ತಾಜಾ ಸುದ್ದಿ

ಶಿಷ್ಟಾಚಾರ ಉಲ್ಲಂಘನೆ :ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಇಒ, ಇರುವೈಲು ಪಿಡಿಒ ಅಮಾನತು

ಮೂಡುಬಿದಿರೆ: ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ ಮತ್ತು ಇರುವೈಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರನ್ನು ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಅಮಾನತಗೊಳಿಸಿದ್ದಾರೆ. ಇರುವೈಲು ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿ ಮುದ್ರಣವಾದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Read More »

ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ- ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ಉಪ್ಪುಂದ ಸಮೀಪ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟಿದ್ದರೆ ಮತ್ತೋರ್ವ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಾಗೇಶ್ (29) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಸಚಿನ್ ಎಂಬವರ ಮಾಲಕತ್ವದ ಮಾಸ್ತಿ ಮರ್ಲ ಚಿಕ್ಕು ಹೆಸರಿನ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ದೋಣಿಯಲ್ಲಿ ಒಟ್ಟು 8 ಮಂದಿ ಇದ್ದರು. ಉಳಿದವರಲ್ಲಿ ಕೆಲವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರ್ ಪೊಲೀಸ್, ಅಗ್ನಿಶಾಮಕ ದಳ, …

Read More »

ಇಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಭೇಟಿ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ

ಉಡುಪಿ : ಹೊಸ ಸರ್ಕಾರ ರಚನೆ ಆದ ಬಳಿಕ ಮೊದಲ ಬಾರಿಗೆ ಇಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಆಗಮಿಸುತ್ತಿದ್ದಾರೆ.ಈ ಸಂದರ್ಭ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆಯೂ ಇದೆ‌. ಕಳೆದ ಒಂದು ವಾರದಿಂದ ಪ್ಯಾರಾಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ, ರಾಷ್ಟಮಟ್ಟದಲ್ಲಿ ಸುದ್ದಿಯಲ್ಲಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಉಡುಪಿಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ಸಿಎಂ ಸಿದ್ಧರಾಮಯ್ಯ ಅವರು ಬೆಳಿಗ್ಗೆ 11.30 ಗಂಟೆಗೆ ಪಡುಬಿದ್ರಿಯಲ್ಲಿ ಕಡಲ್ಕೊರೆತದಿಂದ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯಮಂತ್ರಿ …

Read More »

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಕೇಸ್ : ಜೈಲಿನಲ್ಲಿದ್ದೆಕೊಂಡೆ ಶಾರಿಕ್ ಗೆ ತರಬೇತಿ ನೀಡಿದ ಉಗ್ರ ಪಾಷಾ

ಲಷ್ಕರ್ ಇ ತೊಯ್ಬ ಸಂಘಟನೆಯ ಸದಸ್ಯ ಅಫ್ಸರ್ ಪಾಷಾ ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ. ಕರ್ನಾಟಕದ ಜೈಲು ಒಂದರಲ್ಲಿ ಇದ್ದುಕೊಂಡೆ ಶಾರುಖ್ ಗೆ ಸ್ಪೋಟದ ತರಬೇತಿ ನೀಡಿದ್ದು ಪಾಷಾ ಎಂದು ಹೇಳಲಾಗುತ್ತಿದೆ.ಎನ್‌ಐಎ ತನಿಖೆ ವೇಳೆ ಸ್ಫೋಟಕ ಮಾಹಿತಿ ಪತ್ತೆಯಾಗಿದೆ.ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಪ್ಸರ್ ಪಾಷಾ ಬಾಂಗ್ಲಾದೇಶದಲ್ಲಿ ಉಗ್ರ ತರಬೇತಿ ಪಡೆದಿದ್ದ ಎಂದು ಹೇಳಲಾಗುತ್ತಿದೆ.   ಉಗ್ರ ಪಾಷಾ ಈ ಹಿಂದೆ ಬೆಳಗವಿಯ ಹಿಂಡಲಗಾ ಜೈಲಿನಲ್ಲಿದ್ದ.ಉಗ್ರ ಅಫ್ಸರ ಪಾಶ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣದಲ್ಲೂ ಭಾಗಿಯಾಗಿದ್ದ ಪ್ರಕರಣದ …

Read More »

ಉಡುಪಿ ವಿಡಿಯೋ ಪ್ರಕರಣ: ಕಾಲೇಜಿನ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ವಿದ್ಯಾರ್ಥಿನಿಗೆ ಬೆದರಿಕೆ ಸಂದೇಶ

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಅವ್ಯವಸ್ಥೆಗಳ ವಿರುದ್ಧ ಮಾತನಾಡಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿ ಪ್ರತಿಭಟನೆಯಲ್ಲಿ ಕಾಲೇಜಿನ ಅವ್ಯವಸ್ಥೆಗಳ ಹೇಳಿದ್ದಳು. ಈ ಹಿನ್ನೆಲೆ ಜು. 28 ರಂದು ಇನ್ಸ್ಟಾಗ್ರಾಮ್​ನಲ್ಲಿ ಜಿಗರ್ ಕೋಬ್ರಾ ಎಂಬ ಹೆಸರಿನ ಖಾತೆಯಿಂದ ಬೆದರಿಕೆ, ಕೆಟ್ಟ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಇದು ವಿದ್ಯಾರ್ಥಿನಿಯ ಮಾನಸಿಕ ನೆಮ್ಮದಿಗೆ ಭಂಗ ತಂದಿದೆ. ಈ ವಿಚಾರ ಹಿಂದೂ ಸಂಘಟನೆಗಳಿಗೆ ತಿಳಿದಿದೆ. ನಂತರ …

Read More »

ಮಂಗಳೂರು: ಐದನೇ ಮಹಡಿಯಿಂದ ಬಿದ್ದು ವೈದ್ಯಕೀಯ ವಿದ್ಯಾರ್ಥಿ ಸಾವು..!

ಮಂಗಳೂರು: ಕದ್ರಿ ಶಿವಬಾಗ್‌ನ ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಮೃತರನ್ನು ಅಡ್ಯಾರ್ ಮೂಲದ ಸಮಯ (21) ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕದ್ರಿ ಶಿವಬಾಗ್‌ನಲ್ಲಿ ವಾಸವಾಗಿದ್ದಾರೆ. ಸಮಯ್ ಮನೆಯ ಬಾಲ್ಕನಿಯಲ್ಲಿ ಓದುತ್ತಿದ್ದಾಗ ಅವನ ತಾಯಿ ಕಾರು ತೊಳೆಯಲು ನೆಲಮಾಳಿಗೆಗೆ ಹೋಗುವಂತೆ ಹೇಳಿದ್ದಾರೆ. ಬಳಿಕ ಐದನೇ ಮಹಡಿಯ ಬಾಲ್ಕನಿಯಲ್ಲಿ ಸಮಯ್ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದ. ಮಾತನಾಡಲು ಬಗ್ಗಿದಾಗ ನೆಲಮಹಡಿಯಿಂದ ಆಯತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಳೆ ನೀರಿನಿಂದ ಬಾಲ್ಕನಿಯಲ್ಲಿ ನೆಲ ಒದ್ದೆಯಾಗಿತ್ತು ಎಂದು …

Read More »

ವೈದ್ಯನಿಗೆ ಐಸಿಎಸ್‌ನೊಂದಿಗೆ ನಂಟು: 18 ಪುಸ್ತಕಗಳ ಲೇಖಕ ಅರೆಸ್ಟ್

ಪುಣೆ : ವೃತ್ತಿಯಲ್ಲಿ ವೈದ್ಯನಾಗಿದ್ದ ಹಾಗೂ ತನ್ನ ವೃತ್ತಿಯೊಂದಿಗೆ ಹೆಸರಾಗಿದ್ದ ಅದ್ನಾನ್‌ ಅಲಿ ಸರ್ಕಾರ್‌ (43) ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದು ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಐಸಿಸ್‌ ಜಾಲದಲ್ಲಿ ಸೆರೆಯಾಗಿರುವ ವ್ಯಕ್ತಿ ಸಾಮಾನ್ಯನಲ್ಲ. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಖ್ಯಾತ ಎಂಬಿಬಿಎಸ್‌ ವೈದ್ಯ ಹಾಗೂ ವಿಶೇಷ ಅರವಳಿಕೆ ತಜ್ಞ. ಇಂಗ್ಲಿಷ್‌, ಮರಾಠಿ, ಹಿಂದಿ ಮತ್ತು ಜರ್ಮನ್‌ ಭಾಷೆಗಳನ್ನು ಮಾತನಾಡಬಲ್ಲ ನಿಪುಣ. ಮೇಲಾಗಿ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಸುಮಾರು 18 ಪುಸ್ತಕಗಳನ್ನು ಸಹ ಲೇಖಕನಾಗಿ ಬರೆದಿರುವ ತಜ್ಞ ಈಗ ಎನ್‌ಐಎ ಅತಿಥಿಯಾಗಿದ್ದಾನೆ. ನಿಷೇಧಿತ ಭಯೋತ್ಪಾದಕ …

Read More »

ಕಾರವಾರ: ಮೀನುಗಾರರ ಬಲೆಗೆ ಬಿದ್ದ ಬೃಹತ್ ಗಾತ್ರದ ಕುರುಡೆ ಮೀನು..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಟಾಗೋರ್ ಕಡಲ ತೀರದಲ್ಲಿ ಏಂಡಿ ಬಲೆಗೆ ಬೃಹತ್ ಕುರಡೆ ಮೀನೊಂದು ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲ ವಾತಾವರಣವಿದೆ. ಹೀಗಾಗಿ ಸಾಂಪ್ರದಾಯಕ ಏಂಡಿ ಮೀನುಗಾರಿಕೆ ಬಿರುಸು ಪಡೆದಿದೆ. ಶನಿವಾರ ಉದಯ ಬಾನಾವಳಿ ಎನ್ನುವವರ ತಂಡ ಮೀನುಗಾರಿಕೆ ಮಾಡುವಾಗ ಈ ಅಪರೂಪದ ಮೀನು ಬಲೆ ಸೇರಿದೆ. ಸಾಮಾನ್ಯವಾಗಿ ಏಂಡಿ ಬಲೆಗೆ ಸಣ್ಣ ಮೀನುಗಳು ಸೇರಿದಂತೆ ಏಡಿಗಳು ಸಿಗುತ್ತವೆ. ಆದರೆ ಅಪರೂಪವಾಗಿ ಸಿಗುವ ಕುರಡೆ ಮೀನು ಕಂಡು ಮೀನುಗಾರರು ಹರ್ಷ ವ್ಯಕ್ತಡಿಸಿದರು. ಬಲೆಗೆ …

Read More »

ಮಂಗಳೂರು: ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ – 10ಕ್ಕೂ ಅಧಿಕ ಮಂಗಳಮುಖಿಯರು ವಶಕ್ಕೆ

ಮಂಗಳೂರು: ನಗರದ ಕುಂಟಿಕಾನ ಬಳಿ ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಹತ್ತಕ್ಕೂ ಅಧಿಕ ಮಂಗಳಮುಖಿಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ತಡರಾತ್ರಿ ವೇಳೆ ಕುಂಟಿಕಾನದ ಖಾಸಗಿ ಆಸ್ಪತ್ರೆಯ ಬಳಿ ನಿಂತಿದ್ದ ಇವರು ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದರು. ಇದರಿಂದ ದಾರಿಯಲ್ಲಿ ಹೋಗುವವರು ಕಿರಿಕಿರಿ ಅನುಭವಿಸಿದ್ದರು. ಆದ್ದರಿಂದ ಸ್ಥಳದಲ್ಲಿ ಜನ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಸ್ಥಳಕ್ಕೆ ಉರ್ವ ಠಾಣಾ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೆ ಸ್ಥಳಕ್ಕೆ ಆಗಮಿಸಿದ ಉರ್ವ ಠಾಣಾ ಇನ್ಸ್ ಪೆಕ್ಟರ್ ರೊಂದಿಗೆ ಮಂಗಳಮುಖಿಯರು ವಾಗ್ವಾದಕ್ಕಿಳಿದಿದ್ದಾರೆ. ಆದ್ದರಿಂದ ಪೊಲೀಸರು …

Read More »

ಉಳ್ಳಾಲ: 9ನೇ ತರಗತಿ ಪಾಸಾಗಿದ್ದಕ್ಕೆ ವಿದ್ಯಾರ್ಥಿನಿಯಿಂದ ಟ್ರೀಟ್ ಕೇಳಿ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನ ಬಂಧನ

ಉಳ್ಳಾಲ: ಫ್ಲೈಯಿಂಗ್ ಕಿಸ್ ಕೊಟ್ಟು, ವಿದ್ಯಾರ್ಥಿನಿಯಲ್ಲಿ 9ನೇ ತರಗತಿ ಪಾಸಾಗಿದ್ದಕ್ಕೆ ಟ್ರೀಟ್ ಕೇಳಿ ಲೈಂಗಿಕ ಕಿರುಕುಳ ನೀಡಿದ್ದ ಅನ್ಯಮತೀಯ ಆಟೋ ಚಾಲಕನನ್ನು ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳ್ಮ ಗ್ರಾಮದ ಬರುವ ನಿವಾಸಿ ಆಟೋ ಚಾಲಕ ಇಕ್ಬಾಲ್ (37) ಬಂಧಿತ ಆರೋಪಿ. ಅಂಬ್ಲಮೊಗರು ಗ್ರಾಮದ ಎಸ್ಸೆಸ್ಸೆಲ್ಸಿಯ ಅಪ್ರಾಪ್ತ ವಿದ್ಯಾರ್ಥಿನಿಗೆ ಆರೋಪಿ ಇಕ್ಬಾಲ್ ಲೈಂಗಿಕ ಕಾಟ ಕೊಟ್ಟಿದ್ದ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಎಸ್ಸೆಸ್ಸೆಲ್ಸಿ ಓದುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿಯು ಜೂನ್ ತಿಂಗಳಲ್ಲಿ ಅಂಬ್ಲಮೊಗರು ಗ್ರಾಮದ ಬಸ್ಸು ನಿಲ್ದಾಣದಲ್ಲಿ …

Read More »

You cannot copy content of this page.