ತಾಜಾ ಸುದ್ದಿ

ಬೆಳ್ತಂಗಡಿ: ಮತ್ತೊಂದು ದಾಖಲೆ ತೆಗೆದಿಡುತ್ತೇನೆ ಎಂದು ಗುಡುಗಿದ ತಿಮರೋಡಿ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಮರುತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿದರು. ನಮ್ಮ ಮನೆ ಮಗಳ ಬಗ್ಗೆ ಮಾತನಾಡೋಕೆ ನಾವು ಪರ್ಮಿಷನ್ ತೆಗೋಬೇಕಾ? ಎಂದು ಪ್ರಶ್ನಿಸಿದರು. ನಾವು ಟ್ಯಾಕ್ಸ್ ಕಟ್ಟಿ ಸಾಕುವ ಪಾಪಿಗಳು‌ನ್ನು ನಾವು ಏನು ಮಾತನಾಡಬೇಕು ಅಂತ ಹೇಳಬೇಕಾ?. ಪೊಲೀಸರು, ಇಲ್ಲಿನ ಪಾಪಿ ರಾಜಕಾರಣಿಗಳಿಂದಾಗಿ ಜನರು ನಕ್ಸಲೈಟ್ ಆಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಬ್ಬ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಗ್ಯಾಂಗ್ ರೇಪ್ ಆಗಿರೋ ಪ್ರದೇಶ ಪಾಕಿಸ್ತಾನದಲ್ಲಿ ಇದೆಯೇ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು. ಇವತ್ತು …

Read More »

ಬಂಟ್ವಾಳ: 5.36 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಕಳ್ಳತನ..!

ಬಂಟ್ವಾಳ: ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಕಳ್ಳತನ ಮಾಡಿದ ಘಟನೆ ಸಜಿಪ ಮುನ್ನೂರು ಸಮೀಪದ ಬಾಡಿಗೆ ಮನೆಯೊಂದರಲ್ಲಿ ಸೆ.1ರಂದು ನಡೆದಿದೆ. ಮನೆಯಲ್ಲಿ ವಾಸವಾಗಿದ್ದ ಮೈಕಲ್ ಡಿಸೋಜಾ ಬೆಳಗ್ಗೆ ಬೀಗ ಹಾಕಿ ಮಕ್ಕಳೊಂದಿಗೆ ತೆರಳಿದ್ದರು. ಬಳಿಕ ಮಧ್ಯಾಹ್ನ 2.45ರ ಸುಮಾರಿಗೆ ಮೈಕಲ್‌ ಮಗಳು ಮನೆ ಬಂದು ನೋಡಿದಾಗ ಬಾಗಿಲು ತೆರೆದಿದ್ದು, ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಘಟನೆಯ ಬಗ್ಗೆ ಮಗಳಿಂದ ತಿಳಿದ ಮೈಕೆಲ್ ಮನೆಗೆ ಹಿಂತಿರುಗಿ ನೋಡಿದಾಗ ಕಳ್ಳರು ಮನೆಗೆ ನುಗ್ಗಿ 5.36 ಲಕ್ಷ (115 ಗ್ರಾಂ ತೂಕ), …

Read More »

ಉಪ್ಪಿನಂಗಡಿ: ಗಾಂಜಾ ಸೇವಿಸಿ ಅನುಚಿತವಾಗಿ ವರ್ತನೆ – ಇಬ್ಬರು ವಶಕ್ಕೆ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ, ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. ಬಂಟ್ವಾಳ ಪೆರ್ನೆ ನಿವಾಸಿಗಳಾದ ಮಹಮ್ಮದ್ ಸಫೀಕ್ (24) ಹಾಗೂ ಅಬ್ದುಲ್ ಸಲೀಂ (24) ಬಂಧಿತ ಆರೋಪಿಗಳು. ಇಬ್ಬರು ವ್ಯಕ್ತಿಗಳು ಅಮಲು ಸೇವನೆ ಮಾಡಿ ನಶೆಯಲ್ಲಿದ್ದಂತೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ಕಂಡು ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ತೆರಳಿ ವಿಚಾರಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. …

Read More »

ಮಂಗಳೂರು: ಮಹಿಳಾ ಡ್ರಗ್ ಪೆಡ್ಲರ್ ಪೋಲಿಸರ ಬಲೆಗೆ

ಮಂಗಳೂರು: ಮಂಗಳೂರು ಪೋಲಿಸರು ಡ್ರಗ್ಸ್ ಮಾರಾಟ ಜಾಲದ ಪ್ರಮುಖ ಡ್ರಗ್ಸ್ ಪೆಡ್ಲರ್ ನೈಜೀರಿಯಾ ದೇಶದ ಮಹಿಳೆಯೊಬ್ಬಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಮುಖ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚಿ ಲಕ್ಷಾಂತರ ಮೌಲ್ಯದ ಮಾದಕ ವಸ್ತು ಎಂಡಿಎಂಎ ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಡ್ರಗ್ ದಂಧೆಯ ಕಿಂಗ್ ಪಿನ್ ಅನ್ನು ಪತ್ತೆ ಹಚ್ಚುವ ಸಲುವಾಗಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿದಾಗ ಈ ಮಾದಕ ವಸ್ತುಗಳನ್ನು ಆರೋಪಿಗಳಿಗೆ ನೈಜೀರಿಯಾ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ …

Read More »

ಉಡುಪಿ: ಬಡಗುಬೆಟ್ಟು ಗ್ರಾಮದ ಮಂಚಿಕೋಡಿಯ ಯುವತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಮಂಚಿಕೋಡಿ ನಿವಾಸಿ ವೈಷ್ಣವಿ ನಾಯಕ್ (18) ಎಂಬ ಯುವತಿಯು ಸೆಪ್ಟಂಬರ್ 1 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಪೂರ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ, ತುಳು ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More »

ಕುಂದಾಪುರ: ರಿಕ್ಷಾಗೆ ಡಿಕ್ಕಿ ಹೊಡೆದ ಕಾರು – ಯುವತಿ ಸಾವು

ಕುಂದಾಪುರ: ಕಾರು ಹಾಗೂ ರಿಕ್ಷಾ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸಾವನಪ್ಪಿದ ಘಟನೆ ಶುಕ್ರವಾರ ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಂಬಳಗದ್ದೆ ಸಮೀಪ ನಡೆದಿದೆ. ಮೃತ ಯುವತಿಯನ್ನು ಕುಂದಾಪುರ ತಾಲೂಕಿನ ಅಂಪಾರು ನಿವಾಸಿ ಅಂಬಿಕಾ(22) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಸಂಬಂಧಿಕರ ಮನೆಯಿಂದ ಅಂಪಾರಿಗೆ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಎದುರಿ ನಿಂದ ಬಂದ ಕಾರು ಮತ್ತೊಂದು ಕಾರನ್ನು ಓವರ್‌ ಟೇಕ್ ಮಾಡುವ ಭರದಲ್ಲಿ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಆಟೋ ರಿಕ್ಷಾ ಪಲ್ಟಿಯಾಗಿದ್ದು ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಇದರಲ್ಲಿ ಗಂಭೀರವಾಗಿ …

Read More »

ಮಲ್ಪೆ ಬೋಟ್‌ನಲ್ಲಿ ಗ್ಯಾಸ್‌ ಸೋರಿಕೆ- ಇಬ್ಬರು ಕಾರ್ಮಿಕರಿಗೆ ಉಸಿರಾಟ ತೊಂದರೆ

ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯ ಟ್ರಾಲ್‌ ಬೋಟ್‌ನಲ್ಲಿ ಮೀನು ಖಾಲಿ ಮಾಡಲು ಬೋಟ್‌ನ ಸ್ಟೋರೇಜ್‌ಗೆ ಇಳಿದಿದ್ದ ಇಬ್ಬರು ಒಡಿಶಾ ಮೂಲದ ಕಾರ್ಮಿಕರು  ಗ್ಯಾಸ್‌ನಿಂದಾಗಿ ಉಸಿರಾಟದ ತೊಂದರೆಗೊಳಗಾದರು. ಪ್ರಜ್ಞಾಹೀನರಾಗಿ ಬೋಟ್‌ನ ಸ್ಟೋರೇಜ್‌ನಲ್ಲಿದ್ದ ಇಬ್ಬರನ್ನು ಆಪತ್ಬಾಂಧವ ಈಶ್ವರ್‌ ಮಲ್ಪೆ ಪ್ರಥಮ ಚಿಕಿತ್ಸೆ ಮಾಡಿ ತತ್‌ಕ್ಷಣ  ಆ್ಯಂಬುಲೆನ್ಸ್‌ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಇಬ್ಬರು ಕಾರ್ಮಿಕರೂ ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More »

ಸೂರ್ಯನತ್ತ ಹಾರಿದ ಆದಿತ್ಯ-L 1- ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-L 1

ಹೈದರಾಬಾದ್: ಸೂರ್ಯ ಗ್ರಹದ ಬಗ್ಗೆ ಅಧ್ಯಯನ ಮಾಡಲು ಆದಿತ್ಯ- L 1 ಮಿಷನ್ ರಾಕೆಟ್ ಈಗಷ್ಟೇ ಸೂರ್ಯ ಗ್ರಹದ ಕಡೆಗೆ ಹಾರಿದೆ. ಆದಿತ್ಯ- L 1 ಮಿಷನ್ ರಾಕೆಟ್ ಸೂರ್ಯನೆಡೆಗೆ ಪ್ರಯಾಣ ಬೆಳೆಸುತ್ತಲೇ ಇಸ್ರೋ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಪರಸ್ಪರರನ್ನು ಅಭಿನಂದಿಸಿದ್ದಾರೆ. ಜಗತ್ತಿಗೇ ಬೆಳಕು ಮತ್ತು ಶಕ್ತಿ ಕೊಡುವ ಸೂರ್ಯನಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ನಡೆಯುವಂಥ ಪ್ರಕ್ರಿಯೆಗಳು ಏನು? ಸೂರ್ಯನ ಶಾಖ, ಬೆಳಕು ಉಂಟಾಗಲು ಅದರ ಹಿಂದಿನ ರಾಸಾಯನಿಕ ಕ್ರಿಯೆ ಎಂಥದು? ಸೂರ್ಯನ ಜಾಜ್ವಲ್ಯತೆಗೆ ಕಾರಣವಾದ ಹೀಲಿಯಂ ಉತ್ಪಾದನೆಯ ಮೂಲ ಧಾತುವಿನ ಕಣಗಳೆಂಥವು? …

Read More »

ಉಡುಪಿ: ಎಂಕಾಂ ವಿದ್ಯಾರ್ಥಿನಿ‌ ಕ್ಯಾನ್ಸರ್‌ಗೆ ಬಲಿ

ಉಡುಪಿ: ಶಿರ್ವದ ಆರೋಗ್ಯ ಮಾತಾ ದೇವಾಲಯದ ಬಳಿಯ ಕಾನ್ವೆಂಟ್ ರಸ್ತೆಯ ನಿವಾಸಿ ವಿದ್ಯಾರ್ಥಿನಿ ರಿಯಾನ್ನ ಜೇನ್ ಡಿಸೋಜಾ( 20) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು. ರಿಯಾನ್ನ ಜೇನ್ ಕಳೆದ ವರ್ಷ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದರು. ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಇವರು ಬಿ.ಕಾಂ ಪದವಿ ಮುಗಿಸಿ ಎಂಕಾಂ ಪದವಿ ಪ್ರಾರಂಭಿಸುವಷ್ಟರಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅತ್ಯುತ್ತಮ ಕಾರ್ಯಕ್ರಮ ಸಂಘಟಕಿಯಾಗಿದ್ದ ಇವರು, ವಿದ್ಯಾಭ್ಯಾಸದ ಜೊತೆಯಲ್ಲೇ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು. ಇವರು ತಾಯಿ, ಸಹೋದರ ಮತ್ತು …

Read More »

ಮಂಗಳೂರು: ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆಗೆ ಪೊಲೀಸ್ ಇಲಾಖೆಯಿಂದ ನಿಬಂಧನೆ

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಿಮ್ಮೆಲೆಯಲ್ಲಿ ಪೊಲೀಸ್ ಇಲಾಖೆ ನಿಧನೆಗಳನ್ನು ಜಾರಿಗೆ ತಂದಿದೆ.ಕಾರ್ಯಕ್ರಮ ಆಯೋಜನೆಗೆ ಪೊಲೀಸ್ ಅನುಮತಿ ಕಡ್ಡಾಯಗೊಳಿಸಲಾಗಿದೆ. ಮಡಿಕೆಗಳನ್ನು 14 ಫೀಟ್ ಎತ್ತರದವರೆಗೆ ಮಾತ್ರ ಕಟ್ಟಬೇಕು. ಮಡಿಕೆ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಟ್ಟುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಮಡಿಕೆ ಒಡೆಯುವ ಸ್ವಯಂ ಸೇವಕರ ಮೇಲೆ ತಂಪು ನೀರು ಚೆಲ್ಲುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಮೆರವಣಿಗೆಯಲ್ಲಿ ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿರಬೇಕು. ಮೆರವಣಿಗೆಯಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶವನ್ನು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ …

Read More »

You cannot copy content of this page.