ತಾಜಾ ಸುದ್ದಿ

ಉಡುಪಿ: ತಾಲೂಕು ಸಾಹಿತ್ಯ ಸಮ್ಮೇಳನದ ಬಿತ್ತಿಪತ್ರ ಸಚಿವರಿಂದ ಲೋಕಾರ್ಪಣೆ.

ತಾಲೂಕು ಸಮ್ಮೇಳನಗಳಿಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕಾರ್ಯಗತ ಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಖಾತೆ ಸಚಿವ ಶ್ರೀ ಶಿವರಾಜ್‌ ಸಂಗಪ್ಪ ತಂಗಡಗಿ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ಡಿಸೆಂಬರ್ 30, ಶನಿವಾರದಂದು ಮಣಿಪಾಲದ ಶಿವಪ್ಪಾಡಿ ಉಮಾಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮೃತಿ ಮಂಟಪದಲ್ಲಿ ನಡೆಯಲಿರುವ ಉಡುಪಿ ತಾಲೂಕು 14ನೆ ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿ ಚಿತ್ರವನ್ನು ಬೆಳಗಾವಿಯ …

Read More »

ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪದ ವೇಳೆ ಮೇಲಿನಿಂದ ಜಿಗಿದ ಇಬ್ಬರು ವ್ಯಕ್ತಿಗಳು

ನವದೆಹಲಿ: ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್‌ನಲ್ಲಿ ಭದ್ರತಾ ಲೋಪ ಕಂಡ ಬಂದಿದೆ. ಲೋಕಸಭಾ ವೀಕ್ಷಕರ ಗ್ಯಾಲರಿಯಿಂದ ಒಬ್ಬ ವ್ಯಕ್ತಿ ಮೇಲಿನಿಂದ ಜಿಗಿದಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಇಬ್ಬರು ಅಪರಿಚಿತರು ಸದನದ ಒಳಗೆ ಪ್ರವೇಶ ಮಾಡಿದ್ದಾರೆ.ಇದನ್ನು ಕಂಡ ಸದನದೊಳಗಿದ್ದ ಸಂಸದರು ಗಾಬರಿಯಿಂದ ಹೊರ ಓಡಿದ್ದಾರೆ. ಅಲ್ಲದೇ ಅಪರಿಚತರು ಕೈಯಲ್ಲಿ ಅಶ್ರುವಾಯು ಹಿಡಿದುಕೊಂಡು ಬಂದಿದ್ದು ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದ ವೇಳೆ ಆತ ಸದನದ ಸುತ್ತಾ ಓಡಾಡಿ ಕೈಯಲ್ಲಿದ್ದ ಆಶ್ರುವಾಯು ಸಿಡಿಸಿ ಸದನದ ಒಳಗೆ ಫ್ಲೋರೋಸೆಂಟ್‌ ಬಣ್ಣದ ಅನಿಲವನ್ನು ಸಿಂಪಡಿಸಿದ್ದಾರೆ. ಸದ್ಯ ಕಲಾಪ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ವಶಕ್ಕೆ ಪಡೆದವರಲ್ಲಿ ಓರ್ವ …

Read More »

ಉಡುಪಿ : ಎಲ್ಲಾ ವೈದ್ಯಕೀಯ ಹಾಗೂ ಫಾರ್ಮಸಿ ಅಂಗಡಿಗಳಲ್ಲಿ ಸಿ.ಸಿ ಟಿವಿ ಕಡ್ಡಾಯ- ಜಿಲ್ಲಾಧಿಕಾರಿ

ಉಡುಪಿ : ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ಕಲಂ 133 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯಲ್ಲಿ X ಮತ್ತು H ಔಷಧಿಗಳನ್ನು ಮಾರಾಟ ಮಾಡುವ ಎಲ್ಲಾ ವೈದ್ಯಕೀಯ ಹಾಗೂ ಫಾರ್ಮಸಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶಿಸಿದ್ದಾರೆ. ಸಿ.ಸಿ.ಟಿವಿ ಕ್ಯಾಮೆರಾವನ್ನು ಅಳವಡಿಸಲು ಎಲ್ಲಾ ವೈದ್ಯಕೀಯ/ಫಾರ್ಮಸಿ ಅಂಗಡಿ ಮಾಲೀಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಜಿಲ್ಲಾ ಔಷಧ ನಿಯಂತ್ರಕರು ಸದ್ರಿ ಅಂಗಡಿಗಳಲ್ಲಿ ಸಿ.ಸಿ ಟಿವಿ ಅಳವಡಿಸಿರುವ ಕುರಿತು ತಪಾಸಣೆ ನಡೆಸಬೇಕು. ಈ ಆದೇಶವನ್ನು …

Read More »

ಮಂಗಳೂರು: ಗೂಗಲ್ ಮ್ಯಾಪ್ ನಲ್ಲಿ ಮಂಗಳಾದೇವಿ ದೇವಾಲಯದ ಹೆಸರು ತಿರುಚಿದ ಕಿಡಿಗೇಡಿಗಳು

ಮಂಗಳೂರು: ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಕರಾವಳಿಯ ಪ್ರಸ್ಥಿದ್ದ ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಾಲಯದ ಹೆಸರನ್ನು, ಗೂಗಲ್ ಮ್ಯಾಪ್ ನಲ್ಲಿ ಯಾರೋ ತಿರುಚಿರುವ ವಿಚಾರ ಬೆಳಕಿಗೆ ಬಂದಿದೆ. ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎಂಬ ಇತಿಹಾಸವಿದೆ. ಆದರೆ ದೇವಸ್ಥಾನದ ಹೆಸರನ್ನು “ಬೋಳಾರ್ ಶೇಕ್ ಉಮರ್ ಸಾಹೇಬ್ ಕಾಂಪೌಂಡು” ಎಂದು ತಿದ್ದಿರುವುದು ದೇವಾಲಯದ ಆಡಳಿತ ಮಂಡಳಿ ಯ ಗಮನಕ್ಕೆ ಬಂದಿದ್ದು ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. …

Read More »

ಉಡುಪಿ: ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

ಕಾಪು: ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ (68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸರಳ ಸಜ್ಜನ ವ್ಯಕ್ತಿತ್ವದ ಲೀಲಾಧರ ಶೆಟ್ಟಿ ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.‌ ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು. ಲೀಲಾಧರ ಶೆಟ್ಟಿಯವರು ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಅತ್ಯಂತ ಸಮಾಜಮುಖಿ ಕಾರ್ಯ ನಿರ್ವಹಿಸಿದ ಸಮಾಜಸೇವಕರೂ ಆಗಿದ್ದರು. ವಿಶೇಷವಾಗಿ ರಂಗಕರ್ಮಿಯು ಆಗಿ ಕಳೆದ ಹಲವಾರು ವರ್ಷಗಳಿಂದ “ರಂಗಿತರಂಗ” ನಾಟಕ ತಂಡವನ್ನು ಮುನ್ನಡೆಸಿ …

Read More »

ಅಯೋಧ್ಯೆ ರಾಮ ಮಂದಿರ ಅರ್ಚಕರ ನಕಲಿ ಅಶ್ಲೀಲ ವಿಡಿಯೋ ಪ್ರಚಾರ : ಕಾಂಗ್ರೆಸ್ ನಾಯಕನ ಬಂಧನ

ಅಹ್ಮದಾಬಾದ್ : ಅಯೋಧ್ಯೆ ರಾಮ ಮಂದಿರ ಅರ್ಚಕರಾದ ಮೋಹಿತ್ ಪಾಂಡೆ ಅವ್ರ ನಕಲಿ ಅಶ್ಲೀಲ ವಿಡಿಯೋ ಪ್ರಸಾರ ಮಾಡಿದ್ದ ಗುಜರಾತ್ ಕಾಂಗ್ರೆಸ್ ನಾಯಕನನ್ನ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಅಶ್ಲೀಲ ವೀಡಿಯೋ ಹಂಚಿಕೊಳ್ಳಲಾಗಿದ್ದು, ಇದ್ರಲ್ಲಿರುವ ವ್ಯಕ್ತಿ ಮೋಹಿತ್ ಪಾಂಡೆ ಎಂದು ಹೇಳಲಾಗಿದೆ. ಮೋಹಿತ್ ಪಾಂಡೆ ಅವರನ್ನ ಇತ್ತೀಚೆಗೆ ಅಯೋಧ್ಯೆಯ ಶ್ರೀ ರಾಮ್ ದೇವಾಲಯದ ಮುಖ್ಯ ಅರ್ಚಕರಾಗಿ ಆಯ್ಕೆ ಮಾಡಲಾಯಿತು. ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಅವರ ಹೆಸರಿನಲ್ಲಿ ನಕಲಿ ಫೋಟೋಗಳನ್ನ ಹಂಚಿಕೊಳ್ಳುತ್ತಿವೆ. ಕಾಂಗ್ರೆಸ್ ಮುಖಂಡ ಹಿತೇಂದ್ರ ಪಿಥಾಡಿಯಾ ಅವರು ಅರ್ಚಕ ಮೋಹಿತ್ ಪಾಂಡೆ ಅವರ …

Read More »

ಕಾಂತಾರ ಅಧ್ಯಾಯ 1 ರಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ..!

ಬೆಂಗಳೂರು: ಇಡೀ ವಿಶ್ವವನ್ನೇ ಕನ್ನಡ ಸಿನೆಮಾ ಕಡೆ ನೋಡುವಂತೆ ಮಾಡಿದ್ದ ಕಾಂತಾರ ಸಿನೆಮಾದ ಅಧ್ಯಾಯ 1 ಇದೀಗ ಚಿತ್ರೀಕರಣ ಪ್ರಾರಂಭವಾಗಲಿದೆ., ಈಗಾಗಲೇ ಸಿನೆಮಾದ ಮುಹೂರ್ತ ಮುಗಿದಿದ್ದು, ಫಸ್ಟ್ ಲುಕ್ ಕೂಡ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಕಾಂತಾರ ಸಿನೆಮಾದ ಮೊದಲ ಭಾಗವನ್ನು ತೆರೆ ಮೆಲೆ ತರಲು ಹೊರಟಿರುವ ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಕನ್ನಡದ ಕಲಾವಿದರ ಆಯ್ಕೆಗಾಗಿ ಆಡಿಷನ್ ಮಾಡಲು ಹೊರಟಿದ್ದಾರೆ. ಹಿರೋ ಆಗಿ ರಿಷಬ್ ಶೆಟ್ಟಿ ಇರಲಿದ್ದು, ಮತ್ತೆ ಉಳಿದವರ ಆಯ್ಕೆಗೆ ಆಡಿಷನ್ ನಡೆಯುತ್ತಿದೆ.ಅದರಂತೆ ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ …

Read More »

ಉಡುಪಿ: ಮನೆಯ ಹೊರಗಡೆ ನಿಲ್ಲಿಸಿದ್ದ ಕಾರು ಕಳವು

ಉಡುಪಿ: ಮನೆಯ ಹೊರಗಡೆ ನಿಲ್ಲಿಸಿದ್ದ ಕಾರನ್ನು ಕಳವು ಮಾಡಿರುವ ಘಟನೆ ಅಂಬಲಪಾಡಿ ಗ್ರಾಮದ ಕಾಳಿಕಾಂಬ ನಗರ ಎಂಬಲ್ಲಿ ನಡೆದಿದೆ. ಶಾರದಾ ಎಂಬವರು ಮನೆಗೆ ಬೀಗ ಹಾಕಿ ಮನೆಯವರೊಂದಿಗೆ ಬೆಂಗಳೂರಿಗೆ ಹೋಗಿದ್ದು, ವಿಚಾರ ತಿಳಿದು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಮಧ್ಯೆ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾರಿನ ಕೀಯನ್ನು ತೆಗೆದು ಮನೆಯ ಹೊರಗಿದ್ದ ಕೆಎ20 ಎಂಇ 0780 ನಂಬರಿನ ಮಾರುತಿ ಸ್ವಿಫ್ಟ್ ಕಾರನ್ನು ಹಾಗೂ ಆರ್‌ಸಿ, ಡಿಎಲ್, ಇನ್ಸುರೆನ್ಸ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಕಳವಾದ …

Read More »

ಮಂಗಳೂರು: ನೇಣು ಬಿಗಿದು ನರ್ಸಿಂಗ್ ವಿದ್ಯಾರ್ಥಿಆತ್ಮಹತ್ಯೆ..!

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿಯೊರ್ವ ಬೆಡ್‌ ಶೀಟ್ ಬಳಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 8 ರಂದು ನಗರದ ಖಾಸಗಿ ಕಾಲೇಜೊಂದರ ಹಾಸ್ಟೆಲ್ ನಲ್ಲಿ ನಡೆದಿದೆ. ಕೇರಳದ ಅಲೆಪಿ ನಿವಾಸಿ ಸಚಿನ್ ಸಾಜು (19 ) ಆತ್ಮಹತ್ಯೆಗೆ ಶರಣಾದ ನರ್ಸಿಂಗ್ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.ಮೃತ ವಿದ್ಯಾರ್ಥಿ ನ. 30ರಂದು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ಕೋರ್ಸ್ ಗೆ ಪ್ರವೇಶಾತಿಯನ್ನು ಪಡೆದಿದ್ದರು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದು, ತರಗತಿಗಳಿಗೆ ಹಾಜರಾಗದೇ ಹಾಸ್ಟೆಲ್ ನಲ್ಲಿ ಇರುತ್ತಿದ್ದರೆನ್ನಲಾಗಿದೆ.ಡಿ. 8 ರಂದು ತನ್ನ ಕೋಣೆಯಲ್ಲಿ ಯಾರೂ …

Read More »

ಮಂಗಳೂರು: ಟಾರ್ಗೆಟ್‌ ಇಲಿಯಾಸ್‌ ಹತ್ಯೆ- 5 ಆರೋಪಿಗಳು ನಿರ್ದೋಷಿ

ಮಂಗಳೂರು: ಕುಖ್ಯಾತ ಟಾರ್ಗೆಟ್‌ ಗ್ಯಾಂಗ್‌ನ ನಾಯಕ ಟಾರ್ಗೆಟ್‌ ಇಲಿಯಾಸ್‌ ಜ.18 2018 ರಂದು ಮನೆಯಲ್ಲಿ ಹತ್ಯೆಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು 5 ಆರೋಪಿಗಳನ್ನು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ. ಈ ಕೊಲೆಯಾಗುವ ವೇಳೆ ಮೊಹಮ್ಮದ್‌ ಇಲಿಯಾಸ್‌  ಮಂಗಳೂರು ಯೂತ್‌ ಕಾಂಗ್ರೇಸ್‌ನ ವಿಧಾನಸಭಾಕ್ಷೇತ್ರದ  ಉಪಾಧ್ಯಕ್ಷರಾಗಿದ್ದರು ಹಾಗೂ ಯು.ಟಿ ಖಾದರ್‌ ಅವರ ಅಪ್ತರಾಗಿದ್ದರು. ಇಲ್ಯಾಸ್‌ ಮನೆಗೆ ನುಗ್ಗಿ ದಾವೂದ್‌ ಮೊಹಮ್ಮದ್‌ ಮತ್ತು ಶಮೀರ್‌ ಕೊಲೆ ಮಾಡಿರುವುದಾಗಿ ಇದನ್ನು ಇಲ್ಯಾಸ್‌ನ ಅತ್ತೆ …

Read More »

You cannot copy content of this page.