ತಾಜಾ ಸುದ್ದಿ

ಕಾಪು: ಎರಡು ಬೈಕ್ ಗಳ ನಡುವೆ ಅಪಘಾತ – ಓರ್ವ ಸವಾರ ಸಾವು

ಕಾಪು:ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡ ಘಟನೆ ಉಡುಪಿಯ ಕಾಪು ರಾಷ್ಟ್ರೀಯ ಹೆದ್ದಾರಿಯ 66ರ ಉಳಿಯಾರಗೋಳಿ ಕೋತಲಕಟ್ಟೆಯಲ್ಲಿ ಜ. 28 ರಂದು ನಡೆದಿದೆ. ಸಹಸವಾರ ಪಾಂಗಾಳ ದುರ್ಗಾ ವೆಲ್ ರಿಂಗ್ ವರ್ಕ್ಸ್ ಕಾರ್ಮಿಕನಾಗಿರುವ ಮಲ್ಲೇಶ್ (53) ಎಂಬಾತ ಮೃತಪಟ್ಟಿದ್ದು, ಬೈಕ್ ಸವಾರ ಜಯನ್ ಗಾಯಗೊಂಡಿದ್ದಾರೆ.ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಮತ್ತು ಉಳಿಯಾರಗೋಳಿ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಬೈಕ್ ಪರಸ್ಪರ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಅಪಘಾತದ …

Read More »

ಡಿ.30ರಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮೋದಿ ಚಾಲನೆ

ಮಂಗಳೂರು: ಮಂಗಳೂರು – ಮಡಗಾಂವ್‌ ನಡುವೆ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಆರು ರೈಲುಗಳಿಗೆ ಡಿ. 30ರಂದು ಬೆಳಗ್ಗೆ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ. ಮಂಗಳೂರು ಸೆಂಟ್ರಲ್‌ರಲ್ಲಿ ಕೂಡ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ವಿಧಾನಸಭಾಧ್ಯಕ್ಷ ಯು ಟಿ ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲು, ರಾಜ್ಯಸಭಾ ಸದಸ್ಯ ಡಾ ಡಿ ವೀರೇಂದ್ರ ಹೆಗ್ಗಡೆ, ಶಾಸಕರಾದ ವೇದವ್ಯಾಸ ಕಾಮತ್‌, ಹರೀಶ್‌ ಕುಮಾರ್‌, …

Read More »

ಬೆಳ್ತಂಗಡಿಯ ವೇಣೂರು ಸ್ಪೋಟಗೊಂಡ ಪಟಾಕಿ ತಯಾರಿಕಾ ಘಟಕ-ಕಾರ್ಮಿಕರು ಸಾವನ್ನಪ್ಪಿ ಅನೇಕ ಮಂದಿಗೆ ಗಾಯ..!

ಬೆಳ್ತಂಗಡಿ: ಗೋಳಿಯಂಗಡಿ ಸಮೀಪದ ಕಡ್ತ್ಯಾರು ಸಮೀಪ ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡು ಮೂವರು ಕಾರ್ಮಿಕರು ಸಾವನ್ನಪ್ಪಿ ಅನೇಕ ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ. ಕೇರಳದ ಸ್ವಾಮಿ(55) , ಕೇರಳದ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಮೃತಪಟ್ಟಿದ್ದು, ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಗಾಯಗೊಂಡವರು. ಕುಚ್ಚೋಡಿ ಸಮೀಪದ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದು, ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು ಎನ್ನಲಾಗಿದೆ. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ …

Read More »

ಉಡುಪಿ: ಪ್ರತಿಯೊಬ್ಬರ ರಕ್ತದ ಬಣ್ಣ ಒಂದೇ, ಅದಕ್ಕೆ ಯಾವುದೇ ಜಾತಿ ಧರ್ಮಗಳಿಲ್ಲ – ವಂ.ಡೆನಿಸ್ ಡೆಸಾ

ಉಡುಪಿ: ರಕ್ತದಾನಕ್ಕಿಂತ ಮಹತ್ತರವಾದ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬರ ರಕ್ತದ ಬಣ್ಣ ಒಂದೇ ಆಗಿದ್ದು ರಕ್ತಕ್ಕೆ ಯಾವುದೇ ಜಾತಿ ಧರ್ಮಗಳಿಲ್ಲ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು. ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಾಮ್ ಇವರ ನೇತ್ರತ್ವದಲ್ಲಿ ಶ್ರೀ ಗಜಾನನ ಯಕ್ಷಗಾನ ಕಲಾ ಸಂಘ ( ರಿ) ತೊಟ್ಟಾಮ್ ಮತ್ತು ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ , ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಶ್ರೀ ಭಕ್ತಿ ಉದಯ ಪಂಡರೀನಾಥ ಭಜನಾ ಮಂದಿರ ತೊಟ್ಟಾಮ್ , ಸೈಂಟ್ ಆನ್ಸ್ …

Read More »

ಪುತ್ತೂರು – ಕಂಬಳ ನೋಡಲು ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಕಿರುಕುಳ ಆರೋಪಿ ಶಾಕೀರ್ ಅರೆಸ್ಟ್

ಪುತ್ತೂರು: ಅನ್ಯಮತೀಯ ಯುವಕನೂಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆ ಪುತ್ತೂರು ನಗರದಲ್ಲಿ ಜ 27ರ ತಡ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡಬ ಮೂಲದ ಶಾಕೀರ್ ವಶದಲ್ಲಿರುವ ವ್ಯಕ್ತಿ. ಪುತ್ತೂರು ಮೂಲದ ಅಪ್ರಾಪ್ತ ಬಾಲಕಿ, ಕಂಬಳ ನೋಡಲು ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಆರೊಪಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ. ಆರೋಪಿಯನ್ನು ತಮ್ಮವಶಕ್ಕೆ ನೀಡಬೇಕೆಂದು ತಂಡವೊಂದು ಠಾಣೆಯ ಮುಂದೆ ಜಮಾಯಿಸಿತ್ತು. ಉದ್ರಿಕ್ತರನ್ನು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ ಪುತ್ತಿಲ ಸಮಾಧಾನಗೊಳಿಸಿದರು. ಆರೋಪಿಯ ವಿರುದ್ದ ಪೊಕ್ಸೋ ಪ್ರಕರಣ ದಾಖಲಿಸಲಾಗಿದೆ.

Read More »

ಮಾದಕ ದ್ರವ್ಯ ಸೇವನೆ ಆರೋಪ- ಇಬ್ಬರ ಬಂಧನ

ಮಂಗಳೂರು:ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಬಂದರು ಹಾಗು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಡ್ಸನ್ ಜಾರ್ಜ್ (19) ಮತ್ತು ಅದೇ ಜಿಲ್ಲೆಯ ಎಲ್ವಿನ್ ಶಿಜು (19)ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಲ್ಲಿ ಅಡ್ಸನ್ ಜಾರ್ಜ್ ಎಂಬಾತ ಸೆಂಟ್ರಲ್ ಮಾರ್ಕೆಟ್ ಬಳಿ ಗಾಂಜಾ ಸೇವಿಸುತ್ತಿದ್ದಾಗ ಮತ್ತು ಎಲ್ವಿನ್ ಶಿಜು ಎಂಬಾತ ಬಲ್ಮಠದ ಬಳಿ ಗಾಂಜಾ ಸೇವಿಸಿ ತಿರುಗಾಡುತ್ತಿದ್ದಾಗ ಗಸ್ತು ನಿರತ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Read More »

ಉಳ್ಳಾಲ: ಬಾಡಿಗೆ ಮನೆಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು- ಪ್ರಕರಣ ದಾಖಲು

ಉಳ್ಳಾಲ: ವ್ಯಕ್ತಿಯೋರ್ವರು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ತೊಕ್ಕೊಟ್ಟು ಸಮೀಪದ ಕಲ್ಲಾಪು ಪಾರ್ದೆ ಕಟ್ಟೆಯಲ್ಲಿ ನಡೆದಿದೆ. ಮೂಲತಃ ನರಿಂಗಾನ ಗ್ರಾಮದ ಮೊಂಟೆಪದವಿನ ಮಠ ನಿವಾಸಿಯಾಗಿದ್ದ ನಂದಕುಮಾರ್‌ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಂದಕುಮಾರ್‌ ಅವರು ಸಮಾರಂಭಗಳಿಗೆ ಲೈಟಿಂಗ್‌, ಮೈಕ್‌ ಅಳವಡಿಸುವ ವೃತ್ತಿ ನಡೆಸುತ್ತಿದ್ದು, ಕಲ್ಲಾಪು ಪಾರ್ದೆಕಟ್ಟೆಯ ಡೆನ್ನಿಸ್‌ ಡಿ’ಸೋಜಾ ಅವರ ಮನೆಯ ಮಹಡಿಯ ಕೋಣೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇನ್ನು ಡೆನ್ನಿಸ್‌ ಡಿ’ಸೋಜಾ ಅವರ ಕುಟುಂಬ ನಗರದಲ್ಲಿ ವಾಸಿಸುತ್ತಿದ್ದು ಶುಕ್ರವಾರ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಬಂದಿದ್ದ ಡೆನ್ನಿಸ್‌ ಅವರು ಮಧ್ಯಾಹ್ನ …

Read More »

ಬಂಟ್ವಾಳ: ಅಕ್ರಮ ಮರಳು ಸಾಗಾಟದ ಲಾರಿ ವಶ

ಬಂಟ್ವಾಳ: ಅಕ್ರಮ ಮರಳು ಸಾಗಾಟದ ಲಾರಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ವಶಕ್ಕೆ ಪಡೆದ ಘಟನೆ ಜ. 25ರಂದು ರಾ.ಹೆ.75ರ ತುಂಬೆಯಲ್ಲಿ ನಡೆದಿದೆ. ಲಾರಿ ಮಾಲಕ ಸಂತೋಷ್‌ ಕೋಟ್ಯಾನ್‌ ಹಾಗೂ ಚಾಲಕ ಪ್ರಕಾಶ್‌ ಆರೋಪಿಗಳೆಂದು ಗುರುತಿಸಲಾಗಿದೆ.ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಹರೀಶ್‌ ಎಂ.ಆರ್‌. ನೇತೃತ್ವದ ತಂಡ ಮುಂಜಾನೆ 5ರ ಸುಮಾರಿಗೆ ಗಸ್ತು ತಿರುಗುತ್ತಿದ್ದ ವೇಳೆ ಲಾರಿಯೊಂದನ್ನು ತಡೆದು ವಿಚಾರಿಸಿದಾಗ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ. ಪೊಲೀಸರು ಸುಮಾರು 4 ಲಕ್ಷ ರೂ. ಮೌಲ್ಯದ ಲಾರಿ ಮತ್ತು 7 ಸಾವಿರ ರೂ. ಮೌಲ್ಯದ …

Read More »

 ಮಂಗಳೂರು:  ದೈವಾರಾಧಕ ಅಶೋಕ್‌ ಬಂಗೇರ ಹೃದಯಾಘಾತದಿಂದ ನಿಧನ..!

ಮಂಗಳೂರು: ಕೊರಗಜ್ಜ ದೈವಾರಾಧಕರಾಗಿದ್ದ ಅಶೋಕ್ ಬಂಗೇರ ಅವರು ಹೃದಯಾಘಾತದಿಂದ ವಿಧಿವಶರಾದರು. ಹಲವು ವರ್ಷಗಳಿಂದ ಅವರು ತಮ್ಮನ್ನು ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದ ಅಶೋಕ್ ಬಂಗೇರ ಅವರು  ನಿನ್ನೆ ರಾತ್ರಿ ರಕ್ತೇಶ್ವರಿ ನೇಮ ಆದ ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮಂಗಳೂರಿನ ಪದವಿನಂಗಡಿ ಬಳಿ ಇರುವ ಕೊರಗಜ್ಜನ ಸಾನಿಧ್ಯದಲ್ಲಿ ಅವರು ಕೊರಗಜ್ಜನ ಸೇವೆ ಮಾಡಿಕೊಂಡು ಬರುತ್ತಿದ್ದರು. ಅವರು ದೈವಾರಾಧನೆಯಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.

Read More »

ಸಿಲಿಂಡರ್ ನಲ್ಲಿ ಗ್ಯಾಸ್ ಬದಲು ನೀರು ತುಂಬಿಸಿ ಕೊಟ್ಟ ಏಜೆನ್ಸಿ..!

ಗ್ರಾಹಕರೊಬ್ಬರಿಗೆ ಸಿಲಿಂಡರ್ ನಲ್ಲಿ ಗ್ಯಾಸ್ ಬದಲು ನೀರು ತುಂಬಿಸಿ ಕೊಟ್ಟ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅರ್ಧವೇಡುವಿನಲ್ಲಿ ನಡೆದಿದೆ. ಸ್ಥಳೀಯ ಗ್ಯಾಸ್ ಏಜೆನ್ಸಿಯೊಬ್ಬರು ಮನೆಯೊಂದಕ್ಕೆ ಗ್ಯಾಸ್ ಸಿಲಿಂಡರ್ ವಿತರಿಸಿದೆ. ಸಿಲಿಂಡರ್ ಮೇಲೆ ನೀರು ಇದ್ದಿದ್ದರಿಂದ ಅನುಮಾನಗೊಂಡ ಗ್ರಾಹಕ ಸಿಲಿಂಡರ್ ಪರಿಶೀಲಿಸಿದ್ದಾನೆ. ಬಳಿಕ ಸಿಲಿಂಡರ್ ನೋಡಿದಾಗ ಸಿಲಿಂಡರ್ ಒಳಗಿಂದ ಗ್ಯಾಸ್ ಬದಲು ನೀರು ಬರುವುದನ್ನು ಕಂಡು ಗ್ರಾಹಕ ಆಶ್ಚರ್ಯಚಕಿತನಾಗಿದ್ದಾನೆ. ನಂತರ ಸ್ಥಳೀಯರೊಡನೆ ಗ್ಯಾಸ್ ಏಜೆನ್ಸಿಗೆ ತೆರಳಿ ವಿಚಾರಿಸಿದಾಗ, ‘ನಮಗೇನು ಗೊತ್ತು?’ ಎಂದು ಏಜೆನ್ಸಿ ಮಾಲೀಕ ಜಾರಿಕೊಂಡಿದ್ದಾನೆ ಎಂದು ಗ್ರಾಹಕ ತನ್ನ ಅಳಲನ್ನು ಹೊರಹಾಕಿದ್ದಾನೆ.

Read More »

You cannot copy content of this page.