ತಾಜಾ ಸುದ್ದಿ

ಗುಂಡ್ಯ: ನಿಯಂತ್ರಣ ತಪ್ಪಿ ಹೊಳೆಗೆ ಉರುಳಿದ ಕಾರು- ಓರ್ವ ಸಾವು, ಮತ್ತೊಬ್ಬ ಗಂಭೀರ

ಗುಂಡ್ಯ:  ರಾಷ್ಟ್ರೀಯ ಹೆಚ್ಚಾರಿ 75ರ ಶಿರಾಡಿ ಅಡ್ಡ ಹೊಳೆ ಸೇತುವೆಯಿಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟರೆ ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡಿನ ಹೊಸೂರು ಮೂಲದ ಹರಿಪ್ರಸಾದ್ (50) ಎಂದು ಗುರುತಿಸಲಾಗಿದ್ದು, ಗೋಪಿ (48) ಎಂಬವರು ಗಾಯಗೊಂಡವರು. ಕಾರು ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು ಎನ್ನಲಾಗುತ್ತಿದೆ. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪರಶುರಾಮ ಕ್ರೇನ್ ತಂಡ ಹಾಗೂ ಶೌರ್ಯ ವಿಪತ್ತು …

Read More »

BIG NEWS: ಪ್ಯಾರಸಿಟಮಾಲ್ ಸೇರಿದಂತೆ 14 ಮಾತ್ರೆಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತ ಸರ್ಕಾರವು 14 ಸ್ಥಿರ ಡೋಸ್ ಸಂಯೋಜನೆ (ಎಫ್ಡಿಸಿ) ಔಷಧಿಗಳನ್ನು ನಿಷೇಧಿಸಿದೆ, ಈ ಔಷಧಿಗಳಿಗೆ ‘ಯಾವುದೇ ಚಿಕಿತ್ಸಕ ಸಮರ್ಥನೆ ಇಲ್ಲ’ ಎಂದು ಹೇಳಿದೆ. ಎಫ್ ಡಿಸಿ ಎಂದರೆ ಅನಾರೋಗ್ಯವನ್ನು ಗುಣಪಡಿಸಲು ವೈದ್ಯರು ಸೂಚಿಸುವ ಕೆಲವು ನಿಗದಿತ ಡೋಸೇಜ್ ನಲ್ಲಿ ಎರಡು ಅಥವಾ ಹೆಚ್ಚಿನ ಔಷಧಿಗಳ ಸಂಯೋಜನೆಯಾಗಿದೆ.   ‘ಸಾರ್ವಜನಿಕ ಆರೋಗ್ಯಕ್ಕೆ ಅನುಕೂಲಕರವಲ್ಲದ ಅಥವಾ ಸಹಾಯಕವಲ್ಲದ ಅನೇಕ ಔಷಧಿಗಳನ್ನು ಮಿಶ್ರ ಡೋಸ್ ಸಂಯೋಜನೆಗಳಾಗಿ ಮಾರಾಟ ಮಾಡಲಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಸಿಡಿಎಸ್ಸಿಒ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್) ಕಾರ್ಯನಿರ್ವಹಣೆಯ …

Read More »

ಕುಕ್ಕರ್ ನಲ್ಲಿ ಶವ ಪ್ರಕರಣ : ತಾನು ಎಚ್ಐವಿ ಪೀಡಿತ: ಮೃತ ಯುವತಿ ಜೊತೆಗೆ ದೈಹಿಕ ಸಂಬಂಧವೇ ಹೊಂದಿರಲಿಲ್ಲ ಎಂದ ಕ್ರಿಮಿನಲ್..!

ಸರಸ್ವತಿ ವೈದ್ಯ ಎಂಬ ಯುವತಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಛಿದ್ರಗೊಳಿಸಿದ ಆರೋಪ ಹೊತ್ತಿರುವ ಮನೋಜ್ ಸಾನೆ ತಾನು ಎಚ್ಐವಿ ಪಾಸಿಟಿವ್ ಮತ್ತು ಸಂತ್ರಸ್ತೆಯೊಂದಿಗೆ ತಾನು ಯಾವುದೇ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಮುಂಬೈ ಬಳಿಯ ಮೀರಾ ರಸ್ತೆಯಲ್ಲಿರುವ ನಿವಾಸದಲ್ಲಿ ಸರಸ್ವತಿಯ ಕೊಳೆತ ದೇಹವನ್ನು ಪೊಲೀಸರು ಪತ್ತೆ ಹಚ್ಚಿದ ನಂತರ ಸಾನೆಯನ್ನು ಬಂಧಿಸಲಾಗಿತ್ತು. ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಾನೆ ಈ ಹಿಂದೆ ಹೇಳಿಕೊಂಡಿದ್ದ. ಇದರಿಂದ್ದ ತಾನು ಭಯಭೀತನಾಗಿದ್ದೆ. ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಸಿಲುಕಿಸುತ್ತಾರೆ ಎಂದು ಭಾವಿಸಿ ಶವವನ್ನು …

Read More »

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಮುಂದಿನ ಅಧ್ಯಕ್ಷರಾಗಿ ಯೋಗಿಶ್ ಶೆಟ್ಟಿ ಜಪ್ಪು ಬಹುತೇಕ ಖಚಿತ.. ?

ಸಂಪೂರ್ಣವಾಗಿ ತುಳುನಾಡಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸಿದ ಏಕೈಕ ಹೋರಾಟಗಾರ ಯೋಗಿಶ್ ಶೆಟ್ಟಿ ಜಪ್ಪು ರವರು . ಕರ್ನಾಟಕ ಸರಕಾರದ ತುಳು ಸಾಹಿತ್ಯ ಅಕಾಡೆಮಿಯ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ತುಳು ಪರ ಹೋರಾಟಗಾರರಿಗೆ ಅವಕಾಶ ನೀಡುವ ಬಗ್ಗೆ ತುಳುನಾಡಿನಲ್ಲಿ ಬಾರಿ ಕೂತೂಹಲ ಕೆರಳಿಸಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಜನಪ್ರಿಯ ಸಂಘಟನೆಯಾದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ಜಪ್ಪು ರವರ ಹೆಸರು ಭಾರೀ ಪ್ರಶಂಸೆ ಹಾಗೂ ಮುಂಚುಣಿ ಯಲ್ಲಿದೆ . ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ನಿರಂತರ ತುಳುನಾಡಿನ ನೆಲ ,ಜಲ …

Read More »

ಮಂಗಳೂರು: ರೈಲು ಹಳಿಯಲ್ಲಿ ಕಲ್ಲು ಇರಿಸಿ ದುಷ್ಕೃತ್ಯಕ್ಕೆ ಸಂಚು..!

ಮಂಗಳೂರು: ಸುರತ್ಕಲ್‌ ಚೊಕ್ಕಬೆಟ್ಟು ಬಳಿ ಕೆಲವು ಮಂದಿ ಮಕ್ಕಳು ಕೊಂಕಣ ರೈಲು ಮಾರ್ಗದ ಹಳಿಗೆ ಕಲ್ಲು ತೂರಾಟ ಮತ್ತು ಟ್ರ್ಯಾಕ್‌ ಮೇಲೆ ಕಲ್ಲು ಇರಿಸಿ ಅಪಘಾತ ನಡೆಸಲು ಷಡ್ಯಂತ್ರ ನಡೆಸಿದ ಘಟನೆ ಮೇ 30 ರಂದು ನಡೆದಿದೆ. ಯಶವಂತಪುರ ಬೆಂಗಳೂರು- ಕಾರವಾರ ರೈಲಿಗೆ ಬೆಳಗ್ಗಿನ ವೇಳೆ ಕಲ್ಲು ತೂರಾಟ ಕೂಡಾ ಮಾಡಲಾಗಿತ್ತು. ಹಳಿಗಳ ಮೇಲೆ ಕೆಲವು ಕಡೆ ಕಲ್ಲುಗಳನ್ನು ಇರಿಸಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಸ್ಥಳೀಯ ಧಾರ್ಮಿಕ ಕೇಂದ್ರವೊಂದರ ಮುಖಂಡರ ಮುಖಾಂತರ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ರೈಲ್ವೇ …

Read More »

ಬಂಟ್ವಾಳದ ಯುವಕನ ಮೃತದೇಹ ಚಾರ್ಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಯುವಕನ ಮೃತದೇಹವು ಮೂಡಿಗೆರೆಯ ಚಾರ್ಮಾಡಿ ಘಾಟ್ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ದೇವರ ಮನೆ ರಸ್ತೆ ತಿರುವು ಬಳಿಯ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಮೃತದೇಹವನ್ನು ಇರಾ ಗ್ರಾಮದ ಕುಕ್ಕಾಜೆ – ಕಾಪಿಕಾಡ್ ನಿವಾಸಿ ದಿ. ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮೃತ ಸವಾದ್ 10 …

Read More »

ಉಡುಪಿ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನೇಮಕ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಉಡುಪಿ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನೇಮಕ ಮಾಡಲಾಗಿದೆ.

Read More »

ಮಾದಕ ವಸ್ತುಗಳನ್ನು ಮಾರಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಮಾದಕ ವಸ್ತು ಎಂಡಿಎಂಎ ಹೊಂದಿ, ಕಾರಿನಲ್ಲಿಟ್ಟು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ಫರಂಗಿಪೇಟೆ ನಿವಾಸಿ ಮಹಮ್ಮದ್ ಆಶ್ರಫ್ ಯಾನೆ ಚೋಟಾ ಆಶ್ರಫ್, ಮತ್ತು ಪೆರ್ಮನ್ನೂರು ದಾರಂದಬಾಗಿಲು ನಿವಾಸಿ ದಾವವೂದ್ ಫರ್ವೆಝ್(36) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಕಾರಿನಲ್ಲಿಟ್ಟು ಮಂಗಳೂರಿಗೆ ತಂದು ನಗರದ ನೆಹರೂ ಮೈದಾನ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ …

Read More »

ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ಆತ್ಮಹತ್ಯೆಗೆ ಶರಣು..!

ಮಂಗಳೂರು : ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕರಾಗಿದ್ದ ಬಾಲಕೃಷ್ಣ (58) ಎಂಬವರು ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಗ್ರಕೂಳೂರು ಮಾಲಾಡಿ ಕೋರ್ಟ್‌ ಬಳಿ ನೆಲೆಸಿದ್ದ ಅವರು ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು. ಬಳಿಕ ಅಪರ ಜಿಲ್ಲಾಧಿಕಾರಿಯ ಕಾರಿನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಗುರುವಾರ ತನ್ನ ಮನೆಯ ಮಹಡಿಗೆ ಹೋದವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಪುತ್ರ ಚೇತನ್‌ ನೀಡಿದ ದೂರಿನಂತೆ ಕಾವೂರು …

Read More »

ಎಚ್ ಮೋಹನ್ ಉಡುಪ ಹಂದಾಡಿಗೆ “ಯಶೋ ಮಾಧ್ಯಮ ಪ್ರಶಸ್ತಿ”

ಬೆಂಗಳೂರಿನ ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆಯು ನೀಡುವ “ಯಶೋ ಮಾಧ್ಯಮ 2023” ಪ್ರಶಸ್ತಿಗೆ ಬ್ರಹ್ಮಾವರದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಎಚ್. ಮೋಹನ  ಉಡುಪ ಹಂದಾಡಿ ಅವರು ಭಾಜನರಾಗಿದ್ದಾರೆ. ದಿನಾಂಕ 10.06.2023ರಂದು ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಿರಿಯಾರ ಗಣೇಶ್ ನಾಯಕ್, ಕುಮಾರ್ ಚಂದ್ರ (ಡಿವೈಎಸ್ಪಿ), ರವೀಂದ್ರ, ಯು.ಲೋಕೇಶ್ ಪೂಜಾರಿ, ಸಂತೋಷ್ ಕಾಮತ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ …

Read More »

You cannot copy content of this page.