ತಾಜಾ ಸುದ್ದಿ

ಮೂಡಬಿದ್ರೆ: ನಿಲ್ಲಿಸಿದ್ದ ಕಾರಿನಿಂದ 4.95 ಲಕ್ಷ ರೂ. ಕಳವು

ಮೂಡುಬಿದಿರೆ: ಶಿರ್ತಾಡಿ ಬ್ಯಾಂಕ್‌ನಿಂದ ಐದು ಲಕ್ಷ ರೂ. ಡ್ರಾ ಮಾಡಿದ ಗ್ರಾಹಕರೊಬ್ಬರು ಅದರಿಂದ ಐದು ಸಾವಿರ ರೂ. ತೆಗೆದು 4,95,000 ರೂ. .. ಅನ್ನು ಕಾರಿನಲ್ಲಿ ಇಟ್ಟು ಹತ್ತಿರದ ಹೊಟೇಲ್‌ಗೆ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ 2 ಬಂದ ಅಪರಿಚಿತರಿಬ್ಬರು ಹಣವನ್ನು ಕದ್ದೊಯ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.

Read More »

ಉಜಿರೆಯ ಎಸ್‌.ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ..!

ಬೆಳ್ತಂಗಡಿ: ಉಜಿರೆಯ ಎಸ್‌.ಡಿ ಎಂ ಕಾಲೇಜಿನ ಕ್ರೀಡಾ ವಸತಿ ಶಾಲೆಯ ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.   ನಾಪತ್ತೆಯಾದ ವಿದ್ಯಾರ್ಥಿಯನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತಿದ್ದ ಬೇಲೂರಿನ ದಿವ್ಯಾ. ಎಸ್, ಎಂದು ಗುರುತಿಸಲಾಗಿದೆ.ಮೇ 29ರಂದು ಬೆಳಿಗ್ಗೆ ಕ್ರೀಡಾಂಗಣಕ್ಕೆ ಹೋಗಿ ಬರುವುದಾಗಿ ಹೇಳಿ ನಿಲಯ ಪಾಲಕರಲ್ಲಿ ತಿಳಿಸಿ ಹೋದವಳು ಹಾಸ್ಟೆಲ್ ಗೂ ಹಿಂತಿರುಗದೆ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.  ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದ ಸಹಾಯಕ …

Read More »

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಸೂರ್ಯನಷ್ಟೆ ಸತ್ಯ- ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ‌. ಕೇಂದ್ರ ಸರ್ಕಾರದ ಯೋಜನೆಗಳು, ನರೇಂದ್ರ ಮೋದಿ ಅವರ ಹತ್ತು ವರ್ಷದ ಸಾಧನೆಗಳು ನಮ್ಮ ಕೈಹಿಡಿಯಲಿವೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯಾದ ನಾನು ಗೆಲ್ಲಲಿದ್ದೇನೆ. ಅದೇ ರೀತಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸೂರ್ಯನಷ್ಟೆ ಸತ್ಯ ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Read More »

ಜನರ ಮನಸ್ಸಿನಿಂದ ನನ್ನನ್ನು ಉಚ್ಚಾಟಿಸಲು ಸಾಧ್ಯವಿಲ್ಲ : ಮಾಜಿ ಶಾಸಕ ಕೆ.ರಘುಪತಿ ಭಟ್

ಉಡುಪಿ : ಜನರ ಮನಸ್ಸಿನಿಂದ ನನ್ನನ್ನು ಉಚ್ಚಾಟಿಸಲು ಸಾಧ್ಯವಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್ ಬಿಜೆಪಿ ಗೆ ಟಾಂಗ್ ನೀಡಿದ್ದಾರೆ. ಉಡುಪಿ ಹಾಗೂ ಕುಂದಾಪುರ ಭಾಗಗಳಲ್ಲಿ ಬಾರ್ ಕೌನ್ಸಿಲ್, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಕಂಪನಿಗಳಲ್ಲಿ ಮತಯಾಚನೆ ಮಾಡುವ ಸಂದರ್ಭ ಮಾತನಾಡಿದ ಅವರು ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ನಾನು ಮಾಡಿದ ಸೇವಾ ಕಾರ್ಯಗಳಿಂದ ಜನ ನನಗೆ ಅವರ ಮನಸ್ಸಿನಲ್ಲಿ ಸ್ಥಾನ ನೀಡಿದ್ದಾರೆ. ಇಂದು ನಾನು ಹೋದ ಎಲ್ಲಾ ಭಾಗಗಳಲ್ಲಿಯೂ ಜನ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಜನರ ಮನಸ್ಸಿನಿಂದ …

Read More »

ಬೈಂದೂರು: ಲೈಂಗಿಕ ಕಿರುಕುಳ ಆರೋಪದಲ್ಲಿ ಸರ್ಕಾರಿ ವೈದ್ಯ ಅಮಾನತು

ಬೈಂದೂರು: ಕುಂದಾಪುರ ಸಾರ್ವಜನಿಕ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಸಹೋದ್ಯೋಗಿ ವೈದ್ಯ ಒಬ್ಬರಿಗೆ ಲೈಂಗಿಕ ದೌರ್ಜನ್ಯ ಆರೋಪದಿಂದ ಅಮಾನತು ಆಗಿರುವ ಡಾ. ರಾಬರ್ಟ್ ರೆಬೆಲ್ಲೋ ಇವರ ಸ್ಥಾನಕ್ಕೆ ಡಾ ಲತಾ, ಕುಷ್ಠ ರೋಗ ನಿವಾರಣಾಧಿಕಾರಿ, ಸರಕಾರಿ ಜಿಲ್ಲಾ ಆಸ್ಪತ್ರೆ ಉಡುಪಿ ಇವರನ್ನು, ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಎಂದು ಆದೇಶ ಪ್ರಕಟಿಸಿದ್ದಾರೆ.

Read More »

ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ..!

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಸುತ್ತಿನ ಮತದಾನದ ದಿನ ಗ್ಯಾಸ್ ಬೆಲೆ ಇಳಿಕೆಯಾಗಿದ್ದು, ತಿಂಗಳ ಆರಂಭದಲ್ಲಿಯೇ ಶುಭ ಸುದ್ದಿ ಸಿಕ್ಕಿದೆ. ಜೂನ್ 1 ರಂದು ಜಾರಿಗೆ ಬರುವಂತೆ ತೈಲ ಮಾರಾಟ ಸಂಸ್ಥೆಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 72 ರೂ. ಕಡಿಮೆ ಮಾಡಿವೆ. ಹೊಸ ಬೆಲೆ 1787 ರೂ. ಈ ಹೊಸ ಬೆಲೆ ಇಂದಿನಿಂದ ಜಾರಿಗೆ ಬರಲಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. 14.2 ಕೆಜಿ LPG ಸಿಲಿಂಡರ್ ಬೆಲೆ 829 ರೂ. ಆಗಿದೆ. ಪ್ರತಿ ತಿಂಗಳ ಆರಂಭದಲ್ಲಿ, …

Read More »

ವೈದ್ಯೆಗೆ ಲೈಂಗಿಕ ಕಿರುಕುಳ ಆರೋಪ -ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ವಿರುದ್ಧ ದೂರು ದಾಖಲು

ಬೈಂದೂರು : ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಬರ್ಟ್ ರೆಬೆಲ್ಲೋ ನಾಪತ್ತೆಯಾಗಿದ್ದಾರೆ ಸಂತ್ರಸ್ಥ ವೈದ್ಯೆ ನಿನ್ನೆ ಡಾ.ರಾಬರ್ಟ್ ರೆಬೆಲ್ಲೋ ವಿರುದ್ಧ ದೂರು ನೀಡುತ್ತಿದ್ದಂತೆ ಡಾ.ರಾಬರ್ಟ್ ರೆಬೆಲ್ಲೋ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸಂತ್ರಸ್ಥ ವೈದ್ಯೆ ನೀಡಿದ ದೂರಿನಂತೆ ನಾನು ಕಳೆದ ಹಲವು ತಿಂಗಳಿನಿಂದ ಎನ್ ಆರ್ ಎಚ್ ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕರ್ತವ್ಯದ ಆರಂಭದ ದಿನದಿಂದಲೂ ಆಡಳಿತ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋರವರಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ. ನೀನು ಜೀನ್ಸ್ ಪ್ಯಾಂಟ್ …

Read More »

ಮಂಗಳೂರಿನ ವಿಶ್ವಾಸಾರ್ಹ ಸಂಸ್ಥೆ ವಿಷನ್ ಇಂಡಿಯಾ ಮತ್ತೆ ತಂದಿದೆ ಸೀಸನ್ 2 ನ ಉಳಿತಾಯಾಯದೊಂದಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಯೋಜನೆ

ಮಂಗಳೂರು: ಸ್ಕೀಮ್ ಹಾಗೂ ಸೇವಿಂಗ್ ಯೋಜನೆಯ ಇತಿಹಾಸದಲ್ಲೇ ಅತೀ ದೊಡ್ಡ ಬಹುಮಾನವನ್ನು ನೀಡುವ ಮಹತ್ತರ ಯೋಜನೆಗೆ ವಿಷನ್ 2 ಇಂಡಿಯಾ (ಸೀಸನ್ 2) ಚಾಲನೆ ನೀಡಿದೆ. 1ಕೋಟಿ ನಗದು ಹಾಗೂ ಚಿನ್ನಾಭರಣ, ಒಟ್ಟು ಹದಿನೇಳು ಕಾರು, ಹತ್ತು ಸುಸಜ್ಜಿತ ಮನೆ, ನೂರಕ್ಕಿಂತ ಹೆಚ್ಚು ದ್ವಿಚಕ್ರ ವಾಹನ, 50ಕ್ಕಿಂತ ಹೆಚ್ಚು ಐಪೋನ್, ವಿದೇಶ ಪ್ರಯಾಣ ಹಾಗೂ ಸಮಾಧಾನಕರ ಬಹುಮಾನವಾಗಿ ನಗದು, ಚಿನ್ನ ಹಾಗೂ ಇನ್ನಿತರ ಫರ್ನಿಚರ್, ಎಲೆಕ್ಟ್ರಾನಿಕ್, ಗೃಹೋಪಯೋಗಿ ವಸ್ತುಗಳನ್ನು ನೀಡಲಿದೆ ಎಂದು ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ. ಪ್ರತಿ ತಿಂಗಳು ಸಾವಿರ ರೂಪಾಯಿಗಳಂತೆ ಪಾವತಿಸುವ ಉಳಿತಾಯ …

Read More »

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿ.ನಾಗೇಂದ್ರಗೆ ಸಿಎಂ ಸೂಚನೆ..!

ಬೆಂಗಳೂರು: ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರಿಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿನ್ನೆ ರಾತ್ರಿ ನಡೆದ ಮಹತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ನಡುವೆ ಸರ್ಕಾರಕ್ಕೆ ಮುಖಭಂಗವಾಗಬಾರದು ಎಂದು, ಜೊತೆಗೆ ಮುಂದಿನ ತಿಂಗಳು ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಯಾವುದೇ ಕಾರಣಕ್ಕೆ ಇಕ್ಕಟ್ಟಿಗೆ ಸಿಲುಕದ ಹಾಗೇ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಗೃಹ ಸಚಿವಲಾಯ ವರದಿಯನ್ನು ಆಧರಿಸಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದಾರೆ …

Read More »

ಮಣಿಪಾಲ: ರಾತ್ರಿ 10 ಗಂಟೆಗೆ ಪಬ್, ಬಾರ್ ಬಂದ್..! ಪೊಲೀಸರಿಂದ ಕಟ್ಟುನಿಟ್ಟಿನ ಸೂಚನೆ

ಮಣಿಪಾಲ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ಗ್ಯಾಂಗ್ ವಾರ್ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿ ಗಸ್ತು ಹೆಚ್ಚಿಸಲಾಗಿದ್ದು, ತಡರಾತ್ರಿ ಸಮಯ ಮೀರಿ ವಹಿವಾಟು ನಡೆಸುವ ಉದ್ಯಮಗಳನ್ನು ಪರಿಶೀಲಿಸಿ ಎಚ್ಚರಿಕೆ ನೀಡಲಾಗಿದೆ. ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ಪಬ್, ಬಾರ್‌ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಕಾನೂನು ಉಲ್ಲಂಘಿಸಿದಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಮಣಿಪಾಲದಲ್ಲಿ ಗಾಂಜಾ, ಡ್ರಗ್ಸ್ ಜಾಲವೂ ಸಕ್ರಿಯವಾಗಿದೆ. ಯುವಜನರನ್ನು ಗುರಿಯಾಗಿಸಿ ಇಲ್ಲಿ ಡ್ರಗ್ಸ್ ಮತ್ತು ಗಾಂಜಾ ವ್ಯವಹಾರ ನಡೆಯುತ್ತಿದೆ. ಪೊಲೀಸರು ಇದರ ಮೇಲೂ …

Read More »

You cannot copy content of this page.