ತಾಜಾ ಸುದ್ದಿ

ಅಕ್ರಮ ಮರಳು ಮಾಫಿಯಾಗಳೊಂದಿಗೆ ಶಾಮಿಲು; ಕಂಕನಾಡಿ ನಗರ ಠಾಣೆ ಇನ್ಸ್ ಪೆಕ್ಟರ್ ಭಜಂತ್ರಿ ಸಸ್ಪೆಂಡ್

ಮಂಗಳೂರು: ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ಮೇಲಧಿಕಾರಿಗಳ ಜೊತೆಗೆ ಉಡಾಫೆಯಾಗಿ ವರ್ತಿಸಿದ್ದಾರೆಂದು ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ಇತ್ತೀಚೆಗೆ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ತಲಪಾಡಿ ಗ್ರಾಪಂ ಸದಸ್ಯ, ಕಾಂಗ್ರೆಸ್ ಪುಢಾರಿಗೆ ಸೇರಿದ್ದೆನ್ನಲಾದ ಎಂಟು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು ಟಿಪ್ಪರ್ ವಾಹನಗಳನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ …

Read More »

ಮಂಗಳೂರು: ಬಾಡಿಗೆ ಮನೆಯಿಂದ ನಗದು- ಬೆಳ್ಳಿ ಸೊತ್ತು ಕಳವು

ಮಂಗಳೂರು:ಮಂಗಳೂರು ನಗರದ ಕದ್ರಿ ಜಾರ್ಜ್ ಮಾರ್ಟಿಸ್ ರೋಡ್ ಸಮೀಪದ ಬಾಡಿಗೆ ಮನೆಯಿಂದ ನಗದು ಹಣ ಮತ್ತು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಲಾದ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದವರು ಡಿ. 14ರಂದು ಮೈಸೂರಿಗೆ ತೆರಳಿ ಜ. 16ರಂದು ವಾಪಸ್ ಬಂದಾಗ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಕಪಾಟಿನ ಲಾಕರ್‌ ನಲ್ಲಿ 70,000 ರೂ. ನಗದು, ವಾರ್ಡ್ ರೋಬ್ ನ ಸೂಟ್ಕೇಸ್ ನಲ್ಲಿದ್ದ 2 ಬೆಳ್ಳಿಯ ಬಟ್ಟಲು, 1 ಬೆಳ್ಳಿ ಕಲಶ, 1 ಬೆಳ್ಳಿ ಚಮಚ, 1 ಬೆಳ್ಳಿ ಕಪ್, 20 ಬೆಳ್ಳಿ ನಾಣ್ಯಗಳು, …

Read More »

ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಎಸ್​ಎಸ್​ಎಲ್​ಸಿ (10ನೇ ತರಗತಿ) ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.ಮಾರ್ಚ್​ 25ರಿಂದ ಏಪ್ರಿಲ್ 6ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿ: ಮಾರ್ಚ್ 25- ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ NCERT, ಸಂಸ್ಕೃತ) ಮಾರ್ಚ್ 27- ಸಮಾಜ ವಿಜ್ಞಾನ (ಕೋರ್‌ ಸಬ್ಜೆಕ್ಟ್‌) ಮಾರ್ಚ್ 30 – ವಿಜ್ಞಾನ,ರಾಜ್ಯಶಾಸ್ತ್ರ ಏಪ್ರಿಲ್ 2 – ಗಣಿತ,ಸಮಾಜ ಶಾಸ್ತ್ರ ಏಪ್ರಿಲ್‌ 3- ಅರ್ಥಶಾಸ್ತ್ರ ಏಪ್ರಿಲ್ 4- ತೃತೀಯ ಭಾಷೆ(ಹಿಂದಿ, …

Read More »

ಮುಸ್ಲಿಂ ಮಹಿಳೆಯರ ಅವಹೇಳನ ಪ್ರಕರಣ – ಕಲ್ಲಡ್ಕ ಪ್ರಭಾಕರ್ ಭಟ್ ಗೆ ಜಾಮೀನು

ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಶ್ರೀರಂಗಪಟ್ಟಣ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ. ಪ್ರಭಾಕರ್‌ ಭಟ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಜನವರಿ 10ರಂದು ಕಾಯ್ದಿರಿಸಿದ್ದ ಆದೇಶವನ್ನು ಶ್ರೀರಂಗಪಟ್ಟಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ಟಿ ಅವರು ಇಂದು ಪ್ರಕಟಿಸಿದರು. ಅರ್ಜಿದಾರ/ಆರೋಪಿಯು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ತಿರುಚಬಾರದು. ತನಿಖಾಧಿಕಾರಿ …

Read More »

ಉಡುಪಿ : ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಉಡುಪಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಬ್ರಹ್ಮಾವರ ತಾಲೂಕಿನ ರಿಕ್ಷಾ ಚಾಲಕ ಕೇಶವ ನಾಯ್ಕ (27) ಶಿಕ್ಷೆಗೆ ಗುರಿಯಾಗಿರುವ ಆರೋಪಿ ಎಂದು ಮಾಹಿತಿ ದೊರಕಿದೆ.   13 ವರ್ಷದ ನೊಂದ ಬಾಲಕಿಯು ಶಾಲೆಗೆ ಆರೋಪಿಯ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದು, ಇದರಿಂದ ಆತ ಬಾಲಕಿಯ ಮನೆಯವರಿಗೂ ಪರಿಚಯಸ್ಥನಾಗಿದ್ದ ಎನ್ನಲಾಗಿದೆ.ನೊಂದ ಬಾಲಕಿಯನ್ನು ಪ್ರೀತಿಸುವುದಾಗಿ ತಿಳಿಸಿದ ಆತ, 2023ರ ಫೆಬ್ರವರಿ …

Read More »

ಉಡುಪಿ : ನಾನೂ ರಾಮನ ಭಕ್ತೆ, ಅಯೋಧ್ಯೆಗೆ ಹೋಗ್ತೀನಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ : ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ., ನಾನೂ ಅಯೋಧ್ಯೆಗೆ ಹೋಗ್ತೀನಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಾನು ಕೂಡ ರಾಮ, ಕೃಷ್ಣ, ಪರಮೇಶ್ವರನ ಭಕ್ತೆ ಅವರು ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗೇ ಹೋಗ್ತೀನಿ ಎಂದರು.   ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ನಾನು ಕೂಡ ರಾಮ, ಕೃಷ್ಣ, ಪರಮೇಶ್ವರನ ಭಕ್ತೆ, . ನಾನು ನಮ್ಮ ಸಂಸ್ಕೃತಿ, ಭಕ್ತಿಯನ್ನು ಆಚರಿಸುತ್ತೇನೆ ಎಂದು ಹೇಳಿದ್ದಾರೆ ರಾಮ ಮಂದಿರ ಬಿಜೆಪಿಯದ್ದೂ ಅಲ್ಲ, ನಮ್ಮದೂ …

Read More »

ಜ. 18 ರಂದು “ ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ “ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಉಡುಪಿ : ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ “ ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ “ಛಾಯಾಚಿತ್ರ ಪ್ರದರ್ಶನವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜನಗಣದಲ್ಲಿ ಜ. 18 ರಂದು ಉದ್ಘಾಟನೆಗೊಳ್ಳಲಿದೆ. ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಕುರಿತು ನಿರ್ಮಿಸಿದ ಛಾಯಾಚಿತ್ರಗಳನ್ನು ಇಲ್ಲಿ ಪ್ರಸ್ತುತ ಪಡಸಲಾಗುತ್ತಿದೆ. ಫಿನಿಕ್ಸ್ …

Read More »

ಮಂಗಳೂರು: ಬೈಕಿಗೆ ಕಾರು ಢಿಕ್ಕಿ- ಕುದುರೆಮುಖ ಕಂಪೆನಿಯ ಉದ್ಯೋಗಿ ಸಾವು..!

ಮಂಗಳೂರು ನಗರದ ಕಾವೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪೆನಿಯ ಉದ್ಯೋಗಿ ದಾರುಣ ಅಂತ್ಯ ಕಂಡಿದ್ದಾರೆ. ಶೇಖರಪ್ಪ ಮೃತ ದುರ್ದೈವಿಯಾಗಿದ್ದಾರೆ. ಕುದುರೆ ಮುಖ ಕಂಪೆನಿಯ ಮಂಗಳೂರು ಪೋರ್ಟ್ ಫೆಸಿಲಿಟೀಸ್ ವಿಭಾಗಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖರಪ್ಪ ನವರು ಮಂಗಳವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ತಮ್ಮ ಕ್ವಾಟರ್ಸ್ ಕಂಪೌಂಡ್ ಗೆ ಹೋಗಲು ಡಿವೈಡರ್ ಕಡೆಯಿಂದ ಬೈಕ್ ತಿರುಗಿಸಿದಾಗ ಬೋಂದೆಲ್‌ನಿಂದ ಕಾವೂರು ಕಡೆಗೆ ಬರುತ್ತಿದ್ದ ಕಾರೋಂದು ವೇಗವಾಗಿ ಬಂದು ಇವರ ಬೈಕಿಗೆ ಢಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಶೇಖರಪ್ಪರನ್ನು ಕೂಡಲೇ …

Read More »

ಉಡುಪಿ : ಪ್ರದಾನಿ ಮೋದಿಗೆ ಪುತ್ತಿಗೆ ಪರ್ಯಾಯಕ್ಕೆ ಆಮಂತ್ರಣ

ಉಡುಪಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಆಂಧ್ರದ ಲೇಪಾಕ್ಷಿಯಲ್ಲಿ ಶ್ರೀಪುತ್ತಿಗೆ ಮಠದ ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು ಶ್ರೀಮಠದ ಶಿಷ್ಯರಾದ ತಿರುಪತಿಯ ಶ್ರೀವೇಂಕಟೇಶ ಹೆಚ್.ಎಸ್ ನೀಡಿದರು. ಹದಿನಾಲ್ಕು ವರ್ಷಗಳ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡು ಪರ್ಯಾಯ ಸಂಭ್ರಮಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅತ್ಯಂತ ಗೌರವ ಹಾಗೂ ಸಂತೋಷದಿಂದ ಶ್ರೀಮಠದ ಆಮಂತ್ರಣ ಪತ್ರಿಕೆ ಸ್ವೀಕರಿಸಿದರು. ಸಂದೇಶವನ್ನು ಕಳಿಸುವುದಾಗಿ ತಿಳಿಸಿದರು.

Read More »

ಬಿಜೆಪಿ ಯುವಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇಮಕ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ವಿವಿಧ ಮೋರ್ಚಾಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More »

You cannot copy content of this page.