ತಾಜಾ ಸುದ್ದಿ

ಉಡುಪಿ: ನಕಲಿ ಪರಶುರಾಮನ ಪ್ರತಿಮೆ ಆರೋಪ- ಕೃಷ್ಣ ಆರ್ಟ್ ಗ್ಯಾಲರಿ ವಿರುದ್ಧ ಪ್ರಕರಣ ದಾಖಲು

ಉಡುಪಿ: ಪರಶುರಾಮನ ನಕಲಿ ಮೂರ್ತಿಯನ್ನು ಸರಬರಾಜು ಮಾಡಿದ ಆರೋಪದ ಮೇಲೆ ಕೃಷ್ಣ ಕಲಾಲೋಕದ ಮಾಲೀಕ ಎನ್ನಲಾದ ಕೃಷ್ಣ ಎಂಬಾತನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರ್ಕಳದ ನಲ್ಲೂರು ಗ್ರಾಮದ ನಿವಾಸಿ ಕೃಷ್ಣ (30) ಎಂಬವರು ನೀಡಿದ ದೂರಿನಂತೆ ಆರೋಪಿಗಳು ಉಡುಪಿ ನಿರ್ಮಿತಿ ಕೇಂದ್ರದಿಂದ ಪ್ರತಿಮೆ ರಚನೆ ಮತ್ತು ಪ್ರತಿಷ್ಠಾಪನೆಗಾಗಿ 1,25,50,000 ರೂ. ಆದರೆ, ಆರೋಪಿಗಳು ಅಸಲಿ ಕಂಚಿನ ಪರಶುರಾಮ ಪ್ರತಿಮೆ ನೀಡುವ ಬದಲು ನಕಲಿ ಪ್ರತಿಮೆ ನಿರ್ಮಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ

Read More »

ಉಡುಪಿ: ಸುಶ್ಮಿತಾ ‌ಆಚಾರ್ಯಗೆ ಮಿಸ್ ಕೋಸ್ಟಲ್ – 2024 ಕಿರೀಟ

ಉಡುಪಿ: ಸುಶ್ಮಿತಾ ಆಚಾರ್ಯ ಅವರು ಈ ವರ್ಷದ ಮಿಸ್ ಕೋಸ್ಟಲ್ – 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಉಡುಪಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಭಾವಂತೆಯಾಗಿರುವ ಸುಶ್ಮಿತಾ ಆಚಾರ್ಯ,ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.ಈ ಮೊದಲು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ‘ಸುಜಾಸ್ ‘ನ ಜಯಲಕ್ಷ್ಮೀ ಇವರಿಗೆ ಮಾರ್ಗದರ್ಶನ ಮಾಡಿದ್ದರು.ಇವರು ಮುಲ್ಕಿಯ ಕೆ.ಸತೀಶ್ ಆಚಾರ್ಯ ,ಸ್ವಾತಿ ಆಚಾರ್ಯ ದಂಪತಿ ಪುತ್ರಿ.

Read More »

ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024

ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024 ಕ್ಕೆ ಉಡುಪಿ ಜಿಲ್ಲೆಯಿಂದ ನಟ ನಿರ್ದೇಶಕ ಸಂಘಟಕ ರವಿರಾಜ್ ಎಚ್ ಪಿ ಆಯ್ಕೆಯಾಗಿರುತ್ತಾರೆ. ಇವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ ನಿರ್ದೇಶಕ ಸಂಘಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿರುತ್ತದೆ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಇವರ ಪರಿಕಲ್ಪನೆಯಲ್ಲಿ ನಡೆಸಿದ ಹೀಗೊಂದು ರಂಗ ಕಲಿಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು …

Read More »

ಸುಪ್ರಸಿದ್ಧ ಪ್ರವಾಸಿತಾಣ ಎತ್ತಿನ ಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಮಗಳೂರು: ಕಾಫಿ ನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಸುಪ್ರಸಿದ್ಧ ಪ್ರವಾಸಿತಾಣ ಎತ್ತಿನ ಭುಜಕ್ಕೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶ ವಿಧಿಸಿದೆ.ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದ್ದು, ಭಾರಿ ಗಾಳಿ, ಮಳೆ, ಮಂಜಿನೊಂದಿಗೆ ಪ್ರವಾಸಿತಾಣದ ಸೊಬಗನ್ನು ನೋಡುವುದೇ ಒಂದು ವಿಸಯ. ಆದರೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಎತ್ತಿನಭುಜದ ಕಿರಿದಾದ ಪ್ರದೇಶದಲ್ಲಿ ಪ್ರವಾಸಿಗರು ಚಾರಣಕ್ಕೆ ಹೋಗುತ್ತಿದ್ದಾರೆ. ಈ ರಸ್ತೆಯಲ್ಲಿ ಪಾಚಿ ಕಟ್ಟಿದ್ದು, ಅನಾಹುತಗಳು ಸಂಭವಿಸಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚಾರಣಕ್ಕೆ ಹೋಗುವ ಮಾರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಇಲಾಖೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ …

Read More »

ಯೋಗದಿಂದ ರೋಗಮುಕ್ತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ~ ಪ್ರಕಾಶ್ಚಂದ್ರ ಶೆಟ್ಟಿ

ಜಿ.ಎಂ. ಗ್ಲೋಬಲ್ ಸ್ಕೂಲ್, ಬ್ರಹ್ಮಾವರ ಇಲ್ಲಿ ಹತ್ತನೆಯ ವಿಶ್ವ ಯೋಗ ದಿನಾಚರಣೆಯನ್ನು ದಿನಾಂಕ 21.06.2024ರಂದು ಬೆಳಿಗ್ಗೆ 6.45ಕ್ಕೆ ಸರಿಯಾಗಿ ಜ್ಯೋತಿ ಬೆಳಗಿಸುವುದರೊಂದಿಗೆ ಕ್ರಮಬದ್ಧವಾಗಿ ಆರಂಭಿಸಲಾಯಿತು. ಪ್ರಾಂಶುಪಾಲ ಪ್ರಣವ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಯೋಗ, ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ. ವೇದಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಇಂದು ಭಾರತವು ಯೋಗಾಸನ ಕ್ಷೇತ್ರದಲ್ಲಿ ವಿಶ್ವಕ್ಕೆ ಗುರುಸ್ಥಾನದಲ್ಲಿದೆ ಹಾಗೂ ಯೋಗಕ್ಕೆ ವಿಶ್ವಮಾನ್ಯತೆ ಇದೆ. ಶಿಸ್ತಿನ ಜೀವನವನ್ನು ನಡೆಸುವುದೇ ಒಂದು ಯೋಗ” ಎಂದು ಯೋಗದ ಕುರಿತು ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಇಂದಿನ ಮುಖ್ಯ ಅತಿಥಿಯಾಗಿ ಯೋಗ ತರಬೇತುದಾರರಾದ ಮಮತಾ …

Read More »

ಉಪ್ಪಿನಂಗಡಿ: ಬಹುಮಹಡಿ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ- 5ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ..!

ಉಪ್ಪಿನಂಗಡಿ: ಇಲ್ಲಿನ ಬ್ಯಾಂಕ್‌ ರಸ್ತೆಯ ಬಹುಮಹಡಿ ಕಟ್ಟಡಕ್ಕೆ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, 5ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇಲ್ಲಿನ ಅಂಚೆ ಕಚೇರಿ ಸಮೀಪದ ಪೃಥ್ವೀ ಮಹಲ್‌ ಕಟ್ಟಡಕ್ಕೆ ಅಗ್ನಿ ಸ್ಪರ್ಶವಾಗಿದ್ದು, ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಕಟ್ಟಡದ ತಳ ಅಂತಸ್ತಿನಲ್ಲಿರುವ ಬೇಕರಿ, ಮೊಬೈಲ್‌ ಅಂಗಡಿ, ಚಪ್ಪಲಿ ಅಂಗಡಿ, ಫ್ಯಾನ್ಸಿ ಸಹಿತ ಹಲವು ಅಂಗಡಿಗಳು ಬೆಂಕಿ ಹಬ್ಬಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಶ್ರಮಿಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಕಾಲಿಕ …

Read More »

ಯುವಕನ ಲಿಂಗ ಕ್ಕೆ ಕತ್ತರಿ ಹಾಕಿಸಿ ಯುವತಿಯನ್ನಾಗಿಸಿದ ಪಾಗಲ್ ಪ್ರೇಮಿ!

ಲಿಂಗ ಬದಲಾವಣೆ ಮಾಡಿಸಿಕೊಳ್ಳುವು ತುಂಬಾ ಅಂದರೆ ತೀರಾ ವೈಯಕ್ತಿಕ ವಿಷಯ. ಹೆಣ್ಣಾಗಿ ಅಥವಾ ಗಂಡಾಗಿ ಹುಟ್ಟಿ ಮತ್ತೆ ತಮ್ಮ ಮನಸ್ಸು ಒಪ್ಪದೆ ತಮ್ಮ ಒಪ್ಪಿಗೆಯಿಂದ ಮಾಡಿಕೊಳ್ಳುವ ಬದಲಾವಣೆ ಅದು. ಆದರೆ, ಬಲವಂತಾವಾಗಿ ಒಬ್ಬ ವ್ಯಕ್ತಿಯ ಲಿಂಗ ಬದಲಾವಣೆ ಮಾಡುವುದು ನಿಜಕ್ಕೂ ಅಪರಾಧ. ಇಂತಹ ಒಂದು ಕೃತ್ಯ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಮುಜಾಫರ್‌ನಗರದ ವ್ಯಕ್ತಿಯೊಬ್ಬ ತನ್ನ ಒಪ್ಪಿಗೆಯಿಲ್ಲದೆ ತನಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುಜಾಫರ್‌ನಗರದ 20 ವರ್ಷದ ಮುಜಾಹಿದ್ ಇಂತಹ ಕೃತ್ಯಕ್ಕೆ ಬಲಿಯಾಗಿರುವ ಯುವಕ. ಓಂಪ್ರಕಾಶ್‌ ಎಂಬಾತ ತನಗೆ …

Read More »

ಭಾಷೆ..ಗಡಿ ದಾಟಿದ ಯಕ್ಷಗಾನ: ಉಡುಪಿಯಲ್ಲಿ ಮೋದಿ ಊರಿನ ಕುವರರಿಗೆ ತರಬೇತಿ

ಉಡುಪಿ: ಭಾಷೆಯ ಗಡಿಗಳನ್ನು ದಾಟಿ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು, ಕೃಷ್ಣ ನಗರಿ ಉಡುಪಿಗೆ ಯಕ್ಷಗಾನ ಕಲಿಯಲು ಬಂದಿದ್ದಾರೆ. ಗುರು ಬನ್ನಂಜೆ ಸಂಜೀವ ಸುವರ್ಣರ ಮಾರ್ಗದರ್ಶನದಲ್ಲಿ ಹಿಂದಿ ಯಕ್ಷಗಾನದ ಶಿಬಿರ ಏರ್ಪಟ್ಟಿದೆ. ಕನ್ನಡದ ಕಲೆ ಯಕ್ಷಗಾನಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳೇ ಮನಸೋತಿದ್ದಾರೆ. ಭವಿಷ್ಯದ ಚಲನಚಿತ್ರರಂಗ ಮತ್ತು ಟಿವಿ ಪರದೆಯನ್ನು ಅಲಂಕರಿಸದಿರುವ ಯುವ ಕಲಾವಿದರು 20 ದಿನಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಗುರುಬನಂಜೆ ಸಂಜೀವ ಸುವರ್ಣ ಅವರು, ಸಾಂಪ್ರದಾಯಿಕ ಹೆಜ್ಜೆಗಾರಿಕೆಯನ್ನು‌ ಕಲಿಸುವುದರ ಜೊತೆಗೆ ಯಕ್ಷಗಾನ …

Read More »

ಮುಸ್ಲಿಂ ರಾಷ್ಟ್ರವಾದ ತಜಿಕಿಸ್ತಾನದಲ್ಲಿ ಹಿಜಾಬ್ ಬ್ಯಾನ್​..!

ಭಾರತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಕೆಲವು ರಾಜ್ಯಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿದಾಗ, ವಿಷಯವು ನ್ಯಾಯಾಲಯದ ಮೆಟ್ಟಿಲೇರಿತು. ತಜಿಕಿಸ್ತಾನದಲ್ಲಿ ಹಿಜಾಬ್ ಧರಿಸುವುದು ಅಥವಾ ಗಡ್ಡವನ್ನು ಇಟ್ಟುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಜಿಕಿಸ್ತಾನ್ ಸಾಂವಿಧಾನಿಕವಾಗಿ ಜಾತ್ಯತೀತ ರಾಷ್ಟ್ರವಾಗಿದೆ, ಇದು ಮುಸ್ಲಿಂ ದೇಶವಾಗಿದ್ದು, ಇಲ್ಲಿನ ಸಂಸತ್ ಹಿಜಾಬ್ ಅನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದೆ. ಶಾಲೆಗಳಲ್ಲಿ ಮಾತ್ರವಲ್ಲ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗುತ್ತಿದೆ. ಭಾರತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಕೆಲವು ರಾಜ್ಯಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ …

Read More »

ಕಾಪು: ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ನಿಧನ

ಕಾಪು: ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಶೇಖರ ಆಚಾರ್ಯ (74) ಅವರು ಜೂ.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಸಹೋದರರು, ಸಹೋದರಿಯನ್ನು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಮನೆಗೆ ವಾಪಸ್ಸಾಗಿದ್ದ ಅವರು ವಿಶ್ರಾಂತಿಯಲ್ಲಿದ್ದರು‌. ಶುಕ್ರವಾರ ಬೆಳಗ್ಗಿನ ಜಾವ ತೀವ್ರ ಅಸ್ವಸ್ಥತಗೊಂಡು ನಿಧನ ಹೊಂದಿದ್ದಾರೆ. ಸಾಮಾಜಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮುಂದಾಳುತ್ವ ವಹಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಅವರು …

Read More »

You cannot copy content of this page.