ತಾಜಾ ಸುದ್ದಿ

ಮಂಗಳೂರು: 13 ವರ್ಷದ ಬಾಲಕಿ ಕೊಲೆ ಪ್ರಕರಣ- ಅತ್ಯಾಚಾರಗೈದು ಕೊಲೆ, ಆರೋಪಿಯ ಬಂಧನ..!

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಜೋಕಟ್ಟೆಯಲ್ಲಿ ಮಂಗಳವಾರ  ನಡೆದಿದ್ದ ಬೆಳಗಾವಿ ಮೂಲದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಪ್ರಕರಣ ಹೊಸ ತಿರುವು ಪಡೆದಿದೆ. ಬೆಳಗಾವಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಿದ್ದ ಫಕೀರಪ್ಪ ಬಂಧಿತ ಆರೋಪಿಯಾಗಿದ್ದು ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.   ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ ಎಂಬವರ ತಮ್ಮನ ಮಗಳು ಈಕೆಯಾಗಿದ್ದು  ಜಿಲ್ಲೆಯ ಹಾಸ್ಟೆಲ್‌ ವೊಂದರಲ್ಲಿ ಕಲಿಯುತ್ತಿದ್ದ ಈಕೆ ಬಿದ್ದು ಕೈಗೆ ಗಾಯಗೊಂಡಿದ್ದ ಕಾರಣ  ಚಿಕಿತ್ಸೆಗಾಗಿ ಜೋಕಟ್ಟೆಗೆ …

Read More »

ಉಡುಪಿ: ಅಂಬಲಪಾಡಿ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : 9 ಕೋಳಿಗಳು ವಶಕ್ಕೆ

ಉಡುಪಿ: ನಗರದ ಸಮೀಪ ಅಂಬಲಪಾಡಿಯಲ್ಲಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 9 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ವರ್ಷ ಪ್ರತಿ ನಡೆಯುವ ಮಾರಿ‌ ಹಬ್ಬಕ್ಕೆ ಕೋಳಿ ಅಂಕ ನಡೆಯುತ್ತಿತ್ತು.ಆದರೆ ಈ ಬಾರಿ ಕೋಳಿ ಅಂಕವನ್ನು ಅನುಮತಿ ಇಲ್ಲದೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಕೋಳಿ ಅಂಕಕ್ಕೆ ದಾಳಿ ನಡೆಸಿ ಕೋಳಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸುವಾಗ ಕೋಳಿ ಅಂಕಕ್ಕೆ ಬಂದಿದ್ದ ಸ್ಥಳೀಯರು ಹಾಗೂ ಜೂಜುಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.

Read More »

ಉಡುಪಿ: ಹಾಡುಹಗಲೇ ಕಾರಿನಲ್ಲಿ ಕಾಮದಾಟ- ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಜೋಡಿ..!

ಉಡುಪಿ: ನಗರದ ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರಿನಲ್ಲೇ ಜೋಡಿಯೊಂದು ಕಾಮದಾಟ ನಡೆಸಿ ಸಿಕ್ಕಿಬಿದ್ದಿದೆ. ಕಾರು ಪಾರ್ಕ್ ಮಾಡಿ ಹಾಡ ಹಗಲಿನಲ್ಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬಳಿಕ ಪರಾರಿಯಾಗಿದೆ. ಕೆಂಬಣ್ಣದ ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿದ್ದು ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳೀಯರು ಇಣುಕಿ ನೋಡಿದ್ದಾರೆ. ಈ ವೇಳೆ ಜೋಡಿಯ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ …

Read More »

ಉಡುಪಿ: ಬ್ಯಾಂಕ್‌ನ ಕಸ್ಟಮರ್‌ ಕೇರ್‌ ಎಂದು ನಂಬಿಸಿ ಖಾತೆಯಿಂದ ಹಣ ವರ್ಗಾವಣೆ- ದೂರು ದಾಖಲು

ಉಡುಪಿ: ಬ್ಯಾಂಕ್‌ನ ಕಸ್ಟಮರ್‌ ಕೇರ್‌ ಎಂದು ನಂಬಿಸಿ ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂ. ಹಣವನ್ನು ವರ್ಗಾವಣೆ ಮಾಡಿರುವ ಘಟನೆ ಸಂಭವಿಸಿದೆ. ಮಣಿಪಾಲದ ಶೇಖ್‌ ಅಬ್ದುಲ್‌ ಖಾದರ್‌ ಅವರು ಅಮೆಜಾನ್‌ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದು, ಅವರ ಮೊಬೈಲ್‌ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಐಸಿಐಸಿಐ ಬ್ಯಾಂಕ್‌ ಕಸ್ಟಮರ್‌ ಕೇರ್‌ ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ. ನಂತರ ನಿಮ್ಮ ಕಾರ್ಡ್‌ ಬದಲಾವಣೆ ಮಾಡಲಿಕ್ಕಿದೆ’ ಎಂದು ಮಾಹಿತಿ ಪಡೆದುಕೊಂಡ ಸ್ವಲ್ಪ ಸಮಯದಲ್ಲೇ ಕ್ರೆಡಿಟ್‌ ಕಾರ್ಡ್‌ನಿಂದ 51,180 ರೂ. ಮತ್ತೂಂದು ಅಕೌಂಟ್‌ಗೆ ವರ್ಗಾವಣೆಯಾಗಿದೆ. …

Read More »

ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ದ.ಕ. ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಲೆಕ್ಟ್ರಿಕ್ ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥೆನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ಮುಕ್ತವಾಗಿ ಸಂಚರಿಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಆಟೋರಿಕ್ಷಾಗಳೊಂದಿಗೆ ಇ- ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ವಲಯ 1 ರಲ್ಲಿ ನೀಲಿ ಬಣ್ಣದ ಹಾಗೂ ವಲಯ 2 ರಲ್ಲಿ ಹಳದಿ ಬಣ್ಣದ ಸ್ಟಿಕ್ಕರ್ ಅಥವಾ ಗುರುತಿನ ಸಂಖ್ಯೆಗಳನ್ನು ಪೋಲೀಸ್ ಇಲಾಖೆಯಿಂದ ಪಡೆದು ಅಂಟಿಸಲು ಜಿಲ್ಲಾಧಿಕಾರಿಗಳ ದಿನಾಂಕ 24-11-2022ರ ಅಧಿಸೂಚನೆ ಮತ್ತು 23-01-2023 ರ …

Read More »

ಬಾಟಲಿ ನೀರು ಕುಡಿಯುವವರೇ ಎಚ್ಚರ : ನಿಮಗೆ ಕಾಡಬಹುದು ಈ ಆರೋಗ್ಯ ಸಮಸ್ಯೆ !

ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾನೆ. ಆದರೆ ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ, ಈ ಒತ್ತಡದ ಜೀವನದಲ್ಲಿ, ಮನುಷ್ಯನ ಜೀವನಶೈಲಿಯೂ ತೀವ್ರವಾಗಿ ಬದಲಾಗಿದೆ. ಮನುಷ್ಯನ ಆಹಾರದ ವಿಷಯದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೆಲವರು ಹೊರಗೆ ಹೋದಾಗ ತಂಪಾದ ನೀರಿನ ಬಾಟಲಿ ಅಥವಾ ಸಾಮಾನ್ಯ ನೀರಿನ ಬಾಟಲಿಯನ್ನು ಖರೀದಿಸುತ್ತಾರೆ, ಆದರೆ ಸಾಮಾನ್ಯ ನೀರಿನ ಬಾಟಲಿಯಲ್ಲಿ ನೀರು ಕುಡಿಯುವುದು ಸಹ ಅಪಾಯಕಾರಿ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಕೆಲವು ಸಂದರ್ಭಗಳಲ್ಲಿ, ಜನತೆ ಹೊರಗೆ ಹೋದಾಗ, ರೆಸ್ಟೋರೆಂಟ್ ಅಥವಾ ಹೋಟೆಲ್ ಗೆ ಹೋಗುತ್ತಾರೆ ಮತ್ತು ಅವರು ಹೊರಗೆ ಹೋದಾಗ, ಬಾಟಲಿಯನ್ನು ಖರೀದಿಸಬೇಕಾಗುತ್ತದೆ. …

Read More »

ಮಂಗಳೂರು: ಪಬ್ ಜಿ ಹವ್ಯಾಸವಿದ್ದ ಹುಡುಗಿ ನಾಪತ್ತೆಗೆ ಬಿಗ್ ಟ್ವಿಸ್ಟ್..! ಬಯಲಾಯ್ತು ನಾಪತ್ತೆಯ ರಹಸ್ಯ

ಮಂಗಳೂರು : ಮೊಬೈಲ್‌ನಲ್ಲಿ ಪಬ್‌ಜಿ ಆನ್‌ಲೈನ್ ಆಟವಾಡುವ ಹವ್ಯಾಸವಿದ್ದ ನಗರದ ಬಿಜೈಯ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಯುವತಿಯು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲಿಸ್ತಾ ಫೆರಾವೊ (18) ನಾಪತ್ತೆಯಾಗಿದ್ದವರು. ಕೆಲಿಸ್ತಾ ಅವರು ಎಸೆಸೆಲ್ಸಿ ಬಳಿಕ ಆಟೊಮೊಬೈಲ್ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು. ಜುಲೈ 30 ರಂದು ಈಕೆ ಮನೆಯಿಂದ ಹೊರಕ್ಕೆ ಹೋಗಿದ್ದಳು. ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಈ ವೇಳೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಬಳಿಕ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.  ತನಿಖೆ ಕೈಗೊಂಡ …

Read More »

`ಗೃಹಲಕ್ಷ್ಮಿ’ ಯೋಜನೆಯ 2 ಕಂತಿನ ಹಣ ಬಿಡುಗಡೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ ಎಂದು ಹೇಳಿದ್ದಾರೆ. ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ. ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಯಜಮಾನಿಯರು, ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣವನ್ನು ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ 2 ದಿನದ ಒಳಗೆ ಎರಡು ಕಂತುಗಳ …

Read More »

ಸೋಮವಾರಪೇಟೆಯಲ್ಲಿ ನಡೆದ ಒಂಟಿ ಹೆಂಗಸಿನ ದರೋಡೆ ಪ್ರಕರಣ..! ಬಂಟ್ವಾಳದ ನಾಲ್ವರನ್ನು ವಶಕ್ಕೆ ಪಡೆದ ಕೊಡಗು ಪೊಲೀಸರು

ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸರು ನಿನ್ನೆ ಬಂಟ್ವಾಳ ತಾಲೂಕಿನಲ್ಲಿ ಭರ್ಜರಿ ಕಾರ್ಯಚರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಆರೋಪಿಗಳನ್ನು ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಗಳಾದ ರೋಶನ್‌ ಮತ್ತು ಪಿಲಿಂಗುರಿ ಸತೀಶ ಹಾಗೂ ಬಾಳೆ ಗಣೇಶ , ವೀರಕಂಭದ ಕುಸುಮಾಕರ ಎಂದು ಗುರುತಿಸಲಾಗಿದೆ. ಸೋಮವಾರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂಟಿ ಹೆಂಗಸಿನ ದರೋಡೆ ಪ್ರಕರಣದಲ್ಲಿ ವಿಟ್ಲ ಮೂಲದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಹಿತಿ ಲಭ್ಯವಾಗಿದೆ. ನಿನ್ನೆ ವ್ಯಾಗನರ್ ಕಾರ್‌ನಲ್ಲಿ ಬಂದ ಸೋಮವಾರ ಪೇಟೆ ಪೋಲೀಸರು ಮಂಚಿ ಸಮೀಪ ಆರೋಪಿಗಳು …

Read More »

ಮೂಡುಬಿದಿರೆ: ಪರಿಚಿತನಂತೆ ನಟಿಸಿ ಮಹಿಳೆಯ ಸರ ಎಗರಿಸಿದ

ಮೂಡುಬಿದಿರೆ: ಪರಿಚಿತನಂತೆ ಮಹಿಳೆ ಜತೆ ಮಾತನಾಡಿ ಆಕೆಯ ಮೂರೂವರೆ ಪವನಿನ ಸರವನ್ನು ವ್ಯಕ್ತಿಯೊಬ್ಬ ಎಗರಿಸಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೋಗಲು ನಾರಾವಿಯಿಂದ ಬಂದಿದ್ದ ಮಧ್ಯ ವಯಸ್ಸಿನ ಮಹಿಳೆಯು ಬಸ್ಸಿನಿಂದ ಇಳಿದು ಬರುತ್ತಿದ್ದಾಗ ಚಿಕ್ಕಮ್ಮನೆಂದು ಕರೆದು ಪರಿಚಯಿಸಿಕೊಂಡಿದ್ದ ಆಗಂತುಕ, ಮಹಿಳೆಯ 4 ಮನೆಯವರ ಪರಿಚಯವನ್ನೆಲ್ಲ ಹೇಳಿ ವಿಶ್ವಾಸ ಗಳಿಸಿಕೊಂಡ ಬಳಿಕ ಆಕೆಯನ್ನು ಹೊಟೇಲ್‌ಗೆ ಕರೆದುಕೊಂಡು ಹೋಗಿ ಚಹಾ ಕುಡಿಸಿದ್ದ. ಅನಂತರ ಹೊರಗಡೆ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ವೀಕ್ಷಿಸಿ, ಅದೇ ಡಿಸೈನ್ ಮಾದರಿಯ …

Read More »

You cannot copy content of this page.