ತಾಜಾ ಸುದ್ದಿ

ಮಂಗಳೂರು: ಲಾಡ್ಜ್ ನ ರೂಮ್ ಬೆಂಕಿ – ಓರ್ವ ಸಾವು

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಸಂಭವಿಸಿದೆ. ಯಶ್ರಾಜ್ ಎಸ್.‌ಸುವರ್ಣ(43) ಮೃತಪಟ್ಟವರು. ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ ಬಳಿಕ‌ ಸುಮಾರು 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು.‌ ಅನಂತರ ಲಾಡ್ಜ್ ನವರು ತೆರೆದಾಗ ಬೆಂಕಿ ಆವರಿಸಿತ್ತು. ಅಗ್ನಿಶಾಮಕದವರಿಗೆ ತಿಳಿಸಿದರು ಎನ್ನಲಾಗಿದೆ. ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಬೆಂಕಿ‌ ನಂದಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ …

Read More »

ಕುತ್ಲೂರಿನ ಮನೆಗೆ ತಡರಾತ್ರಿ ನಕ್ಸಲರ ಭೇಟಿ ವದಂತಿ – ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸ್ಪಷ್ಟನೆ

ಬೆಳ್ತಂಗಡಿ: ಕುತ್ಲೂರಿನಲ್ಲಿ ಮನೆಯೊಂದಕ್ಕೆ ಮಂಗಳವಾರ ತಡರಾತ್ರಿ ನಕ್ಸಲರು ಭೇಟಿ ನೀಡಿದ್ದರು ಎಂಬ ವದಂತಿಯೊಂದು ಬುಧವಾರ ಬೆಳಗ್ಗೆ ಸೃಷಿಯಾಗಿತ್ತು. ಆದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಮತ್ತು ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ಸ್ಪಷ್ಟನೆ ನೀಡಿದ್ದು, ಪ್ರಕರಣವೊಂದರ ತನಿಖೆಗಾಗಿ ಮೂಡುಬಿದಿರೆ ಪೊಲೀಸರು ಅಲ್ಲಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.   ಕುತ್ಲೂರು ಗ್ರಾಮದ ನಿವಾಸಿ ಜೋಸಿ ಆಂಟೋನಿ ತನ್ನ ಮನೆಗೆ ರಾತ್ರಿಯ ವೇಳೆ ಮಹಿಳೆ ಸೇರಿದಂತೆ ಅಪರಿಚಿತರ ತಂಡ ಬಂದು ಬಾಗಿಲು ಬಡಿದಿದೆ; ಆದರೆ ನಾನು ಬಾಗಿಲು ತೆರೆಯಲಿಲ್ಲ ಎಂದು ನ. 21ರ ರಾತ್ರಿ …

Read More »

ನೇಜಾರು ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಚೌಗುಲೆಗೆ ಡಿ.5 ರವರೆಗ ನ್ಯಾಯಾಂಗ ಬಂಧನ

ಉಡುಪಿ :ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಉಡುಪಿ ಪೊಲೀಸರು ಇಂದು ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಯನ್ನು ಡಿ.5 ರವರಗೆ  14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಬಂಧಿತ ಆರೋಪಿ ಪ್ರವೀಣ್ ನನ್ನು ನ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಯನ್ನು ನ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ …

Read More »

ಹೈ-ಫೈ ಕಾರ್​ನಲ್ಲಿ ಬಂದು ಎಳೆನೀರು ಕಳ್ಳತನ : 90 ಸೀಯಾಳದ ಜೊತೆಗೆ ಕಳ್ಳನನ್ನು ಬಂಧಿಸಿದ ಪೊಲೀಸರು

ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ಕದ್ದು ಶೋಕಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನ ಕದಿಯುವ ಸ್ಟೈಲ್ ಬೇರೆಯೇ. ಈ ಕಳ್ಳ ಹೈ-ಫೈ ಕಾರ್​ನಲ್ಲಿ ಡಿಸೇಂಟ್ ಆಗಿ ಬಂದು ಎಳನೀರು ಕದ್ದು ಎಸ್ಕೇಪ್​ ಆಗುತ್ತಿದ್ದ. ಆದರೀಗ ಪೊಲೀಸರ ಅತಿಥಿಯಾಗಿದ್ದಾನೆ.ಮೋಹನ್ ಕಾರಿನಲ್ಲಿ ಬಂದು ಎಳೆನೀರು ಕದಿಯುತ್ತಿದ್ದ ಕಳ್ಳ. ಗಿರಿನಗರ, ಹನುಮಂತ ನಗರ ಠಾಣೆ ವ್ಯಾಪ್ತಿಯಲ್ಲಿ ಈತ ಕಳ್ಳತನ ಮಾಡುತ್ತಿದ್ದ. ಕದ್ದ ಎಳೆನೀರನ್ನು‌ ಅದೇ ಏರಿಯಾದಲ್ಲಿ‌ ಕಡಿಮೆ ಬೆಲೆಗೆ ಮಾರಾಟ ಮಾಡುತಿದ್ದ. ಸದ್ಯ ಮೋಹನ್​ನನ್ನು ಗಿರಿನಗರ ಬಂಧಿಸಿದ್ದಾರೆ. ಮೋಹನ್​ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದ.​ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ. ಗಿರಿನಗರದ …

Read More »

ಮೂಡುಬಿದರೆ: ಅಕ್ರಮ ಗೋವು ಸಾಗಾಟಕ್ಕೆ ವಿಫಲ ಯತ್ನ : ಇಬ್ಬರು ಸೆರೆ, ಮೂವರು ಪರಾರಿ..!

ಮೂಡುಬಿದಿರೆ: ಅಕ್ರಮವಾಗಿ ದನ ಮತ್ತು ಕರುಗಳನ್ನು ವಾಹನದಲ್ಲಿ ತುಂಬಿಸಿ ಕಸಾಯಿಖಾನೆಗೆ ಸಾಗಿಸುವ ಪ್ರಯತ್ನವೊಂದನ್ನು ಮೂಡುಬಿದಿರೆ ಪೊಲೀಸರು ವಿಫಲಗೊಳಿಸಿದ್ದಾರೆ.ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಮಂಗಳವಾರ ನಸುಕಿನ ಜಾವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ್ದಾರೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಕುಮಾರ್‌ ನೇತೃತ್ವದ ತಂಡವು ರಾತ್ರಿ ಗಸ್ತಿನಲ್ಲಿದ್ದಾಗ ಪಡುಕೊಣಾಜೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪಿಕಪ್‌ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಎರಡು ಹಸು ಮತ್ತು ಎರಡು ಕರು ಪತ್ತೆಯಾಗಿವೆ.ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದರ್‌ ಹಾಗೂ ಪಣಪಿಲದ ಶೈಲೇಶ್‌ …

Read More »

ಬಜಪೆ : ನದಿಯಲ್ಲಿ ಯುವಕ ನೀರುಪಾಲು ಶೋಧ ಕಾರ್ಯ

ಬಜಪೆ : ನದಿಯ ನೀರಿಗೆ ಬಿದ್ದು ಯುವಕನೊಬ್ಬ ನೀರು ಪಾಲಾದ ಘಟನೆ ಪೊಳಲಿ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ನಡೆದಿದೆ. ಕಾವೂರು ಆಕಾಶಭವನ ನಿವಾಸಿ ಪ್ರಶಾಂತ್ ಕುಮಾರ್(41) ನೀರುಪಾಲಾದ ಯುವಕ. ತನ್ನ ಗೆಳೆಯರೊಂದಿಗೆ ಪೊಳಲಿ ದೇವಸ್ಥಾನಕ್ಕೆ ತೆರಳಿದ್ದ ಪ್ರಶಾಂತ್‌ ಆಚಾರಿ, ನದಿಗೆ ಇಳಿದು ಸ್ನಾನ ಮಾಡಿದ್ದರು. ಅವರ ಶೂವೊಂದರ ದಾರ ನೀರಿನಲ್ಲಿ ನಾಪತ್ತೆಯಾಗಿತ್ತು. ಅದನ್ನು ಹೆಕ್ಕಲೆಂದು ನೀರಿಗೆ ಇಳಿದಿದ್ದ ವೇಳೆ ಅವರು ನದಿ ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಶಾಂತ್‌ ಆಚಾರಿ ವಿವಾಹಿತರಾಗಿದ್ದು, ತಿಂಗಳು ಪ್ರಾಯದ ಮಗು ಇದ್ದು, ಮಗುವು ಆರೋಗ್ಯ ಸಮಸ್ಯೆಯಿಂದ …

Read More »

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮೂಹುರ್ತ ಫಿಕ್ಸ್..!

ಅಯೋಧ್ಯಾ : ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಶ್ರೀರಾಮಚಂದ್ರನ ಭವ್ಯ ದೇಗುಲ ಜನವರಿ 22ರಂದು ಲೋಕಾರ್ಪಣೆಯಾಗಲಿದ್ದು, ಅಂದೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ವಿಗ್ರಹ ನಿರ್ಮಾಣದಲ್ಲಿ ತೊಡಗಿರುವ ಶಿಲ್ಪಕಲಾ ತಜ್ಞರು ವಿಗ್ರಹಗಳ ನಿರ್ಮಾಣದಲ್ಲಿ ತಮ್ಮ ದೇಹ, ಮನಸ್ಸು ಮತ್ತು ಹಣದಿಂದ ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಮೆಗಳ ನಿರ್ಮಾಣವು ಸುಮಾರು 90% ಪೂರ್ಣಗೊಂಡಿದೆ. ಜನವರಿ 22, 2024 ರಂದು, ರಾಮಲಲ್ಲ ಭವ್ಯ ದೇವಾಲಯದಲ್ಲಿ ಕುಳಿತುಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿಜಿತ್ ಮುಹೂರ್ತ ಮೃಗಶಿರಾ ನಕ್ಷತ್ರದಲ್ಲಿ ಜನವರಿ 22 …

Read More »

ಕೋಟ: ಮೈ ಮೇಲೆ ಬಿದ್ದು 3 ವರ್ಷದ ಮಗು ಸಾವು

ಕೋಟ: ಆಟವಾಡುತ್ತಿದ್ದ ವೇಳೆ ಗೆಸ್ಟ್‌ಹೌಸ್‌ನ ಗೇಟ್‌ ಮೈ ಮೇಲೆ ಬಿದ್ದು ಮಗು ಮೃತಪಟ್ಟಿರುವ ದಾರುಣ ಘಟನೆ ಕೋಟದ ಕೋಟತಟ್ಟು ಪಡುಕರೆಯಲ್ಲಿ ನ. 21 ರ ಸಂಜೆ ನಡೆದಿದೆ. ಸ್ಥಳೀಯ ನಿವಾಸಿಯಾಗಿರುವ ಸುಧೀರ್‌ ಮೊಗವೀರ ಹಾಗೂ ಶಾರದ ದಂಪತಿಗಳ ಅವರ ಏಕೈಕ ಪುತ್ರ, ಮೂರು ವರ್ಷದ ಸುಶಾಂತ್‌ ಮೃತಪಟ್ಟ ಮಗು. ಮನೆಯ ಸಮೀಪವಿರುವ ಗೆಸ್ಟ್‌ಹೌಸ್‌ನ ಗೇಟ್ ಬಳಿ ಮಗು ಪ್ರತಿದಿನ ಆಟವಾಡುತ್ತಿದ್ದು, ಅದೇ ರೀತಿ ನಿನ್ನೆ ಕೂಡ ಇನ್ನೊಂದು ಮಗುವಿನೊಂದಿಗೆ ಆಟವಾಡುತ್ತಿದ್ದಾಗ ಸ್ಲೈಡಿಂಗ್ ಗೇಟ್‌ ಕಳಚಿ ಮೈಮೇಲೆ ಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದೆ. ಕೋಟ …

Read More »

ಮುಡಿಪು: ಗ್ಯಾರೇಜ್‌ ನಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಉಳ್ಳಾಲ: ಮುಡಿಪು ಬಳಿಯ ಕಾರ್ ಗ್ಯಾರೇಜ್‌ನಲ್ಲಿ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಕಿಶೋರ್ (25) ಎಂದು ಗುರುತಿಸಲಾಗಿದ್ದು, ಮುಡಿಪುವಿನಲ್ಲಿ ಜಯಾ ಎಂಬುವರಿಗೆ ಸೇರಿದ್ದ ಕಾರು ಗ್ಯಾರೇಜ್‌ನಲ್ಲಿ ಕಬ್ಬಿಣದ ರಾಡ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಿಶೋರ್‌ ಕಂಕನಾಡಿಯ ಕಾರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನ.20 ರಂದು ಕೆಲಸಕ್ಕೆ ಹೋಗಿದ್ದು ತಡವಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತನ ಕುಟುಂಬಸ್ಥರು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಕಿಶೋರ್ ಪತ್ತೆಯಾಗಿರಲಿಲ್ಲ. ಕೊನೆಗೆ ಕಿಶೋರ್‌ ಪ್ರತಿದಿನ ಕೆಲಸ ಬಿಟ್ಟು ಕೆಲಹೊತ್ತು ಕುಳಿತುಕೊಳ್ಳುತ್ತಿದ್ದ ಮುಡಿಪುವಿನ ಗ್ಯಾರೇಜ್‌ …

Read More »

ಸುರತ್ಕಲ್ : ನದಿಯಲ್ಲಿ ಮುಳುಗಿ ಯುವಕ ಮೃತ್ಯು

ಸುರತ್ಕಲ್ : ನಗರದ ಹೊರವಲಯದ ಮರವೂರು ರೈಲ್ವೆ ಸೇತುವೆಯ ಕೆಳಗಿನ ನದಿಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತರನ್ನು ಮೂಲತಃ ಬಜ್ಜೆ ನಿವಾಸಿ , ಸುರತ್ಕಲ್ ಸಮೀಪದ ಚೊಕ್ಕಬೊಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಾಕಿ‌ರ್ (30) ಎಂದು ಗುರುತಿಸಲಾಗಿದೆ. ಶಾಕಿರ್ ತನ್ನ 4 ಮಂದಿ ಸ್ನೇಹಿತರೊಂದಿಗೆ ಮರವೂರು ರೈಲ್ವೆ ಮೇಲ್ಸೇತುವೆಯ ಕೆಳ ಭಾಗದ ನದಿಯಲ್ಲಿ ಈಜಲೆಂದು ತೆರಳಿದ್ದು ಶಾಕಿರ್ ಕಾಲು ಜಾರಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಕೂಡಲೇ ಜೊತೆಗಿದ್ದ ಸ್ನೇಹಿತರು ಪೊಲೀಸರು ಮತ್ತು ಸಂಬಂಧಿಕರಿಗೆ …

Read More »

You cannot copy content of this page.