ತಾಜಾ ಸುದ್ದಿ

ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ಮೃತ್ಯು

ಕಾಸರಗೋಡು: ಶಾಲಾ ಬಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ. ಮೃತಪಟ್ಟ ನಾಲ್ವರು ಮಹಿಳೆಯರು ಒಂದೇ ಕುಟುಂಬದವಾರಾಗಿದ್ದು, ಮೃತಪಟ್ಟವರನ್ನು ಮೊಗ್ರಾಲ್ ಪುತ್ತೂರು ನಿವಾಸಿ ಆಟೋ ಚಾಲಕ ಅಬ್ದುಲ್ ರೌಫ್ (48), ಉಸ್ಮಾನ್ ರವರ ಪತ್ನಿ ಬೀಫಾತಿಮ್ಮ (50), ಬೀಫಾತಿಮ್ಮ ( 60), ಇಸ್ಮಾಯಿಲ್ ರವರ ಪತ್ನಿ ಉಮ್ಮು ಫಲಿಮಾ, ಬೆಳ್ಳೂರಿನ ಅಬ್ಬಾಸ್ ರವರ ಪತ್ನಿ ನಫೀಸಾ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ನಾಲ್ವರು ಮಹಿಳೆಯರು ಸ್ಥಳದಲ್ಲೇ …

Read More »

ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..!

ಉಳ್ಳಾಲ: ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿಯ ನಿವಾಸಿಯಾಗಿರುವ ಪ್ರಶಾಂತ್ (44) ಎಂದು ಗುರುತಿಸಲಾಗಿದೆ. ಸೆ.24 ರಂದು ಸಂಜೆ ಮನೆಯಿಂದ ಹೊರಟ ಪ್ರಶಾಂತ್ ಅವರು ಬೆಳಿಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿವಾಹಿತರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಅವರು …

Read More »

ಉಳ್ಳಾಲ: ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು

ಮಂಗಳೂರು : ಸ್ಕೂಟರ್ ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ. ಮೃತರನ್ನು ಕಾಸರಗೋಡು ಮಧೂರು ನಿವಾಸಿ ಸುಮಾ ನಾರಾಯಣ ಗಟ್ಟಿ ( 52) ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕೆರೆಬೈಲು‌ ಬಳಿ ಸ್ಕೂಟರ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ‌ ಇವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ತೊಕ್ಕೊಟ್ಟು ಜಂಕ್ಷನ್ ಬದಲು ಕೋಟೆಕಾರು ಬೀರಿವರೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ‌ ತೊಕ್ಕೊಟ್ಟು ಪ್ಲೈಓವರ್ ಸಂಪರ್ಕಿಸುವ ಕೆರೆಬೈಲು ನಾಗನ ಕಟ್ಟೆ ಬಳಿ ಚಲಿಸುತ್ತಿದ್ದ …

Read More »

ಮಂಗಳೂರು : ಟಯರ್ ಸಿಡಿದು ಮೀನು ಸಾಗಾಟದ ಪಿಕಪ್ ಪಲ್ಟಿ..!

ಉಳ್ಳಾಲ : ಮೀನು ಸಾಗಾಟ ಮಾಡುವ ಪಿಕಪ್ ವಾಹನದ ಟಯರ್ ಬ್ಲ್ಯಾಸ್ಟ್ ಆದ ಕಾರಣ ಪಿಕಪ್ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಿಕಪ್ ವಾಹನ ಪಲ್ಟಿಯಾಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮಲ್ಪೆ ಬಂದರಿನಿಂದ ಉಳ್ಳಾಲ ಆಯಿಲ್ ಮಿಲ್​ಗೆ ಮೀನು ಸಾಗಾಟ ನಡೆಸುವ ವಾಹನ, ನೇತ್ರಾವತಿ ಸೇತುವೆ ತಲುಪುತ್ತಿದ್ದಂತೆ ಎದುರುಗಡೆಯ ಟಯರ್ ಸಿಡಿದಿದೆ. ಪರಿಣಾಮ ಒಂದು ದಿಕ್ಕಿನತ್ತ ತೆರಳಿದ ಪಿಕಪ್ ವಾಹನ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ …

Read More »

ಚೀನಾದಲ್ಲಿ ಮತ್ತೊಂದು ಆತಂಕಕಾರಿ ಕೊರೋನಾ ವೈರಸ್ ಪತ್ತೆ: ವೈರಾಣುತಜ್ಞರಿಂದ ಅಪಾಯದ ಎಚ್ಚರಿಕೆ

ಬಿಜಿಂಗ್: ಈಗಾಗಲೇ ಚೀನಾ ಕೋವಿಡ್-19 ನಿಂದ ತತ್ತರಿಸಿ ಹೋಗಿತ್ತು. ಈಗ ಮತ್ತೊಂದು ಆಘಾತಕಾರಿ ಕೊರೋನಾ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಅಲ್ಲದೇ ಇದು ವ್ಯಾಪಕವಾಗಿ ಹರಡೋ ವೈರಸ್, ಎಚ್ಚರಿಕೆಯಿಂದ ಇರುವಂತೆ ವೈರಾಣುತಜ್ಞರು ಎಚ್ಚರಿಸಿದ್ದಾರೆ. ಭವಿಷ್ಯದಲ್ಲಿ ಹೊರಹೊಮ್ಮುತ್ತಿರುವ ಮತ್ತೊಂದು ಕೋವಿಡ್ -19 ಮಾದರಿಯ ವೈರಸ್ ಹರಡುವುದರ ವಿರುದ್ಧ ಚೀನಾದ ಪ್ರಮುಖ ವೈರಾಲಜಿಸ್ಟ್ ಅಪಾಯಕಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.   ಬ್ಯಾಟ್ ವುಮನ್” ಎಂದು ಪ್ರಸಿದ್ಧರಾದ ಶಿ ಝೆಂಗ್ಲಿ, ಒಂದು ಅಧ್ಯಯನದಲ್ಲಿ, ಪ್ರಾಣಿಗಳಿಂದ ಹುಟ್ಟುವ ವೈರಸ್ ಗಳನ್ನು ವ್ಯಾಪಕವಾಗಿ ಸಂಶೋಧಿಸಿದರು. …

Read More »

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಬನ್ನೂರು ಸಮೀಪದ ಸನ್ನಿಧಿ ಲೇಔಟ್ ನಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ತೃತೀಯ ಬಿಸಿಎ ಓದುತ್ತಿದ್ದ ಕೀರ್ತಿಕಾ (19) ಮೃತ ಯುವತಿ.ಕೀರ್ತಿಕಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Read More »

ಭಾರತ-ಕೆನಡಾ ವಿವಾದ: NIAಯಿಂದ ಇನ್ನೂ 19 ಖಲಿಸ್ತಾನಿ ಉಗ್ರರ ಆಸ್ತಿ ಜಪ್ತಿ

ನವದೆಹಲಿ: ಭಾರತದ ಫೆಡರಲ್ ಭಯೋತ್ಪಾದನಾ ವಿರೋಧಿ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency -NIA) ಭಾರತದಲ್ಲಿ ಇನ್ನೂ ಹತ್ತೊಂಬತ್ತು ದೇಶಭ್ರಷ್ಟ ಖಲಿಸ್ತಾನಿ ಭಯೋತ್ಪಾದಕರ ( Khalistani terrorists ) ಆಸ್ತಿಗಳನ್ನು ವಶಪಡಿಸಿಕೊಳ್ಳುವುದಾಗಿ ಬಹಿರಂಗಪಡಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.   ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್ಜೆ) ಸಂಘಟನೆಯ ಸ್ವಯಂ ಘೋಷಿತ ಜನರಲ್ ಕೌನ್ಸೆಲ್ ಮತ್ತು ಕೆನಡಾ ಮೂಲದ ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಅಮೃತಸರ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಮನೆ ಮತ್ತು ಭೂಮಿಯನ್ನು ಎನ್‌ಐಎ ಶನಿವಾರ …

Read More »

ಕೇರಳ ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ಆರೋಪ- ಮಂಗಳೂರಿನ 2 ಬೋಟ್ ವಶಕ್ಕೆ

ಕಾಸರಗೋಡು : ಕೇರಳ ಸಮುದ್ರ ತೀರ ಪ್ರವೇಶಿಸಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಮಂಗಳೂರಿನ ಎರಡು ಬೋಟ್ ಗಳನ್ನು ಕಾಸರಗೋಡು ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದೆ. ಕಾಸರಗೋಡು ಮೀನುಗಾರಿಕೆ ಇಲಾಖೆ, ತ್ರಿಕರಿಪುರ, ಬೇಕಲ್ ಮತ್ತು ಶಿರಿಯಾ ಕರಾವಳಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಮಂಗಳೂರು ನೋಂದಣಿಯ ಅರೆಂಜ್ ಮತ್ತು ಅಶಿಯಾನ ಹೆಸರಿನ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೀನುಗಾರಿಕೆ ಇಲಾಖೆ ಸಹಾಯರ ನಿರ್ದೇಶಕ ಕೆ.ವಿ ಸುರೇಂದ್ರನ್ ನೇತೃತ್ವದಲ್ಲಿ ಪಂಜಾವಿ ಕಡಲತೀರದಿಂದ ಒಂಬತ್ತು ನಾಟಿಕಲ್ ಮೈಲು ದೂರದ ಪೂರ್ವಭಾಗದಲ್ಲಿ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬೋಟ್ ಗಳನ್ನು ತೈಕಡಪ್ಪುರಂ ಅಯಿಂಞಲ್ …

Read More »

ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿ – ಬೈಕ್ ಸವಾರ ಮೃತ್ಯು

ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಪಾಣೆಮಂಗಳೂರು ನೂತನ ಸೇತುವೆಯಲ್ಲಿ ನಡೆದಿದೆ. ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ ಅವರ ಹಿರಿಯ ಮಗ ರಾಜ್ ಕುಮಾರ್ ಅವರು ಮೃತಪಟ್ಟ ದುರ್ದೈವಿ. ರಾಜ್ ಕುಮಾರ್ ಅವರು ವಾಮದಪದವು ಎಂಬಲ್ಲಿ ಜಾಗ ಖರೀದಿ ಮಾಡಿದ್ದು,ಕೃಷಿ ಮಾಡಿಕೊಂಡಿದ್ದರು. ವಾಮದಪದವಿನ ಮನೆಯಿಂದ ಸಜೀಪ ಮೂಲ ಮನೆಗೆ ಬರುವ ವೇಳೆ ಎದುರಿನಿಂದ ಬಂದ ಪವಿತ್ರ ಕನ್ಸ್ ಟ್ರಕ್ಷನ್ ಗೆ ಸೇರಿದ ಲಾರಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ …

Read More »

ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಗುಂಡು ಹಾರಿಸಿದ ಸಂಬಂಧಿ, ವರ ಸ್ಥಳದಲ್ಲೇ ಸಾವು

ಸಾಮಾನ್ಯವಾಗಿ ಜನರು ಮದುವೆಗಳಲ್ಲಿ ಸಂತೋಷದಿಂದ ಗನ್ ಹಿಡಿದು ಫೈರಿಂಗ್ ಮಾಡುತ್ತಾರೆ. ಕೆಲವೊಮ್ಮೆ ದುರದೃಷ್ಟವಶಾತ್ ಘಟನೆಗಳು ಸಂಭವಿಸುತ್ತವೆ. ಅಂತದ್ದೇ ಇಲ್ಲೊಂದು ಒಂದು ದುರ್ಘಟನೆ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ಶೇಖ್ ಕೈಯಲ್ಲಿ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸುತ್ತಿದ್ದ. ಇದೇ ವೇಳೆ ಬಂದೂಕುಧಾರಿ ಶೇಖ್ ಏಕಾಏಕಿ ಹಾರಿಸಿದ ಗುಂಡು ವರನ ಎದೆಗೆ ತಗುಲಿ ವರನು ಗಾಯಗೊಂಡು ನೀರಿನ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಆಗಸ್ಟ್‌ನಲ್ಲಿ ಜೋರ್ಡಾನ್‌ನ ಮಾನ್ ಗವರ್ನರೇಟ್‌ನಲ್ಲಿ ನಡೆದ ಮದುವೆಯ ಪಾರ್ಟಿಯಲ್ಲಿ …

Read More »

You cannot copy content of this page.