. ಮೃತರನ್ನು ಹಾಸನ ಜಿಲ್ಲೆಯ ದಾಬೆಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಸಂತೋಷ್ ಹಾಗೂ ಮತ್ತೊಬ್ಬರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬೆಬೇಲೂರಿನಿಂದ 20 ಜನರು ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನು ರಕ್ಷಿಸಿ, …

Read More »

ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿಷವುಣಿಸಿ ಕೊಂದ ತಾಯಿ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಅವಳಿ ಜವಳಿ ಮಕ್ಕಳ ಅನುಮಾನಾಸ್ಪದ ಸಾವಿಗೇ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾಯಿ ಮಕ್ಕಳಿಗೆ ವಿಷವುಣಿಸಿ ಕೊಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ. ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು ಎಂದು ಹೇಳಲಾಗಿತ್ತು.ಬೀದಿ ಬದಿ ಮಾರಾಟಕ್ಕಿದ್ದ ಐಸ್‌ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು ತಾಯಿ ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು. ಆದರೆ ಪೊಲೀಸರ ವಿಚಾರಣೆಯ ವೇಳೆ ತಾಯಿ ಪೂಜಾ ನಾನೇ ವಿಷಯವುಣಿಸಿ ಕೊಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ …

Read More »

ಪ್ರಧಾನಿಯವರ ಚಿತ್ರ ಬಿಡಿಸಿದ ಕರಾವಳಿಯ ಕಲಾವಿದನಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ

ಮಂಗಳೂರು: ಪ್ರಧಾನಿಯವರ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಖುದ್ದು ಮೋದಿಯವರಿಗೇ ನೀಡಿರುವ ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿಯವರ ಕಚೇರಿಯಿಂದ ಬುಧವಾರ ಕರೆ ಬಂದಿದ್ದು, ಮೆಚ್ಚುಗೆ ಪತ್ರ ನೀಡಿದ್ದಾರೆ. ತೊಕ್ಕೊಟ್ಟುವಿನ ಪಿಲಾರ್ ನ ಕಲಾವಿದ ಕಿರಣ್ ಸಿ. ಅವರು ಮೋದಿಯವರ ಚಿತ್ರ ಬಿಡಿಸಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ರೋಡ್ ಶೋ ವೇಳೆ ಪ್ರದರ್ಶಿಸಿದ್ದಾರೆ. ಇದನ್ನು ಮೋದಿಯವರು ಗಮನಿಸಿ, ತಕ್ಷಣ ಎಸ್ ಪಿ ಜಿ ಕಮಾಂಡೊ ಮೂಲಕ ಚಿತ್ರವನ್ನು ತರಿಸಿ ಕಲಾವಿದನಿಗೆ ರೋಡ್ ಶೋ ವೇಳೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಲಾವಿದ …

Read More »

ಬರೋಬ್ಬರಿ 247 ಪಿಡಿಓ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಹಾಕಿ

ಕರ್ನಾಟಕ ರಾಜ್ಯ ಸರ್ಕಾರದ ‘ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ’ ವ್ಯಾಪ್ತಿಯಲ್ಲಿ ಖಾಲಿ ಇರುವ ನೂರಾರು ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಹುದ್ದೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ‘ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ’ ವ್ಯಾಪ್ತಿಯಲ್ಲಿ ಬರೋಬ್ಬರಿ 247 ಪಿಡಿಓ (Panchayat Development Officer) ಖಾಲಿ ಹುದ್ದೆಗಳಿವೆ. ಇವುಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮೇ 15 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಇದಕ್ಕೂ ಮೊದಲು ಇಲ್ಲಿ ನೀಡಲಾಗಿರುವ ವಿದ್ಯಾರ್ಹತೆ, ವಯೋಮಿತಿ, ಶುಲ್ಕ, ಇನ್ನಿತರ …

Read More »

ಕಾರ್ಕಳ: ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ಲಕ್ಷಾಂತರ ರೂ ವಂಚನೆ

ಕಾರ್ಕಳ: ಕ್ರೆಡಿಟ್ ಕಾರ್ಡ್ ಅಕ್ಟಿವ್ ಮಾಡುವ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳದ ಮೂರ್ತಿ ಕೆ.ಆರ್ (34) ಎಂಬವರಿಗೆ ಕ್ರೆಡಿಟ್ ಕಾರ್ಡ್ ಅಕ್ಟಿವ್ ಮಾಡುವ ಬಗ್ಗೆ ಲಿಂಕ್ ಬಂದಿದ್ದು, ಅದನ್ನು ನಂಬಿದ ಮೂರ್ತಿ, ಲಿಂಕ್ ಒತ್ತಿದ್ದರು. ಅಗ ಒಟಿಪಿ ಬಂದಿದ್ದು ಕ್ರೆಡಿಟ್ ಕಾರ್ಡ್‌ನಿಂದ 1,67,657ರೂ ಹಣ ಕಡಿತವಾಯಿತು. ಈ ಮೂಲಕ ಮೂರ್ತಿ ಅವರಿಗೆ ವಂಚನೆ ಎಸಗಿರುವ ಬಗ್ಗೆ ದೂರಲಾಗಿದೆ.

Read More »

ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ

ಮಣಿಪಾಲದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಶ್ರೀ ಗೋಪಿನಾಥ್ ರಾವ್ ಸರ್ವದೇ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್. ಪುಸ್ತಕ ಬಿಡುಗಡೆಗೊಳಿಸಿದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಪುಸ್ತಕದ ಬಗ್ಗೆ ಮಾತನಾಡಿ, ಲೇಖಕರು ಕೆ ಇ ಬೀ ನೌಕರರ ಕೆಲಸ ಕಾರ್ಯದ ಬಗ್ಗೆ …

Read More »

ಪುತ್ತೂರು: ಜೀಪು ಬೈಕ್‌ ಮದ್ಯೆ ಅಪಘಾತ : ಬೈಕ್‌ ಸವಾರ ಸಾವು- ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಢಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಡಕ್ಕೋಡಿ ಕಡ್ಯ ನಿವಾಸಿ ಲೋಕೇಶ್(48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದಿಬಂದಿದೆ. ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ …

Read More »

ಮಂಗಳೂರು : ಬೈಕ್‌ಗೆ ಕಾರು ಡಿಕ್ಕಿ – ವಿದ್ಯಾರ್ಥಿ ಮೃತ್ಯು..!

ಮಂಗಳೂರು : ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ರಾತ್ರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾ‌ರ್ ಸಹ್ಯಾದ್ರಿ ಕಾಲೇಜಿನ ಎದುರು ನಡೆದಿದೆ. ಮೃತರನ್ನು ಬೆಳ್ತಂಗಡಿಯ ಸಾವೊ ಮಹೇಶ್(20) ಎಂದು ಗುರುತಿಸಲಾಗಿದೆ. ಇವರು ಸಹ್ಯಾದ್ರಿ ಕಾಲೇಜಿನ ರೊಬೊಟಿಕ್ ವಿಭಾಗದ ವಿದ್ಯಾರ್ಥಿಯಾಗಿದ್ದರು. ಟ್ಯೂಷನ್ ತರಗತಿ ಮುಗಿಸಿಕೊಂಡು ಮಹೇಶ್, ಸಹಪಾಠಿ ಪ್ರಣಮ್ ಶೆಟ್ಟಿ ಜೊತೆ ಬೈಕ್‌ನಲ್ಲಿ ಮನೆಗೆ ತೆರಳಲು ಕಾಲೇಜು ಎದುರಿನ ಡಿವೈಡ‌ರ್ ಬಳಿ ಯುಟರ್ನ್ ಪಡೆದು ಮುಂದಕ್ಕೆ ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪರಿಣಾಮ ಬೈಕ್ …

Read More »

ಬ್ರಹ್ಮಾವರ : ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ ವೃದ್ಧೆ

ಬ್ರಹ್ಮಾವರ : ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನದಲ್ಲಿ ನಡೆದಿದೆ. ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಮೃತಪಟ್ಟವರು. ಯಶೋಧಾ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ. ಹಿರಿಯ ನಾಗರಿಕರ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಕಾರ್ಯಕ್ರಮ ನಡೆಯುತ್ತಿದೆ. ಯಶೋಧಾ ಅವರಿಗೆ ಮತದಾನದ ದಿನ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ, ಅವರು ಮತದಾನ ಮಾಡಿ ಆಸ್ಪತ್ರೆ ತೆರಳಲು ನಿಶ್ಚಯಿಸಿದ್ದರು. ಮತದಾನದ ಬಳಿಕ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ …

Read More »

ಉಡುಪಿ: ಮತ ಹಕ್ಕು ಚಲಾಯಿಸಿ ಇಹಲೋಕ ತ್ಯಜಿಸಿದ ಅಜ್ಜಿ

ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೋರ್ವರು ಮನೆಯಲ್ಲೇ ಮತದಾನ ಮಾಡಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಘಟನೆ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರದ ಶ್ಯಾನುಭೋಗರ ಮನೆಯಲ್ಲಿ ಸಂಭವಿಸಿದೆ. ನಿವೃತ್ತ ಗ್ರಾಮಲೆಕ್ಕಾಧಿಕಾರಿ ದಿ| ನಾರಾಯಣ ಉಪಾಧ್ಯ ಅವರ ಪತ್ನಿ ಪಿ. ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟವರು.ಅವರಿಗೆ ಪ್ರಮಾಣದ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಹಿರಿಯ ನಾಗರೀಕರ ಕಾರ್ಯಕ್ರಮದಡಿ ಅವರಿಗೆ ಮನೆಯಿಂದಲೇ ಮತದಾನಕ್ಕೆ ಸಮಯ ನಿಶ್ಚಯವಾಗಿತ್ತು. ಆದ್ದರಿಂದ ಮತದಾನ ಮುಗಿಸಿಯೇ ನಾನು ಆಸ್ಪತ್ರೆಗೆ ತೆರಳುವುದು ಎಂದು ಹೇಳಿದ್ದರಂತೆ.ಬಳಿಕ ಮತದಾನ ಮಾಡಿ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ …

Read More »

You cannot copy content of this page.