ತಾಜಾ ಸುದ್ದಿ

ಸುರತ್ಕಲ್: ವ್ಯಕ್ತಿಯೋರ್ವರಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು

ಸುರತ್ಕಲ್:ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ನೈತಂಗಡಿ ಬಳಿ ನಡೆದಿದೆ. ಕೃಷ್ಣಾಪುರ ನಿವಾಸಿ ಜಲೀಲ್ ಅವರ ಎದೆಯ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ. ಜಲೀಲ್ ಮೇಲೆ ಇಬ್ಬರು ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಕೇರಳದ ಈ ವಿಶ್ವವಿದ್ಯಾನಿಲಯದಲ್ಲಿ ವಿಧ್ಯಾರ್ಥಿನಿಯರಿಗೆ 60 ದಿನ ರಜೆ -ಯಾವ ಕಾರಣಕ್ಕೆ ಗೊತ್ತಾ…?

ಕೊಟ್ಟಾಯಂ : ಕೇರಳದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿಧ್ಯಾರ್ಥಿನಿಯರಿಗೆ 60 ದಿನಗಳ ಮೆಟರ್ನಿಟಿ ರಜೆ ನೀಡಲು ತೀರ್ಮಾನಿಸಿದೆ. ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ ಸ್ನಾತಕ (ಯುಜಿ) ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿನಿಯರಿಗೆ ಈ ಅವಕಾಶ ನೀಡಲಿದೆ. ವಿವಿಯ ಕುಲಪತಿ ಸಿ.ಟಿ ಅರವಿಂದ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಮಾತೃತ್ವ ರಜೆ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮೊಟಕುಗೊಳಿಸುವುದನ್ನು ತಡೆಯಬಹುದಾಗಿದೆ ಎಂದು ವಿವಿ ತಿಳಿಸಿದೆ. …

Read More »

ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಗುಂಪಿನಿಂದ ಹಲ್ಲೆ!

ಬೆಂಗಳೂರು: ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ರಾಜ್ ಕುಮಾರ್ ಕುಟುಂಬದ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿರುವ ಆರೋಪ ಹೊರಿಸಿ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದ್ದು,  ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ತಂಡ ಅವಾಜ್ ಹಾಕಿದ ಬಳಿಕ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಶಿವಕುಮಾರ್ ನಾಯ್ಕ್ ಬಣ ಹಲ್ಲೆ ನಡೆಸಿದೆ ಎಂಬ …

Read More »

ಮಂಗಳೂರು: ಡಿ. 26,ರಿಂದ 28ರ ವರೆಗೆ ಕೆಎಸ್ಸಾರ್ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು: ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಜಾಂಬೂರಿಗೆ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸ್ಕೌಟ್ಸ್‌ ಆಯಂಡ್‌ ಗೈಡ್ಸ್‌ನ 50,000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರು ತಮ್ಮ ಊರುಗಳಿಗೆ ಹಿಂದಿರುಗುವ ವೇಳೆ ಡಿ. 26ರಿಂದ 28ರ ವರೆಗೆ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಾರ್ಯಕ್ರಮ ಮುಗಿಸಿ ಮರಳುವಾಗ ಮೂಡಬಿದಿರೆಯಿಂದ ರಾಜ್ಯದ ವಿವಿಧ ಸ್ಥಳಗಳಿಗೆ/ರೈಲು ನಿಲ್ದಾಣಗಳಿಗೆ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಿ ವಾಹನಗಳನ್ನು ನಿಯೋಜಿಸಬೇಕಾಗಿರುತ್ತದೆ. ಆದ್ದರಿಂದ ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು ವಲಯಗಳಲ್ಲಿ ಕಾರ್ಯಾಚರಣೆ ಯಲ್ಲಿರುವ ಬಸ್‌ಗಳ ಕೊರತೆ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ …

Read More »

ಬೆಳ್ತಂಗಡಿ: ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರಿಗೆ ಗಾಯ

ಬೆಳ್ತಂಗಡಿ: ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಬೆಳ್ತಂಗಡಿ ಮಲೆಬೆಟ್ಟು ಬಳಿ ನಡೆದಿದೆ. ಬೆಳ್ತಂಗಡಿ ಸುನ್ನತ್ ಕೆರೆ ನಿವಾಸಿ ಅಬ್ದುಲ್ ರಝಾಕ್ ಮೃತರು. ಹನೀಫ್ ಎಂಬವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್ ಎಂಬವರಿಗೆ ಸ್ವಲ್ಪ ಗಾಯಗಳಾಗಿದೆ. ಮಲೆಬೆಟ್ಟು ಬಳಿ ಗುಜಿರಿ ಸಂಗ್ರಹಿಸಲು ತೆರಳುತ್ತಿದ್ದ ಗೂಡ್ಸ್ ರಿಕ್ಷಾ ಗೆ ಧರ್ಮಸ್ಥಳದ ಸ್ಕೂಲ್ ಬಸ್ ಅಜಾಗರೂಕತೆಯಿಂದ ವೇಗವಾಗಿ ಸಂಚರಿಸಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಝಾಕ್ ಅವರ ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿದೆ. ಸ್ಥಳಕ್ಕೆ …

Read More »

“ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ” ಹೊಸ ವಿಡಿಯೋ ಹರಿಬಿಟ್ಟ ಮೋಸ್ಟ್ ವಾಂಟೆಂಡ್ ಉಗ್ರ ‘ಅಲ್-ಜವಾಹಿರಿ’

ನವದೆಹಲಿ : ಅಲ್ ಖೈದಾ ಹೊಸ ವೀಡಿಯೋವನ್ನ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋಸ್ಟ್ ವಾಂಟೆಂಡ್ ಉಗ್ರ ಅಲ್-ಜವಾಹಿರಿ ಅವರ ಧ್ವನಿ ಕೇಳಿಸುತ್ತಿದೆ. ಈ ವೀಡಿಯೋದ ಮೂಲಕ, ಭಯೋತ್ಪಾದಕ ಸಂಘಟನೆ ತನ್ನ ನಾಯಕ ಜೀವಂತವಾಗಿದ್ದಾನೆ ಎಂದು ಹೇಳಿಕೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಅಲ್-ಖೈದಾ ಈ 35 ನಿಮಿಷಗಳ ವೀಡಿಯೊವನ್ನು ಶುಕ್ರವಾರ (ಡಿಸೆಂಬರ್ 23) ಬಿಡುಗಡೆ ಮಾಡಿದೆ. ಈ ರೆಕಾರ್ಡಿಂಗ್ ಅಲ್-ಜವಾಹಿರಿಯದ್ದಾಗಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳಿಕೊಂಡಿದೆ. ಆದಾಗ್ಯೂ, ರೆಕಾರ್ಡಿಂಗ್ ಯಾವಾಗ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನ ನೀಡಲಾಗಿಲ್ಲ. ಈ ವೀಡಿಯೊವನ್ನ ಬಿಡುಗಡೆ ಮಾಡುವ ಮೂಲಕ, ಅಲ್-ಖೈದಾ …

Read More »

ವಿಮಾನ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ

ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.   ಈ ಹಿನ್ನೆಲೆಯಲ್ಲಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ. ದೇಶಾದ್ಯಂತ ಕೋವಿಡ್‌ ಭೀತಿ ಆವರಿಸಿದೆ. ಪೊಲೀಸ್ ಇಲಾಖೆಯಲ್ಲೂ ಆತಂಕ ಶುರುವಾಗಿದೆ. ಈ ನಡುವೆ ಹೊಸವರ್ಷ ಕೂಡ ಹತ್ತಿರವಾಗ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಹೊಸ ರೂಲ್ಸ್ ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದೆ. ಈ ವೇಳೆ ಬೆಂಗಳೂರು ಏರ್‌ಪೋರ್ಟ್‌ ಬರುವ ಪ್ರಯಾಣಿಕರಿಗೆ ಕೆಲವು ಮುನ್ನೆಚ್ಚರಿಕೆ ಮಾರ್ಗಸೂಚಿ ಕ್ರಮಗಳ ಬಿಡುಗಡೆ ಮಾಡಲಾಗಿದೆ. ಕೋವಿಡ್‌ ಮಾರ್ಗಸೂಚಿ …

Read More »

ಕಾಪು : ಹಾಲು ಖರೀದಿ ನೆಪದಲ್ಲಿ ಅಂಗಡಿ ಮಾಲಕನ ಸ್ಕೂಟರ್‌ ನಲ್ಲಿದ್ದ 6ಲಕ್ಷ ರೂ. ನಗದು ಕದ್ದ ಖದೀಮರು..

ಕಾಪು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಹಾಲಸಾ ಟ್ರೇಡರ್ಸ್ ಹಾಲಿನ ಅಂಗಡಿ, ಮುಚ್ಚಿವ ವೇಳೆಗೆ ಹಾಲು ಖರೀದಿ ನೆಪದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ನಾಲ್ವರು ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಕಾಪು ಮಹಾಲಸಾ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಹಣ ಕಳೆದುಕೊಂಡಿದ್ದು, ಕಾಪು ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ. ಗುರುವಾರ ರಾತ್ರಿ ಮಳಿಗೆಗೆ ಬೀಗ ಹಾಕಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದರು. 3-4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿದ್ದರು. …

Read More »

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ 5 ವರ್ಷದ ಬಾಲಕ ಸಾವು

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿದ ಪರಿಣಾಮ 5 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ದೊಡ್ಡ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಗೌರಿ – ಯಶ್ವಂತ್ ದಂಪತಿಯ ಪುತ್ರ ರೋಹನ್ ಮೃತಪಟ್ಟ ಬಾಲಕನಾಗಿದ್ದು, ಈತ ಅಂಗನವಾಡಿ ಕೇಂದ್ರದಲ್ಲಿ ಆಟವಾಡುವಾಗ ಹಾವು ಕಚ್ಚಿದೆ. ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆತರಲು ಮನೆಗಳಿಗೆ ಹೋಗಿದ್ದರು ಎನ್ನಲಾಗಿದೆ. ಹಾವು ಕಚ್ಚಿದ ಪರಿಣಾಮ ಬಾಲಕ ಪ್ರಜ್ಞೆ ತಪ್ಪಿದ್ದು, ಆತಂಕಗೊಂಡ ಬಾಲಕನ ತಂದೆ ಬೈಕಿನಲ್ಲಿ ಹೆತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಸಕಲೇಶಪುರಕ್ಕೆ …

Read More »

ಕೊರೊನಾ ಭೀತಿ ಹಿನ್ನೆಲೆ : ಇಂದು ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು : ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಕಾರ್ಮೋಡ ಆವರಿಸಿದ್ದು, ಇದರಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ಈಗಾಗಲೇ ಸರ್ಕಾರ ಕೊರೊನಾ ಕಟ್ಟಿ ಹಾಕಲು ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಮಾರ್ಗಸೂಚಿ ಕೂಡ ಪ್ರಕಟವಾಗಿದ್ದು, ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಇಂದು ಮತ್ತೊಂದು ತುರ್ತು ಸಭೆ ನಡೆಸಲಿದೆ ಎಂದು ಸುವರ್ಣಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ. ಕೊರೊನಾ ನಿರ್ವಹಣೆ ಸಂಬಂಧ ಶನಿವಾರ ರಾಜ್ಯದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ಸಭೆ …

Read More »

You cannot copy content of this page.