ತಾಜಾ ಸುದ್ದಿ

MLA ಟಿಕೆಟ್ ವಂಚನೆ ಪ್ರಕರಣ: ಅಭಿನವ ಹಾಲಶ್ರೀಗೆ ಹೈಕೋರ್ಟ್ ಜಾಮೀನು ಮಂಜೂರು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ಕೋಟಿ ಕೋಟಿ ಹಣ ಪಡೆದು, ವಂಚನೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವಂತ ಅಭಿನವ ಹಾಲಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪದಲ್ಲಿ ಚೈತ್ರಾ ಅಂಡ್ ಟೀಂ ಅನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಜೈಲು ಸೇರಿದ್ದಂತ ಅಭಿನವ ಹಾಲಶ್ರೀ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠದಲ್ಲಿ ಅಭಿನವ ಹಾಲಶ್ರೀ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ಈ …

Read More »

ಅಕ್ಷಯ್ ಕಲ್ಲೇಗ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ, ಸಾಂತ್ವನ

ಪುತ್ತೂರು : ಸೋಮವಾರ ರಾತ್ರಿ ಹತ್ಯೆಯಾದ ಕಲ್ಲೇಗ ಟೈಗರ್ಸ್ ಸ್ಥಾಪಕ ಅಕ್ಷಯ್ ಕಲ್ಲೇಗ ಮನೆಗೆ ಪುತ್ತಿಲ ಪರಿವಾರ ನಾಯಕ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಅಕ್ಷಯ್ ಕಲ್ಲೇಗ ಕುಟಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಬಳಿಕ ಮತನಾಡಿದ ಪುತ್ತಿಲ ಘಟನೆ ನಡೆದ ದಿನವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ, ಅಕ್ಷಯ್ ಕಲ್ಲೇಗ ಕೊಲೆ ಆರೋಪಿಗಳಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ಆಗಬೇಕು.ಪುತ್ತೂರಿನಲ್ಲಿ ಠಾಣೆಯ ಹಿಡಿತದಲ್ಲಿರುವ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮಾದ್ಯಮಗಳಿಂದ ತಿಳಿದುಬಂದಿದೆ. ಇಲಾಖೆ ಆದಷ್ಟು ಶೀಘ್ರ ಪುತ್ತೂರಿನ ಸಿಸಿಟಿವಿಗಳನ್ನು …

Read More »

ಸೌಜನ್ಯ ಪ್ರಕರಣ : ಸಂತೋಷ್ ರಾವ್ ನಿಜವಾದ ಆರೋಪಿ ಎಂದು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ

ಬೆಳ್ತಂಗಡಿ: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ (ಕೇಂದ್ರ ತನಿಖಾ ದಳ) ಅಧಿಕಾರಿಗಳು ಮತ್ತೊಮ್ಮೆ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಈ ಹಿಂದೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ಹಲವು ತಿಂಗಳುಗಳ ನಂತರ, ಸಿಬಿಐ ಅಧಿಕಾರಿಗಳು ಇದೀಗ ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆಯ ಅಪರಾಧಿ ಎಂದು ಸ್ಥಾಪಿಸಲು ನಿರ್ಧರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಕಾನೂನು ಹೋರಾಟದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ತನಿಖೆಯನ್ನು …

Read More »

ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಆರೋಪಿಗಳಿಗೆ ನ.22 ರ ತನಕ ನ್ಯಾಯಾಂಗ ಬಂಧನ

ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳಾದ ಚೇತನ್, ಮನೀಶ್, ಕೇಶವ, ಮಂಜುನಾಥ್ ಎಂಬವರನ್ನು ನ.8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ.7 ರಂದು ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮನಗೆ ಹಾಜರುಪಡಿಸಲಾಗಿತ್ತು. ನ.8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ನ.22 ರ ತನಕ ನ್ಯಾಯಾಂಗ ಕಸ್ಟಡಿಗೊಳಪಡಿಸಿ ಆದೇಶ ನೀಡಿದ್ದಾರೆ.

Read More »

ಪುತ್ತೂರು: ಹೃದಯಾಘಾತಕ್ಕೆ ನವವಿವಾಹಿತೆ ಬಲಿ

ಪುತ್ತೂರು: ಹೃದಯಾಘಾತಕ್ಕೆ ನವವಿವಾಹಿತೆಯೊಬ್ಬರು ಬಲಿಯಾದ ಘಟನೆ ಪುತ್ತೂರಿನ ಪಡುವನ್ನೂರು ಗ್ರಾಮ ಪದಡ್ಕದಲ್ಲಿ ನಡೆದಿದೆ. ಮೃತರನ್ನು ಪದಡ್ಕ ನಿವಾಸಿ ಪುಷ್ಪ(22) ಎಂದು ಗುರುತಿಸಲಾಗಿದೆ. ಇವರಿಗೆ ನವೆಂಬರ್ 7 ರಂದು ಮುಂಜಾನೆ ಎದೆನೋವು ಕಾಣಿಸಿಕೊಂಡಿತ್ತು, ಬಳಿಕ ಚಿಕಿತ್ಸೆಗೆಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದಕೊಂಡು ಬರುವಾಗ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಪುಷ್ಪ ಅವರಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.

Read More »

ಉಡುಪಿ: ರಾತ್ರಿ 8 ರಿಂದ 11 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಉಡುಪಿ : ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಪಟಾಕಿಗಳ ಮಾರಾಟ ಮತ್ತು ನಿಯಂತ್ರಿಸುವ ಕುರಿತು ಮಾತನಾಡಿದ ಅವರು, ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆಯಿದ್ದು, ಕ್ಯೂಆರ್ ಕೋಡ್ ಇರುವ ಪಟಾಕಿಗಳನ್ನೇ ಉಪಯೋಗಿಸಬೇಕು. ನವೆಂಬರ್ 12 ರಿಂದ 15 ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ …

Read More »

ಸೌಜನ್ಯ ಕೇಸ್ – ಮರು ತನಿಖೆಗಾಗಿ ಸಿಬಿಐ ಅಧಿಕಾರಿಗಳಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

ಮಂಗಳೂರು: 11 ವರ್ಷಗಳ ಹಿಂದೆ ಕೊಲೆಯಾದ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಆರೋಪಿಗೆ ನಿರ್ದೋಷಿ ಎಂದು ತೀರ್ಪು ನೀಡಿದ ಹಲವು ತಿಂಗಳ ಬಳಿಕ ಇದೀಗ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ಗೆ ಸಾಕ್ಷದಾರ ಕೊರತೆಯಿಂದ ನಿರ್ದೋಷಿ ಎಂದು ತೀರ್ಪು ನೀಡಿದ್ದು ಇದೀಗ ನವೆಂಬರ್ 5 ಶನಿವಾರದಂದು ಸಿಬಿಐ ತನಿಖಾಧಿಕಾರಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಕೆಲವೇ ದಿನಗಳಲ್ಲಿ …

Read More »

ಕನಸಿನ ಮೂಲಕ ಪತ್ತೆಯಾದ ಭೂಮಿಯಲ್ಲಿ ಹುದುಗಿ ಹೋಗಿದ್ದ ‘ದೇವಸ್ಥಾನ’ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಚ್ಚರಿಯ ಘಟನೆ

ದಕ್ಷಿಣಕನ್ನಡ : ಕನಸಿನಲ್ಲಿ ಬಿದ್ದಂತಹ ಹಲವು ಸ್ಥಳಗಳ ಬಗ್ಗೆ ಪತ್ತೆ ಹಚ್ಚಿ ಆ ಸ್ಥಳಕ್ಕೆ ಹೋಗುವುದನ್ನು ನಾವು ಸಾಮಾನ್ಯವಾಗಿ ಸಿನಿಮಾದಲ್ಲಿ ನೋಡಿರುತ್ತೇವೆ ಆದರೆ ಇದೀಗ ಬೆಂಗಳೂರು ಮೂಲದ ವ್ಯಕ್ತಿ ಒಬ್ಬರಿಗೆ ಕನಸಿನಲ್ಲಿ ದೇವಸ್ಥಾನ ಕಂಡಿದ್ದು ಅದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಇರುವುದು ಕನಸಿನಲ್ಲಿ ಕಂಡು ಬಂದಿದೆ.   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಲಕ್ಷ್ಮಣ್ ಎಂಬವರಿಗೆ ಬಿದ್ದ ಕನಸಿನಲ್ಲಿ ಮುಸ್ಲಿಂ ಧರ್ಮದ ವ್ಯಕ್ತಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಾಲಯ ಇರುವ ಸುಳಿವು ಸಿಕ್ಕಿದೆ. ಅದರಂತೆ ಜಮೀನು ಅಗೆದಾಗ ಗೋಪಾಲಕೃಷ್ಣ ದೇವರ …

Read More »

ಅಕ್ಷಯ್ ಹತ್ಯೆ ಪ್ರಕರಣ: ಶವ ಯಾತ್ರೆಗೆ ತಡೆದ ಪೊಲೀಸರು..!

ಪುತ್ತೂರು: ಪುತ್ತೂರು: ಪುತ್ತೂರು ಪೇಟೆಯ ಹೊರ ವಲಯ ನೆಹರುನಗರದಲ್ಲಿ ನಿನ್ನೆ ತಡ ರಾತ್ರಿ ದುಷ್ಕರ್ಮಿಗಳ ತಂಡವೊಂದು ತಲವಾರು ನಿಂದ ಕೊಚ್ಚಿ ಯುವಕನೊರ್ವನ ಬರ್ಬರ ಹತ್ಯೆ ನಡೆಸಿದ ಅಕ್ಷಯ್‌ ಕಲ್ಲೇಗ ಅವರ ಶವಯಾತ್ರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ.ಅಕ್ಷಯ್ ಕಲ್ಲೇಗ ಅವರ ಶವಯಾತ್ರೆಗೆ ಯುವಕರ ತಂಡವು ಪುತ್ತೂರಿನ ಕಬಕ ವೃತ್ತದಿಂದ ನಗರದ ಶೇವಿರೆಯಲ್ಲಿರುವ ಮನೆವರೆಗೆ ಶವಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರು.ಅದರೆ ಈ ವೇಳೆ ಶವಯಾತ್ರೆ ಮಾಡದಂತೆ ಪೊಲೀಸರು ತಡೆಯೊಡ್ಡಿದ್ದಾರೆ. ಹಾಗಾಗಿ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿತ್ತು.

Read More »

ಮೂಡಬಿದಿರೆ: ಡಿಸೆಂಬರ್ 14ರಿಂದ 17ರ ವರೆಗೆ ‘ಆಳ್ವಾಸ್ ವಿರಾಸತ್– 2023’

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್– 2023’ ಡಿಸೆಂಬರ್ 14ರಿಂದ 17ರ ವರೆಗೆ ಮೂಡಬಿದಿರೆಯಲ್ಲಿ ನಡೆಯಲಿದೆ.ಆಳ್ವಾಸ್ ವಿರಾಸತ್‌ಗೆ 29ನೇ ವರ್ಷವಾಗಿದ್ದು, ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿಪ್ರಿಯರಿಗೆ ರಸದೌತಣ ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 9.30ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಭಾಂಗಣದಲ್ಲಿ ಸುಮಾರು 50 ಸಾವಿರ ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು …

Read More »

You cannot copy content of this page.