ತಾಜಾ ಸುದ್ದಿ

ಡಿಪ್ಲೊಮಾ, ಪದವೀಧರರೇ ಗಮನಿಸಿ : ‘ಯುವನಿಧಿ’ಗೆ ನೋಂದಣಿ ಮಾಡಲು ಜಸ್ಟ್ ಹೀಗೆ ಮಾಡಿ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಐದನೇ ಗ್ಯಾರಂಟಿ ‘ಯುವನಿಧಿ’ಯೋಜನೆ ನೋಂದಣಿ ಇಂದಿನಿಂದ ಆರಂಭವಾಗಿದ್ದು, ಡಿಪ್ಲೊಮಾ ಪಾಸ್ ಆದವರು , ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಪದವೀಧರರಾಗಿ ಉತ್ತೀರ್ಣಗೊಂಡ ನಂತರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವನ್ನು ಕಂಡುಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಅಗತ್ಯ ತಯಾರಿಗೆ ಯುವನಿಧಿ ಯೋಜನೆಯು ವರವಾಗಿದೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ದಿನಗಳ ಖರ್ಚು ಸರಿದೂಗಿಸಲು, ಅರ್ಜಿ ಸಲ್ಲಿಕೆಗೆಯ ಶುಲ್ಕ ಭರಿಸಲು, ಉದ್ಯೋಗ ಮಾರ್ಗದರ್ಶಿಗಳನ್ನು ಖರೀದಿಸಲು ಯುವನಿಧಿಯು ಸಹಾಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಯುವನಿಧಿಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಕ್ಯಾನ್ ಮಾಡುವ ಮೂಲಕ …

Read More »

ಯುವನಿಧಿ’ ನೋಂದಣಿಗೆ ಚಾಲನೆ : ಇಂದಿನಿಂದ ಉಚಿತವಾಗಿ ಅರ್ಜಿ ಸಲ್ಲಿಸಿ

ಬೆಂಗಳೂರು : ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘2022-23ನೇ ಸಾಲಿನಲ್ಲಿ ಪದವಿ ಪಡೆದು ಆರು ತಿಂಗಳಾದರೂ ಉದ್ಯೋಗ ಸಿಗದ ನಿರುದ್ಯೋಗಿ ಯುವಜನರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸಿ, ಇಷ್ಟದ ಉದ್ಯೋಗ ಪಡೆಯಲು ನೆರವಾಗುವ ಉದ್ದೇಶದೊಂದಿಗೆ ರೂಪಿಸಿರುವ ಯೋಜನೆಯೇ ಯುವನಿಧಿ’.   ‘ಈ ಯೋಜನೆಯಡಿ 2023ರಲ್ಲಿ ತೇರ್ಗಡೆಯಾದ ಎಲ್ಲಾ ಪದವೀಧರರು ಹಾಗೂ ಡಿಪ್ಲೋಮಾ ಉತ್ತೀರ್ಣರಾದವರು ಕನಿಷ್ಠ 6 ತಿಂಗಳವರೆಗಿನ ಉದ್ಯೋಗ ದೊರೆಯದೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಕರ್ನಾಟಕದಲ್ಲಿ ವಾಸವಿರುವವರು, ಸ್ವಯಂ …

Read More »

ಉಪ್ಪಿನಂಗಡಿ : ಸರಣಿ ಅಪಘಾತ – ನಾಲ್ಕು ಕಾರುಗಳು ಜಖಂ

ಉಪ್ಪಿನಂಗಡಿ : ಕಾರುಗಳ ನಡುವೆ ಸರಣಿ ಅಪಘಾತವಾದ ಘಟನೆ ಉಪ್ಪಿನಂಗಡಿ ಬಳಿಯ ನೇತ್ರಾವತಿ ಸೇತುವೆಯಲ್ಲಿ ನಡೆದಿದ್ದು ಉಪ್ಪಿನಂಗಡಿಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರೊಂದು ಹಠಾತ್ ಬ್ರೇಕ್‌ ಹಾಕಿದ್ದು, ಈ ವೇಳೆ ಒಂದರ ಹಿಂದೆ ಒಂದರಂತೆ ಒಟ್ಟು ನಾಲ್ಕು ಕಾರುಗಳು ಡಿಕ್ಕಿ ಹೊಡೆದಿವೆ. ಅಪಘಾತದಿಂದ ಕಾರುಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸಕಾಲದಲ್ಲಿ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Read More »

ಗೆಳತಿಯನ್ನು ಮದುವೆಯಾಗಲು ಲಿಂಗ ಬದಲಾವಣೆ: ಹುಟ್ಟುಹಬ್ಬದಂದೇ ಆಕೆಗೆ ಬೆಂಕಿ ಹಚ್ಚಿ ಜೀವಂತವಾಗಿ ಕೊಂದ ಯುವಕ

ತನ್ನ ಬಾಲ್ಯದ ಸಹಪಾಠಿಯನ್ನು ಬರ್ಬರವಾಗಿ ಹತ್ಯೆಗೈದ ಯುವಕನೊಬ್ಬನನ್ನು ಚೆನ್ನೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಯುವಕನು ತನ್ನ ಬಾಲ್ಯದ ಸಹಪಾಠಿ ಆರ್ ನಂದಿನಿಯನ್ನು ಆಕೆಯ ಜನ್ಮದಿನದಂದು ಸುಟ್ಟು ಹಾಕಿದ್ದಾನೆ. ಆರೋಪಿಯನ್ನು ವೆಟ್ರಿಮಾರನ್ ಎಂದು ಗುರುತಿಸಲಾಗಿದ್ದು, ಆತ ಟ್ರಾನ್ಸ್ ಮ್ಯಾನ್ ಎಂದು ಪೊಲೀಸರು ತಿಳಿಸಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತನ್ನ ಬಾಲ್ಯದ ಸಹಪಾಠಿ ಆರ್ ನಂದಿನಿಯನ್ನು ಆತ ಭೀಕರ ರೀತಿಯಲ್ಲಿ ಸಜೀವ ದಹನ ಮಾಡಿದ್ದಾನೆ. ಈ ಘಟನೆ ಶನಿವಾರ ಚೆನ್ನೈನ ದಕ್ಷಿಣ ಹೊರವಲಯದಲ್ಲಿರುವ ತಲಂಬೂರ್‌ನಲ್ಲಿ ನಡೆದಿದೆ. ಲಿಂಗ ಬದಲಾವಣೆಗೆ ಮುನ್ನ ಪಾಂಡಿ ಮುರುಗೇಶ್ವರಿಯಾಗಿದ್ದ ಎಂಬಿಎ ಪದವೀಧರ …

Read More »

ಮಂಗಳೂರು: 4ನೇ ಮಹಡಿಯ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ..!

ಮಂಗಳೂರು: ಕೋಣೆಯೊಳಗೆ ಬಾಕಿಯಾದ ಮಗುವನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ರಕ್ಷಣೆ ಮಾಡಿದ ಘಟನೆ ಮಂಗಳೂರಿನ ಕೊಡಿಯಾಲ್ ಗುತ್ತಿನ ಫ್ಲ್ಯಾಟ್‌ ವೊಂದರಲ್ಲಿ ಸೋಮವಾರ ನಡೆದಿದೆ. ಸುಮಾರು 3 ವರ್ಷದ ಮಗು ಆಟವಾಡುತ್ತಾ ನಾಲ್ಕನೇ ಮಹಡಿಯ ಫ್ಲ್ಯಾಟ್‌ ನ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿಕೊಂಡಿದೆ. ಗಾಬರಿಗೊಂಡ ಪೋಷಕರು ಎಷ್ಟೇ ಪ್ರಯತ್ನಿಸಿದರು ಬಾಗಿಲು ತೆಗೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಪಾಂಡೇಶ್ವರ ಠಾಣೆಯ ಅಗ್ನಿಶಾಮಕ ಅಧಿಕಾರಿ ರಾಜಾ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಅವರು ಹಗ್ಗದ ಮೂಲಕ 4ನೇ ಮಹಡಿಯ ಮೇಲಿನಿಂದ ಮಗುವಿದ್ದ ಕೋಣೆಯ ಒಳಗೆ ತೆರಳಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

Read More »

ಉಳ್ಳಾಲ: ಸೋಮೇಶ್ವರ ಸುತ್ತಮುತ್ತ ಓಡಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ತಡೆದು ಒಪ್ಪಿಸಿದ ಸ್ಥಳೀಯ..!

ಮಂಗಳೂರಿನ ಸೋಮೇಶ್ವರ ದೇವಸ್ಥಾನ ಬಳಿ ನಿಂತಿದ್ದ ಕೇರಳ ಮೂಲದ ಅನ್ಯಕೋಮಿನ ವಿದ್ಯಾರ್ಥಿಗಳ ತಡೆದು ಸ್ಥಳೀಯ ಯುವಕರು ವಿಚಾರಣೆ ನಡೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಉಳ್ಳಾಲ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ನಾಲ್ವರು ರಜೆ ಹಿನ್ನಲೆ ಉಳ್ಳಾಲ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಸುತ್ತಮುತ್ತ ಓಡಾಡುತ್ತಿದ್ದರು. ಈ ತಂಡದಲ್ಲಿ ಇಬ್ಬರು ಹಿಂದೂ ಯುವತಿಯರು, ಓರ್ವ ಹಿಂದೂ ಯುವಕ ಮತ್ತು ಓರ್ವ ಮುಸ್ಲಿಂ ಯುವಕ ಇದ್ದಿದ್ದು, ದೇವಸ್ಥಾನಕ್ಕೆ ಆಗಮಿಸಿ ಸ್ಥಳೀಯವಾಗಿ ಸುತ್ತಾಡುತ್ತಿದ್ದ ಅವರನ್ನು ಸ್ಥಳೀಯರು ತಡೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮುಸ್ಲಿಂ ಯುವಕನ ಜೊತೆ ಇದ್ದ …

Read More »

ಯಜಮಾನಿ’ಯರೇ ಗಮನಿಸಿ: ‘ಗೃಹಲಕ್ಷ್ಮಿ ಸಮಸ್ಯೆ ನಿವಾರಣೆ’ಗೆ ಡಿ.27ರಿಂದ ಮೂರುದಿನ ‘ವಿಶೇಷ ಶಿಬಿರ’

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 3000 ಧನಸಹಾಯ ನೀಡಲಾಗುತ್ತಿದೆ. ಆದ್ರೇ ಅನೇಕ ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಈ ಹಣ ತಲುಪಿಲ್ಲ. ಹೀಗಾಗಿ ಡಿ.27ರ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆ ನಿವಾರಣೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.   ಈ ಕುರಿತಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಅನೇಕ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕೆಲವರಿಗೆ …

Read More »

ಮುಂಬೈನಿಂದ ಅಯೋಧ್ಯೆ ರಾಮಮಂದಿರಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಖ್ಯಾತ ಯೂಟ್ಯೂಬರ್ ಶಬನಮ್ ಶೇಖ್

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆ ಖ್ಯಾತ ಯೂಟ್ಯೂಬರ್ ಶಬನಮ್ ಶೇಖ್ ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಭುಜದ ಮೇಲೆ ಕೇಸರಿ ಧ್ವಜ, ಬೆನ್ನಿನ ಮೇಲೆ ರಾಮ ಮಂದಿರದ ಚಿತ್ರ ಮತ್ತು ಜೈ ಶ್ರೀರಾಮ್ ಘೋಷಣೆಯುಳ್ಳ ಬ್ಯಾನರ್‌ನೊಂದಿಗೆ ಮುಂಬೈನಿಂದ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿರುವ ಶಬನಮ್​​ಗೆ ಇಬ್ಬರು ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಇದುವರೆಗೂ ಸುಮಾರು 100 ಕಿಲೋಮೀಟರ್​ನಷ್ಟು ಪ್ರಯಾಣ ಮುಗಿಸಿರುವ ಶಬನಮ್ ದಾರಿಯುದ್ದಕ್ಕೂ ರಾಮಭಕ್ತರನ್ನು ಭೇಟಿ ಮಾಡಿ ಅವರೊಂದಿಗೆ ಕುಣಿದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮುಂದುವರಿಯುತ್ತಿದ್ದಾರೆ. ತನ್ನನ್ನು ತಾನು ಸನಾತನಿ ಮುಸ್ಲಿಂ ಎಂದು ಕರೆದುಕೊಳ್ಳುವ …

Read More »

ಮಂಗಳೂರು: ಅಂಗಡಿಯಲ್ಲಿ ಅಗ್ನಿ ಅವಘಡ- ಲಕ್ಷಾಂತರ ರೂ ನಷ್ಟ

ಮಂಗಳೂರು: ದಿನಸಿ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಮಣ್ಣಗುಡ್ಡದಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಮಣ್ಣಗುಡ್ಡದ ಮಠದ ಕಣಿ ಮಿಶನ್ ಗೋರಿ ರಸ್ತೆಯಲ್ಲಿರುವ ಸಂದೀಪ್ ಎಂಬವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಮುಂಜಾನೆ 5.30ರ ಸುಮಾರಿಗೆ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಸುಮಾರು ಎರಡು ಲಕ್ಷ ರೂ ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜಿಸಲಾಗಿದೆ. ಈ ಅಂಗಡಿ ಬಳಿ ಇತರ ಅಂಗಡಿಗಳಿವೆ. ಆದರೆ …

Read More »

ಮಂಗಳೂರು : ಹಣ ದ್ವಿಗುಣವಾಗುವ ಆ್ಯಪ್‌ನಲ್ಲಿ ಹಣ ಹೂಡಿಕೆ – 21 ಲಕ್ಷ ಕಳೆದುಕೊಂಡ ಮಹಿಳೆ ಆತ್ಮಹತ್ಯೆ

ಮಂಗಳೂರು : ಹಣ ದ್ವಿಗುಣವಾಗುತ್ತದೆ ಎಂದು ಆ್ಯಪ್‌ವೊಂದರಲ್ಲಿ ಹೂಡಿಕೆ ಮಾಡಿರುವ 21 ಲಕ್ಷ ರೂ. ಹಣ ಕಳೆದುಕೊಂಡಿರುವ ಮಹಿಳೆಯೊಬ್ಬರು ಬಂಟ್ವಾಳದ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಕ್ಕಿಪಾಡಿ ಗ್ರಾಮದ ಏರೋಡಿ ನಿವಾಸಿ ವೀಟಾ ಮರಿನಾ ಡಿಸೋಜ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಹಣ ದ್ವಿಗುಣ ಮಾಡುವ ಆ್ಯಪ್‌ನಲ್ಲಿ ಅವರು 21 ಲಕ್ಷ ರೂ‌. ಹೂಡಿಕೆ ಮಾಡಿದ್ದರು. ಇದರಲ್ಲಿ ಸಂಪೂರ್ಣ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆರ್ಥಿಕ ಸಂಕಷ್ಟದೊಂದಿಗೆ ಮಕ್ಕಳಿಲ್ಲದ ಕೊರಗಿನೊಂದಿಗೆ ಈ …

Read More »

You cannot copy content of this page.