ತಾಜಾ ಸುದ್ದಿ

ಬಾವಿಗೆ ಬಿದ್ದು 3 ವರ್ಷದ ಪುಟ್ಟ ಬಾಲಕಿ ಸಾವು..!

ಉತ್ತರ ಕನ್ನಡ: ಪುಟ್ಟ ಬಾಲಕಿಯೊಬ್ಬಳು ಆಯತಪ್ಪಿ ಬಾವಿಗೆ ಬಿದ್ದ ಘಟನೆ ಕಾರವಾರದ ಹರಿದೇವನಗರದಲ್ಲಿ ನಡೆದಿದೆ. ಮೃತ ಬಾಲಕಿಯನ್ನು 3 ವರ್ಷ ವಯಸ್ಸಿನ ಸ್ತುತಿ. ಬಾಲಕಿ ಆಟವಾಡುತ್ತಾ ಗಣಪತಿ ಮೂರ್ತಿ ಎಂದುಕೊಂಡು ಬಾವಿಗೆ ಮಣ್ಣುಹಾಕಲು ಮುಂದಾಗಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದು, ಪೊಷಕರು ಹಾಗೂ ಬಡಾವಣೆಯ ನಿವಾಸಿಗಳೆಲ್ಲ ಮಗು ನಾಪತ್ತೆ ಎಂದು ಹುಡುಕಾಡುವಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕಾರವಾರ ನಗರ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಆಧಾರ್ ಕಾರ್ಡ್ ನವೀಕರಣಕ್ಕೆ ಸೆ.14 ಕೊನೆಯ ದಿನ : ಈ ರೀತಿ ಅಪ್ ಡೇಟ್ ಮಾಡಿ

ನವದೆಹಲಿ: ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಕೇಂದ್ರ ಸರ್ಕಾರ ನೀಡಿರುವ ಗಡುವು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಾರ್ಚ್ 15 ರಿಂದ ಉಚಿತವಾಗಿ ನವೀಕರಿಸಲು ಸಾಧ್ಯವಾಗಿಸಿದೆ. ಆದಾಗ್ಯೂ, ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಅಂತಿಮವಾಗಿ, ಪ್ರಕ್ರಿಯೆಯು ಸೆಪ್ಟೆಂಬರ್ 14, 2023 ರಂದು ಕೊನೆಗೊಳ್ಳುತ್ತದೆ. ನಿಮ್ಮ ಆಧಾರ್ ಕಾರ್ಡ್ನಲ್ಲಿ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದಂತಹ ಬದಲಾವಣೆಗಳನ್ನು ಮಾಡಲು ನೀವು ಬಯಸಿದರೆ, ಅದನ್ನು ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಿ. ಉಚಿತ ಕೊಡುಗೆಗಳ ಅವಧಿ ಮುಗಿದ ನಂತರ, ನೀವು ಆಧಾರ್ …

Read More »

ಮಂಗಳೂರು: ಮದುವೆಯಾಗುವುದಾಗಿ ವಿಚ್ಛೇದಿತೆಗೆ 64 ಲಕ್ಷ ವಂಚನೆ – ದೂರು ದಾಖಲು

ಮಂಗಳೂರು: ವಿಚ್ಛೇದಿತೆಯನ್ನು ಮದುವೆಯಾಗುವುದಾಗಿ ನಂಬಿಸಿ ವ್ಯವಹಾರದ ನೆಪದಲ್ಲಿ 64 ಲಕ್ಷ ರೂಪಾಯಿ ಪಡೆದು ಹಿಂದಿರುಗಿಸದೆ ವಂಚನೆಗೈದಿರುವ ಬಗ್ಗೆ ತಮಿಳುನಾಡು ಮೂಲದ ವ್ಯಕ್ತಿಯ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೈದ ವ್ಯಕ್ತಿಯ ಮೇಲೆ ದೂರು ನೀಡಿರುವ ಮಹಿಳೆ ‘ತನಗೆ ತನ್ನ ಅಣ್ಣಂದಿರು ಮರು ಮದುವೆ ಮಾಡಲು ತಯಾರಿ ನಡೆಸುತ್ತಿದ್ದರು. ಆದ್ದರಿಂದ ತಾನು ತನ್ನ ಪ್ರೊಫೈಲ್‌ ಅನ್ನು ಮ್ಯಾಟ್ರಿಮೋನಿಯಲ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಈ ವೇಳೆ ತಮಿಳುನಾಡು ಪಳ್ಳಪಟ್ಟಿ ಮೂಲದ ಮುಹಮ್ಮದ್ ಫರೀದ್ ಶೇಖ್ ಎಂಬಾತ ಸಂಪರ್ಕಕ್ಕೆ ಬಂದು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಆದ್ದರಿಂದ …

Read More »

ಮಂಗಳೂರು: ಆಫ್ರಿಕನ್ ಹಂದಿ‌ಜ್ವರ ಹರಡದಂತೆ ಜಿಲ್ಲೆಯಲ್ಲಿ ಕಟ್ಟೆಚ್ಚರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಕೇರಳ ರಾಜ್ಯದಲ್ಲಿ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿರುವುದರಿಂದ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಹರಡದಂತೆ ಅವಶ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಂದಿ ಜ್ವರವು ಸಾಕುಹಂದಿ ಮತ್ತು ಕಾಡುಹಂದಿಗಳಲ್ಲಿ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಆ ಹಂದಿಗಳು ಸಾವನ್ನಪ್ಪುತ್ತದೆ. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಮತ್ತು ಲಸಿಕೆ ಇಲ್ಲದಿರುವುದರಿಂದ ನಿಯಮಾನುಸಾರ ರೋಗ ದೃಢೀಕರಣಗೊಂಡ ಪ್ರದೇಶದ 1ಕಿ.ಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ವಧೆ ಮಾಡಬೇಕಾಗಿರುತ್ತದೆ. ಶೇ. 100ರಷ್ಟು ಸಾವಿನ ಪ್ರಮಾಣ ಇರುವುದರಿಂದ ಹಂದಿ ಸಾಕಾಣಿಕೆದಾರರಿಗೆ ಆರ್ಥಿಕ …

Read More »

ಮಂಗಳೂರು: ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪಿಯ ಬಂಧನ

ಮಂಗಳೂರು: ಪರಿಚಿತ ವ್ಯಕ್ತಿ ಹಾಗೂ ಆತನ ಕುಟುಂಬವನ್ನು ಕಿಡ್ನ್ಯಾಪ್ ಮಾಡಿ ಪಿಸ್ತೂಲ್ ತೋರಿಸಿ ಸುಲಿಗೆಗೈದ ಮೌಲ್ಯಯುತ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇ 12ರಂದು ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ ಮೆಂಟ್ ನಲ್ಲಿ ನಿವಾಸಿ ಮಜೀಬ್ ಸೈಯದ್ ರನ್ನು ಪರಿಚಿತರಾದ ನೌಪಾಲ್ ಮತ್ತು ಪುಚ್ಚ ಎಂಬವರು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಅವರಿಗೆ ಪಿಸ್ತೂಲ್ ತೋರಿಸಿ 5 ಲಕ್ಷ ರೂ ಹಣ ಹಾಗೂ ಕಾರು ನೀಡುವಂತ ಒತ್ತಡವೇರಿದ್ದಾರೆ. ಕೊಡಲು ನಿರಾಕರಿಸಿದಾಗ ಅವರು ಉಪಯೋಗಿಸುತ್ತಿದ್ದ ಕಾರು, ಮೊಬೈಲ್ ಮತ್ತು 18000 ರೂ.‌ ಹಾಗೂ ಮುಜೀಬ್ ಸೈಯದ್ …

Read More »

ಸೌಜನ್ಯ ಪರ ನ್ಯಾಯಕ್ಕಾಗಿ ಉಜಿರೆಯಿಂದ ಬೆಂಗಳೂರಿಗೆ ಪಾದಯಾತ್ರೆ – ತ್ರಿಶುಲ್ ಸೇನೆ

ಧರ್ಮಸ್ಥಳ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗು ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ. ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಇದೀಗ ಉಜಿರೆ ಯಿಂದ ಬೆಂಗಳೂರಿಗೆ ಸೌಜನ್ಯ ಪರ ನ್ಯಾಯಕ್ಕಾಗಿ ತ್ರಿಶುಲ್ ಸೇನೆ 305ಕಿ.ಮೀ ಪಾದಯಾತ್ರೆ ಕೈಗೊಂಡಿದೆ. ಬೆಳ್ತಂಗಡಿ ಪಾಂಗಳದ ಸೌಜನ್ಯ ಮನೆಯಿಂದ ಪಾದಯಾತ್ರೆ ಪ್ರಾರಂಭಗೊಂಡಿದೆ. ಸೌಜನ್ಯ ಪೋಷಕರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ನಿರಂತರವಾಗಿ 3ದಿನ ಪಾದಯಾತ್ರೆ ಕೈಗೊಂಡಿರುವ ತ್ರಿಶುಲ್ ಸೇನೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ತ್ರಿಶುಲ್ ಸೇನೆಯಿಂದ ಸರಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇನ್ನು ಇದೇ ಆಗಸ್ಟ್ 27ರಂದು ದ.ಕ ಹಾಗು ಉಡುಪಿ …

Read More »

ವೇಣೂರು: ಪಲ್ಟಿಯಾದ ಖಾಸಗಿ ಬಸ್..! ಹಲವರಿಗೆ ಗಾಯ

ವೇಣೂರು: ರಾಜ್ಯ ಹೆದ್ದಾರಿ 70ರ ಮೂಡಬಿದ್ರಿ – ಬೆಳ್ತಂಗಡಿ ರಸ್ತೆಯ ವೇಣೂರು ಸಮೀಪ ಗಾಂಧಿನಗರದಲ್ಲಿ ಮೂಡಬಿದ್ರಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ 7-8 ಜನಕ್ಕೆ ಗಾಯಗಳಾಗಿದ್ದು ಆಂಬುಲನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು. ರಾತ್ರಿ 10.30ಕ್ಕೆ ಘಟನೆ ನಡೆದಿದ್ದು ಸುಮಾರು ಎರಡು ಗಂಟೆ ರಸ್ತೆ ತಡೆಯಾಗಿದ್ದು ಕ್ರೇನ್ ತರಿಸಿ ರಸ್ತೆಯನ್ನು ಕ್ಲಿಯರ್ ಮಾಡಲಾಯಿತು. ವೇಣೂರು ಪೊಲೀಸರು ಸ್ಟಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಶ್ರಮಿಸಿದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More »

8 ವರ್ಷ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈ ನಲ್ಲಿ ಅರೆಸ್ಟ್..!

ಮಂಗಳೂರು: 8 ವರ್ಷ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈ ನಲ್ಲಿ ಮಂಗಳೂರು ಪಾಂಡೇಶ್ವರ ಪೋಲಿಸರು ಬಂಧಿಸಿದ್ದರೆ. ಅಭಿಜಿತ್ @ಅಭಿ(30)s/o ಲೋಕನಾಥ್ ಮೋಹಿನಿ ಕಾಂಪೌಂಡ್ ಅರೇಕೆರೆ ಬೈಲ್ ಮುಳಿಹಿತ್ಲು ಬೋಳಾರ ಮಂಗಳೂರು ಈತನ ಮೇಲೆ ದಕ್ಷಿಣ ಪೊಲೀಸ್ ಠಾಣೆಯ CR no.82/15 ಕಲಂ 341.325.504.506.504.ನಂತೆ ಹಾಗೂ CR no 86/15 ಕಲಂ448. 395 ನಂತೆ ಪ್ರಕರಣ ದಾಖಲಾಗಿ ಆರೋಪಿಯು ದಸ್ತಗಿರಿಗೆ ಸಿಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕಾರಣ ಮಾನ್ಯ ನ್ಯಾಯಾಲಯವು LPC 04/2023 ರಂತೆ ಬಾಕಿಯಾದ ಪ್ರಕರಣವೆಂದು LPC ಮಾಡಿತ್ತು ಅದರಂತೆ ಆರೋಪಿಯ ಮೇಲೆ LOC ಹೊರಡಿಸಿ …

Read More »

ಮಂಗಳೂರು:ವಿದೇಶಿ, ಇ-ಸಿಗರೇಟ್ ಮಾರಾಟ ಪ್ರಕರಣ;ಅಂಗಡಿಗಳ ಲೈಸನ್ಸ್‌ ರದ್ದತಿಗೆ ಪಾಲಿಕೆಗೆ ಪತ್ರ

ಮಂಗಳೂರು:ನಿಷೇಧಿಸಲ್ಪಟ್ಟಿರುವ ಇ-ಸಿಗರೇಟ್ ಮತ್ತು ಸರಕಾರದ ಎಚ್ಚರಿಕೆಯನ್ನು ಪ್ಯಾಕೆಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ನಗರದ ಮೂರು ಅಂಗಡಿಗಳ ಟ್ರೇಡ್ ಲೈಸನ್ಸ್‌ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಬರ್ಕೆ ಪೊಲೀಸರು ಆ. 21ರಂದು ಲಾಲ್‌ಬಾಗ್ ಸಾಯಿಬಿನ್ ಕಾಂಪ್ಲೆಕ್ಸ್‌ನ ಮೂರು ಅಂಗಡಿಗಳಿಗೆ ದಾಳಿ ನಡೆಸಿ ಸುಮಾರು 2.70 ಲಕ್ಷರೂ. ಮೌಲ್ಯದ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ಈ ಹಿಂದೆ ಕೂಡ ಇದೇ ರೀತಿಯ ಕಾನೂನು …

Read More »

ಮಂಗಳೂರು: ಪುತ್ತೂರಿನ ಯುವತಿ ಕೊಲೆ ಕೃತ್ಯ ಸತ್ಯ ಬಿಚ್ಚಿಟ್ಟ ಎಸ್ಪಿ ರಿಷ್ಯಂತ್‌..!

ಮಂಗಳೂರು: ಪುತ್ತೂರಿನಲ್ಲಿ ನಿನ್ನೆ ಕೊಲೆಯಾದ ಯುವತಿ ಗೌರಿ ಮತ್ತು ಕೊಲೆಗಾರ ಪದ್ಮರಾಜ್‌ ಅವರು ಕಳೆದ 6 ವರ್ಷಗಳಿಂದ ಪರಿಚಿತರಾಗಿದ್ದು, ಇದೀಗ ಯುವತಿಯ ಕೊಲೆಯೊಂದಿಗೆ ಅವರೊಳಗಿನ ಪರಿಚಯ ಮತ್ತು ಪ್ರೀತಿ ಸಹಿತ ಎಲ್ಲವೂ ಅವಸಾನಗೊಂಡಿದೆ. ಮೃತ ಯುವತಿ ಗೌರಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರಕರಣದ ಕುರಿತಂತೆ ಜಿಲ್ಲಾ ಎಸ್.ಪಿ. ರಿಷ್ಯಂತ್‌ ಸಿ. ಬಿ. ಅವರು ಮಾಧ್ಯಮಗಳಿಗೆ ಮಾಹಿತಿ …

Read More »

You cannot copy content of this page.