ತಾಜಾ ಸುದ್ದಿ

ಅಯೋಧ್ಯೆಯಲ್ಲಿ ಭೀಕರ ಅಪಘಾತ: ಕಲಬುರಗಿಯ ಮೂವರು ಮೃತ್ಯು

ಕಲಬುರಗಿ: ಯಾತ್ರೆಗೆ ತೆರಳಿದ್ದ ವೇಳೆ ಟಿಟಿ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ನಗರದ ಮೂವರು ಮೃತಪಟ್ಟ ಘಟನೆ ಅಯೋಧ್ಯೆಯಲ್ಲಿ ನಡೆದಿದೆ. ಮೃತರನ್ನು ಕಲಬುರಗಿಯ ಶಿವರಾಜ್, ಕಾಶಿನಾಥ್ ಮತ್ತು ತಂಗೆಮ್ಮ ಎಂದು ಗುರುತಿಸಲಾಗಿದೆ. ನಗರದ 22 ಜನರು ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋದ್ಯೆಗೆ ಹೊರಟಿದ್ದರು. ಈ ವೇಳೆ ಅಯೋದ್ಯೆಯ ಪ್ರಯಾಗ್ ರಾಜ್ ಹೈವೇಯಲ್ಲಿ ಲಾರಿ ಹಾಗೂ ಟಿಟಿ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

Read More »

ಬೆಳ್ತಂಗಡಿ : ಸಿಎಂ, ಡಿಸಿಎಂ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿಗೆ ಜೈಕಾರ

ಬೆಳ್ತಂಗಡಿ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ‌ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿ ಪರ ಘೋಷಣೆ, ಜೈಶ್ರ್ರೀರಾಂ ಘೋಷಣೆ ಕೇಳಿ ಬಂದಿತು. ಸಿಎಂ, ಡಿಸಿಎಂ ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಭಕ್ತರ ದೇವರ ದರ್ಶನ ಬಂದ್ ಮಾಡಲಾಗಿತ್ತು. ಒಂದು ಗಂಟೆಗೂ ಅಧಿಕ ಸಮಯದಿಂದ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಸಾವಿರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು‌. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ಬಂದು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಜೈಶ್ರೀರಾಂ, ಮೋದಿ ಪರ ಘೋಷಣೆ ಕೂಗಿದರು. ಅಲ್ಲದೆ, …

Read More »

ಉಡುಪಿ: ಗ್ಯಾಂಗ್ ವಾರ್ ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ- ಸುನಿಲ್ ಕುಮಾರ್

ಉಡುಪಿ: ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್ ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಉಡುಪಿ, ದಕ್ಷಿಣ ಕನ್ನಡದಂಥ‌ ಜಿಲ್ಲೆಗಳಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಈಗ ಕಾನೂನು- ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದರ ಪರಿಣಾಮವಾಗಿ ಇಂದು ಕ್ರಿಮಿನಲ್ ಗಳು ವಿಜೃಂಭಿಸುವಂತಾಗಿದೆ.ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. …

Read More »

ಡ್ರೋನ್ ಫಿಲ್ಮ್ ಮೇಕಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಉಡುಪಿಯ ರೋಹನ್ ಕೋಟ್ಯಾನ್

ಉಡುಪಿ:  ಕೌಶಲ್ಯಾಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯಯು ಮೇ 15 ರಿಂದ 19 ರ ವರೆಗೆ ದೆಹಲಿಯ ದ್ವಾರಕಾದಲ್ಲಿ ಆಯೋಜಿಸಿದ ರಾಷ್ಟ್ರದ ಅತೀ ದೊಡ್ಡ ಕೌಶಲ್ಯ ಸ್ಪರ್ಧೆಯಾದ ಭಾರತದ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಉಡುಪಿಯ ರೋಹನ್ ಕೋಟ್ಯಾನ್ ಅವರು ಡ್ರೋನ್ ಫಿಲ್ಮ್ ಮೇಕಿಂಗ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದು,  ಸೆಪ್ಟೆಂಬರ್- 2024 ರಲ್ಲಿ ಫ್ರಾನ್ಸ್‍ನ ಲಿಯೋನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯ ನಿವಾಸಿಯಾದ ಶಶಿಧರ ಕೋಟ್ಯಾನ್ ಮತ್ತು ವಸುಧಾ ಕೋಟ್ಯಾನ್ ದಂಪತಿಗಳ ಮಗನಾದ ರೋಹನ್ …

Read More »

3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಕಾರ್ಪರೇಟರ್‌ಗಳು ಅನರ್ಹ

ಅಹಮದಾಬಾದ್: ಗುಜರಾತ್‌ನ ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು 3ನೇ ಮಗು ಜನಿಸಿದ್ದಕ್ಕೆ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅನರ್ಹಗೊಂಡ ಬಿಜೆಪಿ ಸದಸ್ಯರು.2005-06 ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 1963ರ ಮುನ್ಸಿಪಲ್ ಕಾಯಿದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ ಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೆ ಇವರು ಅನರ್ಹರಾಗಲಿದ್ದಾರೆ ಎಂಬ …

Read More »

ಪತ್ನಿಯ ಗರ್ಭದಲ್ಲಿರುವ ಮಗು ಗಂಡೋ , ಹೆಣ್ಣೋ ತಿಳಿಯಲು ಹೊಟ್ಟೆ ಕತ್ತರಿಸಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಗರ್ಭದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಕುಡುಗೋಲಿನಿಂದ ಹೊಟ್ಟೆಯನ್ನು ಕತ್ತರಿಸಿದ್ದ ಉತ್ತರ ಪ್ರದೇಶದ ಬದೌನ್‍ನ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬದೌನ್‍ನ ಸಿವಿಲ್ ಲೈನ್ಸ್‍ನ ನಿವಾಸಿ ಪನ್ನಾ ಲಾಲ್ ಹಾಗೂ ಅನಿತಾ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ಗಂಡು ಮಗು ಬೇಕೆಂದು ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅಲ್ಲದೇ ವಿಚ್ಛೇದನ ನೀಡಿ ಬೇರೆ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಸಹ ಹಾಕಿದ್ದ. ಇದೇ ವಿಚಾರಕ್ಕೆ ಸೆಪ್ಟೆಂಬರ್ 2020 ರಲ್ಲಿ ಪತ್ನಿ ಅನಿತಾ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ: ಪ್ರಧಾನಿ ಮೋದಿ

ಶಿಮ್ಲಾ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ ಜಡಿಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೌರ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕಾಂಗ್ರೆಸ್ ಮಾಡಿರುವ ಷಡ್ಯಂತ್ರವನ್ನು ಆ ಪಕ್ಷದವರೇ ಬಹಿರಂಗಪಡಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ, ರಾಮ ಮಂದಿರಕ್ಕೆ ಬೀಗ ಜಡಿದು, ಬಾಲರಾಮ ಟೆಂಟ್ನಲ್ಲಿ ಕೂರುವುದು ಅನಿವಾರ್ಯವಾಗುವಂತೆ ಮಾಡಲಿದ್ದಾರೆ. ಹೀಗಾಗಿ ಪ್ರತಿ ಮತಗಟ್ಟೆಯಿಂದ ಇವರನ್ನು ಗುಡಿಸಿಹಾಕಬೇಕಿದೆ.ನನ್ನ ಸ್ವಚ್ಛ ಭಾರತ ಅಭಿಯಾನ ನೆನಪಿದೆಯಲ್ಲ, ಜೂನ್ 1ರಂದು ಅದಕ್ಕಾಗಿ …

Read More »

ಮದ್ಯಪ್ರಿಯರಿಗೆ ಬಿಗ್‌ ಶಾಕ್‌: ಜೂನ್ 1 ರಿಂದ 6ರ ರವರೆಗೆ ಮದ್ಯ ಮಾರಾಟ ಬಂದ್

ಬೆಂಗಳೂರು: ಜೂನ್ 1 ರಿಂದ 6ರ ರವರೆಗೆ ವೈನ್ ಶಾಪ್‌, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗಲಿದೆ. ರಾಜ್ಯದಲ್ಲಿ ನಡೆಯುತ್ತಿರೋ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶ ನೀಡಿದೆ. ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್‌ ಆಗಲಿದ್ದು, ಜೂನ್ 3 ರವರೆಗೆ ಬಂದ್ ಮಾಡಬೇಕಾಗುತ್ತೆ. ಇನ್ನೂ ಜೂನ್‌ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆಯ ಮತ …

Read More »

ಕಾಪು : ಶಿರ್ವದಲ್ಲಿ ಸಿಡಿಲಾಘಾತಕ್ಕೆ ವಿದ್ಯಾರ್ಥಿ ಬಲಿ !

ಕಾಪು : ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ಸಿಡಿಲಾಘಾತಕ್ಕೆ ವಿದ್ಯಾರ್ಥಿಯೋರ್ವ ಬಲಿಯಾಗಿದ್ದಾನೆ. ಗುರುವಾರ ರಾತ್ರಿ ಭಾರಿ ಗಾಳಿ ಮಳೆ ಸಂದರ್ಭ ಶಿರ್ವ ಮಾಣೆಬೆಟ್ಟು ನಿವಾಸಿ ರಕ್ಷಿತ್ ಪೂಜಾರಿಗೆ ಸಿಡಿಲು ಬಿಡಿದು ಮೃತಪಟ್ಟಿದ್ದಾನೆ. ಈತ ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ. ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಎರಗಿದೆ. ನೆಲದಲ್ಲಿ ಬಿದ್ದಿದ್ದ ರಕ್ಷಿತ್ ನನ್ನು ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮೃತಪಟ್ಟಿರುವುದಾಗಿ …

Read More »

ದಿ. ಮೇಟಿ ಮುದಿಯಪ್ಪ ನೆನಪಿನ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ನಾಟಕ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಬರುವ 26 ಮೇ, ಭಾನುವಾರ ಸಂಜೆ 5:30ಕ್ಕೆ ದಿ| ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಉಡುಪಿಯ ಯಕ್ಷಗಾನ ಕಲಾರಂಗ ಐ ವೈ ಸಿ ಯ ಸಭಾಂಗಣದಲ್ಲಿ ನಡೆಯಲಿದೆ. ಯುವ ಕಥಾಸ್ಪರ್ಧೆಯಲ್ಲಿ ಡಾ. ನಮ್ರತಾ ಬಿ., …

Read More »

You cannot copy content of this page.