ತಾಜಾ ಸುದ್ದಿ

ಅಯೋಧ್ಯೆ ರಾಮಮಂದಿರದಲ್ಲಿಂದು ‘ಪ್ರಾಣ ಪ್ರತಿಷ್ಠೆ’: ದೇಶಾದ್ಯಂತ ಸಂಭ್ರಮಾಚರಣೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ(ಪಿಎಂಒ) ಪ್ರಕಟಿಸಿದೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಒಂದು ಐತಿಹಾಸಿಕ ಘಟನೆಯಾಗಿದ್ದು, ಇದು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಮತ್ತು ವಿವಿಧ ಹಿನ್ನೆಲೆಯ ಜನರ ಸೆಳೆದಿದೆ. ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುವುದು. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಭಾರತೀಯರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.‌ ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರವು …

Read More »

ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೊ

ಬೆಂಗಳೂರು: ಬಾಹ್ಯಾಕಾಶದಲ್ಲಿ ಉಪಗ್ರಹದಿಂದ ಸೆರೆ ಹಿಡಿಯಲಾಗಿರುವ ಅಯೋಧ್ಯೆ ರಾಮ ಮಂದಿರದ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆಗೊಳಿಸಿದೆ. ಹೈದರಾಬಾದ್‍ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಕೇಂದ್ರವು ಈ ಚಿತ್ರವನ್ನು ಹಂಚಿಕೊಂಡಿದ್ದು, ಡಿಸೆಂಬರ್ 16ರಂದು ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರವನ್ನು ತೆಗೆಯಲಾಗಿತ್ತು ಎನ್ನಲಾಗಿದೆ. ಜನವರಿ 22ರ ನಾಳೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.

Read More »

ಜ.22 ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತೆ ಶಾಸಕ ಭರತ್ ಶೆಟ್ಟಿ ಒತ್ತಾಯ

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನಲೆ ಜನವರಿ 22 ರಂದು ರಜೆ ಘೋಷಿಸುವಂತೆ ಹಲವಾರು ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಇದೀಗ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕೂಡ ಶಾಲಾ- ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿದ್ದಾರೆ. ತಾನು ಕೂಡ ರಾಮ ಭಕ್ತ ಎಂದು ಹೇಳುಕೊಳ್ಳುವ ಸಿಎಂ ಸಿದ್ಧರಾಮಯ್ಯ ಅವರು ಮಂದಿರ ಉದ್ಘಾಟನೆಯ ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕು. ಆ ಮಕ್ಕಳು ಅವರವರ ಮನೆಗಳಲ್ಲಿ ಕುಟುಂಬ ಸಮೇತರಾಗಿ ಸಂಭ್ರಮ, ಪೂಜೆ ನೆರವೇರಿಸಲು ಅವಕಾಶ ಮಾಡಿಕೊಡಬೇಕು. ರಾಮನ ಆದರ್ಶ ಬೋಧಿಸುವಂತಹ ಶಿಕ್ಷಣ ಇಲಾಖೆಯು …

Read More »

‘ವಿದ್ಯಾರ್ಥಿಗಳೇ ಜ.22 ರಂದು ಸ್ವಯಂ ರಜೆ ಪಡೆದು ರಾಮೋತ್ಸವದಲ್ಲಿ ಪಾಲ್ಗೊಳ್ಳಿ’ – ಯಶ್ ಪಾಲ್ ಸುವರ್ಣ

ಉಡುಪಿ: ಜನವರಿ 22 ರಂದು ನಡೆಯುವ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಮಹೋತ್ಸವದ ಐತಿಹಾಸಿಕ ದಿನದಂದು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಸರ್ಕಾರಿ ನೌಕರರು ಸ್ವಯಂ ರಜೆ ಪಡೆದು ರಾಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಿರಂತರವಾಗಿ ತನ್ನ ಹಿಂದೂ ವಿರೋಧಿ ಧೋರಣೆಯ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು, ಇದರ ಮುಂದುವರಿದ ಭಾಗವಾಗಿ ಕೋಟ್ಯಾಂತರ ಹಿಂದೂಗಳ ಹಲವು ಶತಮಾನದ ಅಯೋಧ್ಯೆಯ ಶ್ರೀ ರಾಮ ಮಂದಿರದ ಕನಸು ಸಾಕಾರಗೊಳ್ಳುವ ಈ ಐತಿಹಾಸಿಕ ದಿನದಂದು ರಜೆ ಘೋಷಣೆ ಮಾಡದೇ …

Read More »

ಕಾರ್ಕಳ: ಮುಂಡ್ಲಿ ಡ್ಯಾಂ ಪೂರ್ತಿ ನೀರು ಸಂಗ್ರಹಣೆ – ನೆಮ್ಮದಿಯ ನಿಟ್ಟಿಸಿರು ಬಿಟ್ಟ ನಾಗರಿಕರು

ಕಾರ್ಕಳ: ವರುಷದ ಮೊದಲ ತಿಂಗಳು ಕಳೆಯುತ್ತಾ ಬಂದಿದೆ. ಬಿಸಿಲಿನ ತಾಪ ಏರಿಕೆ ಕಂಡು ಬರುತ್ತಿದೆ. ಆದರೂ ಕಾರ್ಕಳ ಪುರಸಭೆ ವ್ಯಾಪ್ತಿಗೆ ನೀರಿನ ಆಸರೆಯಾಗಿದ್ದ ಮುಂಡ್ಲಿ ಕಿರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಕುಡಿಯುವ ನೀರಿನ ತಾತ್ವಾರ ಎದುರಾಗದೇ ನಾಗರಿಕರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಕಾರ್ಕಳ ನಗರ ಪ್ರದೇಶಕ್ಕೆ ನೀರಿನ ಆಸರೆಯಾಗಿರುವ ಮುಂಡ್ಲಿಯ ಕಿರುಅಣೆಕಟ್ಟು 12 ಅಡಿ ಎತ್ತರದ ವಿದ್ದು, ಜನವರಿ 18ರಂದು 12 ಅಡಿ ಎತ್ತರ ಅಳತೆಯಲ್ಲಿ ಮುಂಡ್ಲಿ ಡ್ಯಾಂ ಪೂರ್ತಿ ನೀರು ಸಂಗ್ರಹಣೆಗೊಂಡು ಹೆಚ್ಚುವರಿ ನೀರು ಹೊರ ಹರಿಯುತ್ತಿದೆ. ಕಳೆದ ವರ್ಷ …

Read More »

ಬೆಳ್ತಂಗಡಿ – ಮನೆಗೆ ನುಗ್ಗಿದ ಕಾಳಿಂಗ ಸರ್ಪದ ರಕ್ಷಣೆ ವೇಳೆ ಅಟ್ಯಾಕ್

ಬೆಳ್ತಂಗಡಿ: ಮನೆಯೊಂದರ ಒಳಗೆ ನುಗ್ಗಿದ್ದ ಕಾಳಿಂಗ ಸರ್ಪವೊಂದನ್ನು  ಉರಗ ಪ್ರೇಮಿ ಸ್ನೇಕ್ ಅನಿಲ್ ತಂಡದ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ. ಬೆಳ್ತಂಗಡಿಯ ಕಕ್ಕಿಂಜೆಯ ಸೋಮಶೇಖರ್ ಎಂಬವರ ಮನೆಯಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಸ್ನೇಕ್ ಅನಿಲ್ ತಂಡ ಕಾರ್ಯಾಚರಣೆ ನಡೆಸಿ ಮನೆಯೊಳಗೆ ಅಡಗಿದ್ದ ಕಾಳಿಂಗ ಸರ್ಪ ರಕ್ಷಣೆ ಮಾಡಿದ್ದಾರೆ. ರಕ್ಷಣಾ ಕಾರ್ಯಚರಣೆ ವೇಳೆ ರಕ್ಷಿಸಲು ಬಂದವರ ಮೇಲೆಯೇ ಕಾಳಿಂಗ ಸರ್ಪ ಅಟ್ಯಾಕ್ ಮಾಡಲು ಬಂದಿದೆ. ಬಳಿಕ ಹರ ಸಾಹಸದಿಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್. …

Read More »

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ: ಮಂಗಳೂರಿನಲ್ಲಿ ಭಾರೀ ಬಂದೋಬಸ್ತ್; ಬಾರ್, ಮದ್ಯದಂಗಡಿ ಬಂದ್

ಮಂಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಪ್ರಯುಕ್ತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಕೆಳಕಂಡ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಗಳೂರು ನಗರದಲ್ಲಿ ದೇವಸ್ಥಾನ ಮತ್ತು ಮಂದಿರಗಳಲ್ಲಿ ಒಟ್ಟು 196 ಕಡೆಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಗುರುತಿಸಲಾಗಿದೆ.  131 ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಪಿಕೆಟಿಂಗ್ ನೇಮಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.  …

Read More »

ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಣಿಪಾಲ ಶಾಖೆ ಆರಂಭ

ಕಾಲೂರ್ ಕೇರಳ ಮೂಲದ ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯೂ ಕಳೆದ 25 ವರುಷಗಳಿಂದ ಬೇರೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಯನಾಸಕ್ತರಿಗೆ ವೀಸಾ ಸಂಸ್ಕರಣೆ, ದಸ್ತಾವೇಜುಗಳ ಪ್ರಕ್ರಿಯೆ ಮತ್ತು ಲೆಕ್ಕಪತ್ರಗಳ ಅಣಿಗೊಳಿಸುವಿಕೆ ಮತ್ತು ಪೂರೈಕೆ ಮುಂತಾದವುಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಒದಗಿಸುತ್ತಾ ಬಂದಿದೆ. ಸಂಸ್ಥೆಯು ಇದೀಗ ರಾಜ್ಯದ ಕರಾವಳಿ ಭಾಗದಲ್ಲಿನ ಮೊದಲ ಶಾಖೆಯನ್ನು ಕರಾವಳಿಯ ಸುಂದರ ಶೈಕ್ಷಣಿಕ ನಗರಿಯಾದ ಮಣಿಪಾಲದಲ್ಲಿ ಆರಂಭಿಸುತ್ತಿದೆ. ಇದರ ಉದ್ಘಾಟನೆಯು ಜನವರಿ 22ರಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಡಾ। ಮೋಹನ ಆಳ್ವ, ಮುಖ್ಯಸ್ಥರು, …

Read More »

ನಿಶ್ಚಿತಾರ್ಥದ ಮುನ್ನಾದಿನವೇ ಭೀಕರ ಅಪಘಾತ; ಯುವಕ ದುರ್ಮರಣ

ನಿಶ್ಚಿತಾರ್ಥದ ಸಡಗರ- ಸಂಭ್ರಮದ ನಡುವೆ ದೇವಸ್ಥಾನಕ್ಕೆಂದು ತೆರಳುತ್ತಿದ್ದ ವೇಳೆ ಯುವಕನೊಬ್ಬ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ತಿರುಮಲ ಡಾಬಾ ಬಳಿ ನಡೆದಿದೆ. ಕಾರು ಹಾಗೂ ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೃಷಿ ಇಲಾಖೆಯಲ್ಲಿ ನೌಕರನಾಗಿದ್ದ ಯುವಕ ಮೃತಪಟ್ಟಿದ್ದಾರೆ. 28 ವರ್ಷದ ವಿಶಾಲ್ ಮೃತ ದುರ್ದೈವಿ. ಹೊಳಲ್ಕೆರೆ ಕೃಷಿ ಇಲಾಖೆಯಲ್ಲಿ ಟೆಕ್ನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಾಳೆ ಭಾನುವಾರ ವಿಶಾಲ್ ನಿಶ್ಚಿತಾರ್ಥವಿತ್ತು. ಇಂದು ಶನಿವಾರವಾದ್ದರಿಂದ ಹೊಳಲ್ಕೆರೆ ಬಳಿಯ ಆಂಜನೇಯ ದೇವಸ್ಥಾನಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ …

Read More »

ವೈರಲ್ ಆಗಿರುವ ಈ ʻರಾಮಲಲ್ಲಾʼ ವಿಗ್ರಹ ನಿಜವಲ್ಲ : ತನಿಖೆಗೆ ಅಯೋಧ್ಯೆ ಅರ್ಚಕರ ಆಗ್ರಹ

ರಾಮಮಂದಿರ ಗರ್ಭಗುಡಿಯಲ್ಲಿನ ರಾಮಲಲ್ಲಾ ವಿಗ್ರಹದ ಫೋಟೋ ನಿಜವಲ್ಲ. ಅಯೋಧ್ಯೆ ರಾಮ್ ಲಲ್ಲಾ ವಿಗ್ರಹದ ಚಿತ್ರಗಳು ಹೇಗೆ ಸೋರಿಕೆಯಾದವು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ. ಪ್ರಾಣ ಪ್ರತಿಷ್ಠಾ ಪೂರ್ಣಗೊಳ್ಳುವ ಮೊದಲು ಭಗವಾನ್ ರಾಮನ ವಿಗ್ರಹದ ಕಣ್ಣುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಭಗವಾನ್ ರಾಮನ ಕಣ್ಣುಗಳನ್ನು ನೋಡಬಹುದಾದ ವಿಗ್ರಹವು ನಿಜವಾದ ವಿಗ್ರಹವಲ್ಲ. ಕಣ್ಣುಗಳನ್ನು ಯಾರು ಬಹಿರಂಗಪಡಿಸಿದರು ಮತ್ತು ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು” ಎಂದು ದಾಸ್ …

Read More »

You cannot copy content of this page.