ತಾಜಾ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ಬರೆದ ಇಬ್ಬರಿಗೆ ದಂಡ

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿಯಾದ ಬರಹ ಬರೆದ ಇಬ್ಬರಿಗೆ ಬೆಂಗಳೂರಿನ 12ನೇ ಸಿಟಿ ಸಿವಿಲ್ ನ್ಯಾಯಾಲಯ ದಂಡ ವಿಧಿಸುವ ಜತೆಗೆ ಕ್ಷಮೆಯಾಚನೆಗೆ ಸೂಚಿಸಿದೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಕಳದ ಯೋಗೇಶ್ ನಯನಾ ಇನ್ನಾ ಹಾಗೂ ರಾಧಾಕೃಷ್ಣ ನಾಯಕ್ ಎಂಬುವರು ಸಚಿವ ಸುನಿಲ್ ಕುಮಾರ್ ವಿರುದ್ಧ ಫೇಸಬುಕ್ ಸೇರಿದಂತೆ ಇತರೆ ಜಾಲತಾಣದಲ್ಲಿ ಅವಹೇಳನಕಾರಿ, ಸುಳ್ಳು ಹಾಗೂ ದುರುದ್ದೇಶಪೂರಿತ ಬರಹವನ್ನು ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋದ ಸುನಿಲ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ …

Read More »

ಸುಬ್ರಹ್ಮಣ್ಯ: ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಗ್ರಾ.ಪಂ ಸದಸ್ಯೆ ಕೊನೆಗೂ ಠಾಣೆಗೆ ಹಾಜರು

ಸುಬ್ರಹ್ಮಣ್ಯ: ಸುಮಾರು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಕೊನೆಗೂ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ. ತನ್ನಿಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯನ್ನು ಹುಡುಕಿ ಕೊಡುವಂತೆ ಗ್ರಾ.ಪಂ ವತಿಯಿಂದ ಹಾಗೂ ಪಕ್ಷದ ವತಿಯಿಂದ ಮನವಿ ನೀಡಲಾಗಿತ್ತು. ಈ ನಡುವೆ ತನ್ನ ಪ್ರಿಯಕರನೊಂದಿಗಿರುವ ಬಗ್ಗೆ ಮಹಿಳೆ ಸ್ವತಃ ವಿಡಿಯೋ ಮೂಲಕ ಕುಟುಂಬಸ್ಥರಿಗೆ ತಿಳಿಸಿದ್ದರು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಮಹಿಳೆ …

Read More »

ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ- ಹೊತ್ತಿ ಉರಿದ ಬಸ್

ಕೆಎಸ್’ಆರ್’ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ತಮಿಳುನಾಡಿನ ಕೃಷ್ಣಗಿರಿಯ ಗುರುಪರಪಲ್ಲಿ ಬಳಿ ನಡೆದಿದೆ. ಗುರುಪರಪಲ್ಲಿಯ ಒಟ್ಟೆರ್ ಗ್ರಾಮ ನಿವಾಸಿಗಳಾದ ಯೋಧ ಸುಂದರೇಶನ್ ಹಾಗೂ ರೈತ ಗಣೇಶನ್ ಮೃತಪಟ್ಟವರು. ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಇಬ್ಬರೂ ಬೈಕ್ ನಲ್ಲಿ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ತಿರುಕೋವಿಲೂರು ಮಾರ್ಗವಾಗಿ ಬರುತ್ತಿದ್ದ ಕೆಎಸ್’ಆರ್’ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಇಬ್ಬರೂ ಬಸ್ಸಿನ ಅಡಿ ಸಿಲುಕಿ ಸ್ಥಳದಲ್ಲೇ …

Read More »

ಉಡುಪಿ: ಅಕ್ರಮ ಕಸಾಯಿ ಖಾನೆಗೆ ದಾಳಿ ; 200 ಕೆ.ಜಿ ದನದ ಮಾಂಸ ವಶಕ್ಕೆ ಪಡೆದ ಪೊಲೀಸರು

ಕಾಪು: ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿನ ಅಕ್ರಮ ಕಸಾಯಿ ಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ತಲುಪಿ ಅಲ್ಲಿನ ಫ್ಯಾಕ್ಟರಿಯ ಸಮೀಪ ಮರೆಯಲ್ಲಿ ನಿಂತು ನೋಡಿದಾಗಿ ಹಿಂಭಾಗದ ಹಾದಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ದನದ ಮಾಂಸವನ್ನು ಕಟಾವು ಮಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ವೇಳೆ ಮೊಹಮ್ಮದ್ ಆರೀಫ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 200 ಕೆ.ಜಿ ಯಷ್ಟು ದನದ ಮಾಂಸ, ಮಾರಕಾಯುಧ, ಇತರ ಸ್ವತ್ತು ವಶಪಡಿಸಿಕೊಂಡಿದ್ದಾರೆ …

Read More »

ಪುತ್ತೂರು: ಸಸ್ಯ ಜಾತ್ರೆಯಲ್ಲಿ HOME GARDEN ವಿಭಾಗ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಡಿ.ಚಂದಪ್ಪ ಮೂಲ್ಯ

ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ದ.ಕ.ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್,  ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಸಸ್ಯಜಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಸಸ್ಯ ಜಾತ್ರೆಯಲ್ಲಿ HOME GARDEN ವಿಭಾಗ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ (ಬೋನಸೈ ಮತ್ತೆ ವಿದೇಶಿ ತಳಿ ಹಣ್ಣು ಹಂಪಲು )ಡಿ.ಚಂದಪ್ಪ ಮೂಲ್ಯ ರವರಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪುತ್ತೂರಿನಲ್ಲಿ ಇದೇ ಪ್ರಥಮ ಬಾರಿಗೆ ನಡೆದ ಸಸ್ಯಜಾತ್ರೆ ಹೊಸ ಕ್ರಾಂತಿಯನ್ನುಂಟು ಮಾಡಿದೆ ಮಾತ್ರವಲ್ಲದೆ ಪುತ್ತೂರಿನಲ್ಲಿ ಚರಿತ್ರ ಸೃಷ್ಟಿಸಿದೆ. …

Read More »

ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ : ಪೂರ್ವಭಾವಿ ಸಭೆ

ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭದ ಪೂರ್ವಭಾವಿ ಸಭೆ ಬಿ.ಸಿ.ರೋಡು ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ರವಿವಾರ ದಿನಾಂಕ 8ರಂದು ಪೂವಾಹ್ನ 10.30ಕ್ಕೆ ಸರಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ, ಬಂಟ್ವಾಳ ಇದರ ಅಧ್ಯಕ್ಷರೂ ಹಿರಿಯ ಪತ್ರಕರ್ತರೂ ಆದ ಅಮ್ಮೆಂಬಳ ಆನಂದ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭದ ರೂಪುರೇಷೆಗಳನ್ನು ವಿವರಿಸಿದರು. ಸಭೆಯಲ್ಲಿ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭಕ್ಕೆ ಅತಿಥಿ ಗಣ್ಯರನ್ನು ಆಹ್ವಾನಿಸುವುದು, ದೇಶಭಕ್ತಿಗೀತೆ ಸ್ಪರ್ಧೆ …

Read More »

ಕಾಸರಗೋಡು: ಅಂಜುಶ್ರೀ ಸಾವಿಗೆ ವಿಷ ಅಹಾರ ಕಾರಣವಲ್ಲ – ಪ್ರಾಥಮಿಕ ವರದಿ

ಕಾಸರಗೋಡು : ಕಾಸರಗೋಡು ಮೂಲದ ಅಂಜುಶ್ರೀ ಪಾರ್ವತಿ ಅವರ ಸಾವು ವಿಷಾಹಾರ ಸೇವನೆಯಿಂದ ಸಂಭವಿಸಿಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳು ತಿಳಿಸಿವೆ. ಚೆಮ್ನಾಡಿನ ಠಕ್ಕಕ್ಲಾಯಿ ಗ್ರಾಮದ ನಿವಾಸಿ ಅಂಜುಶ್ರೀ ಅವರು ಡಿಸೆಂಬರ್ 31ರಂದು ಪಟ್ಟಣದ ಅಡ್ಕತ್‌ಬೈಲ್‌ನಲ್ಲಿರುವ ಅಲ್ ರೊಮ್ಯಾನ್ಶಿಯಾ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದರು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದರು, ಪುಡ್ ಪಾಯಿಸನ್ ನಿಂದಾಗಿ ಅಂಜುಶ್ರೀ ಅವರ ಸಾವು ಸಂಭವಿಸಿದೆ ಎಂದು ಪೊಲೀಸರು ರೆಸ್ಟೋರೆಂಟ್ ನ ಮಾಲೀಕ ಸೇರಿದಂತೆ ಮೂವರನ್ನುಅರೆಸ್ಟ್ ಮಾಡಿದ್ದರು, …

Read More »

ಭಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ದಾಳಿ

ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತರೊಬ್ಬರ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ ಭಾನುವಾರ ಶಿವಮೊಗ್ಗದಲ್ಲಿ ನಡೆದಿದೆ. ಪ್ಲಂಬರ್ ಕೆಲಸ ಮಾಡುತ್ತಿರುವ ಭಜರಂಗದಳ ಕಾರ್ಯಕರ್ತ ಮನೋಜ್‌ ಅವರು ತುಂಗಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಆತನ ಮೇಲೆ ಹಲ್ಲೆ ನಡೆದಿದೆ. ಮನೋಜ್‌ ತಲೆಗೆ ಬಲವಾಗಿ ಹೊಡೆಯಲಾಗಿದ್ದು, ಗಾಯಗೊಂಡಿರುವ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋಜ್‌ಗೆ ಹಲ್ಲೆಯಾಗಿರುವುದನ್ನು ತಿಳಿದ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಜಮಾಯಿಸಿದರು. ಶಿವಮೊಗ್ಗದಲ್ಲಿ ಭಾನುವಾರ ಬಜರಂಗದಳ ವತಿಯಿಂದ ಶೌರ್ಯ ಯಾತ್ರೆ ಆಯೋಜಿಸಲಾಗಿತ್ತು. ಆದರೆ, ಮನೋಜ್‌ ಸಮಾವೇಶಕ್ಕೂ ತೆರಳದೆ ಕೆಲಸಕ್ಕೆ …

Read More »

ಶಾಲಾ ಮಕ್ಕಳಿಗೆ `ನೈತಿಕ ಶಿಕ್ಷಣ’ : ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು : ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಸಂಬಂಧ ಚರ್ಚೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಎಲ್ಲ ಧರ್ಮಗಳು, ಮಠಾಧೀಶರು, ಮುಖಂಡರ ಸಭೆ ಕರೆಯಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಆದಿಚುಂಚನಗಿರಿ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿ ಎಲ್ಲ ಧರ್ಮಗಳ ಪ್ರಮುಖ ಧರ್ಮ ಗುರುಗಳು, ಮುಖಂಡರಿಗೆ ಆಹ್ವಾನ ಕಳಿಸಲಾಗಿದೆ. ನೈತಿಕ ಶಿಕ್ಷಣದ ಭಾಗವಾಗಿ ಮಹಾಭಾರತ ಮತ್ತು ರಾಮಯಣ, ಭಗವದ್ಗೀತೆ ಮೌಲ್ಯಯುತ ವಿಚಾರ ಬೋಧನೆಗೆ ಚಿಂತನೆ …

Read More »

ಸುಬ್ರಹ್ಮಣ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣ- ಇಬ್ಬರು ಆರೋಪಿಗಳು ಅರೆಸ್ಟ್

ಹಿಂದೂ ಹುಡುಗಿಯ ಜೊತೆ ತಿರುಗಾಟ ನಡೆಸಿದ ಆರೋಪದಲ್ಲಿ ಮುಸ್ಲಿಂ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾಧಾಕೃಷ್ಣ (45), ವಿಶ್ವಾಸ್ ಎನ್. (19) ಎಂದು ಗುರುತಿಸಲಾಗಿದೆ. ಯುವತಿಯ ಜೊತೆ ತಿರುಗಾಡುತ್ತಿದ್ದ ಎಂದು ಆರೋಪಿಸಿ ಯುವಕನೋರ್ವನಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರೆಂದು ಹೇಳಲಾದ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಜ.5ರಂದು ಕಲ್ಲುಗುಂಡಿಯ ಹಫೀದ್ ಎಂಬಾತ ಸುಬ್ರಹ್ಮಣ್ಯಕ್ಕೆ ಬಂದಿದ್ದ ವೇಳೆ ಕುಮಾರಧಾರ ಬಳಿಯ ಹಳೆ ಕಟ್ಟಡದ ಕೋಣೆಯೊಳಗೆ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಘಟನೆಯಿಂದ …

Read More »

You cannot copy content of this page.