ತಾಜಾ ಸುದ್ದಿ

‘ಮಗುವಿನ ಹತ್ಯೆ’: ಸಿಇಒ ಆಗಿದ್ದ ತಾಯಿಯಿಂದಲೇ ಕೃತ್ಯ – ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ ಕಹಾನಿ

ಗೋವಾ:  ಹೈ ಪ್ರೊಫೈಲ್ ಹಿನ್ನಲೆ ಹೊಂದಿರುವ ಸಿಇಒ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಚೀಲದಲ್ಲಿ ಹಾಕಿ ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದ ಭೀಕರ ಘಟನೆ ನಡೆದಿದೆ. ಇಡೀ ಪ್ರಕರಣ ಸಿನಿಮೀಯದಂತಿದೆ. ಬೆಂಗಳೂರು ಮೂಲದ ಹೈ ಪ್ರೊಫೈಲ್ಸ್ ಉದ್ಯಮಿ ಮತ್ತು ಮೈಂಡ್‌ಫುಲ್ ಅಲ್ ಲ್ಯಾಬ್‌ ಸ್ಟಾಟ್ಸಪ್ ಸಿಇಒ ಸುಚನಾ ಸೇತ್(39) ಅವರನ್ನು ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಲಾಗಿದ್ದು, ಗೋವಾ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಲಿಂಕ್ಡಿನ್ ಪ್ರೋಫೈಲ್ ಮೂಲಕ ಆಕೆ “ಎಐ ಎಥಿಕ್ಸ್ ಎಕ್ಸ್ಪರ್ಟ್ ಮತ್ತು on the list of 100 …

Read More »

ಮಂಗಳೂರು: ಬೈಕಂಪಾಡಿಯ ಪರ್ಮ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ..!

ಮಂಗಳೂರು: ನಗರದ ಬೈಕಂಪಾಡಿ ಬಳಿಯ ಪ್ರೈಮಸಿ ಇಂಡಸ್ಟ್ರೀಸ್ ಲಿಮಿಟೆಡ್ ನ ಪರ್ಮ್ಯೂಮ್ ಫ್ಯಾಕ್ಟರಿಯಲ್ಲಿ ‌ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಸುಮರು 1 ಘಂಟೆ ಸುಮಾರಿಗೆ ಪ್ರೈಮಸಿ ಇಂಡಸ್ಟ್ರೀಸ್ ಲಿಮಿಟೆಡ್ ನ ಪರ್ಮ್ಯೂಮ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿದ್ದು ಇದನ್ನು ಗಮನಿಸಿದ ಸಾರ್ವನಿಕರು ಹಾಗು ಸಂಸ್ಥೆಯ ಸೆಕ್ಯೂರಿಟಿ ಅಗ್ನಿಶಾಮಕ ದಳ ಕರೆ ಮಾಡಿದ್ದಾರೆ. ಸ್ಥಳಕ್ಕೆ ಪಾಂಡೇಶ್ವರ, ಕದ್ರಿ, ಎಮ್ ಆರ್ ಪಿ ಎಲ್ ನ ಅಗ್ನಿಶಾಮಕ ಸಿಬ್ಬಂದಿಗಳು ಬರಬೇಕಾಯಿತು. ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿದ್ದರಿಂದ ಸುಮಾರು ಎರಡು ಮೂರು ಘಂಟೆ …

Read More »

ಉಡುಪಿ: ಸ್ಕೂಟರ್ ಗೆ ಬಸ್ ಡಿಕ್ಕಿ – ಸವಾರ ಸಾವು

ಉಡುಪಿ :ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಪಲಿಮಾರು ಬಳಿ ಭಾನುವಾರ ರಾತ್ರಿ ನಡೆದಿದೆ. ಮೃತರನ್ನು ಪಲಿಮಾರು ದರ್ಕಾಸ್ತು ನಿವಾಸಿ ಧನ್ ರಾಜ್ ಪಲಿಮಾರು ಎಂದು ಗುರುತಿಸಲಾಗಿದೆ. ಈತ ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ರವಿವಾರ ರಾತ್ರಿ ನಾಟಕ ನೋಡಲು ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸೊಂದು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿದ್ದ ತುಷಾರ್ ಪಲಿಮಾರು ಹಾಗೂ ಕೌಶಿಕ್ ಎರ್ಮಾಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. …

Read More »

ಗೃಹಲಕ್ಷ್ಮಿ 5ನೇ ಕಂತಿನ ಹಣಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್…!

ಗೃಹಿಣಿಯರು 5ನೇ ಕಂತಿನ ಹಣ ತನ್ನ ಖಾತೆಗೆ ಬರಬೇಕು ಎಂದಾದರೆ, ಕಡ್ಡಾಯವಾಗಿ ಈ ಕೆ ವೈ ಸಿ ಮಾಡಿಸಿಕೊಳ್ಳಲೇಬೇಕು. ಈಗಾಗಲೇ ಸರ್ಕಾರ ಹೊರಡಿಸಿರುವ ಮತ್ತೊಂದು ಸುತ್ತೋಲೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಯಾರ ಹೆಸರಿಗೆ ತೆರೆಯಲಾಗಿದೆಯೋ ಅವರ ಖಾತೆಗೆ ಮಾತ್ರವಲ್ಲದೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿಯೊಬ್ಬ ಸದಸ್ಯರು ಕೂಡ ಕೆವೈಸಿ (E-KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಇಕೆವೈಸಿ ಆಗಿದ್ಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ? ಮೊದಲು https://ahara.kar.nic.in/Home/EServices ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ …

Read More »

ಮಂಗಳೂರು: ಯುವತಿಗೆ ಲೈಂಗಿಕ ಕಿರುಕುಳ, ಮಾನಭಂಗ ಯತ್ನ- ಮುಡಾ ಆಯುಕ್ತ ಮನ್ಸೂರು ಆಲಿ ವಿರುದ್ಧ ದೂರು ದಾಖಲು

ಮಂಗಳೂರು: ಲೈಂಗಿಕ ಕಿರುಕುಳ, ಮಾನಭಂಗ ಯತ್ನ ಆರೋಪದ ಹಿನ್ನಲೆಯಲ್ಲಿ ಮುಡಾ ಆಯುಕ್ತರಾದ ಮನ್ಸೂರು ಆಲಿ ವುರಯದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 354ರ (ಮಹಿಳೆಯ ಮೇಲೆ ಹಲ್ಲೆ ಮತ್ತು ಮಾನಭಂಗ ಯತ್ನ) ಹಾಗೂ 354 ಎ(ಲೈಂಗಿಕ ಕಿರುಕುಳ) ಅಡಿ ಉರ್ವಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎನ್ನಲಾಗಿದೆ.   ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗೆ ರು ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂಥ ಆರೋಪಿಸಿದ್ದಾರೆ. ಈ ಕುರಿತು ಪೊಲೀಸ್‌ ಕಮಿಷನರ್‌ ಅನುಪಮ್‌ …

Read More »

ಉಪ್ಪಿನಂಗಡಿ: ಶೆಡ್ಡ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿಹಚ್ಚಿದ ಕಿಡಿಕೇಡಿಗಳು

ಉಪ್ಪಿನಂಗಡಿ: ಮನೆಯ ಶೆಡ್ಡ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಯಾರೋ ಕಿಡಿಕೇಡಿಗಳು ಬೆಂಕಿಹಚ್ಚಿ ನಾಶಪಡಿಸಿದ ಘಟನೆ ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿ ನಡೆದಿದೆ. ಬರಿಮಾರು ಗ್ರಾಮ, ಬಂಟ್ವಾಳ ನಿವಾಸಿ ಲಿಖಿತ್‌ ಕುಮಾರ್‌ ಎಂಬವರು ದಿನಾಂಕ: 06-01-2024 ರಂದು ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದು, ರಾತ್ರಿ ವೇಳೆಗೆ ಲಿಖಿತ್‌ ರ ಭಾವ ಕೀರ್ತನ್‌ ಎಂಬವರು ಮನೆಯಿಂದ ಹೊರಗೆ ಹೋದಾಗ, ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ರಸ್ತೆಯಲ್ಲಿ, ಮೋಟಾರು ಸೈಕಲ್‌ವೊಂದು ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಮನೆಯವರಲ್ಲಿ ತಿಳಿಸಿದ ವೇಳೆ, ಮನೆಯಿಂದ …

Read More »

ಯಜಮಾನಿಯರಿಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ‘ಚಿಟ್ ಫಂಡ್’ ಯೋಜನೆ ಜಾರಿಗೆ

ಬೆಂಗಳೂರು : ಯಜಮಾನಿಯರಿಗೆ ‘ರಾಜ್ಯ ಸರ್ಕಾರ’ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಸರ್ಕಾರ ನಯಾಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರಲು ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇರಳ ಮಾದರಿಯ ನಯಾ ಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್ಫಂಡ್ ಉನ್ನತೀಕರಣಕ್ಕೆ ಸರ್ಕಾರ ಸಿದ್ದತೆ ನಡೆಸಿದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳಿಗೆ ನೀಡುತ್ತಿರುವ 2 ಸಾವಿರ ಹಣವನ್ನು ಸರ್ಕಾರ ಚಿಟ್ ಫಂಡ್ ನಲ್ಲಿ ಹೂಡಿಕೆ …

Read More »

ಅದೃಷ್ಟದ ಕಲ್ಲು ಎಂದು ನಂಬಿಸಿ 52 ಲಕ್ಷ ನಾಮ ಹಾಕಿದ ಗೆಳೆಯ..!

ಬೆಂಗಳೂರು :  ಅದೃಷ್ಟದ ಪಚ್ಚೆ ಕಲ್ಲನ್ನು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಹುದು ಎಂದು ಆಮಿಷವೊಡ್ಡಿ ಸ್ನೇಹಿತ ಉದ್ಯಮಿಯೊಬ್ಬರಿಂದ ₹52 ಲಕ್ಷ ಪಡೆದು ಅವರ ಸ್ನೇಹಿತರೇ ವಂಚಿಸಿದ್ದಾರೆ.ನಗರದ ರಿಚ್ಮಂಡ್ ಟೌನ್ ನಿವಾಸಿ ಶೌಕತ್‌ ಆಲಿ ವಂಚನೆಗೆ ಒಳಗಾಗಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆಲಿ ಸ್ನೇಹಿತರಾದ ಅಶ್ಪಾಕ್ ಬೇಗ್, ಶಾನವಾಜ್‌ ಮಿರ್ಜಾ ಹಾಗೂ ಸಾಜಿದ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಒಂದೂವರೆ ದಶಕಗಳಿಂದ ಆಲಿ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ …

Read More »

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ. ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16) ಮೃತ ಯುವತಿ. ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇನ್ನು ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ವರದಿಯಾಗಿದೆ. ಈಶ್ವರಮಂಗಲ ಹೊರಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಗ್ಯಾಸ್ ಸಿಲಿಂಡರ್ ಇ-ಕೆವೈಸಿ ದಿನಾಂಕ ಮುಂದೂಡಿಕೆ..! ಮೊಬೈಲ್‌ನಲ್ಲೇ ಸುಲಭವಾಗಿ ಮಾಡಿ

LPG ಸಂಪರ್ಕದ ಕುಟುಂಬಗಳು ಇ-ಕೆವೈಸಿ ಮಾಡಿಸಿಕೊಳ್ಳುವುದು ಈಗ ಕಡ್ಡಾಯವಾಗಿದೆ. ಎಲ್ಪಿಜಿ ಗ್ಯಾಸ್ ಸಂಪರ್ಕದ ಗ್ರಾಹಕರು ತಮ್ಮ ಇ-ಕೆವೈಸಿ ಮಾಡದಿದ್ದರೆ ಅವರ ಗ್ಯಾಸ್ ಸಂಪರ್ಕವನ್ನು ಅಕ್ರಮ ಎಂದು ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ಅನೇಕ ಜನರು ತಮ್ಮ ಗೃಹಬಳಕೆಯ ಗ್ಯಾಸ್ ಸಂಪರ್ಕಗಳಿಗಾಗಿ ತಮ್ಮ ಇ-ಕೆವೈಸಿಯನ್ನು ಮಾಡಿದ್ದಾರೆ. ಇದೀಗ ಎಲ್‌ಪಿಜಿ ಗ್ರಾಹಕರು ತಮ್ಮ ಇ-ಕೆವೈಸಿಯನ್ನು ಮಾರ್ಚ್ 31ರವರೆಗೆ ಮಾಡಬಹುದು ಎಂದು ರಾಜ್ಯದ ಆಹಾರ ನಿಯಂತ್ರಕರು ಮಾಹಿತಿ ನೀಡಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಮಾರ್ಚ್ 31 ರವರೆಗೆ ಜನರು ತಮ್ಮ ಇ-ಕೆವೈಸಿಯನ್ನು ಮಾಡಬಹುದು ಎಂದು ಆಹಾರ ನಿಯಂತ್ರಕರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ …

Read More »

You cannot copy content of this page.