ತಾಜಾ ಸುದ್ದಿ

ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ಬಹು ಸಂಖ್ಯಾತ ಹಿಂದೂಗಳಿಗೆ ನೋವಾಗುತ್ತದೆ : ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀ

ಉಡುಪಿ : ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಸ್ಲಿಂಮರಿಗೆ ಬೆಂಬಲಿಸಿ ಹೇಳಿಕೆಯೊಂದನ್ನು ನೀಡಿರುವ ಕುರಿತಂತೆ ವಿಚಾರವಾಗಿ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಇದರಿಂದ ಬಹು ಸಂಖ್ಯಾತ ಹಿಂದುಗಳಿಗೆ ನೋವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.   ಮುಖ್ಯಮಂತ್ರಿಗಳು ತಾವು ಒಂದು ಸಮುದಾಯದ ಪರವಾಗಿದ್ದೇವೆ ಎಂದು ಹೇಳುವುದು ಸರಿಯಲ್ಲ, ಇದರಿಂದ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ನೋವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ‌ ಅವರ ಮುಸ್ಲಿಮರನ್ನು ಓಲೈಸುವ ಹೇಳಿಕೆಗೆ ಪೇಜಾವರ …

Read More »

ವಿಟ್ಲ : ತಂಡದಿಂದ ವ್ಯಕ್ತಿಯ ಮೇಲೆ ಹಲ್ಲೆ – ದೂರು ದಾಖಲು

ವಿಟ್ಲ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ್ದು, ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಬೈದುಲ್ಲಾ (35) ಅವರು ಹಲ್ಲೆಗೊಳಗಾದ ವ್ಯಕ್ತಿ. ಉಬೈದುಲ್ಲ ಅವರು ಕೊಳ್ಳಾಡು ಗ್ರಾಮದ ಸಾಲೆತ್ತೂರು ಮೈದಾನದ ಬಳಿ ತನ್ನ ಬಂಧುಗಳೊಂದಿಗೆ ತೆರಳುತ್ತಿದ್ದಾಗ, ಅಲ್ಲಿದ್ದ ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ರವರು ಹಳೆ ದ್ವೇಷದಿಂದ ಉಬೈದುಲ್ಲ ಅವರ ಕಾಲರ್‌ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ಅವರಲ್ಲಿ ತನ್ನ ಮಗನಿಗೆ ಯಾಕೆ …

Read More »

820 ಕೋಟಿ ‘IMPS’ ವಹಿವಾಟು ಪ್ರಕರಣ : ಮಂಗಳೂರು ಸೇರಿ 13 ಸ್ಥಳಗಳಲ್ಲಿ ‘CBI’ ದಾಳಿ

ಮಂಗಳೂರು : ಕೇಂದ್ರ ತನಿಖಾ ದಳ (CBI) ಮಂಗಳವಾರ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸೇರಿದಂತೆ ಸುಮಾರು 13 ಸ್ಥಳಗಳಲ್ಲಿ ಶೋಧ ನಡೆಸಿದ್ದು, ಆರೋಪಿಗಳು ಮತ್ತು ಖಾಸಗಿ ವ್ಯಕ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರರ ಆವರಣದಲ್ಲಿ ಶೋಧ ನಡೆಸಿದೆ. ಕೋಲ್ಕತ್ತಾ ಮತ್ತು ಮಂಗಳೂರಿನಲ್ಲಿ ಶೋಧ ನಡೆಸಲಾಯಿತು.   ಶೋಧದ ಸಮಯದಲ್ಲಿ, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಕಂಪ್ಯೂಟರ್ ವ್ಯವಸ್ಥೆಗಳು, ಇಮೇಲ್ ಆರ್ಕೈವ್ಗಳು ಮತ್ತು ಡೆಬಿಟ್ / ಕ್ರೆಡಿಟ್ ಕಾರ್ಡ್ಗಳು ಸೇರಿದಂತೆ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 820 ಕೋಟಿ ರೂ.ಗಳ ಅನುಮಾನಾಸ್ಪದ ತಕ್ಷಣದ ಪಾವತಿ …

Read More »

ಕೋಲ್ಕತ್ತಾ ಯುವಕನೊಂದಿಗೆ ಪಾಕ್ ಯುವತಿಯ ಪ್ರೇಮ ಕಹಾನಿ: ಮದುವೆಗಾಗಿ ಭಾರತಕ್ಕೆ ಬಂದ ಮಹಿಳೆ

ಪಾಕಿಸ್ತಾನ: ಪಾಕಿಸ್ತಾನದ ಮತ್ತೋರ್ವ ಮಹಿಳೆ ಮಂಗಳವಾರ ಭಾರತದ ಗಡಿ ದಾಟಿ ಪಶ್ಚಿಮ ಬಂಗಾಳದ ವ್ಯಕ್ತಿಯೊಂದಿಗೆ ಮದುವೆಯಾಗಲು ಬಂದಿದ್ದಾರೆ. ಇದೀಗ ಮತ್ತೊಂದು ಗಡಿಯಾಚೆಗಿನ ಸಂಬಂಧದ ಕುರಿತು ಬಾರೀ ಚರ್ಚೆಯಾಗಿದೆ.ವರದಿಗಳ ಪ್ರಕಾರ, ಪಾಕಿಸ್ತಾನದ ಕರಾಚಿಯಿಂದ ಬಂದ ಜವಾರಿಯಾ ಖಾನಮ್ ಅಮೃತಸರದ ಅಟ್ಟಾರಿ-ವಾಘಾ ಗಡಿಯನ್ನು ದಾಟಲಿದ್ದಾರೆ, ಅಲ್ಲಿ ಆಕೆಯನ್ನು ತನ್ನ ಪ್ರೇಯಸಿ ಸಮೀರ್ ಖಾನ್ ಅವರ ಕುಟುಂಬ ಸದಸ್ಯರು ಬರಮಾಡಿಕೊಂಡಿದ್ದಾರೆ. ಪ್ರಸ್ತುತ, ಖಾನ್ ಅವರ ಕುಟುಂಬವು ಗುರುದಾಸ್‌ಪುರದ ಹಳ್ಳಿಯಲ್ಲಿ ನೆಲೆಸಿದೆ. ಗಡಿಯನ್ನು ದಾಟಿದ ನಂತರ ಎರಡೂ ಕಡೆಯವರು ಕೋಲ್ಕತ್ತಾಗೆ ವಿಮಾನದಲ್ಲಿ ತೆರಳಿ, ಅಲ್ಲಿ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ದಂಪತಿಗಳ ಮದುವೆ …

Read More »

ಸಿಎಂ ಸಿದ್ದರಾಮಯ್ಯ ಒಂದು ಸಮುದಾಯ ಜೊತೆ ನಿಲ್ಲುವುದು ಸರಿಯಲ್ಲ: ಪೇಜಾವರ ಶ್ರೀ

ಉಡುಪಿ: ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವಾಗಿದೆ. ಒಂದು ಸಮುದಾಯ ವರ್ಗದ ಜೊತೆ ನಿಲ್ಲುತ್ತೇವೆ ಎನ್ನುವುದು ಎಷ್ಟು ಸರಿ?. ನಿಮ್ಮ ಪರ ಇದ್ದೇವೆ, ನಿಮ್ಮ ಪಾಲು ಕೊಡುತ್ತೇವೆ ಎನ್ನುವಂತಹ ಮಾತು ಸರಿಯಲ್ಲ. ಇದರಿಂದ ಹಿಂದೂ ಸಮಾಜವನ್ನು ಯಾರು ಕೇಳುವವರಿಲ್ಲ ಎಂಬ ಭಾವನೆ ಬರುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಸಿಎಂ ಸಿದ್ದರಾಮಯ್ಯ‌ ಮುಸ್ಲಿಂ ಒಲೈಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾತ್ಯಾತೀತವಾಗಿರಬೇಕು. ಇದು ಸಂವಿಧಾನ ಬದ್ಧವಾಗಿ ಆಯ್ಕೆಯಾದ ಸರಕಾರದ ಜವಾಬ್ದಾರಿ. ಎಲ್ಲರನ್ನು ಸದ್ಭಾವದಿಂದ …

Read More »

ಯಜಮಾನಿಯರೇ ಗಮನಿಸಿ : ತಪ್ಪದೇ ಈ ಕೆಲಸ ಮಾಡಿ ಬೇಗ ಬರುತ್ತೆ ‘ಗೃಹಲಕ್ಷ್ಮಿ’ ಹಣ

ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಹಣ ಬಂದಿಲ್ಲ ಅವರು ತಪ್ಪದೇ ಈ ಕೆಲಸಗಳನ್ನು ಮಾಡಿ. 1) ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಗೃಹಲಕ್ಷ್ಮಿ ತಾಂತ್ರಿಕ ದೋಷ ನಿವಾರಣೆಗಾಗಿ ಮನೆಬಾಗಿಲಲ್ಲಿ ದಾಖಲೆ ಸಂಗ್ರಹಕ್ಕೆ ಇಲಾಖೆ ಸಿದ್ದವಾಗಿದೆ. ಗ್ರಾಮ-ಗ್ರಾಮಗಳಲ್ಲಿ ಅದಾಲತ್ ಗೆ ಇಲಾಖೆ …

Read More »

ಬೆಳ್ತಂಗಡಿ: ಮನೆ ಬಳಿ ಕಟ್ಟಿ ಹಾಕಿದ ಕರುಗಳನ್ನು ಕೊಂದು ತಿಂದ ಚಿರತೆ, ಸ್ಥಳೀಯರಲ್ಲಿ ಆತಂಕ

ಬೆಳ್ತಂಗಡಿ: ಮನೆ ಬಳಿ ಕಟ್ಟಿ ಹಾಕಿದ ಎರಡು ಕರುಗಳನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಳ್ತಂಗಡಿಯ ಮುಂಡೂರು ಬಳಿ ಭಾನುವಾರ ರಾತ್ರಿ ನಡೆದಿದೆ. ಇಲ್ಲಿನ ಮುಂಡೂರು ಗ್ರಾಮದ ಕೇರಿಯಾರ್ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಗುರುವಪ್ಪ ಸಾಲ್ಯಾನ್ ಅವರಿಗೆ ಸೇರಿದ ಕರುಗಳನ್ನು ಚಿರತೆ ಕೊಂದು ತಿಂದಿದೆ. ಮನೆ ಬಳಿಕ ಕಟ್ಟಿ ಹಾಕಿದ್ದ ಕರಿಗಳ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿದ ಚಿರತೆ ತೋಟಕ್ಕೆ ಎಳೆದೊಯ್ದು ತಿಂದು ಹಾಕಿದೆ. ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಈ ಭಾಗದಲ್ಲಿ ರಾತ್ರಿ ಬಂದ ಚಿರತೆ ಕರುವೊಂದರ ಮೇಲೆ …

Read More »

ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್‌ಗೆ ಜಾಮೀನು

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿ 5 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಜೈಲಿನಲ್ಲಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರಳಿಗೆ ಜಾಮೀನು ದೊರಕಿದೆ. ಟಿಕೆಟ್ ನೀಡುವುದಾಗಿ ವಂಚಿಸಿದ್ದಾರೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ಸೆಪ್ಟೆಂಬರ್ 8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಚೈತ್ರಾ, ಗಗನ್ ಕಡೂರು, ಹೊಸಪೇಟೆಯ ಸ್ವಾಮೀಜಿ …

Read More »

ಭಾರತ ವಿರೋಧಿ, ಖಲಿಸ್ತಾನಿ ಉಗ್ರ ʻಲಖ್ಖೀರ್ ಸಿಂಗ್ ರೋಡ್ʼ ಸಾವು

ನವದೆಹಲಿ: 1985 ರಲ್ಲಿ ಏರ್ ಇಂಡಿಯಾ ಜೆಟ್ ಕನಿಷ್ಕಾ ಮೇಲೆ ಬಾಂಬ್ ದಾಳಿ ನಡೆಸಿದ ಆರೋಪಿ ಖಲಿಸ್ತಾನ್ ಪರ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಡಿಸೆಂಬರ್ 1 ರಂದು ಹೃದಯಾಘಾತದಿಂದ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಲಖ್ಖೀರ್‌ ಸಿಂಗ್‌ ರೋಡ್‌ ಸಾವಿನ ಕುರಿತು ಸಹೋದರ ಮತ್ತು ಮಾಜಿ ಅಕಾಲ್ ತಖ್ತ್ ಜತೇದಾರ್ ಜಸ್ಬೀರ್ ಸಿಂಗ್ ರೋಡ್ ದೃಢಪಡಿಸಿದ್ದಾರೆ. ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಅವರ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಡಿಸೆಂಬರ್ 2 ರಂದು ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. ಸಿಖ್ ಸಂಪ್ರದಾಯಗಳು ಮತ್ತು …

Read More »

ಬ್ರಹ್ಮಾವರ: ಮಹಿಳೆ ನಾಪತ್ತೆ

ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ಅವರು ನ. 30ರಿಂದ ನಾಪತ್ತೆಯಾಗಿದ್ದಾರೆ. ಬಳಿಕ ಮನೆಯ ಒಳಗಡೆ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ ಹಾಳೆಯಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಇಂತಿ ನಿಮ್ಮ ಚಿನ್ನು ಎಂದು ಬರೆದಿಟ್ಟ ಚೀಟಿ ಸಿಕ್ಕಿದೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

You cannot copy content of this page.