ತಾಜಾ ಸುದ್ದಿ

ಬೆಳ್ತಂಗಡಿ : ಅಕ್ರಮ ಜಾನುವಾರು ಸಾಗಾಟ- 8 ಜಾನುವಾರು ರಕ್ಷಣೆ, 4 ಆರೋಪಿಗಳ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ಮೂರು ವಾಹನಗಳಲ್ಲಿ ಹಿಂಸ್ಮಾಕ ರೀತಿಯಲ್ಲಿ ಏಂಟು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂರು ಪಿಕಪ್  ಸಹಿತ 8 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ  ಸಂಬಂಧ ನಾಲ್ವರನ್ನು  ಬಂಧಿಸಿದ್ದಾರೆ. ಚೆನ್ನಕೇಶವ (33 ವ)ಮರವಳಲು ಕಸಬಾ ಹೋಬಳಿ, ಅರಕಲಗೂಡು ಹಾಸನದ ಅರಕಲಗೂಡಿನ ಮರವಳಲು ಕಸಬಾ ಹೋಬಳಿಯ ಚೆನ್ನ ಕೇಶವ, ಬೆಳ್ತಂಗಡಿ  ನಾವೂರು ಒಳಗದ್ಡೆಯ ಪುಷ್ಪರಾಜ್ , ಮೋರ್ತಾಜೆ ಮನೆಯ ಪ್ರಮೋದ್ ಸಾಲ್ಯಾನ್,  ಹೊಳೆ ನರಸೀಪುರ ಹಳೇಕೋಟೆ ಹೋಬಳಿ ಸಂದೀಪ್ ಹಿರೇಬೆಳಗುಳಿ ಬಂಧಿತ ಆರೋಪಿಗಳಾಗಿದ್ದಾರೆ. ಧಮ೯ಸ್ಥಳ ಠಾಣೆಯ ಎಸ್.ಐ …

Read More »

ರಾಜ್ಯದಲ್ಲಿನ ‘ಹತ್ಯೆ ಪ್ರಕರಣ’ಗಳ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘CM ಸಿದ್ಧರಾಮಯ್ಯ’

ಬೆಂಗಳೂರು: ರಾಜ್ಯದಲ್ಲಿ ನಡೆದಂತ ಜೈನಮುನಿ ಬರ್ಬರ ಹತ್ಯೆ, ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಸೇರಿದಂತೆ ವಿವಿಧ ವಿಷಯಗಳನ್ನು ಖಂಡಿಸಿ ಬಿಜೆಪಿ ನಿನ್ನೆ ಪ್ರತಿಭಟನೆ ನಡೆಸಿದ್ದಲ್ಲದೇ, ಕಾಂಗ್ರೆಸ್ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ದೂರು ನೀಡಲಾಯಿತು. ಈ ಬಗ್ಗೆ ಇಂದು ಸಿಎಂ ಸಿದ್ಧರಾಮಯ್ಯ ( CM Siddaramaiah ) ಖಡಕ್ ಟಾಂಗ್ ನೀಡಿದ್ದಾರೆ. ಈ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಟ್ವಿಟ್ ( Twitter ) ಮಾಡಿದ್ದು, ದುಡ್ಡಿನ ವ್ಯವಹಾರದ ಕಾರಣಕ್ಕಾಗಿ ನಡೆದಿದೆ ಎನ್ನಲಾದ ಜೈನಮುನಿ …

Read More »

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ವರ್ಗಾವಣೆ…..!!

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ವಿದ್ಯಾಕುಮಾರಿ ಅವರು ಈ ಹಿಂದೆ ಉಡುಪಿ ಜಿಲ್ಲೆಯ ಎಡಿಸಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೂಲತಃ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಡಾ.ವಿದ್ಯಾಕುಮಾರಿ 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ.

Read More »

ಉಡುಪಿ: ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ನೇಮಕ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಆಗಿ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಸದ್ಯ ಜಿಲ್ಲಾಧಿಕಾರಿಯಾಗಿರುವ ಕೂರ್ಮಾ ರಾವ್ ಎಂ ಅವರ ಸ್ಥಾನಕ್ಕೆ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಆದರೆ ಕೂರ್ಮಾ ರಾವ್ ಅವರಿಗೆ ಹುದ್ದೆ ಮತ್ತು ಜಾಗ ತೋರಿಸಿಲ್ಲ.ವಿದ್ಯಾಕುಮಾರಿ ಅವರು ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Read More »

ಕುಂದಾಪುರ: ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ತಂದೆಯ ಬಂಧನ

ಕುಂದಾಪುರ: ಪತಿಯನ್ನು ತ್ಯಜಿಸಿದ್ದ ಹೊರರಾಜ್ಯದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಮಹಿಳೆಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ. ದೂರು ದಾಖಲಾದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಕುಂದಾಪುರ ಪೊಲೀಸರ ತಂಡ ಪೊಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೊಪಿಯನ್ನು ಬೈಂದೂರಿನ ನಿವಾಸಿ ಸೊಹೇಲ್ ಎಂದು ಗುರುತಿಸಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪತಿಯನ್ನು ತ್ಯಜಿಸಿದ್ದ ಇಬ್ಬರು ಮಕ್ಕಳಿದ್ದ ಹೊರ ರಾಜ್ಯದ ಮಹಿಳೆಯನ್ನು ಸೊಹೇಲ್ ಪ್ರೀತಿಸಿ ಮದುವೆಯಾಗಿದ್ದ. ನಂತರ ಇವರಿಬ್ಬರು ಕುಂದಾಪುರ …

Read More »

ಕುಂಬಳೆ: ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿಯ ಮೃತದೇಹ ಉಳ್ಳಾಲದ ನದಿ ತೀರದಲ್ಲಿ ಪತ್ತೆ..!

ಉಳ್ಳಾಲ: ಸಂಜೆ ದಿಢೀರ್ ನಾಪತ್ತೆಯಾಗಿದ್ದ ಬಿಜೆಪಿ ಯುವಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿಯ ಮೃತದೇಹ ತೊಕ್ಕೊಟ್ಟು ಬಳಿಯ ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಜು. ೧೦ರ ಸೋಮವಾರ ಸಂಜೆ ವೇಳೆ ಕುಂಬಳೆ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿರುವ ರಾಜೇಶ್ (26) ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಯುವಕನ ಮೃತದೇಹ ತೊಕ್ಕೊಟ್ಟು ಬಳಿಯ ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದೆ. ಮೃತ ರಾಜೇಶ್ ಸಾರಣೆ ಕೆಲಸ ಮಾಡುತ್ತಿದ್ದು, ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಸಾಮಾಜಿಕ ಕಾರ್ಯಗಳಲ್ಲಿ …

Read More »

ಮೂಡುಬಿದಿರೆ: ಯುವಕ ನೇಣು ಬಿಗಿದು ಆತ್ಮಹತ್ಯೆ..!

ಮೂಡುಬಿದಿರೆ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆದಿದೆ. ಪಾರಿಸ್ (20) ಆತ್ಮಹತ್ಯೆಗೆ ಶರಣಾದ ಯುವಕ. ಪಾರಿಸ್ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಾಲಕನಾಗಿ ದುಡಿಯುತ್ತಿದ್ದ ಪಾರಿಸ್‌ನ ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More »

ಈ ವರ್ಷದ 2ನೇ ʻಚಂದ್ರಗ್ರಹಣʼ ಯಾವಾಗ ಸಂಭವಿಸಲಿದೆ?. ದಿನಾಂಕ, ಸಮಯ ತಿಳಿಯಿರಿ

ನವದೆಹಲಿ: ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. 2023 ರಲ್ಲಿ ಎರಡು ಚಂದ್ರ ಮತ್ತು ಎರಡು ಸೂರ್ಯಗ್ರಹಣಗಳು ಸಂಭವಿಸಲಿವೆ. ಒಂದು ಸೂರ್ಯಗ್ರಹಣ ಮತ್ತು ಒಂದು ಚಂದ್ರಗ್ರಹಣವು ಈಗಾಗಲೇ ಸಂಭವಿಸಿದೆ ಮತ್ತು ಇನ್ನೆರಡು ವರ್ಷದ ನಂತರ ಸಂಭವಿಸಲಿದೆ.   ಎರಡನೇ ಚಂದ್ರಗ್ರಹಣ ಅಕ್ಟೋಬರ್ 29 ರಂದು ನಡೆಯಲಿದೆ. ಈ ಚಂದ್ರಗ್ರಹಣವು ಅಕ್ಟೋಬರ್ 29 ರಂದು ಬೆಳಿಗ್ಗೆ 1:06 ಕ್ಕೆ ಪ್ರಾರಂಭವಾಗುತ್ತದೆ ಮತ್ತು ದೃಕ್ ಪಂಚಾಂಗದ ಪ್ರಕಾರ 2:22 ಕ್ಕೆ ಕೊನೆಗೊಳ್ಳುತ್ತದೆ. ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನು …

Read More »

ಪ್ರಧಾನಿಯ ಪತ್ನಿ ಹೃದಯಾಘಾತದಿಂದ ಮೃತ್ಯು

ಕಾಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್‌ ದಹಾಲ್‌ ಅವರ ಪತ್ನಿ ಸೀತಾ ದಹಾಲ್‌ (69) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೀತಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸೀತಾ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಕಠ್ಮಂಡುವಿನಲ್ಲಿ ನಾರ್ವಿಕ್ ಇಂಟರ್ನ್ಯಾಷನಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Read More »

ಸುಳ್ಯ :ಹಾರುವ ಅಳಿಲುಗಳನ್ನು ಬೇಟೆ- ಅರಣ್ಯಾಧಿಕಾರಿಗಳ ಕಾರ್ಯಚರಣೆ – ಮಾಂಸ ವಶ..!

ಸುಳ್ಯ : ತಂಡವೊಂದು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಖಾದ್ಯ ತಯಾರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬೇಯಿಸಿದ ಮಾಂಸ ವಶಕ್ಕೆ ಪಡೆದ ಘಟನೆ ಸುಳ್ಯ ಗಡಿ ಭಾಗದಲ್ಲಿ ನಡೆದಿದೆ. ಕೊಡಗು ಸಂಪಾಜೆ ವಲಯದ ದಬ್ಬಡ್ಕದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಮೂವರು ಆರೋಪಿಗಳ ಮನೆಗಳಿಗೆ ದಾಳಿ ಮಾಡಿ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ತಲೆಮರೆಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಟಿ ಪೂವಯ್ಯ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ …

Read More »

You cannot copy content of this page.