ತಾಜಾ ಸುದ್ದಿ

ಉಡುಪಿ: ಮತಾಂಧ ಶಕ್ತಿಗಳ ಗಲಭೆ ನಿಯಂತ್ರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲ-ಯಶ್ ಪಾಲ್ ಸುವರ್ಣ

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಪರೋಕ್ಷ ಪ್ರೋತ್ಸಾಹದಿಂದ ಮತಾಂಧ ಶಕ್ತಿಗಳು ಗಲಭೆ ಸೃಷ್ಟಿಸಿ ಜನ ಸಾಮಾನ್ಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಇದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಭೆಕೋರರ ಮೇಲಿನ ಕೇಸು ವಾಪಾಸು ತೆಗೆದುಕೊಂಡು ಕಾಂಗ್ರೆಸ್ ಸರಕಾರವೇ ಮತಾಂಧರಿಗೆ ಹಿಂದೂಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಜಿಲ್ಲೆಯ ಮಣಿಪಾಲ,ಕುಂದಾಪುರ ಚೂರಿ ಇರಿತ ಘಟನೆಗಳ ಹಿಂದೆ ಮತಾಂಧ ಶಕ್ತಿಗಳ ಹುನ್ನಾರ ಅಡಗಿದೆ. ಹುಬ್ಬಳ್ಳಿ ಧಾರವಾಡ ಉಗ್ರರ ತಂಗುದಾಣವಾಗಿ ಮಾರ್ಪಾಡಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡಿ …

Read More »

BREAKING NEWS ವಿಟ್ಲ: ಮಾರ್ಬಲ್ ತುಂಬಿದ ಲಾರಿ ಪಲ್ಟಿ: ನಾಲ್ವರು ಗಂಭೀರ

ವಿಟ್ಲ: ಮಾರ್ಬಲ್‌ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ನಡೆದಿದೆ. ಲಾರಿ ಪಲ್ಟಿಯಾಗಿ ಕಾರ್ಮಿಕರ ಕೈ-ಕಾಲು ಗಂಭೀರ ಗಾಯಗೊಂಡ ಗಾಯಾಳುಗಳನ್ನು ನಾಲ್ಕು ಆಂಬ್ಯುಲೆನ್ಸ್‌ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಾಳುಗಳನ್ನು ಉತ್ತರ ಭಾರತದ ಮೂಲದವರು ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿದ್ದಾರೆ. ಮಾರ್ಬಲ್ ಅನ್ ಲೋಡ್ ಗಾಗಿ ಲಾರಿಯನ್ನು ರಿವರ್ಸ್ ತೆಗೆಯುವ ವೇಳೆ ಬ್ರೇಕ್ ಫೈಲ್ ಆಗಿ ಲಾರಿ ಪಲ್ಟಿಯಾಗಿ ನೀರಿನ ತೊಟ್ಟಿಗೆ …

Read More »

ರಾಜ್ಯದಲ್ಲಿ ‘ಡೆಂಗ್ಯೂ’ ಕೇಸ್ ಹೆಚ್ಚಳ: ಒಂದೇ ತಿಂಗಳಲ್ಲಿ 3,797 ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೇವಲ ಒಂದು ತಿಂಗಳಲ್ಲಿ 3,797 ಮಂದಿಗೆ ಡೆಂಗ್ಯೂ ತಗುಲಿರುವುದು ವರದಿಯಿಂದ ದೃಢಪಟ್ಟಿದೆ. ಈ ಮೂಲಕ ಪ್ರಕರಣಗಳ ಒಟ್ಟು ಸಂಖ್ಯೆ 10,000 ಗಡಿಯನ್ನು ದಾಟಿದೆ. ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆಯೂ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 5,756 ಹಾಗೂ ಇತರೆ ಜಿಲ್ಲೆಗಳಲ್ಲಿ 4,504 …

Read More »

ಮಂಗಳೂರು: ಸಹೋದರಿಯರು ನೇಣಿಗೆ ಶರಣು..!

ಮಂಗಳೂರು: ನಗರದ ಕಂಬಳದ ಚಂದ್ರಿಕಾ ಬಡಾವಣೆ ನಿವಾಸಿ ವೃದ್ಧ ಸಹೋದರಿಯರಿಬ್ಬರು ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕದ್ರಿ ಕಂಬಳ ಚಂದ್ರಿಕಾ ಬಡಾವಣೆ ನಿವಾಸಿಗಳಾದ ಲತಾ ಭಂಡಾರಿ (70) ಹಾಗೂ ಸುಂದರಿ ಶೆಟ್ಟಿ( 80) ಆತ್ಮಹತ್ಯೆಗೆ ಶರಣಾದವರು. ಲತಾ ಭಂಡಾರಿಯವರ ಪತಿ ಜಗನ್ನಾಥ ಭಂಡಾರಿಯವರು ಕೆಲಸಕ್ಕೆಂದು ಹೋಗಿದ್ದ ವೇಳೆ ಈ ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 4:30ರ ವೇಳೆಗೆ ಜಗನ್ನಾಥ ಭಂಡಾರಿಯವರು ಮನೆಗೆ ಬಂದಾಗ ಮನೆಯ ಬಾಗಿಲು ಮುಚ್ಚಿತ್ತು. ಎಷ್ಟು ಬಾಗಿಲು ಬಡಿದರೂ ಬಾಗಿಲು ತೆರೆಯದಿರುವುದರಿಂದ ಕಿಟಕಿಯಿಂದ ನೋಡಿದಾಗ ಇಬ್ಬರೂ …

Read More »

ಬಂಟ್ವಾಳ : ಕಾರು ಚಾಲಕನ ಅಜಾಗೃತೆಯ ಚಾಲನೆಗೆ ಬೈಕ್ ಸವಾರ ಆಸ್ಪತ್ರೆ ದಾಖಾಲು

ಬಂಟ್ವಾಳ: ಕಾರು ಚಾಲಕನೋರ್ವನ ಅಜಾಗರೂಕತೆಯ ಚಾಲನೆಯಿಂದ ಬೈಕ್ ಸವಾರನೊರ್ವನಿಗೆ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನ ಕೈಕಂಬ ತಲಪಾಡಿ ಎಂಬಲ್ಲಿ ಅ.2 ರಂದು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ಬೈಕ್ ಸವಾರ ಶಿವಪ್ರಸಾದ್ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಶಿವಪ್ರಸಾದ್ ಮತ್ತು ಸಹಸವಾರ ತಿಲಕ್ ಪ್ರಸಾದ್ ಅವರು ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಿಸಿರೋಡು ಕಡೆಯಿಂದ ಬರುತ್ತಿದ್ದ ಕಾರು ಬಿಸಿರೋಡು ತಲಪಾಡಿ ಕೆಎಸ್.ಆರ್.ಟಿ.ಸಿ‌.ಡಿಪೋ ಎದುರುಗಡೆ ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಜಾಕೀರ್ ಹುಸೈನ್ ಅವರು ಅಜಾಗರೂಕತೆಯಿಂದ ಬಲಬದಿ ಅಂದರೆ …

Read More »

ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬಂದಿ ಹೃದಯಾಘಾತಕ್ಕೆ ಬಲಿ

ಮಂಗಳೂರು : ಮಂಗಳೂರು ನಗರ ಶಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸೋಮನ ಗೌಡ ಚೌದರಿ (31) ಮೃತ ದುರ್ದೈವಿಯಾಗಿದ್ದಾರೆ. ವಯರ್ ಲೆಸ್ ಇನ್ಸ್‌ಪೆಕ್ಟರ್ ವಾಹಕ್ಕೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮನ ಗೌಡ ಮೂಲತಾ ಬಿಜಾಪುರ ಜಿಲ್ಲೆಯವರಾಗಿದ್ದಾರೆ. ಇನ್ಸ್‌ಪೆಕ್ಟರ್‌ ಗೆ ಡೆಂಗ್ಯೂ ಜ್ವರ ಭಾದಿಸಿದ್ದರಿಂದ ನಗರದ ಫಳ್ನಿರ್‌ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಮಂಗಳವಾರ ಬೆಳಿಗ್ಗೆ ಕರೆದುಕೊಂಡು ಹೋಗಿದ್ದರು. ಅಧಿಕಾರಿಯನ್ನು ಆಸ್ಪತ್ರೆ ಬಳಿ ಇಳಿಸಿ ವಾಹನ ಪಾರ್ಕ್ ಮಾಡಲು ಹೋದ ಸಂದರ್ಭ ಸೋಮನಗೌಡ ಏಕಾಎಕಿ ಕುಸಿದು ಬಿದ್ದಿದ್ದಾರೆ ಕೂಡಲೇ ಸ್ಥಳೀಯರು ಧಾವಿಸಿ 112 …

Read More »

ನ್ಯೂಜೆರ್ಸಿಯಲ್ಲಿ ಅತಿ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆ: ಪ್ರಧಾನಿ ಮೋದಿ, ಸುನಕ್ ಶುಭಾಶಯ

ನವದೆಹಲಿ:ಆಧುನಿಕ ಯುಗದಲ್ಲಿ ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯ ಎಂದು ಹೇಳಲಾಗುವ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆ ನಗರದಲ್ಲಿ ಅಕ್ಷರಧಾಮ ದೇವಾಲಯದ ಉದ್ಘಾಟನೆಗೆ ಮುಂಚಿತವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಶುಭಾಶಯಗಳನ್ನು ತಿಳಿಸಿದ್ದಾರೆ.   ‘ವಿಶ್ವಾದ್ಯಂತದ ಅಪಾರ ಸಂಖ್ಯೆಯ ಭಕ್ತರಿಗೆ ಇದು ಆಳವಾದ ಆಧ್ಯಾತ್ಮಿಕ ಮಹತ್ವದ ಸಂದರ್ಭವಾಗಿದೆ’ ಎಂದು ಮೋದಿ ರಾಬಿನ್ಸ್‌ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಬರೆದ ಪತ್ರದಲ್ಲಿ ಬರೆದಿದ್ದಾರೆ. BAPS ಸ್ವಾಮಿನಾರಾಯಣ ಸಂಸ್ಥೆಯಲ್ಲಿರುವ ಎಲ್ಲರಿಗೂ ಮತ್ತು ಈ ಉಪಕ್ರಮದಲ್ಲಿ ತೊಡಗಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಕಳುಹಿಸುವ ಮೋದಿ, ಅಕ್ಷರಧಾಮ …

Read More »

ಸುಳ್ಯ: ಮೈರೋಳ್ ಹಣ್ಣಿನ ಜ್ಯೂಸ್ ಸೇವಿಸಿದ ಮಹಿಳೆ ಸಾವು

ಸುಳ್ಯ: ಸರಿಯಾದ ಮಾಹಿತಿ ಇಲ್ಲದೇ ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಅ.2 ರಂದು ಅಮರಪಡ್ಡೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ.ಮೃತರನ್ನು ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ.ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು.ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಅವರಲ್ಲಿ ಮಗಳು ಮೂರು ಮಕ್ಕಳ …

Read More »

ಲೇಡಿ ರಿಪೋರ್ಟರ್ ಜತೆ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಿರಿಕ್ – ಪತ್ರಕರ್ತರ ಆಕ್ರೋಶ

ಚೆನ್ನೈ: ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ, ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಮಹಿಳಾ ರಿಪೋರ್ಟರ್ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಅಣ್ಣಾಮಲೈ ಅವರ ವರ್ತನೆಗೆ ಪತ್ರಕರ್ತರು ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ʼನನ್ನ ನೆಲ ನನ್ನ ಜನʼ ಪಾದಯಾತ್ರೆಯನ್ನು ನಡೆಸುತ್ತಿರುವ ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಬದಲಿಗೆ, ಪ್ರಶ್ನೆ ಕೇಳಿದೆ ವರದಿಗಾರ್ತಿಯನ್ನು ತಮ್ಮ ಪಕ್ಕಕ್ಕೆ ಬರುವಂತೆ ಒತ್ತಾಯಿಸಿದರು. ಅಲ್ಲದೇ, ಇಂಥ ಪ್ರಶ್ನೆ ಕೇಳಿದ ವರದಿಗಾರ್ತಿಯನ್ನು ಎಲ್ಲರೂ ನೋಡಲಿ ಎಂದು ಹೇಳಿದರು. ಅಣ್ಣಾಮಲೈ ಅವರ ವರ್ತನೆಗೆ ಸ್ಥಳದಲ್ಲಿ …

Read More »

ಮಂಗಳೂರು : ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಪುಂಡಾಟ -ನೋಟಿಸ್ ಜಾರಿ

ಮಂಗಳೂರು : ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಘಟನೆ ನಂತರ ಇದೀಗ ಮಂಗಳೂರು ತಾಲೂಕಿನ ಉಳ್ಳಾಲ ಅಬ್ಬಕ್ಕ ವೃತದ ಬಳಿ ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಪುಂಡಾಟರು ಹಸಿರು ಬಾವುಟ ಪ್ರದರ್ಶಿಸಿರುವ ಘಟನೆ ನಡೆದಿದೆ. ಉಳ್ಳಾಲದ ವೀರರಾಣಿ ಅಬ್ಬಕ್ಕ ಸರ್ಕಲ್ ಮೇಲೆ ಯುವಕರ ಗುಂಪೋಂದು ಹಸಿರು ಬಾವುಟ ಪ್ರದರ್ಶಿಸಿದ್ದ ವಿಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ವಿಡಿಯೋ ಅಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 28ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. …

Read More »

You cannot copy content of this page.