ತಾಜಾ ಸುದ್ದಿ

ಕುಂದಾಪುರ: ವೈದ್ಯೆಗೆ ಕಿರುಕುಳ : ಆರೋಪಿ ವೈದ್ಯಾಧಿಕಾರಿ ಅರೆಸ್ಟ್

ಕುಂದಾಪುರ: ತನ್ನ ಸಹೋದ್ಯೋಗಿ ವಿವಾಹಿತ ವೈದ್ಯೆಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ, ಕುಂದಾಪುರ ಸರ್ಕಾರೀ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋ ಅವರನ್ನು ಪೊಲೀಸರು ಗುಜರಾತಿನ ಲಾಡ್ಜ್ ಒಂದರಲ್ಲಿ ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೊಬೈಲ್ ಇಂಟರ್ನೆಟ್ ನೆಟ್ ವರ್ಕ್ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಗುಜರಾತಿ ನಿಂದ ಆರೋಪಿಯನ್ನು ಪೊಲೀಸರು ರೈಲಿನಲ್ಲಿ ಕರೆತಂದಿದ್ದು ಶುಕ್ರವಾರ ರಾತ್ರಿ 10:00 ಸುಮಾರಿಗೆ ಕುಂದಾಪುರಕ್ಕೆ ಆಗಮಿಸಿದ್ದಾರೆ ಪ್ರಕರಣದ ಬಗ್ಗೆ ಆರೋಪಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು ಮುಂದಿನ ಕ್ರಮಕ್ಕೆ ಸಿದ್ಧತೆಗಳನ್ನು …

Read More »

ಉಡುಪಿ: ಹೊಂಡಕ್ಕೆ ಮಗುಚಿ ಬಿದ್ದ ಟ್ಯಾಂಕರ್

ಉಡುಪಿ: ಇಲ್ಲಿನ ಸಂತೆಕಟ್ಟೆ ಬಳಿ ಟ್ಯಾಂಕರ್ ಒಂದು ಮಗುಚಿ ಬಿದ್ದ ಘಟನೆ ಶನಿವಾರ ಮುಂಜಾನೆ ವೇಳೆ ನಡೆದಿದೆ. ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಬೃಹತ್ ಗಾತ್ರದ ಹೊಂಡವನ್ನು ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದರೊಳಗೆ ಟ್ಯಾಂಕರ್ ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.

Read More »

ಮಲ್ಪೆಯ ಪಡುಕರೆಯಲ್ಲಿ ಕರಣ್‌ ಸಾಲ್ಯಾನ್‌ ಮೃತದೇಹ ಪತ್ತೆ

ಕಾಪು: ಕಾಪು ಬೀಚ್‌ ಬಳಿ ಬೈಕ್‌ ಮತ್ತಿತರ ಸೊತ್ತುಗಳನ್ನು ಬಿಟ್ಟು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಕಾಪು ಪಡು ಗ್ರಾಮ ನಿವಾಸಿ ಕರಣ್‌ ಸಾಲ್ಯಾನ್‌ (20) ಮೃತದೇಹ ಪಡುಕರೆ ಸಮುದ್ರದಲ್ಲಿ ಪತ್ತೆಯಾಗಿದೆ. ಕಾಪು ಪಡು ಗ್ರಾಮ ನಿವಾಸಿ ನಾರಾಯಣ್‌ ಸಾಲ್ಯಾನ್‌ ಅವರ ಪುತ್ರ ಕರಣ್‌ ಸಾಲ್ಯಾನ್‌ ಜೂ. 5ರಂದು ಅಪರಾಹ್ನ 3 ಗಂಟೆಗೆ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದ. ಮನೆಯಿಂದ ನಾಪತ್ತೆಯಾಗಿದ್ದ ಆತನ ಬೈಕ್‌, ಬೆಲೆಬಾಳುವ ಐಫೋನ್‌, ನಗದು ಸಹಿತವಾಗಿ ಪರ್ಸ್‌ ಕಾಪು ಬೀಚ್‌ ಬಳಿ ಪತ್ತೆಯಾಗಿತ್ತು. ಆ ಬಳಿಕ ಮನೆಯವರು …

Read More »

ಬಿಗ್ ಬಾಸ್ ಸ್ಪರ್ಧಿ ‘ಚಂದನ್ ಶೆಟ್ಟಿ-ನಿವೇದಿತಾ’ ದಾಂಪತ್ಯ ಜೀವನದಲ್ಲಿ ಬಿರುಕು: ‘ವಿಚ್ಚೇದನ’ಕ್ಕಾಗಿ ಅರ್ಜಿ ಸಲ್ಲಿಕೆ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸ್ಪರ್ಧೆಯಲ್ಲಿ ಪಾಲ್ಗೊಂಡು, ಅಲ್ಲಿಯೇ ಪರಿಚಯವಾಗಿದ್ದಂತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ, ದಾಂಪತ್ಯಕ್ಕೆ ಕಾಲಿಟ್ಟಿತ್ತು. ಇದೀಗ ಕೆಲವೇ ವರ್ಷಗಳಲ್ಲೇ ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿ ವಿಚ್ಥೇದನಕ್ಕೆ ಇಬ್ಬರು ಸೆಲೆಬ್ರೆಟಿಗಳು ಅರ್ಜಿ ಸಲ್ಲಿಸಿರೋದಾಗಿ ತಿಳಿದು ಬಂದಿದೆ.   Rap ಸಾಂಗ್ ಹಾಡುಗಾರ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ದಾಂಪತ್ಯ ಈಗ ಡಿವೋರ್ಸ್ ಹಂತಕ್ಕೆ ತಲುಪಿದೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ …

Read More »

ಕಾಪು: ಬೀಚ್ ಬಳಿ ಬೈಕ್, ಮೊಬೈಲ್ ಬಿಟ್ಟು ಯುವಕ ನಾಪತ್ತೆ

ಕಾಪು: ಕಾಪು ಬೀಚ್ ಬಳಿ ಯುವಕನೋರ್ವ ಬೈಕ್, ಮೊಬೈಲ್ ಇಟ್ಟು ನಾಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ. ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಅವರ ಪುತ್ರ ಕರಣ್ ಸಾಲ್ಯಾನ್ (20) ನಾಪತ್ತೆಯಾದ ಯುವಕ. ಈತ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದು ಶುಕ್ರವಾರ ಬೆಳಿಗ್ಗೆ ಕಾಪು ಬೀಚ್ ಬಳಿ ಬೈಕ್, ಬೆಲೆಬಾಳುವ ಫೋನ್, ನಗದು ಸಹಿತವಾಗಿ ಪರ್ಸ್ ಪತ್ತೆಯಾಗಿದೆ.‌ ಮನೆಯವರು ಮತ್ತು ಸ್ಥಳೀಯರು ಕಾಪು ಬೀಚ್ ಬಳಿ, ಸಮುದ್ರ ತೀರ ಮತ್ತು ಸಮುದ್ರದಲ್ಲಿ ತೀವ್ರ ಹುಡುಕಾಟ ನಡೆಸಿದ್ದು ಶುಕ್ರ ವಾರವೂ ಹುಡುಕಾಟ ಮುಂದುವರಿಸಿದ್ದಾರೆ. ಕಾಪು ಪೊಲೀಸ್ ಠಾಣೆಗೆ …

Read More »

ವಾಹನ ಸವಾರರ ಗಮನಕ್ಕೆ : ʻHSRPʼ ನಂಬರ್‌ ಪ್ಲೇಟ್‌ ಅಳವಡಿಕೆಗೆ ಐದೇ ದಿನ ಬಾಕಿ!

ಬೆಂಗಳೂರು : ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್‌ ಆದೇಶದ ಅನ್ವಯ ಜೂನ್‌ 12ರವರೆಗೆ ಇರಲಿದೆ. ಅದರ ಒಳಗೆ ಎಲ್ಲಾ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ. 2019ರ ಏಪ್ರಿಲ್‌ 1ಕ್ಕಿಂತ ಹಿಂದಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು. ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 45 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, 1.55 ಕೋಟಿ ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದೆ. ಏಪ್ರಿಲ್.1, 2019ಕ್ಕಿಂತ ನೋಂದಾಯಿಸಿಕೊಂಡ ವಾಹನಗಳಿಗೆ ಹೆಚ್ ಎಸ್ ಆರ್ …

Read More »

ಮಣಿಪಾಲ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : ಆರೋಪಿಯ ಬಂಧನ

ಮಣಿಪಾಲ: ನಗರದಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಮೇರೆಗೆ ಮಣಿಪಾಲ ಠಾಣೆಯ ಇನ್ಸ್‌ಪೆಕ್ಟರ್ ದೇವರಾಜ್ ಮತ್ತು ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ನಿವಾಸಿ ಸಿದ್ದಾರ್ಥ್ ಎಂದು ತಿಳಿದು ಬಂದಿದೆ. ಪ್ರಕರಣದ ವಿವರ: ದಿನಾಂಕ:05.06.2024 ರಂದು ಸಂಜೆ 05.00 ಗಂಟೆಗೆ ಮಣಿಪಾಲ ಠಾಣಾ  ಪೊಲೀಸ್‌ ನಿರೀಕ್ಷಕರಾದ ದೇವರಾಜ್‌ ಟಿ.ವಿ ರವರ ನೇತೃತ್ವದಲ್ಲಿ ಪತ್ರಾಂಕಿತ ಅಧಿಕಾರಿ ಶ್ರೀ ಶಂಕರ ಮಾನ್ಯ ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಉಡುಪಿ ತಾಲೂಕು ಹಾಗೂ ಮಣಿಪಾಲ ಠಾಣಾ ರಾಘವೇಂದ್ರ ಸಿ, …

Read More »

ಮಂಗಳೂರು ತಾ.ಪಂ: ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಬೀಳ್ಕೊಡುಗೆ

ಮಂಗಳೂರು ತಾ.ಪಂ: ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಗೆ ವರ್ಗಾವಣೆಗೊಂಡ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಸಿ ಅಪ್ಪಣ್ಣ ಅವರಿಗೆ ತಾಲೂಕು ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ದಿನಾಂಕ 6-6-2024 ರಂದು ನೆರವೇರಿತು. ಈ ವೇಳೆ ಮಹೇಶ್ ಅಂಬೆಕಲ್ಲು, ಸಹಾಯಕ ನಿರ್ದೇಶಕರು ನರೇಗಾ (ಗ್ರಾ&ಉ), ಅಬೂಬಕ್ಕರ್, ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ವಿಭಾಗ, ಪರಮೇಶ್ ಸಹಾಯಕ ಲೆಕ್ಕಾಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾ.ಪಂ ಮತ್ತು ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

Read More »

ಪ್ರಧಾನಿ ಹುದ್ದೆ ಕೊಟ್ಟರೂ ನಾನು ಕಾಂಗ್ರೆಸ್‌ ಜೊತೆ ಹೋಗಲ್ಲ – ಪವನ್ ಕಲ್ಯಾಣ್

ಹೈದರಾಬಾದ್- ನರೇಂದ್ರ ಮೋದಿ ನಮ್ಮ ದೇಶಕ್ಕೆ ಏನು ಮಾಡಿದ್ದಾರೆ ಎಂಬ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ನನ್ನ ಬೆಂಬಲ ಎಂದೆಂದಿಗೂ ನರೇಂದ್ರ ಮೋದಿಗೆ. ಪ್ರಧಾನಿ ಹುದ್ದೆಯ ಆಫರ್ ಕೊಟ್ಟರೂ ನಾನು ಕಾಂಗ್ರೆಸ್‌ ಎಂದೆಂದೂ ಬೆಂಬಲ ನೀಡೋದಿಲ್ಲ ಎಂದು ಜನಸೇನಾ ನಾಯಕ ಹಾಗೂ ನಟ ಪವನ್ ಕಲ್ಯಾಣ್ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ‘ಇಂಡಿ’ ಮೈತ್ರಿಕೂಟವನ್ನು ಬೆಂಬಲಿಸಲು ನಮಗೆ ಅವರು ಬಹುದೊಡ್ಡ ಕೊಡುಗೆಯನ್ನೇ ನೀಡಬಹುದು. ಆದರೆ ನಾವು ದೇಶಕ್ಕಾಗಿ ನಾವು ಎಂದೆಂದೂ ಮೋದಿ ಅವರನ್ನೇ ಬೆಂಬಲಿಸುತ್ತೇವೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ

Read More »

ಹೊಸ ಸರ್ಕಾರ ರಚನೆಗೆ ನಾಳೆಯೇ ʻNDAʼ ಹಕ್ಕು ಮಂಡನೆ : ಜೂ.8 ರಂದು ಪ್ರಧಾನಿಯಾಗಿ ʻಮೋದಿʼ ಪ್ರಮಾಣವಚನ ಸ್ವೀಕಾರ!

ಲೋಕಸಭೆ ಚುನಾವಣೆಯಲ್ಲಿ 293 ಸ್ಥಾನ ಗೆದ್ದಿರುವ ಎನ್‌ ಡಿಎ ಮೈತ್ರಿಕೂಟದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಜೂನ್.7ರ ರ ನಾಳೆ ಎನ್ ಡಿ ಎ ನಾಯಕರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ 3ನೇ ಬಾರಿಗೆ ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡಿಸಲಿದ್ದಾರೆ. ಮೋದಿ ನೇತೃತ್ವದಲ್ಲಿ ಬುಧವಾರ ಎನ್ ಡಿಎ ಸಂಸದರ ಸಭೆ ನಡೆಯಿತು. ಈ ಸಭೆಯಲ್ಲಿ ಎನ್ ಡಿಎಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಬೆಂಬಲ ಘೋಷಿಸಿ, ಪತ್ರವನ್ನು ನೀಡಿದ್ದಾರೆ. …

Read More »

You cannot copy content of this page.