ತಾಜಾ ಸುದ್ದಿ

ಮಣಿಪಾಲ: ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ..!

ಉಡುಪಿ:  ಮಣಿಪಾಲದ ವಾಗ್ಷಾದಲ್ಲಿ ಮೂರನೇ ವರ್ಷ ಬಿಎ (ಕಲ್ನರಿ ಆರ್ಟ್ಸ್) ವಿದ್ಯಾರ್ಥಿಯಾಗಿರುವ ಬೆಂಗಳೂರಿನ ಹಿತೇಂದ್ರ (26)  ತಾನು ವಾಸವಾಗಿದ್ದ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ತಾಯಿಗೆ ಕರೆ ಮಾಡಿದ್ದ ಹಿತೇಂದ್ರ, ಪರೀಕ್ಷೆಯನ್ನು ಚೆನ್ನಾಗಿ ಮಾಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ. ತಾಯಿ ಧೈರ್ಯ ತುಂಬಿದ ಬಳಿಕ ಮುಂದೆ ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಹಿತೇಂದ್ರ ತಂದೆ ಲಕ್ಷ್ಮೀನರಸಿಂಹ ತಿಳಿಸಿದ್ದಾರೆ. ಕಾಲೇಜಿನ ಉಪಪ್ರಾಂಶುಪಾಲರು ತನಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದು, ಇಂದು ಬೆಳಗ್ಗೆ ಬಂದು ರೂಮಿನ …

Read More »

ಉಡುಪಿ: ಅಂಬಾಗಿಲು ಹೆದ್ದಾರಿಯಲ್ಲಿ ಸರಕಾರಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು..!

ಉಡುಪಿಯಿಂದ ಸಂತೆಕಟ್ಟೆಗೆ ಸಾಗುವ ಹೆದ್ದಾರಿಯ ಅಂಬಾಗಿಲು ಜಂಕ್ಷನ್ ನಿಂದ ತುಸು ದೂರದಲ್ಲಿರುವ  ಬಿರಿಯಾನಿ ಸ್ಪಾಟ್  ಹೋಟೇಲ್ ಎದುರುಗಡೆ ರಸ್ತೆಯನ್ನು ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರಿಗೆ ಕುಂದಾಪುರ ಕ್ಕೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಘಟನೆ ಸಂಭವಿಸಿದೆ. ರಾತ್ರಿ 8:45 ಗಂಟೆಗೆ ಅಪಘಾತ ಸಂಭವಿಸಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿಯು ಮ್ರತಪಟ್ಟಿರುವುದಾಗಿ ಧ್ರಢೀಕರಿಸಿದರು. ಈ ಬಗ್ಗೆ ಉಡುಪಿ ಸಂಚಾರಿ   ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿಯ ಮ್ರತದೇಹವು  ಕೆ ಎಂ ಸಿ ಮಣಿಪಾಲ …

Read More »

ನೀತಿ ಸಂಹಿತೆ ಉಲ್ಲಂಘನೆ – ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ದ ಪ್ರಕರಣ ದಾಖಲು

ಪುತ್ತೂರು: ಲೋಕಸಭೆ ಮತ್ತು ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳ ಸಭೆ ಕರೆದು ನೀತಿ ಸಂಹಿತೆ ಉಲ್ಲಂಘಿಸಿದ್ದು. ಇದೀಗ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು ನಗರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಶಾಸಕರ ಕಛೇರಿಯಲ್ಲಿ ನೀರು ಪೂರೈಕೆ ಅಧಿಕಾರಿಗಳ ಸಭೆ ಕರೆದಿದ್ದರು. ಈ ಸಭೆಗೆ ಚುನಾವಣಾ ಅಧಿಕಾರಿಗಳು ಆಗಮಿಸಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸಭೆ ನಡೆಸಲು ಅನುಮತಿಯಿಲ್ಲ ಎಂದು ಸೂಚನೆ ನೀಡಿದರು. ಆದರೆ ಶಾಸಕರು ನೀರಿನ ಸಮಸ್ಯೆಯಿಂದಾಗಿ ಜನರಿಗೆ …

Read More »

ಮೂಲ್ಕಿ: ಮರುವಾಯಿ ಹೆಕ್ಕಲು ಹೋದ ಯುವಕ ನೀರುಪಾಲು, ಇಬ್ಬರ ರಕ್ಷಣೆ

ಮೂಲ್ಕಿ: ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿ, ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ. ಮುಲ್ಕಿಯ ಕೊಳಚಿಕಂಬಳದ ಬಳಿಯ ಸಸಿಹಿತ್ಲು ಮುಂಡಾ ಬೀಚ್ ತೀರದ ಅಳಿವೆ ಪ್ರದೇಶಕ್ಕೆ ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ ಚಿಪ್ಪು ಹೆಕ್ಕಲು ಬಂದಿದ್ದರು. ಶಾಂಭವಿ …

Read More »

ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆ

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿಯಿರುವ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ನೀರಿನ ಟ್ಯಾಂಕ್‌ ಬಳಿ ಗಾಂಜಾ ಗಿಡ ಇದ್ದ ಬಗ್ಗೆ ಅಲ್ಲಿನ ಸ್ಥಳೀಯರ ಗಮನಕ್ಕೆ ಬಂದಿರುತ್ತದೆ. ಮಾಹಿತಿ ತಿಳಿದ ಸ್ಥಳೀಯರು ಅದನ್ನು ಪರಿಶೀಲಿಸಿ ಫೋಟೋ ತೆಗೆದು ಸ್ಥಳೀಯ ಪೊಲೀಸ್‌ ಠಾಣೆಗೆ ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಬಳಿಕ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯನಿರ್ವಹಣಾಧಿಕಾರಿಗಳು ಆದಿ ಸುಬ್ರಹ್ಮಣ್ಯ ದೇವಸ್ಥಾನದ …

Read More »

ಉಡುಪಿಯಲ್ಲಿ ಖ್ಯಾತ ವಯೊಲಿನ್ ವಾದಕಿ ಗಂಗಾ ಶಶಿಧರನ್​

ಉಡುಪಿ: ಮೇ​15ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆ ​ಮೂವತ್ತನೆ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ​ಹಾಗು ​ಪಂಚಮಿ ಟ್ರಸ್ಟ್, ಪಂಚಲಹರಿ ಪೌ೦ಡೇಶನ್ ಪ್ರಾಯೋಜಕತ್ವದಲ್ಲಿ ​ಖ್ಯಾತ ಬಾಲಕಿ ಗಂಗಾ ಶಶಿಧರನ್ ಗುರುವಾಯೂರು ಹಾಗೂ ಅವರ ಗುರುb ಅನುರೂಪ್ ಗುರುವಾಯೂರು ಮತ್ತು​ ತಂಡದವರಿಂದ ವಯೊಲಿನ್ ವಾದನ ನಡೆಯಲಿದೆ​. ತ್ರಿಶೂರ್ ನ ಹತ್ತು ವರ್ಷದ ಪುಟ್ಟ ಬಾಲಕಿ ಗಂಗಾ ಶಶಿಧರನ್ ವಯೊಲಿನ್ ವಾದನದ ಮೂಲಕ ನಾಡಿನ ಸಮಸ್ತರ ಗಮನ ಸೆಳೆದಿದ್ದಾಳೆ. ಸತತ ಪರಿಶ್ರಮದ ಮೂಲಕ ಎಳವೆಯಲ್ಲಿಯೇ ಅದ್ಭುತವಾದ ವಯೊಲಿನ್ ನುಡಿಸುವ ಮೂಲಕ …

Read More »

ಉಪ್ಪಿನಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ -ಪ್ರಕರಣ ದಾಖಲು

ಉಪ್ಪಿನಂಗಡಿ ಸಮೀಪ ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತ ಗಂಡಸು ಮತ್ತು ಹೆಂಗಸು ಹಾಡುಹಗಲೇ ಮನೆಯೊಳಗೆ ಪ್ರವೇಶಿಸಿ ಮಗುವನ್ನು ಕೊಲ್ಲುವ ಬೆದರಿಕೆಯೊಡ್ಡಿ, ಮಹಿಳೆಯ ಮೈ ಮೇಲಿದ್ದ ಚಿನ್ನಾಭರಣವನ್ನು ದರೋಡೆಗೈದ ಘಟನೆ ಶನಿವಾರ ಸಂಭವಿಸಿದೆ. ಝಕರಿಯಾ ಎಂಬವರ ಪತ್ನಿ ಸುಹೈಬಾ(25) ಅವರು ಇಂದು ಬೆಳಗ್ಗೆ 10.20ರ ಸುಮಾರಿಗೆ ಮನೆಯ ಎದುರು ಸಿಟೌಟ್‍ನಲ್ಲಿ ಕಸ ಗುಡಿಸುತ್ತಿರುವಾಗ ಮನೆಯ ಅಂಗಳಕ್ಕೆ ಅಪರಿಚಿತ ಗಂಡಸು ಮತ್ತು ಹೆಂಗಸು ಬಂದು ಸುಹೈಬಾರಿಗೆ ಕರಪತ್ರವೊಂದನ್ನು ತೋರಿಸಿ ಸಹಾಯ ಮಾಡಬೇಕು ಎಂದು ಹೇಳಿ, ಕುಡಿಯಲು ನೀರು …

Read More »

ಮಣಿಪಾಲ: ಹಾಸ್ಟೆಲ್‌ನಲ್ಲಿ ವಾಸವಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: ಹಾಸ್ಟೆಲ್‌ನಲ್ಲಿ ವಾಸವಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಹಿತೇಂದ್ರ (26) ಅವರು ಜೀವನದಲ್ಲಿ ಜಿಗುಪ್ಪೆಯಿಂದ ತಾನು ವಾಸವಿದ್ದ ರೂಮ್‌ ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿಗೆ ಕರೆ ಮಾಡಿ ಕಾಲೇಜಿನಲ್ಲಿ ನಡೆದ ಪ್ರೆಸೆಂಟೇಶನ್ ಸರಿಯಾಗಿ ಮಾಡಿಲ್ಲವೆಂದು ಬೇಜಾರು ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರಿಯಾಗಿ ಮಾಡುವುದಾಗಿ ತಿಳಿಸಿದ್ದ ಎಂದು ತಿಳಿದು ಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

`HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ರವರೆಗೆ ಅವಕಾಶ : ಜೂ.1ರಿಂದ ದಂಡ ವಸೂಲಿಗೆ ನಿರ್ಧಾರ

ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ 3 ಬಾರಿ ಅವಧಿ ವಿಸ್ತರಣೆ ಮಾಡಿ ಮೇ 31ಕ್ಕೆ ಗಡುವು ವಿಸ್ತರಿಸಿದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಎರಡು …

Read More »

ಬಂಟ್ವಾಳ: ಖೋಟಾ ನೋಟು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ಇಬ್ಬರ ಬಂಧನ

ಬಂಟ್ವಾಳ: ಖೋಟಾ ನೋಟು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಓರ್ವ ಮಹಿಳೆ ಹಾಗೂ ಇನ್ನೋರ್ವ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಿ ಸಿ ರೋಡಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಮೊಹಮ್ಮದ್ ಸಿ ಎ (61), ಉಬೈದಾ ಮಂಝಿಲ್ ನಿವಾಸಿ ಕಮರುನ್ನೀಸಾ (41) ಹಾಗೂ ಪರಾರಿಯಾದವನನ್ನು ಶರೀಫ್ ಎಂದು ಹೆಸರಿಸಲಾಗಿದೆ. ಶುಕ್ರವಾರ ರಾತ್ರಿ ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೆ ಎಲ್ …

Read More »

You cannot copy content of this page.