
ಉಡುಪಿ : ಬಿಲ್ ವಿಚಾರದಲ್ಲಿ ಕ್ಯಾಂಟೀನ್ ವೊಂದರ ಕಾರ್ಮಿಕರೊರ್ವರಿಗೆ ಕಾರಿನಲ್ಲಿ ಬಂದ ಐವರು ಯುವಕರಿದ್ದ ತಂಡವೊಂದು ಹಿಗ್ಗಾಮುಗ್ಗ ಥಳಿಸಿ ಪರಾರಿಯಾಗಿರುವ ಘಟನೆ ಉಡುಪಿ ಹೆಜಮಾಡಿ ಟೋಲ್ ಬಳಿಯ ಹೈವೇ ಕ್ಯಾಂಟೀನ್ ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಕ್ಯಾಂಟೀನ್ ಗೆ ಆಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉಡುಪಿ ಜಿಲ್ಲೆಯ ಎರ್ಮಾಳು ನಿವಾಸಿ ಸಂತೋಷ್ ಕುಮಾರ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅವರು ಇದೇ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ತಡರಾತ್ರಿ ಐವರು ಯುವಕರಿದ್ದ ತಂಡವೊಂದು ಬಿಯಾರ್ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಕ್ಯಾಂಟೀನ್ ಒಳಗಡೆ ಬಂದು ಉಪಹಾರ ಸೇವನೆ ಮಾಡಿದೆ.
ಬಳಿಕ ಬಿಲ್ ವಿಚಾರದಲ್ಲಿ ತಾಗದೆ ತೆಗೆದು ತಲವಾರು ಜಲಪಿಸುತ್ತಾ ಕ್ಯಾಂಟೀನ್ ನ ಒಳಕ್ಕೆ ಹೊಕ್ಕಿ ಕೆಲಸ ಮಾಡುತ್ತಿರುವ ಸಂತೋಷ್ ಅವರನ್ನು ಕೈಯಿಂದ ಥಳಿಸಿದೆ.
ಮಾತ್ರವಲ್ಲ ನೆಲಕ್ಕೆ ಬಿದ್ದ ಅವರಿಗೆ ಕಾಲಿನಿಂದ ಒದ್ದು ತಲವಾರು ಜಲಪಿಸುತ್ತಾ ಮಂಗಳೂರಿನತ್ತ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಸಂತೋಷ್ ಕುಮಾರ್ ಅವರು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದು,ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.