ತಾಜಾ ಸುದ್ದಿ

ಶಾಸಕ ಹರೀಶ್ ಪೂಂಜ ಬಂಧಿಸಿದ್ರೇ ಮುಂದಾಗೋ ಅನಾಹುತಕ್ಕೆ ಸರ್ಕಾರವೇ ಹೊಣೆ: ಬಿವೈ ವಿಜಯೇಂದ್ರ ಎಚ್ಚರಿಕೆ

ಬೆಂಗಳೂರು: ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಪೂಂಜಾ ಭಾಷಣ ನೋಡಿದ್ದೇನೆ, ಅವರ ಜತೆ ಚರ್ಚಿಸಿದ್ದೇನೆ. ವಿಷಯ ಮರೆಮಾಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ. ಶಾಸಕ ಹರೀಶ್ ಪೂಂಜಾ ಬಂಧನ ಸಾಧ್ಯತೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರು ಉದ್ವೇಗದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದು ಸರಿ ಅಲ್ಲ ಎಂದು ಅವರಿಗೂ ಅರಿವಾಗಿದೆ. ಹಾಗಂತ ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು. ಶಾಸಕರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ, ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. …

Read More »

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾರನ್ನು ಅರೆಸ್ಟ್ ಮಾಡಲು ಮನೆಗೆ ಬಂದ ಪೋಲಿಸರು- ಸಾವಿರಾರು ಕಾರ್ಯಕರ್ತರು ಜಮಾ

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಕಾರಿಗೆ ವಿಚಾರದಲ್ಲಿ ಬಿಜೆಪಿ ಮುಖಂಡನನ್ನು ಅರೆಸ್ಟ್ ಮಾಡಿರುವ ವಿಚಾರಕ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ದ ಇದೀಗ ಎರಡು ಎಫ್ಐಆರ್ ದಾಖಲಾಗಿದ್ದು, ಈ ಹಿನ್ನಲೆ ಪೊಲೀಸರು ಪೂಂಜಾ ಅರೆಸ್ಟ್ ಗೆ ಮನೆಗೆ ಆಗಮಿಸಿದ್ದಾರೆ. ಮೇ 18 ರಂದು ಅಕ್ರಮ ಕಲ್ಲು ಕೋರೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ವಿನಾಕಾರಣ ಬಂಧಿಸಲಾಗಿರುವುದನ್ನು ಖಂಡಿಸಿ ಶಾಸಕ ಹರೀಶ್ ಪೂಂಜ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಪ್ರತಿಭಟಿಸಿ ಪೊಲೀಸರಿಗೆ ನಿಂಧಿಸಿದ್ದರು. ಬಳಿಕ ನಡೆದ ಮೇ.20 …

Read More »

ಮಂಗಳೂರು: ಕೋರ್ಟ್ ರಸ್ತೆಯಲ್ಲಿ ಭಾರೀ ಗಾತ್ರದ ಮರದ ಕೊಂಬೆ ಬಿದ್ದು 2 ವಾಹನಗಳು ಜಖಂ

ಮಂಗಳೂರು: ಭಾರೀ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಪಾರ್ಕ್ ಮಾಡಿರುವ ಎರಡು ಕಾರುಗಳು ಜಖಂಗೊಂಡ ಘಟನೆ ನಗರದ ಕರಂಗಲಪಾಡಿ ಬಳಿಯ ಕೋರ್ಟ್ ಸಂಪರ್ಕ ರಸ್ತೆಯ ಬಳಿ ನಡೆದಿದೆ. ಈ ಘಟನೆ ಮಂಗಳವಾರ ರಾತ್ರಿ 9.30ವೇಳೆಗೆ ನಡೆದಿದೆ‌. ಕರಂಗಲಪಾಡಿಯಿಂದ ಕೋರ್ಟ್ ಸಂಪರ್ಕ ರಸ್ತೆಯ ಬುಡದಲ್ಲಿಯೇ ಆಮ್ಲೇಟ್ ಅಂಗಡಿಯಿದ್ದು, ಈ ವೇಳೆ ಅಲ್ಲಿ ಹೆಚ್ಚಿನ ಗ್ರಾಹಕರೂ ಇದ್ದರು‌. ಅಲ್ಲಿಯೇ ಪಕ್ಕದಲ್ಲಿರುವ ಭಾರೀ ಗಾತ್ರದ ಆಲದ ಮರದ ಕೊಂಬೆ ಮುರಿದುಬಿದ್ದಿದೆ. ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದು, ವಾಹನಗಳ ಒಳಗಡೆ ಯಾರೂ ಇರಲಿಲ್ಲ. ಆದ್ದರಿಂದ ಯಾವುದೇ ಸಾವು-ನೋವು …

Read More »

HSRP ನಂಬರ್ ಪ್ಲೇಟ್ ಅಳವಡಿಸಲು ಜೂ. 12ರವರೆಗೆ ಕಾಲವಕಾಶ ನೀಡಿದ ಸರ್ಕಾರ

ಬೆಂಗಳೂರು: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗಲಿದ್ದಾರೆ. ಹೆಚ್‌ಎಸ್‌ಆರ್‌ಪಿ ಅಳವಡಿಸದವರ ವಿರುದ್ಧ ಜೂನ್ 12ರ ವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸಿದ್ದಪಡಿಸುವ ಕಂಪನಿಗಳಲ್ಲಿ ಒಂದಾದ ಬಿಎನ್‌ಡಿ ಎನಾರ್ಜಿ ಲಿಮಿಟೆಡ್‌ ನಂಬರ್ ಫಲಕ ಅಳವಡಿಸಲು ವಿಧಿಸಿರುವ ಮೇ 31ರ ಗಡುವು ವಿಸ್ತರಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ರಜಾಕಾಲದ ನ್ಯಾಯಪೀಠ ವಿಚಾರಣೆ ನಡೆಸಿತು.   ಜೂ.11ರಂದು …

Read More »

ಬಂಟ್ವಾಳ: ಚಲಿಸುತ್ತಿದ್ದ ಕಾರಿನ ಮೇಲೆ ಮರಬಿದ್ದು ಇಬ್ಬರಿಗೆ ಗಾಯ..!

ಬಂಟ್ವಾಳ: ಬಾರಿ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಮಾಣಿ ಮೈಸೂರು ರಸ್ತೆಯ ಮಿತ್ತೂರು ಸಮೀಪದ ಕುಕ್ಕರಬೆಟ್ಟು ಎಂಬಲ್ಲಿ ಇದೀಗ ನಡೆದಿದೆ. ಮಂಗಳೂರು ಹಂಪನಕಟ್ಟೆ ‌ನಿವಾಸಿಗಳು ಎಂದು ಹೇಳಲಾಗಿದ್ದು, ಇವರ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.ಕಾರಿನಲ್ಲಿ ಒಟ್ಟು ನಾಲ್ಕು ಜನಪ್ರಯಾಣಿಕರಿದ್ದು, ಮೈಸೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.ಚಲಿಸುತ್ತಿದ್ದಾಗಲೇ ಮರ ಮುರಿದು ಬಿದ್ದ ಕಾರಣ ಕಾರು ಜಖಂಗೊಂಡಿದೆ. ಘಟನೆಯಿಂದ ಕೆಲಹೊತ್ತು ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬ ಮುರಿದು ಬಿದ್ದಿದೆ,ಹಾಗೂ ವಿದ್ಯುತ್ ತಂತಿಗಳು …

Read More »

ಬಂಟ್ವಾಳ: ಬೈಕ್ ಢಿಕ್ಕಿ : ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕ ಮೃತ್ಯು

ಬಂಟ್ವಾಳ : ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಸಜೀಪ ನಿವಾಸಿ ಅಲ್ತಾಫ್ (18) ಎಂದು ಗುರುತಿಸಲಾಗಿದೆ. ಬಿ.ಸಿ.ರೋಡಿನಿಂದ ಬರುತ್ತಿದ್ದ ರಿಕ್ಷಾ ಹಾಗೂ ಪಾಣೆಮಂಗಳೂರು ಪೇಟೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತ ಸಂದರ್ಭ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ರಿಕ್ಷಾದಲ್ಲಿದ್ದ ಪ್ರಯಾಣಿಕ ಅಲ್ತಾಫ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರವಾದ ಗಾಯವಾಗಿತ್ತು. …

Read More »

ಶಿರಾಡಿ ಘಾಟ್ ನಲ್ಲಿ ಕಾರು ಅಪಘಾತ: ಪಾಣೆಮಂಗಳೂರು ಮೂಲದ ತಾಯಿ, ಮಗ ಮೃತ್ಯು

ಕಂಟೈನರ್ ಲಾರಿ ಮತ್ತು ಇನ್ನೋವಾ ಕಾರು ಢಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಘಾಟ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿ ಶಬೀರ್ ಎಂಬವರ ಪತ್ನಿ ಸಫಿಯಾ(50) ಮತ್ತು ಪುತ್ರ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.   ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿ ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪ ಢಿಕ್ಕಿ ಹೊಡೆದಿದೆ. ಅನಾರೋಗ್ಯ (ಕ್ಯಾನ್ಸರ್)ದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ …

Read More »

ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ-2ರ ಫಲಿತಾಂಶ

ಬೆಂಗಳೂರು: ಇಂದು ಅಂದರೆ ಮೇ 21ರಂದು(ಮಂಗಳವಾರ) ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ(Karnataka Second PUC Exam 2nd Result 2024) ಪ್ರಕಟವಾಗಲಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆದ್ರೆ, ಮೊದಲ ಹಂತದಲ್ಲಿ ಅನುತ್ತೀರ್ಣರಾಗಿ ಎರಡನೇ ಬಾರಿಗೆ ಏಪ್ರಿಲ್ 29 ರಿಂದ ಮೇ 16 …

Read More »

ಉಳ್ಳಾಲ: ಶಾಲೆಯ ಆವರಣಗೋಡೆ ಕುಸಿದು ವಿಧ್ಯಾರ್ಥಿನಿ ಸಾವು..!

ಉಳ್ಳಾಲ : ಶಾಲೆಯ ಆವರಣಗೋಡೆ ಕುಸಿದ ಪರಿಣಾಮ ಶಾಲೆಯ ವಿಧ್ಯಾರ್ಥಿನಿಯೊಬ್ಬಳು ಸಾವನಪ್ಪಿದ ಘಟನೆ ಹರೇಕಳದ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ. ಮೃತರನ್ನು ನ್ಯೂಪಡ್ಪು ನಿವಾಸಿ ಸಿದ್ದೀಕ್‌– ಜಮೀಲಾ ದಂಪತಿಯ ಪುತ್ರಿ ಶಾಜಿಯಾ (7) ಎಂದು ಗುರುತಿಸಲಾಗಿದೆ. ಈ ಶಾಲೆಯಲ್ಲಿ ಮುಡಿಪು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಶಿಬಿರ ನಡೆಯುತ್ತಿತ್ತು. ನ್ಯೂಪಡ್ಪು ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಜಿಯಾ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದಳು. ಬಾಲಕಿಯು ಗೇಟಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಆವರಣ ಗೋಡೆಯು ಆಕೆಯ ಮೇಲೆ ಕುಸಿದು ಬಿದ್ದಿತ್ತು. ಮಳೆಯಿಂದಾಗಿ ಆವರಣಗೋಡೆ …

Read More »

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜಿಲ್ಲೆಯ ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಸೂಚನೆ ನೀಡಲಾಗಿದ್ದು, ಈ ರೋಗಕ್ಕೆ ಸಂಬಂಧಪಟ್ಟ ಲಕ್ಷಣ ಹೊಂದಿದ ರೋಗಿಗಳು ಚಿಕಿತ್ಸೆಗೆ ಬಂದರೆ ಮಾಹಿತಿ ನೀಡಲು ಸೂಚಿಸಲಾಗಿದೆ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ರೋಗ ಪತ್ತೆಯಾಗದಿದ್ದರೂ ಗಡಿಭಾಗದಲ್ಲೂ ಎಚ್ಚರ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬಂದಿಗೆ ಮೇ 20ರಿಂದ ಕೆಲವು ದಿನಗಳ ಕಾಲ ತರಬೇತಿ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಡಿಎಚ್‌ಒ …

Read More »

You cannot copy content of this page.