ತಾಜಾ ಸುದ್ದಿ

ಕುಂದಾಪುರ : ಅರಣ್ಯ ಇಲಾಖೆಯ ಸಿಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ..!

ಕುಂದಾಪುರ : ಕುಂದಾಪುರ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರೊಬ್ಬರ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಚಾಲಕ ಕುಂದಾಪುರದ ಕುಂದೇಶ್ವರದ ನಿವಾಸಿ ಅಶೋಕ್ (38) ಆಸ್ಪತ್ರೆಗೆ ದಾಖಲಾಗಿದ್ದಾನೆ. ಬುಧವಾರ ಸಂಜೆ ವೇಳೆಗೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದೊಳಕ್ಕೆ ಬಂದ ಆರೋಪಿಗಳಾದ ಇಮ್ತಿಯಾಝ್, ವಿನೋದ್ ಹಾಗೂ ಮತ್ತಿಬ್ಬರು ಆರೋಪಿಗಳು ಅಶೋಕ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆನ್ನಲಾಗಿದೆ. ಅಕ್ರಮ …

Read More »

ಮಂಗಳೂರು: ಪಾದಚಾರಿಗಳ ಮೇಲೆ ಎರಗಿದ ಕಾರು: ಯುವತಿ ಸಾವು 4 ಮಂದಿಗೆ ಗಾಯ

ಮಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದು ಯುವತಿಯೊಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಲೇಡಿಹಿಲ್‌ ನಲ್ಲಿ ನಡೆದಿದೆ. ಕುದ್ರೋಳಿ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದವರ ಕಾರು ಎರಗಿದ್ದು ಸ್ಥಳದಲ್ಲಿಯೇ ಓರ್ವ ಯುವತಿ ಮೃತಪಟ್ಟಿದ್ದಾಳೆ. ಸಂಜೆ 4 ಗಂಟೆ ವೇಳೆಗೆ ಘಟನೆ ನಡೆದಿದ್ದು, ಐವರು ಯುವತಿಯರು ಮಣ್ಣಗುಡ್ಡ ಮಹಾನಗರ ಪಾಲಿಕೆ ಸ್ವಿಮಿಂಗ್‌ ಪೂಲ್‌ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಣ್ಣಗುಡ್ಡದ ಕಮ್ಲೇಶ್‌ ಬಲ್‌ ದೇವ್‌ ಎಂಬಾತ ಮಣ್ಣಗುಡ್ಡ ಜಂಕ್ಷನ್‌ ನಿಂದ ಲೇಡಿಹಿಲ್‌ ಕಡೆಗೆ …

Read More »

ಬೆಳ್ತಂಗಡಿ: ಬಾಲಕನಿಗೆ ಪಿಕಪ್‌ ಡಿಕ್ಕಿ; ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತ್ಯು..!!

ಬೆಳ್ತಂಗಡಿ: ರಸ್ತೆ ದಾಟುತ್ತಿರುವ ವೇಳೆ ಪಿಕಪ್‌ ವಾಹನವೊಂದು ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಲಾಯಿಲದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಅರ್ತಿಲಾ ಮನೆಯ ಮಹಮ್ಮದ್ ರಫೀಕ್ ಅವರ ಮಗ ಮಹಮ್ಮದ್ ರಂಝಿನ್ (10) ಶಾಲಾ ರಜೆಯ ಹಿನ್ನಲೆ ಸಂಬಂಧಿಕರ ಮನೆಗೆ ಬಂದಿದ್ದು, ಇಂದು 11:50ರ ಸುಮಾರಿಗೆ ಅಂಗಡಿಗೆ ಹೋಗಿ ವಾಪಾಸ್‌ ರಸ್ತೆ ದಾಟುವಾಗ ಲಾಯಿಲ ಜಂಕ್ಷನ್‌ ಬಳಿ ಉಜಿರೆಯಿಂದ ಬೆಳ್ತಂಗಡಿ ಕಡೆಗೆ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾನೆ. …

Read More »

ಮಂಗಳೂರು : ಲಂಚಕ್ಕೆ ಬೇಡಿಕೆ ಇಟ್ಟ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಲೋಕಾಯಕ್ತ ಬಲೆಗೆ

ಮಂಗಳೂರು : ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆಸಿದ ಕಾಮಗಾರಿ ನಡೆಸಿದ ಬಳಿಕ ಸ್ಥಳದ ಮೆಟೀರಿಯಲ್ ಪರಿಶೀಲನೆ ನಡೆಸಿ ವರದಿ ನೀಡಲು ಬೆಳ್ತಂಗಡಿಯ ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಗಳೂರಿನ ಬೋಂದೆಲ್ ನಲ್ಲಿರುವ ಸಹಾಯಕ ಕಾರ್ಯಪಾಲ ಇಂಜಿನಿಯರವರ ಕಛೇರಿ, ಲೋಕೋಪಯೋಗಿ ಇಲಾಖೆ ಗುಣ ಭರವಸೆ ಉಪವಿಭಾಗದ ಇದರ ಕಿರಿಯ ಇಂಜಿನಿಯರ್-2 ಲೋಕಾಯಕ್ತ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ. ಮಂಗಳೂರು ಬೋಂದೆಲ್ ನಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರವರ ಕಚೇರಿ ಲೋಕೋಪಯೋಗಿ ಇಲಾಖೆಯ ಗುಣ ಭರವಸೆ ಉಪವಿಭಾಗದ  ಕಿರಿಯ ಇಂಜಿನಿಯರ್ -2 ಅಗಿರುವ ರೋನಾಲ್ಡ್ ಲೋಬೋ …

Read More »

ಕುಕ್ಕರ್ ಬಾಂಬ್ ಪ್ರಕರಣ: ಉಡುಪಿ ಕೃಷ್ಣ ಮಠ ಬ್ಲಾಸ್ಟ್​ಗೆ ಪ್ಲಾನ್- ಎನ್​ಐಎ ತನಿಖೆಯಲ್ಲಿ ಬಯಲು

ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ, ಐಸಿಸ್ ಉಗ್ರಗಾಮಿ ಸಂಘಟನೆಯ ಸಂಚುಕೋರ, ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದ್ದು, ವಿಚಾರಣೆ ವೇಳೆ ಮತ್ತೊಂದು ಭಯಾನಕ ಅಂಶ ಬಾಯಿಬಿಟ್ಟಿದ್ದಾನೆ. ಕರ್ನಾಟಕದಲ್ಲಿ ಮೂರು ಸ್ಥಳಗಳಲ್ಲಿ ಬಾಂಬ್​​ ಬ್ಲಾಸ್ಟ್​ ಮಾಡಲು ಸಂಚು ರೂಪಿಸಿದ್ದೇವು ಎಂದು ಹೇಳಿದ್ದಾನೆ. ಕದ್ರಿ ದೇವಸ್ಥಾನ ಟಾರ್ಗೇಟ್ ಮಾಡಲಾಗಿತ್ತು ಎಂದು ಈ ಹಿಂದೆ ಹೇಳಿದ್ದ. ಇದೀಗ ಉಡುಪಿ ಮಠ, ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನೂ ಕೂಡ ಟಾರ್ಗೆಟ್ ಮಾಡಲಾಗಿತ್ತು ಎಂದು ಹೇಳಿದ್ದಾನೆ. ಕದ್ರಿ ಬ್ಲಾಸ್ಟ್ ಸಕ್ಸಸ್ ಆಗಿದ್ದರೇ ನಂತರ …

Read More »

ಕಡಬ: ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಕಡಬ : ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಇಲ್ಲಿನ ಪೆರಿಯಡ್ಕ ಎಂಬಲ್ಲಿ ಅ.17 ರಂದು ನಡೆದಿದೆ. ಶಾಲಿನಿ ಎಂಬವರು ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದವರಾಗಿದ್ದಾರೆ.ಶಾಲಿನಿ ಅವರು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಾಹಿತಿ ಪಡೆದ ಆಲಂಕಾರು 108 ಆರೋಗ್ಯ ಕವಚ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಇವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ಸುರತ್ಕಲ್: ಯುವಕನಿಗೆ ತಂಡದಿಂದ ಚೂರಿ ಇರಿತ

ಸುರತ್ಕಲ್: ಯುವಕನೋರ್ವನಿಗೆ ಮೂವರ ತಂಡ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಮಂಗಳೂರು ನಗರದ ಹೊರವಲಯದ ಬೆಂಗ್ರೆಯಲ್ಲಿ ನಡೆದಿದೆ. ಬೆಂಗ್ರೆ ನಿವಾಸಿ ಮುಹಮ್ಮದ್ ಅಕ್ರಂ ಚೂರಿ ಇರಿತಕ್ಕೊಳಗಾದ ಯುವಕ. ಹಲ್ಲೆ ನಡೆಸಿದ ಆರೋಪಿಗಳನ್ನ ಸ್ಥಳೀಯರಾದ ಸಮದ್‌, ಇಜಾಝ್ ಮತ್ತು ಇರ್ಫಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಅಕ್ರಂರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳೆಯ ದ್ವೇಷದ ಪ್ರತಿಕಾರವಾಗಿ ಕೊಲೆಗೈಯ್ಯುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅಕ್ರಂ ನೀಡಿರುವ ಪೊಲೀಸ್‌ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ …

Read More »

ಮಂಗಳೂರು: ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ

ಮಂಗಳೂರು ತಾ.ಪಂ: ದಿನಾಂಕ 17-10-2023 ರಂದು ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ ಹಿನ್ನೆಲೆ ಮುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮನೆ‌- ಮನೆಗಳಿಗೆ ಭೇಟಿ ನೀಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿನ‌ ಕಾಮಗಾರಿ ಸಲ್ಲಿಕೆ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಧ್ವನಿ‌ ವರ್ಧಕದ ಮೂಲಕ‌ ಸಹ‌ ಪ್ರಚಾರ ಕಾರ್ಯಕೈಗೊಂಡು ಕರಪತ್ರ ಹಂಚಲಾಯಿತು. ಈ ವೇಳೆ ಗ್ರಾಮ‌ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ,ಸದಸ್ಯರು, ತಾಲೂಕು ಪಂಚಾಯತ್ ಐಇಸಿ‌ ಸಂಯೋಜಕರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು‌ ಹಾಜರಿದ್ದರು.

Read More »

ಉಡುಪಿ: ಅರಬೀ ಸಮುದ್ರದಲ್ಲಿ ಚಂಡಮಾರುತ ಭೀತಿ; ಅ.20ರವರೆಗೆ ಮೀನುಗಾರಿಕೆ ನಿಷೇಧ

ಉಡುಪಿ: ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ (ಅ.20ರವರೆಗೆ) ಕರಾವಳಿ ಸಮುದ್ರದ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಎಚ್ಚರಿಕೆ ನೀಡಿದ್ದಾರೆ. ಚಂಡಮಾರುತದ ಅವಧಿಯಲ್ಲಿ ಸಮುದ್ರದ ಅಲೆಗಳ ಎತ್ತರ ಹೆಚ್ಚಾಗಲಿದ್ದು, ಗಾಳಿಯ ವೇಗವು ಗಂಟೆಗೆ 40-45ರಿಂದ 55ಕಿ.ಮೀ. ಇರುವುದರಿಂದ ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ. ಹೀಗಾಗಿ ಸಮುದ್ರ ತೀರದಲ್ಲಿ ಓಡಾಡುವುದು ಹಾಗೂ ಆಟವಾಡುವುದನ್ನು ಕೂಡಾ ನಿಷೇಧಿಸಲಾಗಿದೆ …

Read More »

ಕಡಬದ ಯುವತಿ ನಾಪತ್ತೆ:ಮಂಗಳೂರಿನಲ್ಲಿ ಪೊಲೀಸರಿಂದ ಹುಡುಕಾಟ

ಕಡಬ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ ಸಮೀಪದ ಬಳ್ಪ ಗ್ರಾಮದ ಯುವತಿಯೊಬ್ಬಳು ವಾರದ ಹಿಂದೆ ನಾಪತ್ತೆಯಾಗಿದ್ದು ಮಂಗಳೂರಿನಲ್ಲಿ ಆಕೆ ಇರುವ ಬಗ್ಗೆ ಸುಳಿವು ಸಿಕ್ಕಿದೆ. ಬಳ್ಪ ಗ್ರಾಮ ಬೀದಿಗುಡ್ಡೆ ಸಮೀಪದ  ದೀಕ್ಷಾ (18 )  ಎಂಬಾಕೆ  ನಾಪತ್ತೆಯಾದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿ ಮಂಗಳೂರಿನಲ್ಲಿರುವ ಮಾಹಿತಿ ಪಡೆದು ಪೋಲೀಸರು ಅಲ್ಲಿಗೆ ಹೋದಾಗ ಆಕೆ ಅಲ್ಲಿಂದ‌ ಬೇರೆಡೆಗೆ ಹೋಗಿರುವುದಾಗಿ ಗೊತ್ತಾಯಿತೆಂದು ತಿಳಿದುಬಂದಿದೆ.ಪೊಲೀಸರು ಆಕೆಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿರುವುದಾಗಿ ತಿಳಿದು ಬಂದಿದೆ.

Read More »

You cannot copy content of this page.