ತಾಜಾ ಸುದ್ದಿ

ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗೆ ಎರಡು ದಿನಗಳ ಜಾಮೀನು ಮಂಜೂರು

ಸುಳ್ಯ: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗೆ ಎರಡು ದಿನಗಳ ಜಾಮೀನು ದೊರೆತಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರು ನನ್ನು 15ನೇ ಆರೋಪಿಯಾಗಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ. 2022 ಜುಲೈ 26ರಂದು ಬೆಳ್ಳಾರೆಯಲ್ಲಿ ತನ್ನ ಚಿಕನ್ …

Read More »

ಬೆಳ್ತಂಗಡಿ: ಶಾಲಾ ಬಾಲಕನಿಗೆ ಎಸ್‌ಡಿಎಂಸಿ ಅಧ್ಯಕ್ಷನಿಂದ ಹಲ್ಲೆ..!- ಪ್ರಕರಣ ದಾಖಲು

ಬೆಳ್ತಂಗಡಿ: ಎಸ್‌ಡಿಎಂಸಿ ಅಧ್ಯಕ್ಷರಿಂದ ಶಾಲಾ ವಿದ್ಯಾರ್ಥಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಬಳ್ಳಮಂಜ ಮಚ್ಚಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಾಲೆಯ ಎಂಟನೇ ತರಗತಿಯ ಮುಹಮ್ಮದ್ ತಫ್ಸಿರ್ ಎಂದು ಗುರುತಿಸಲಾಗಿದೆ. ಎಸ್‌ ಡಿಎಂಸಿ ಅಧ್ಯಕ್ಷ ಪರಮೇಶ್ ಹಲ್ಲೆ ನಡೆಸಿದ ಆರೋಪಿಯಾಗಿದ್ದು ವಿದ್ಯಾರ್ಥಿ ಮುಹಮ್ಮದ್ ತಫ್ಸಿರ್ ತನ್ನ ಸೈಕಲ್‌ ಅನ್ನು ಇನ್ನೊಬ್ಬ ವಿದ್ಯಾರ್ಥಿಗೆ ಮಾರಾಟ ಮಾಡಿದ್ದನು. ಇದೇ ವಿಚಾರವಾಗಿ ನ.28ರಂದು ಬಾಲಕನ …

Read More »

ಭ್ರೂಣ ಹತ್ಯೆ ಪ್ರಕರಣ : ಮತ್ತೋರ್ವ ಆರೋಪಿ ಅರೆಸ್ಟ್ , ಬಂಧಿತರ ಸಂಖ್ಯೆ 10 ಕ್ಕೆ ಏರಿಕೆ

ಬೆಂಗಳೂರು : ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ ಎಂಬಾಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಭ್ರೂಣ ಹತ್ಯೆ ಪ್ರಕರಣ ಬಯಲಾಗುತ್ತಿದ್ದಂತೆ ಈಕೆ ಕೆಲಸ ಬಿಟ್ಟಿದ್ದಳು, ತನಿಖೆ ನಡೆಸಿದ ಪೊಲೀಸರು ಮಂಜುಳಾರನ್ನು ಲಾಕ್ ಮಾಡಿದ್ದಾರೆ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೋಲೀಸರು ಭ್ರೂಣ ಹತ್ಯೆ ಪ್ರಕರಣವನ್ನು ಪತ್ತೆ ಮಾಡಿದ್ದು, ಇಬ್ಬರು ವೈದ್ಯರು …

Read More »

ಬೆಳ್ತಂಗಡಿ: ಖಾಸಗಿ ಕಾಲೇಜಿನ 11 ಮಂದಿ ವಿದ್ಯಾರ್ಥಿಗಳು ನಾಪತ್ತೆ..!

ಬೆಳ್ತಂಗಡಿ: ಖಾಸಗಿ ಕಾಲೇಜಿನ 11 ಮಂದಿ ವಿದ್ಯಾರ್ಥಿಗಳು ಏಕಾಏಕಿ ಕಿರುಕುಳದಿಂದ ನಾಪತ್ತೆಯಾಗಿದ್ದ ಗುರುವಾಯನಕೆರೆ ಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಪಿಯು ಕಾಲೇಜಿನ 11 ಮಂದಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ನ.30 ರಂದು ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದರು. ಮಾಹಿತಿ ಪ್ರಕಾರ 11 ಜನ ವಿದ್ಯಾರ್ಥಿಗಳನ್ನು ಮನೆಯವರು ಒತ್ತಾಯಪೂರ್ವಕವಾಗಿ ಕಾಲೇಜಿಗೆ ಸೇರ್ಪಡೆ ಮಾಡಿದ್ದು, ಅದಲ್ಲದೆ ಕಾಲೇಜಿನಲ್ಲಿ ಕೂಡ ಕಿರುಕುಳ ನೀಡುತ್ತಿದ್ದಕ್ಕೆ ಜೊತೆಯಾಗಿ ಗೋವಾಕ್ಕೆ ಹೋಗಿ ನಾಪತ್ತೆಯಾಗಲು ರೂಪುರೇಷೆ ಸಿದ್ದಪಡಿಸಿ ಹಾಸ್ಟೆಲ್ ನಿಂದ ನ. 30 ರಂದು ರಾತ್ರಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕಾಲೇಜಿನ …

Read More »

ಸುಳ್ಯ : ಮದ್ಯ ಸೇವಿಸಿ ಅಡ್ಡಾದಿಡ್ಡಿ ವಾಹನ ಚಲಾವಣೆ-ಎಪಿಎಂಸಿ ಕಾರ್ಯದರ್ಶಿ ಅಮಾನತು

ಸುಳ್ಯ : ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸರಕಾರಿ ವಾಹನ ಚಲಾಯಿಸಿದ ಪ್ರಕರಣದ ಆರೋಪಿ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್‌ ಕುಮಾರ್‌ನನ್ನು ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ. ನವೀನ್‌ ಕುಮಾರ್ ಇತ್ತೀಚೆಗೆ ರಾತ್ರಿ ಅರಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸರಕಾರಿ ಇಲಾಖೆಯ ನಾಮಫ‌ಲಕವಿರುವ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸಿದ್ದನೆಂದು ಆರೋಪಿಸಲಾಗಿದೆ. ಅಡ್ಡಾದಿಡ್ಡಿಯಾಗಿ ವಾಹನ ಚಲಾಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿ ವಿಚಾರಿಸಿದ್ದರು. ಈ ಸಂದರ್ಭ ತಾನು ಸುಳ್ಯ ಎಪಿಎಂಸಿ ಕಾರ್ಯದರ್ಶಿ, ನನ್ನದು ತಪ್ಪಾಯಿತು ಎಂದು ಕ್ಷಮೆ ಯಾಚಿಸುತ್ತಿರುವ ವೀಡಿಯೋ …

Read More »

ದ್ವಿತೀಯ PUC , ‘SSLC’ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು : ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2024 ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. 2024 ಮಾರ್ಚ್ 02ರಿಂದ ಮಾರ್ಚ್ 22ರವರೆಗೆ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಮಾರ್ಚ್ 25 ರಿಂದ ಏಪ್ರಿಲ್ 06 ರವರೆಗೆ ಎಸ್‌ಎಸ್‌ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಅಪ್ ಡೇಟ್ ಆಗಲಿದೆ. ಪರೀಕ್ಷೆಗಿನ್ನು ಮೂರು ತಿಂಗಳು ಬಾಕಿಯಿದ್ದು, ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲೆಂದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

Read More »

ಶಾಲೆಗಳಿಗೆ ಬಾಂಬ್‌ ಬೆದರಿಕೆ : ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ – ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

ಬೆಂಗಳೂರು : ಇಂದು ಬೆಳ್ಳಂಬೆಳಿಗ್ಗೆ ಸಿಲಿಕಾನ್‌ ಸಿಟಿಯಲ್ಲಿ 15 ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇ-ಮೇಲ್​ ವೊಂದು ಬಂದಿದೆ. ಇದರಿಂದ ಶಾಲಾ ಆಡಳಿತ ಮಂಡಳಿ,ಮಕ್ಕಳು ಪೋಷಕರು ಆತಂಕಗೊಂಡ ಘಟನೆಯೂ ನಡೆದಿದೆ. ಈ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಎಲ್ಲಿಂದ ಮೇಲ್ ಬಂದಿದೆ ಎಂದು ಪರಿಶೀಲಿಸಿದಾಗ ನಿಜಕ್ಕೂ ಶಾಕ್‌ ಆಗಿದೆ. ಹೌದು ಬಾಂಬ್‌ ಬೆದರಿಕೆ ಬರುತ್ತಿದ್ದಂತೆ ಮಕ್ಕಳನ್ನು ಮನೆಗೆ ಕಳುಹಿಸಿ ಶಾಲೆ ರಜೆ ಘೋಷಣೆ ಮಾಡಿ ಪೊಲೀಸರು ಶಾಲೆಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇ-ಮೇಲ್ ಬೆದರಿಕೆ ಮುಜಾಹಿದ್ದಿನ್ ಹೆಸರಲ್ಲಿ ಬಂದಿದೆ. ‘ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಿರಿ. …

Read More »

ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ- ನೆಲ್ಯಾಡಿ ಬಳಿ ಅಪಹರಣಕಾರರ ಬಂಧನ

ಹಾಸನ: ಹಾಸನದ ಬಿಟ್ಟಗೌಡನಹಳ್ಳಿ ಬಳಿ ನಡೆದಿದ್ದ ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಅಪಹರಣಕಾರರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಅಪಹರಣಕಾರರನ್ನು ಪತ್ತೆ ಹಚ್ಚಿದ ಹಾಸನ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಕಿಡ್ನಾಪ್ ಗೊಳಗಾದ ಶಾಲಾ ಶಿಕ್ಷಕಿಯನ್ನು ಹಾಸನಕ್ಕೆ ಕರೆದೊಯ್ದಿದ್ದಾರೆ. ಪ್ರಕರಣದ ಹಿನ್ನಲೆ: ನ.30 ರಂದು ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಸಿನಿಮೀಯ ರೀತಿಯಲ್ಲಿ ತಂಡವೊಂದು ಇನ್ನೋವಾ ಕಾರಿನಲಿ ಅಪಹರಿಸಿತ್ತು. ಆದರೆ ಇದಕ್ಕೂ ಮುಂಚೆ ಅಂದರೆ 15 ದಿನಗಳ ಹಿಂದೆ ಶಿಕ್ಷಕಿಯನ್ನು ಮದುವೆ ಮಾಡಿಕೊಳ್ಳುವ ಪ್ರಸ್ತಾಪದೊಂದಿಗೆ …

Read More »

ಮಂಗಳೂರು: ಫೆ. 11-15: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಮಂಗಳೂರು: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಈ ಬಾರಿಯ ವರ್ಷಾವಧಿ ಮಹಾಪೂಜೆಗೆ ಮುಂಚಿತವಾಗಿ ಫೆ. 11ರಿಂದ 15ರ ವರೆಗೆ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಪ್ರಧಾನ ಸಂಚಾಲಕ ಗೌತಮ್‌ ಸಾಲ್ಯಾನ್‌ ಕೋಡಿಕಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಫೆ. 11ರಂದು ಬ್ರಹ್ಮಕಲಶೋತ್ಸವ ವಿಧಿ ಆರಂಭವಾಗಲಿದ್ದು, 13ರಂದು ಪುನಃ ಪ್ರತಿಷ್ಠೆ, 15ರಂದು ಬ್ರಹ್ಮಕಲಶೋತ್ಸವ, 16ರಂದು ವರ್ಷಾವಧಿ ಮಹಾಪೂಜೆ ಪ್ರಸಾದ ಹಾರಿಸುವಿಕೆ, 23ರಂದು ಚಂಡಿಕಾಯಾಗ, 26, 27ರಂದು ವರ್ಷಾವಧಿ ಪೂಜೆ ಮತ್ತು ಮಾ. 2ರಂದು ಮಲರಾಯ ನೇಮ ನೆರವೇರಲಿದೆ ಎಂದರು. ಗರ್ಭಗುಡಿಯ ದುರಸ್ತಿ ಸಹಿತ ದೇವಸ್ಥಾನದ ಸುತ್ತು ಪೌಳಿಗಳನ್ನು ನವೀಕರಿಸಲು ನಿರ್ಧರಿಸಲಾಗಿದೆ. …

Read More »

ಬೆಳ್ತಂಗಡಿ : ಹೃದಯಾಘಾತದಿಂದ ವಿವಾಹಿತೆ ಮೃತ್ಯು

ವಿವಾಹಿತ ಮಹಿಳೆಯೊಬ್ಬರು ದಿಢೀರ್‌ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಎಂಬಲ್ಲಿ ನಡೆದಿದೆ. ಚಿಬಿದ್ರೆ  ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಹೃದಯಾಘಾತದಿಂದ ನಿಧನರಾದರು. ಮೃತರು ಗಂಡ, ಅತ್ತೆ, ತಂದೆ, ತಾಯಿ, ಅಕ್ಕ ಮತ್ತು ಇಬ್ಬರು ಸಹೋದರನ್ನು ಅಗಲಿದ್ದಾರೆ. ಚಂದ್ರಕಲಾರವರು  ಹಲವು ವರ್ಷಗಳಿಂದ ಹೃದಯಕ್ಕೆ ಸಂಬಂಧ ಪಟ್ಟ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಹಿನ್ನೆಲೆ ಆಕೆ ನೆರಿಯ ಗ್ರಾಮದ ಬಾಂದಡ್ಕದಲ್ಲಿ ತಾಯಿ ಮನೆಯಲ್ಲಿ ವಾಸವಾಗಿದ್ದರು. ನ.29ರಂದು ಸಂಜೆ ಸುಮಾರು 7 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಫತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ  ಮೃತಪಟ್ಟಿರುವುದಾಗಿ …

Read More »

You cannot copy content of this page.