ತಾಜಾ ಸುದ್ದಿ

ಕಟ್ಟೆ ಫ್ರೆಂಡ್ಸ್ ಹನುಮಾನ್‌ ನಗರ ಇದರ ಕಟ್ಟೆಯ ನೂತನ ಚಪ್ಪರ ಉದ್ಘಾಟಿಸಿದ ಶಾಸಕ ಯಶ್ ಪಾಲ್ ಸುವರ್ಣ

ಕಟ್ಟೆ ಫ್ರೆಂಡ್ಸ್ ಹನುಮಾನ್‌ನಗರ, ಮಲ್ಪೆ. ಇದರ ಕಟ್ಟೆಯ ನೂತನ ಚಪ್ಪರದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

Read More »

ಸಿದ್ದರಾಮಯ್ಯರ ಬಜೆಟ್ ಅಲ್ಪಸಂಖ್ಯಾತರ ಓಲೈಕೆ – ಅರುಣ್ ಕುಮಾರ್ ಪುತ್ತಿಲ ಆರೋಪ

ಪುತ್ತೂರು : ಕಳೆದ ಬಾರಿ ಸಿದ್ದರಾಮಯ್ಯರ ಆಡಳಿತದಲ್ಲಿ ಇದ್ದಂತೆ ಈ ಬಾರಿಯೂ ಸಿದ್ದರಾಮಯ್ಯ ಬಜೆಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಬಜೆಟ್ ನಂತಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಅವರು, ಅಲ್ಪಸಂಖ್ಯಾತ ಸಮುದಾಯದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿಯೇ 60 ಕೋಟಿ ರೂ. ಅನುದಾನ, ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸುವುದು ಮತ್ತು ನೂರಾರು ಕೋಟಿ ಅನುದಾನ, ಮೌಲನ ಅಜಾದ್ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ, ಸಿ.ಇ.ಟಿ ಮೂಲಕ ಪ್ರವೇಶ ಪಡೆದ ಇಂಜಿನಿಯರಿಂಗ್‌, ವೈದ್ಯಕೀಯ ಮುಂತಾದ 28 …

Read More »

ಖಲಿಸ್ತಾನಿ ಭಯೋತ್ಪಾದಕರ `ಮೋಸ್ಟ್ ವಾಂಟೆಡ್ ಪಟ್ಟಿ’ಗೆ 21 ಹೆಸರು ಸೇರಿಸಿದ `NIA’

ನವದೆಹಲಿ : ಕೇಂದ್ರ ತನಿಖಾ ಸಂಸ್ಥೆ (NIA) ವಿದೇಶದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದ್ದು, ಸುಮಾರು 21 ಖಲಿಸ್ತಾನಿಗಳ ಹೆಸರುಗಳನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಈ ಖಲಿಸ್ತಾನಿಗಳ ಹೆಸರುಗಳನ್ನು ಫೋಟೋದೊಂದಿಗೆ ಎನ್‌ಐಎ ವೆಬ್ ಸೈಟ್ ನಲ್ಲಿ ಹಾಕಲಾಗಿದೆ.   ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಪಲಾಯನಗೈದ ಗುರ್ಪತ್ವಂತ್ ಸಿಂಗ್ ಪನ್ನುನ್ ಹೆಸರು ತನಿಖಾ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ.ಲಖ್ಬೀರ್ ಸಿಂಗ್ ಲಾಂಡಾ, ಮಂದೀಪ್ ಸಿಂಗ್, ಸತ್ನಾಮ್ ಸಿಂಗ್, ಅಮ್ರಿಕ್ ಸಿಂಗ್ ಸೇರಿದಂತೆ ಕೆನಡಾ, ಅಮೆರಿಕ ಮತ್ತು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ …

Read More »

ದಯವಿಟ್ಟು ನನ್ನ ಪತ್ನಿ,ಮಕ್ಕಳನ್ನು ಪಾಕ್‌ಗೆ ಕಳುಹಿಸಿ ಕೊಡಿ.. ಮೋದಿ ಸರ್ಕಾರಕ್ಕೆ ಪತಿ ಮನವಿ

ನವದೆಹಲಿ: ಪಬ್‌ ಜೀ ಗೇಮ್‌ ನಿಂದ ಯುವಕನೊಬ್ಬನ ಪರಿಚಯವಾಗಿ,ಆತನನ್ನು ಭೇಟಿಯಾಗಲು ಪಾಕ್‌ ನಿಂದ ನೇಪಾಳ ಮೂಲಕವಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಮಹಿಳೆಯ ಸ್ಟೋರಿ ಇತ್ತೀಚೆಗೆ ವೈರಲ್‌ ಆಗಿತ್ತು. ಇದೀಗ ಆ ಮಹಿಳೆಯ ಪತಿ ಮರಳಿ ಪಾಕ್‌ ಗೆ ಬಾ ಎಂದು ಪತ್ನಿಯನ್ನು ವಿನಂತಿಸಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಘಟನೆ ಹಿನ್ನೆಲೆ: ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಜನಪ್ರಿಯ ಮೊಬೈಲ್‌ ಗೇಮ್‌ ಪಬ್‌ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದಾರೆ. ಆ ಮಹಿಳೆಗೆ ಈಗಾಗಲೇ ನಾಲ್ಕು …

Read More »

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಯವರಿಗೆ ಮಾತೃ ವಿಯೋಗ

ಉಡುಪಿ: ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಆದಂತಹ ವಿನಯ್ ಕುಮಾರ್ ಸೊರಕೆ ರವರ ತಾಯಿಯು ಸುನೀತಿ ಅಚ್ಯುತ ಸೊರಕೆ (91) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದ್ದಾರೆ. ಇವರು ಮೂರು ಜನ ಪುತ್ರರು,ಎರಡು ಜನ ಪುತ್ರಿಯರು, ಎಂಟು ಮೊಮ್ಮಕ್ಕಳು,ಹಾಗೂ ಮೂರು ಮರಿ ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಇಂದು ಮದ್ಯಾಹ್ನ 1.30 ರ ನಂತರ ತಮ್ಮ ಸ್ವಗೃಹವಾದ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆ ಯಲ್ಲಿ ನೆಡೆಯುವುದು ಎಂದು ತಿಳಿಸಲಾಗಿದೆ.

Read More »

ಬೆಳ್ಮಣ್‌: ಮರ ಬಿದ್ದು ಬೈಕ್ ಸವಾರ ಸಾವು ಬೆನ್ನಲ್ಲೇ ಅಪಾಯಕಾರಿ ಮರಗಳ ತೆರವು

ಬೆಳ್ಮಣ್‌: ಬೆಳ್ಮಣ್‌ನಲ್ಲಿ ಗುರುವಾರ ರಾತ್ರಿ ಮರ ಬಿದ್ದು ಬೈಕ್ ಸವಾರ ಪಿಲಾರು ನಿವಾಸಿ ಪ್ರವೀಣ್(30) ಮೃತಪಟ್ಟ ಬೆನ್ನಲ್ಲೆ ಪೇಟೆಯ ಅಪಾಯಕಾರಿ ಮರಗಳ ತೆರವು ಕಾರ್ಯ ಶುಕ್ರವಾರ ಅರಣ್ಯ ಇಲಾಖೆಯ ಹಾಗೂ ಸ್ಥಳೀಯರ ನೆರವಿನಿಂದ ನಡೆದಿದೆ. ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಪೇಟೆಯಲ್ಲಿ ಬೃಹತ್ ಗಾತ್ರ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ಬೈಕ್ ಸವಾರ ಮರದಡಿಯಲ್ಲಿ ಸಿಲುಕಿಕೊಂಡಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ದಾರಿ ಮಧ್ಯೆ ಆತ ಸಾವನ್ನಪ್ಪಿದ್ದ. ಈ ಘಟನೆಯಿಂದ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಮರವನ್ನು …

Read More »

ಇನ್ಮುಂದೆ ಸ್ವಸಹಾಯ ಸಂಘಗಳಿಗೆ ಪೆಟ್ರೋಲ್ ಬಂಕ್ ನಿರ್ವಹಣೆ ಹೊಣೆ..!

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ“ಉದ್ಯಮ ಶಕ್ತಿ” ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದರ ನಿರ್ವಹಣೆ ಹೊಣೆಯನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ʻಉದ್ಯಮ ಶಕ್ತಿʼ ಎಂಬ ಯೋಜನೆಯಡಿ 100 ಸ್ಥಳಗಳಲ್ಲಿ ಪೆಟ್ರೋಲ್‌ ಬಂಕ್‌ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮ ವಹಿಸಲಿದೆ. ಪೆಟ್ರೋಲಿಯಂ ಕಂಪನಿಗಳು ಇದರ ನಿರ್ಮಾಣಕ್ಕೆ ಬಂಡವಾಳ ಹೂಡಲಿವೆ. ರಾಜ್ಯ ಸರ್ಕಾರವು ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಭೂಮಿ ಒದಗಿಸುವುದರೊಂದಿಗೆ ತರಬೇತಿ, …

Read More »

ಬಜೆಟ್ ಮಂಡನೆ ವೇಳೆ ವಿಧಾನಸಭೆಗೆ ಪ್ರವೇಶಿಸಿದ ಅನಾಮಧೇಯ; ಶಾಸಕರ ಜಾಗದಲ್ಲಿ 15 ನಿಮಿಷ ಕೂತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು: ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಭದ್ರತಾ ಲೋಪವಾಗಿರುವುದು ವರದಿಯಾಗಿದೆ. ಬಿಗಿ ಭದ್ರತೆಯಿದ್ದರೂ ಅನಾಮಧೇಯ ವ್ಯಕ್ತಿಯೊಬ್ಬ ಆರಾಮಾಗಿ ವಿಧಾನಸಭೆಗೆ ಪ್ರವೇಶಿಸಿ ಶಾಸಕರ ಸ್ಥಾನದಲ್ಲಿ ಕುಳಿತಿದ್ದಾರೆ. ಆ ವ್ಯಕ್ತಿಯನ್ನು ಕರಿಯಪ್ಪ ಅಲಿಯಾಸ್ ತಿಪ್ಪೆರುದ್ರ ಎಂದು ಗುರುತಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸುಮಾರು 15 ನಿಮಿಷಗಳ ಕಾಲ ಶಾಸಕರ ಜಾಗದಲ್ಲಿ ಕುಳಿತಿದ್ದ ಕರಿಯಪ್ಪ ನಂತರ ಎದ್ದು ಹೋಗಿದ್ದಾನೆ. ಗುರುಮಿಠಕಲ್ ಶಾಸಕ ಶರಣಗೌಡ ಕುಂದಕೂರ್ ಇದನ್ನು ಗಮನಿಸಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ಅವರ ಸೀಟಿನಲ್ಲಿ ಕುಳಿತಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ …

Read More »

ಉಡುಪಿ : ಬಿಲ್ ವಿಚಾರ-ಹೆಜಮಾಡಿ ಹೈವೇ ಕ್ಯಾಂಟೀನ್ ಕಾರ್ಮಿಕನಿಗೆ ಹಲ್ಲೆ,ದೂರು ದಾಖಲು..!

ಉಡುಪಿ : ಬಿಲ್ ವಿಚಾರದಲ್ಲಿ ಕ್ಯಾಂಟೀನ್ ವೊಂದರ ಕಾರ್ಮಿಕರೊರ್ವರಿಗೆ ಕಾರಿನಲ್ಲಿ ಬಂದ ಐವರು ಯುವಕರಿದ್ದ ತಂಡವೊಂದು ಹಿಗ್ಗಾಮುಗ್ಗ ಥಳಿಸಿ ಪರಾರಿಯಾಗಿರುವ ಘಟನೆ ಉಡುಪಿ ಹೆಜಮಾಡಿ ಟೋಲ್ ಬಳಿಯ ಹೈವೇ ಕ್ಯಾಂಟೀನ್ ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಕ್ಯಾಂಟೀನ್ ಗೆ ಆಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಡುಪಿ ಜಿಲ್ಲೆಯ ಎರ್ಮಾಳು ನಿವಾಸಿ ಸಂತೋಷ್ ಕುಮಾರ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಇದೇ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತಡರಾತ್ರಿ ಐವರು ಯುವಕರಿದ್ದ ತಂಡವೊಂದು ಬಿಯಾರ್ ಬಾಟಲಿಯನ್ನು ಕೈಯಲ್ಲಿ …

Read More »

ಮಹಿಳೆಯರಿಗೆ ಗುಡ್ ನ್ಯೂಸ್;‌ ಯಾವುದೇ ಗ್ಯಾರೆಂಟಿ ಇಲ್ಲದೇ ಸರ್ಕಾರ ‘3 ಲಕ್ಷ’ ಸಾಲ ನೀಡ್ತಿದೆ, ನೀವೂ ಅರ್ಜಿ ಸಲ್ಲಿಸಿ

ನವದೆಹಲಿ : ದೇಶದ ಮಹಿಳೆಯರನ್ನ ಆರ್ಥಿಕವಾಗಿ ಸದೃಡಗೊಳಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲಿ ‘ಉದ್ಯೋಗಿನಿ’ ಯೋಜನೆಯೂ ಒಂದು. ಈ ಯೋಜನೆಯಡಿ, ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಅದ್ರಂತೆ, ಮಹಿಳೆಯರು 88 ಬಗೆಯ ಸಣ್ಣ ಉದ್ದಿಮೆಗಳನ್ನ ಸ್ಥಾಪಿಸಿ, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೇಂದ್ರ ಸರ್ಕಾರ ಬಯಸಿದೆ. ಉದ್ಯೋಗಿನಿ ಯೋಜನೆ ಎಂದರೇನು.? ಅದರ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ.? ಅನುಸರಿಸಬೇಕಾದ ನಿಯಮಗಳೇನು.? ಹೇಗೆ ಅರ್ಜಿ ಸಲ್ಲಿಸಬೇಕು.? ಯಾವ ವ್ಯವಹಾರಕ್ಕೆ ಸಾಲ ನೀಡಲಾಗುತ್ತದೆ.? ಮುಂದಿದೆ ಮಾಹಿತಿ. ಉದ್ಯೋಗಿನಿ ಯೋಜನೆ ಎಂದರೇನು? * ಮಹಿಳೆಯರ …

Read More »

You cannot copy content of this page.