ತಾಜಾ ಸುದ್ದಿ

ಮುಡಿಪು: ಬೀಫ್ ಬಿರಿಯಾನಿ ಇದೆ ಎಂದ ಹೊಟೇಲ್ ಮೇಲೆ ದಾಳಿ

ಮುಡಿಪು: ಗೋಮಾಂಸದ ಖಾದ್ಯ ಇದೆ ಎಂದ ಹೊಟೇಲ್ ಮೇಲೆ ದಾಳಿ ಮಾಡಿರುವ ಘಟನೆ ಮುಡಿಪು ಎಂಬಲ್ಲಿ‌ ನಡೆದಿದೆ. ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ಗೋ ಮಾಂಸದ ಬಿರಿಯಾನಿ ಇದೆ ಎಂದು ಗ್ರಾಹಕರನ್ನು ಸೆಳೆಯಲು ಮಾಡಿದ ವಿಡಿಯೋದಲ್ಲಿ ಹೇಳಲಾಗಿದೆ ಎನ್ನಲಾಗಿದೆ. ಇದನ್ನು ನೋಡಿದ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹೊಟೇಲ್ ಗೆ ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ‌.ಈ ವೇಳೆ ಗೋಮಾಂಸದ …

Read More »

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ ಕುಂಬ್ಳೆ ಸುಂದರ ರಾವ್ ನಿಧನ

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88) ಅವರು ಬುಧವಾರ ನಿಧನರಾಗಿದ್ದಾರೆ. ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಅವರು ಸುರತ್ಕಲ್, ಧರ್ಮಸ್ಥಳ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು. 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ …

Read More »

ರಾಜಕೀಯ ನಾಯಕಿಯನ್ನು ಕಾರು ಸಮೇತ ಕ್ರೇನ್​ ಮೂಲಕ ಎಳೆದೊಯ್ದ ಪೊಲೀಸರು..!

ತೆಲಂಗಾಣದ ಆಡಳಿತ ಪಕ್ಷದ (ಟಿಆರ್​ಎಸ್​) ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದ ವೈಎಸ್‌ಆರ್‌ಟಿಪಿ ಪಕ್ಷದ ನಾಯಕಿ ವೈ.ಎಸ್. ಶರ್ಮಿಳಾರನ್ನು ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ ರೆಡ್ಡಿಯ ತಂಗಿಯೂ ಹೌದು. ಸೋಮಾಜಿಗುಡದ ಯಶೋದಾ ಆಸ್ಪತ್ರೆ ಬಳಿ ಇರುವ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನದ ಹತ್ತಿರ ಕಾರು ಚಲಾಯಿಸಿಕೊಂಡು ಬಂದ ಶರ್ಮಿಳಾರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಅಲ್ಲಿಂದ ತೆರಳಲು ಒಪ್ಪದ ಶರ್ಮಿಳಾರನ್ನು ಪೊಲೀಸರು ಕ್ರೇನ್​ ಮೂಲಕ ಕಾರು ಸಮೇತವಾಗಿ ವಶಕ್ಕೆ ಪಡೆದ ವಿಡಿಯೋ …

Read More »

ಉಡುಪಿ ಮಠಕ್ಕೂ ಬಂದು ಹೋಗಿದ್ದ ಶಾರೀಖ್ : ದೇವಾಲಯದ ಸುತ್ತಮುತ್ತ ಬಿಗಿಭದ್ರತೆ

ಮಂಗಳೂರು : ಮಂಗಳೂರು ಆಟೋ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಇತ್ತೀಚೆಗೆ ಉಡುಪಿ ಮಠಕ್ಕೆ ಕೂಡ ಬಂದಿದ್ದನು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅಕ್ಟೋಬರ್ 16 ರಂದು ಉಡುಪಿಯ ಕಾರ್ ಸ್ಟ್ರೀಟ್ ಪ್ರದೇಶಕ್ಕೆ ಬಂದು ಕಾರ್ಕಳ ಮತ್ತು ಬಂಟ್ವಾಳಕ್ಕೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಕೃಷ್ಣಮಠದ ಕಾರ್ ಸ್ಟ್ರೀಟ್ ಪ್ರದೇಶದ ಅಂಗಡಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಶಾರೀಖ್ ಉಡುಪಿ ಮಠಕ್ಕೆ ಬಂದು ಹೋಗಿರುವ ಕುರಿತು ಗೊತ್ತಾಗಿದೆ. ಅಕ್ಟೋಬರ್ 16 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ …

Read More »

71 ವರ್ಷದ ವ್ಯಕ್ತಿ ಜತೆ ಮದುವೆಯಾಗಲು ಸಲಹೆ ಕೇಳಿದ 23 ವರ್ಷದ ಯುವತಿ..!

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ 23ರ ಹರೆಯದ ಯುವತಿಯೊಬ್ಬಳು ತನ್ನ 71ರ ಹರೆಯದ ಸಂಗಾತಿಯನ್ನು ಮದುವೆಯಾಗುವ ಆಸೆಯನ್ನು ಹಂಚಿಕೊಂಡಿದ್ದಾಳೆ. ತಾನು ಈ ಬಗ್ಗೆ ಗೊಂದಲದಲ್ಲಿ ಇದ್ದು, ಸಲಹೆ ನೀಡಿ ಎಂದು ಕೇಳಿಕೊಂಡಿದ್ದಾಳೆ. ತನ್ನ ರೆಡ್ಡಿಟ್​ ಖಾತೆಯಲ್ಲಿ ಈ ವಿಷಯವನ್ನು ಯುವತಿ ಹಂಚಿಕೊಂಡು ಸಲಹೆಗಾಗಿ ಕಾದಿದ್ದಾಳೆ. 71 ವರ್ಷದ ವ್ಯಕ್ತಿಯನ್ನು ತಾನು ಆಕಸ್ಮಿಕವಾಗಿ ಭೇಟಿಯಾದೆ. ಅವನ ಮೇಲೆ ಪ್ರೀತಿ ಉಕ್ಕಿದೆ. ಆತ …

Read More »

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ: ಅನುಮಾನಾಸ್ಪದ ವಸ್ತುಗಳು ಪತ್ತೆ

ಪಂಜಾಬ್: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಗಡಿ ಭದ್ರತಾ ಪಡೆ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಮತ್ತೊಂದು ಡ್ರೋನ್ ಅನ್ನು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ. ಈ ಹಿಂದೆಯೂ ಭಾರತದ ಗಡಿಯೊಳಗೆ ಬಂದಿದ್ದ ಪಾಕಿಸ್ತಾನದ ಕೆಲವು ಡ್ರೋನ್ ಗಳನ್ನು ಭದ್ರತಾ ಪಡೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್‌ನ ಅಮೃತಸರದ ಚಹರ್‌ಪುರ್ ಗ್ರಾಮದ ಬಳಿ ಪಾಕ್ ಡ್ರೋನ್ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವುದನ್ನು ಗಮನಿಸಿದ ಸೇನಾ ಪಡೆ ಗುಂಡು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕಾರ್ಯಾಚರಣೆ ಸಮಯದಲ್ಲಿ, ಬಿಎಸ್‌ಎಫ್ ಒಂದು ಹೆಕ್ಸಾಕಾಪ್ಟರ್ ಅನ್ನು ಭಾಗಶಃ ಹಾನಿಗೊಳಗಾದ ಸ್ಥಿತಿಯಲ್ಲಿ …

Read More »

ಮಂಗಳೂರು: ಡಿಸೆಂಬರ್ 1ರಿಂದ ಸುರತ್ಕಲ್ ಟೋಲ್ ಗೇಟ್‌ನಲ್ಲಿ‌ ಸುಂಕ ವಸೂಲಾತಿ ಇಲ್ಲ-ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್

ಮಂಗಳೂರು: ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ ನಲ್ಲಿ ಡಿಸೆಂಬರ್ 1ರಿಂದ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸುರತ್ಕಲ್ ಟೋಲ್ ಗೇಟ್‌ಅನ್ನು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕದೊಂದಿಗೆ ವಿಲೀನಗೊಳಿಸಿಗಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಜಿಲ್ಲಾಧಿಕಾರಿ ಅವರು ನವೆಂಬರ್ 24ರಂದು ಹೊರಡಿಸಿರುವ ಆದೇಶ ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.‌ ಅದರಂತೆ ಡಿಸೆಂಬರ್ 1ರಿಂದ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

Read More »

ಯುವಕರಿಗೆ ಭಯೋತ್ಪಾದನೆ ತರಬೇತಿ: ಐವರು ಜೈಶ್ ಉಗ್ರರಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೇಶಾದ್ಯಂತ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿ ತರಬೇತಿ ನೀಡಿದ ಜೈಶ್-ಎ-ಮೊಹಮ್ಮದ್ (JeM)ನ ಐವರು ಭಯೋತ್ಪಾದಕರಿಗೆ ದೆಹಲಿ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಧೀಶ ಶೈಲೇಂದರ್‌ ಮಲಿಕ್‌ ಅವರು ತೀರ್ಪು ನೀಡಿದ್ದು, ಜೆಇಎಂನ ಸಜ್ಜದ್ ಅಹ್ಮದ್‌ ಖಾನ್‌, ಬಿಲಾಲ್ ಅಹ್ಮದ್ ಮಿರ್‌, ಮುಜಾಫರ್ ಅಹ್ಮದ್‌ ಭಟ್‌, ಇಶ್ಪಾಕ್‌ ಅಹ್ಮದ್‌ ಭಟ್ ಮತ್ತು ಮೆಹರಾಜ್‌–ಉದ್‌–ದಿನ್‌ ಚೋಪಾನ್‌ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಅಪರಾಧಿ ತನ್ವೀರ್ ಅಹ್ಮದ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Read More »

ಬ್ಯಾಂಕ್ ಗ್ರಾಹಕರೇ ಗಮನಿಸಿ: ಇಲ್ಲಿದೆ ʻಡಿಸೆಂಬರ್ʼ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ನವದೆಹಲಿ: ಇನ್ನೆರಡು ದಿನಗಳಲ್ಲಿ ವರ್ಷದ ಕೊನೆಯ ತಿಂಗಳು ಪ್ರಾರಂಭವಾಗಲಿದೆ. ಪ್ರತಿ ತಿಂಗಳಂತೆ, ಬ್ಯಾಂಕುಗಳು ಮುಂದಿನ ತಿಂಗಳಲ್ಲಿ ಅಂದರೆ, ಡಿಸೆಂಬರ್‌ನಲ್ಲಿ ಹಲವಾರು ದಿನಗಳ ರಜೆಯನ್ನು ಹೊಂದಿರುತ್ತವೆ. ಮುಂದಿನ ತಿಂಗಳು ಒಟ್ಟು 13 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.   ಕೆಲವು ರಜಾದಿನಗಳಲ್ಲಿ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಆದರೆ, ಕೆಲವು ರಜಾದಿನಗಳು ಆಯ್ದ ರಾಜ್ಯಗಳಿಂದ ಮಾತ್ರ ಇರುತ್ತವೆ. ನೀವು ಮುಂದಿನ ತಿಂಗಳು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಮುಂದಿನ ತಿಂಗಳು ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ ಬ್ಯಾಂಕ್‌ ಕೆಲಸಗಳನ್ನು ಮಾಡಿ. ಭಾನುವಾರ ಸೇರಿದಂತೆ …

Read More »

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ (29-11-2022)

ವೃಷಭ ರಾಶಿ.. ಈ ರಾಶಿಯವರು ಇಂದು ಮನಸ್ಸಿನ ಶಾಂತಿಯನ್ನು ಹೊಂದಿರುತ್ತಾರೆ. ನೀವು ಇಂದು ಹೆಚ್ಚಿನ ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ಕೆಲಸದಲ್ಲಿ ಯಶಸ್ಸು ನಿಮ್ಮ ಆಯಾಸವನ್ನು ಹೋಗಲಾಡಿಸುತ್ತದೆ. ಇಂದು ನೀವು ನಿಮ್ಮ ಸಮಯವನ್ನು ನೀವು ಇಷ್ಟಪಡುವದರಲ್ಲಿ ಕಳೆಯಬೇಕು. ಮತ್ತೊಂದೆಡೆ, ಇಂದು ನಿಮ್ಮ ಪ್ರತಿಸ್ಪರ್ಧಿಗಳ ಮೇಲೆ ಕಣ್ಣಿಡಿ. ಮಿಥುನ ರಾಶಿ.. ಈ ರಾಶಿಯವರು ಇಂದು ಅವರ ಕಷ್ಟಗಳಿಗೆ ಅನುಗುಣವಾಗಿ ಲಾಭವನ್ನು ನೀಡುತ್ತಾರೆ. ನೀವು ಕೆಲವು ಹೊಸ ಯೋಜನೆಗಳ ಬಗ್ಗೆ ಯೋಚಿಸುವಿರಿ. ಈ ಸಮಯವು ನಿಮಗೆ ಬಹಳ ಅಮೂಲ್ಯವಾಗಿದೆ. ನಿಮ್ಮ ವೈವಾಹಿಕ ಜೀವನ ಇಂದು ಸುಖಮಯವಾಗಿರುತ್ತದೆ. ವ್ಯಾಪಾರಿಗಳಿಗೆ ಇಂದು …

Read More »

You cannot copy content of this page.