ತಾಜಾ ಸುದ್ದಿ

ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1 ರಂದು ಅದ್ದೂರಿಯಾಗಿ ಕರಾಳಿಯಾದ್ಯಂತ ತೆರೆಕಾಣಲಿದೆ. ತುಳುನಾಡಿನ ಹಾಸ್ಯ ದಿಗ್ಗಜರು ಚಿತ್ರದಲ್ಲಿ ನಟಿಸಿದ್ದು, ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ. ಸಂಪೂರ್ಣ ಹಾಸ್ಯ ಮನರಂಜನೆಯ ರಾಪಟ ಸಿನಿಮಾದಲ್ಲಿ ಉತ್ತಮ ಕತೆ ಇದೆ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಸಿನಿಮಾದಲ್ಲಿ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಅನೂಪ್‌ ಸಾಗರ್‌ ನಾಯಕ ನಟನಾಗಿ ಹಾಗೂ ನಿರೀಕ್ಷೆ ಶೆಟ್ಟಿ …

Read More »

Bank Holidays : ಡಿಸೆಂಬರ್ ನಲ್ಲಿ 18 ದಿನಗಳು ಬ್ಯಾಂಕ್ ಗಳಿಗೆ ರಜೆ : ಇಲ್ಲಿದೆ ಫುಲ್ ಲಿಸ್ಟ್

ತಿಂಗಳ ಆರಂಭದ ಮೊದಲು, ಬ್ಯಾಂಕುಗಳ ರಜಾದಿನಗಳ ಪಟ್ಟಿ ಹೊರಬರುತ್ತದೆ. ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ಅದಕ್ಕೂ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿ ಈಗಾಗಲೇ ಬಂದಿದೆ. ಸಾಮಾನ್ಯವಾಗಿ ಬ್ಯಾಂಕ್ ರಜಾದಿನಗಳು ವಿಶೇಷ ಸಂದರ್ಭಗಳಿಗಾಗಿ ರಾಜ್ಯಗಳಿಂದ ಗುರುತಿಸಲ್ಪಟ್ಟ ಹಬ್ಬಗಳು ಮತ್ತು ಇತರ ರಜಾದಿನಗಳಿಂದಾಗಿರುತ್ತವೆ. ಈ ಬಾರಿ ಡಿಸೆಂಬರ್ನಲ್ಲಿ 18 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇವುಗಳಲ್ಲಿ ಕ್ರಿಸ್ಮಸ್ ಹಬ್ಬ ಸೇರಿ ಇತರೆ ದಿನ ಇತ್ಯಾದಿಗಳು ಸೇರಿವೆ. ನೀವು ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಹೊಂದಿದ್ದರೆ, ಅದನ್ನು ತ್ವರಿತವಾಗಿ ಪರಿಹರಿಸಲು, ಬ್ಯಾಂಕುಗಳ …

Read More »

ಶಾಲಾ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ‘ಅಪಹರಣ’..!

ಮದುವೆ ಆಗೋದಕ್ಕೆ ಒಪ್ಪದಂತ ಶಾಲಾ ಶಿಕ್ಷಕಿಯನ್ನು ತನ್ನ ಸಂಬಂಧಿಯೇ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವಂತ ಘಟನೆ ಹಾಸನ ನಗರದ ಹೊರ ವಲಯದಲ್ಲಿ ನಡೆದಿದೆ. ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ಶಾಲಾ ಶಿಕ್ಷಕಿಯಾಗಿ ಅರ್ಪಿತಾ ಎಂಬುವರು ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅವರನ್ನು ಮದುವೆ ಆಗುವಂತೆ ಅವರ ಸಂಬಂಧಿ ರಾಮು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಅರ್ಪಿತಾ ಮಾತ್ರ ತನ್ನ ಸಂಬಂಧಿ ರಾಮುವನ್ನು ಮದುವೆಯಾಗೋದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಇಂದು ಸಿನಿಮಾ ಸ್ಟೈಲಲ್ಲಿ ಶಾಲಾ ಶಿಕ್ಷಕಿ ಅರ್ಪಿತಾಳನ್ನು ಅಪಹರಿಸಿಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರಿಗೂ ಅರ್ಪಿತಾ ಸಂಬಂಧಿಕರು ದೂರು …

Read More »

‘ಕುಕ್ಕರ್ ಬಾಂಬ್’ ಆರೋಪಿಗೆ ಕದ್ರಿ ದೇಗುಲವೇ ಟಾರ್ಗೆಟ್: ಕೋರ್ಟ್ ಗೆ ‘NIA’ ಆರೋಪ ಪಟ್ಟಿ ಸಲ್ಲಿಕೆ

ಮಂಗಳೂರು: ವರ್ಷದ ಹಿಂದೆ ಮಂಗಳೂರಿನ ಕಂಕನಾಡಿಯ ನಾಗುರಿಯಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಅದರಲ್ಲಿ ಇದೊಂದು ಐಸಿಸ್ ಪ್ರೇರಿತ ದಾಳಿ ಎಂಬುದಾಗಿ ಹೇಳಲಾಗಿದೆ. ಮಂಗಳೂರಿನ ಕದ್ರಿ ದೇವಸ್ಥಾನವೇ ಆರೋಪಿಗಳ ಟಾರ್ಗೆಟ್ ಆಗಿತ್ತು. ಷರಿಯತ್ ಕಾನೂನಿಗೆ ಪ್ರಚಾರ ನೀಡುವ ಉದ್ದೇಶ ಆರೋಪಿಗಳಿಗೆ ಇತ್ತು. ದಾಳಿ ಬಳಿಕ ಐಸಿಸ್ ಸೇರುವ ಉದ್ದೇಶ ಬಂಧಿತರಿಗಿತ್ತು ಎಂದು ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ. ನ.19, 2022ರಂದು ನಗರದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡು ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಮಂಗಳೂರಿನಲ್ಲಿ …

Read More »

ಬೆಳ್ತಂಗಡಿ: ಡಿ. 8 ರಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ: ವಿಶೇಷ ಬಸ್‌ ವ್ಯವಸ್ಥೆ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್‌ 8 ರಿಂದ 12 ರವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸೇರಿ ಹಲವು ಕಡೆಗಳಿಂದ ಭಕ್ತರು ಹಾಗೂ ಪ್ರವಾಸಿಗರು ಬರುವ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ರಾಜ್ಯದ ಹಲವು ಕಡೆಗಳಿಂದ ವಿಶೇಷ ಬಸ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೀಗಾಗಿ ಹೆಚ್ಚುವರಿ ಬಸ್‌ಗಳನ್ನು ಈ ವೇಳೆ ಬಿಡಲಾಗುತ್ತಿದ್ದು, ಇದಕ್ಕೆ …

Read More »

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ

ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ವರ್ಷಂಪ್ರತಿಯಂತೆ ಆಚರಿಸುತ್ತಿರುವ ಕಾರ್ತಿಕ ದೀಪೋತ್ಸವದ ಉತ್ಸವವನ್ನು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವೆಂಬರ್ 27 ರ ಸೋಮವಾರದಂದು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಗ್ಗೆ 10.00ರಿಂದ ಕಾರ್ತಿಕ ಮಾಸದ ಹುಣ್ಣಿಮೆಯ ಈ ವಿಶೇಷ ದಿನದಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಿತು. ನಂತರ ಸಂಜೆ 6 ರಿಂದ ದೇವಳದಲ್ಲಿ ಶ್ರೀ ವೀರನಾರಾಯಣ ಭಜನಾ ಮಂಡಳಿ ಹಾಗೂ ಮಾತೃ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು, ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರನಾರಾಯಣ …

Read More »

ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಜೋಡಿ ಕೇರಳದಲ್ಲಿ ಪತ್ತೆ..!

ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯಲ್ಲಿದ್ದ ಯುವಕ ಹಾಗೂ ಯುವತಿ ಕೇರಳದಲ್ಲಿ ಪತ್ತೆಯಾಗಿದ್ದು ಅವರನ್ನು ಹುಡುಕಿದ ಪೊಲೀಸರು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ. ನವೆಂಬರ್ 24 ರಂದು ಶುಕ್ರವಾರ ಮುಂಜಾನೆ ಮನೆಯವರಿಗೆ ಗೊತ್ತಿಲ್ಲದಂತೆ ಪರಾರಿಯಾಗಿದ್ದ ನವಜೋಡಿಗಳು ಕೇರಳ ರಾಜ್ಯದ ಕಾಂಞಗಾಡ್ ಎಂಬಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸಜೀಪ ಮುನ್ನೂರು ಗ್ರಾಮದ ಉದ್ದೋಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಹಾಗೂ ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ ( 23) ಕಾಣೆಯಾಗಿರುವ ಜೋಡಿಯಾಗಿದ್ದರು.  ಆಸ್ಮಾ ಅವರು ದೇರಳಕಟ್ಟೆ ನಡುಪದವು ಪಿ.ಎ.ಕಾಲೇಜಿನಲ್ಲಿ …

Read More »

ನಾಪತ್ತೆಯಾಗಿದ್ದ ಕಾಸರಗೋಡಿನ ನಾಲ್ವರು ಮಕ್ಕಳು ಉಡುಪಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾಗಿದ್ದ ಕಾಸರಗೋಡಿನ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರು ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಈ ನಾಲ್ವರು ಬಾಲಕರ ಪೈಕಿ ಮೂವರು ಮಕ್ಕಳು ನ. 27 ರಂದು ಸಂಜೆ ಶಾಲೆಯಿಂದ ಮನೆಗೆ ಬಂದಿದ್ದು, ಬಳಿಕ ಆಟ ಆಡಲೆಂದು ಮನೆಯಿಂದ ಹೊರಗೆ ತೆರಳಿದ್ದರು. ಈ ಮೂವರು ಬಾಲಕರೊಂದಿಗೆ ಇದೇ ಪ್ರದೇಶದ ಇನ್ನೋರ್ವ ಬಾಲಕನೂ ತೆರಳಿದ್ದು, ನಾಲ್ವರು ತಡವಾದರೂ ಇನ್ನೂ ಮನೆಗೆ ಬಂದಿರಲಿಲ್ಲ. ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದ್ದರಿಂದ ಆತಂಕಗೊಂಡ ಬಾಲಕರ ಪೋಷಕರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಕಾಸರಗೋಡಿನ ಪೊಲೀಸರು ಮಂಗಳೂರು ಸೇರಿ ಕರ್ನಾಟಕದ ವಿವಿಧ ಠಾಣೆಗಳಿಗೆ …

Read More »

ಮಂಗಳೂರು: ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 1.14 ಕೋ.ರೂ. ವಂಚನೆ

ಮಂಗಳೂರು: ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 1,14,10,000 ರೂ. ಪಡೆದು ವಂಚಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರತೀಶ್‌ ಬಿ.ಎನ್‌. ವಂಚನೆಗೆ ಒಳಗಾದವರು. ರಾಮ್‌ ಮೋಹನ್‌ ರೈ ಆರೋಪಿ. ರತೀಶ್‌ ಬಿ.ಎನ್‌ ರವರು 2020-21 ರಲ್ಲಿ ಮಹೇಶ್‌ ಫೌಂಡೇಶನ್‌ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಸಂಸ್ಥೆಯನ್ನು ಮಂಗಳೂರಿನ ಮಠದಕಣಿಯಲ್ಲಿರುವ ಗ್ಲೋಬಲ್‌ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ ಪ್ರ.ಲಿ ಕಟ್ಟಡದಲ್ಲಿ ತಿಂಗಳಿಗೆ 10 ಲಕ್ಷ ಬಾಡಿಗೆ ಮತ್ತು 40 ಲಕ್ಷ ಮುಂಗಡ ಠೇವಣಿ ಇಟ್ಟು ಪ್ರಾರಂಭಿಸಿದ್ದರು.   ಈ ಕಟ್ಟಡವನ್ನು ರಾಮ್‌ ಮೋಹನ್‌ ರೈ 2021 …

Read More »

ಉತ್ತರಾಖಂಡ : ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರು ; 17 ದಿನಗಳ ಕಾರ್ಯಾಚರಣೆ ಸುಖಾಂತ್ಯ

ಉತ್ತರಾಖಂಡ್ : ಕಳೆದ 17 ದಿನಗಳಿಂದ ಚಾರ್‌ ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು ಇಂದು ಸುರಕ್ಷಿತವಾಗಿ ಹೊರ ಬಂದಿದ್ದಾರೆ.ಚಾರ್‌ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ದುರಂತವೊಂದು ಸುಖಾಂತ್ಯ ಕಂಡಿದೆ. ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತೆಗೆಯಲು ಎಲ್ಲಾ ರೀತಿ ಅಂತರಾಷ್ಟ್ರೀಯ ಮಟ್ಟದ ಮೆಷಿನ್ ಗಳನ್ನು ಬಳಸಿದ್ದರು, ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲ್ಲಿಲ್ಲ, ಕೊನೆಗೆ ಸುರಂಗಕ್ಕೆ …

Read More »

You cannot copy content of this page.