ತಾಜಾ ಸುದ್ದಿ

ಮಲ್ಪೆ: ಗಾಂಜಾ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ‌ – ಪ್ರಕರಣ ದಾಖಲು

ಮಲ್ಪೆ: ಗಾಂಜಾ ಪ್ರಕರಣದ ಆರೋಪಿಯೊಬ್ಬ ಮಲ್ಪೆ ಠಾಣೆಯ ಮಹಿಳಾ ಪಿಎಸ್‌ಐ ಸುಷ್ಮಾ ಹಾಗೂ ಹೋಂಗಾರ್ಡ್‌ ಸಿಬಂದಿ ಜಾವೇದ್‌ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮಲ್ಪೆಯಲ್ಲಿ ತಡರಾತ್ರಿ ಸಂಭವಿಸಿದೆ. ಪಿಎಸ್‌ಐ ಹಾಗೂ ಹೋಂ ಗಾರ್ಡ್‌ ಸಿಬಂದಿ ಅವರು ಶನಿವಾರ ರಾತ್ರಿ 11 ಗಂಟೆಗೆ ಇಲಾಖೆಯ ವಾಹನದಲ್ಲಿ ನೈಟ್‌ ರೌಂಡ್ಸ್‌ ಕರ್ತವ್ಯದಲ್ಲಿದ್ದರು. ತೊಟ್ಟಂ, ಗುಜ್ಜರಬೆಟ್ಟು, ಕದಿಕೆ, ಬಡಾನಿಡಿಯೂರು ಮುಂತಾದ ಕಡೆ ಸಂಚರಿಸಿಕೊಂಡು ರಾತ್ರಿ ಸುಮಾರು 2.15ರ ವೇಳೆಗೆ ಹೂಡೆ ತಲುಪಿದಾಗ ಹೂಡೆಯ ಶಾಲೆಗುಡ್ಡೆಯ ಬಳಿ 4-5 ಜನರು ದೊಡ್ಡದಾಗಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಳ್ಳುತ್ತಿದ್ದರು. ಪೊಲೀಸರನ್ನು ನೋಡಿದ …

Read More »

ಸೋಮೇಶ್ವರ ಸಮುದ್ರತೀರದಲ್ಲಿ ಅಪರಿಚಿತ ಮೃತದೇಹ ಪತ್ತೆ..!

ಉಳ್ಳಾಲ: ಸೋಮೇಶ್ವರ ಸಮುದ್ರತೀರದಲ್ಲಿ ಅಪರಿಚಿತ ಮೃತದೇಹ ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಮಧ್ಯವಯಸ್ಕರಾಗಿದ್ದು, ಬಿಳಿ ಅಂಗಿ ಕಪ್ಪು ಪ್ಯಾಂಟ್ ಧರಿಸಿದ್ದು, ಇಂದು ಬೆಳಿಗ್ಗೆ ಸಮುದ್ರ ತೀರದ ರುದ್ರಪಾದೆಯಿಂದ ವ್ಯಕ್ತಿಯೋರ್ವರು ಸಮುದ್ರಕ್ಕೆ ಹಾರಿರುವುದನ್ನು ದೇವಸ್ಥಾನದ ಅರ್ಚಕರೊಬ್ಬರು ಕಂಡಿದ್ದರು. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ವ್ಯಕ್ತಿಯ ಗುರುತು ಪತ್ತೆ ಹಚ್ಚುವಿಕೆಗೆ ಕ್ರಮಕೈಗೊಂಡಿದ್ದಾರೆ.

Read More »

ಉಡುಪಿ: ಎಲ್ಲರೂ ಒಟ್ಟಾದರೆ ದೇವಸ್ಥಾನವನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ಸಾಧ್ಯ- ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ

ಉಡುಪಿ: ಸರಕಾರೀಕರಣಗೊಂಡ ದೇವಸ್ಥಾನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆ ಇತ್ಯಾದಿಗಳ ಸಂದರ್ಭದಲ್ಲಿ ಪಾರಂಪರಿಕ ಪದ್ಧತಿಗಳು ಪಾಲನೆಯಾಗುವುದಿಲ್ಲ. ಹಾಗಾಗಿ ಯಾವುದೇ ದೇವಸ್ಥಾನಗಳು ಸರಕಾರೀಕರಣಕ್ಕೊಳಗಾಗಲು ಬಿಡಬಾರದು. ಎಲ್ಲರೂ ಒಟ್ಟಾದರೆ ದೇವಸ್ಥಾನವನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ಸಾಧ್ಯ ಎಂದು ಉಡುಪಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ಕರೆ ನೀಡಿದರು. ಅವರು ನಗರದ ಕಿದಿಯೂರು ಹೋಟೆಲಿನ ಮಾಧವ ಕೃಷ್ಣ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಪರಿಷತ್ತಿನಲ್ಲಿ ಸುಮಾರು 160 ಕ್ಕೂ ಹೆಚ್ಚು ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಪರಿಷತ್ತನ್ನು …

Read More »

Good News : ಕನ್ನಡದಲ್ಲೇ ಕೇಂದ್ರ ಸಶಸ್ತ್ರ ಮೀಸಲು ಪಡೆ ಪರೀಕ್ಷೆಗೆ ಅವಕಾಶ; ಗೃಹ ಸಚಿವಾಲಯದಿಂದ ಅಧಿಕೃತ ಘೋಷಣೆ

ನವದೆಹಲಿ : ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಒಳಗೊಂಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಹೊರತಾಗಿ ಈ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಫೆ.10ರಿಂದಲೇ ಪರೀಕ್ಷೆ ಆರಂಭವಾಗಿವೆ. ಮಾ.7ರವರೆಗೆ ದೇಶವ್ಯಾಪಿ 128 ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 48 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಾದೇಶಿಕ ಭಾಷೆಗಳಲ್ಲೂ ನೇಮಕಾತಿ ಪರೀಕ್ಷೆ ನಡೆಸುವ ಸಂಬಂಧ 2023ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂ ಡಿತ್ತು. ಆ …

Read More »

ಒಣಗಿದ ನಿಂಬೆಹಣ್ಣನ್ನು ಎಸೆಯಬೇಡಿ ; ಅದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

ನಿಂಬೆ ಹಣ್ಣು (Lemon) ಮಿಟಮಿನ್‌ ಸಿ ಯ ಸಮೃದ್ಧ ಆಗರ. ಅಡುಗೆಯಲ್ಲಿ ಆರೋಗ್ಯಕ್ಕೆ , ಸೌಂದರ್ಯಕ್ಕೆ ಹೀಗೆ ಹತ್ತು ಹಲವು ವಿಧಗಳಲ್ಲಿ ನಿಂಬೆ ಅತ್ಯುಪಯುಕ್ತ. ನಿಂಬೆ ರಸವನ್ನು ಸೇವಿಸುವುದರಿಂದ ಆಯಾಸ ಮತ್ತು ಆಲಸ್ಯದಂತಹ (laziness) ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇನ್ನೂ ಅನೇಕ ಜನರು ಈ ಒಣಗಿದ ನಿಂಬೆಹಣ್ಣುಗಳನ್ನು ಎಸೆಯುತ್ತಾರೆ. ಆದರೆ ತಜ್ಞರ ಪ್ರಕಾರ, ಒಣಗಿದ ನಿಂಬೆಹಣ್ಣುಗಳು ಅನೇಕ ಪ್ರಯೋಜನಗಳನ್ನು ಹೊಂದಿವೆ. ಈ ಒಣಗಿದ ನಿಂಬೆಯಲ್ಲಿ ವಿಟಮಿನ್ ಸಿ, ಕಬ್ಬಿಣ (iron), ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ಸಕ್ಕರೆ, ಫೈಬರ್, ಕೊಬ್ಬು ಮತ್ತು ಪ್ರೋಟೀನ್ ಸಮೃದ್ಧವಾಗಿದೆ. * …

Read More »

ನಮ್ಮೊಳಗಿನ ಭಾವನೆ, ಮನಸ್ಸನ್ನು ನಾವೇ ನಿಯಂತ್ರಿ ಸಬೇಕು; ವಾಗ್ಮಿ ಬಿ.ಕೆ. ಶಿವಾನಿ

ಮಣಿಪಾಲ : ನಮ್ಮೊಳಗಿನ ಭಾವನೆ, ಮನಸ್ಸನ್ನು ನಾವೇ ನಿಯಂತ್ರಿ ಸಬೇಕು. ಇದರ ಕೀಲಿ ಕೈ ಇನ್ನೊಬ್ಬರಿಗೆ ಕೊಡಬಾರದು. ಪ್ರತಿ ವಿಷಯದಲ್ಲೂ ವೈಯಕ್ತಿಕವಾಗಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವ ಮೂಲಕ ಕುಟುಂಬದಲ್ಲೂ ಸಕಾರಾತ್ಮಕತೆ ರೂಪಿಸುತ್ತ ಹೋಗಬೇಕು. ಈ ಪ್ರಕ್ರಿಯೆ ಮುಂದು ವರಿದಂತೆ ಸಮಾಜದಲ್ಲೂ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ ಎಂದು ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಅವರು ಹೇಳಿದರು. ಅವರು ಮಣಿಪಾಲ ಶಾಖೆಯ ವತಿಯಿಂದ ರವಿವಾರ ಮಣಿಪಾಲದ ಎಂಜೆಸಿ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಅಪರಿಮಿತ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ‘ಜೋಡಿಸಿ’ ಎಂಬ ಕಾರ್ಯಕ್ರಮದಲ್ಲಿ ಸ್ಫೂರ್ತಿದಾಯಕ …

Read More »

ವಾಹನ ಸವಾರರೇ ಫೆ.17 ರೊಳಗೆ ʻHSRPʼ ನಂಬರ್ ಪ್ಲೇಟ್ ಅಳವಡಿಸದಿದ್ದರೆ 1000 ದಂಡ ಫಿಕ್ಸ್..!‌

ಕರ್ನಾಟಕ ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಂದ್ರೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು, ಡೆಡ್‌ಲೈನ್ ನೀಡಿ ಆದೇಶ ಹೊರಡಿಸಲಾಗಿದೆ. 2024ರ ಫೆಬ್ರವರಿ 17 ರವರೆಗೆ ಡೆಡ್‌ಲೈನ್ ಫಿಕ್ಸ್ ಮಾಡಲಾಗಿದೆ. ಹೀಗಿದ್ದಾಗಲೇ ವಾಹನ ಮಾಲೀಕರಿಗೆ ನಂಬರ್ ಪ್ಲೇಟ್ ಬದಲಾಯಿಸುವ ವಿಚಾರದಲ್ಲಿ ಈಗ ಮತ್ತೊಂದು ಆಘಾತ ಎದುರಾಗಿದೆ! ಏನದು ಹೊಸ ಶಾಕ್? ಮುಂದೆ ಓದಿ ಅಂದಹಾಗೆ ಕರ್ನಾಟಕದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನ ಸಂಖ್ಯೆಯು 2 ಕೋಟಿಯಷ್ಟಿದೆ. ಆದರೆ ಇವರೆಲ್ಲಾ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದು …

Read More »

ಖಾಸಗಿ ಆಸ್ಪತ್ರೆಗಳಲ್ಲಿ ʻಚಿಕಿತ್ಸೆ ವೆಚ್ಚದ ಬೋರ್ಡ್ʼ ಕಡ್ಡಾಯ : ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚ ಬೋರ್ಡ್‌ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಚಿವ ಡಾ.ಶರಣಪ್ರಕಾಶಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸಚಿವ ಶರಣಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆಯ ವೆಚ್ಚದ ಬೋರ್ಡ್‌ ಗಳನ್ನು ಕಡ್ಡಾಯವಾಗಿ ಹಾಕಬೇಕು. ಇದರಿಂದ ಸುಲಿಗೆಯನ್ನು ತಪ್ಪಿಸಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನೀಡುವ ವೆಚ್ಚದ ಕುರಿತಯು ಸರಿಯಾದ ಮಾಹಿತಿಯನ್ನು ರೋಗಿಗಳಿಗೆ ಮತ್ತು ರೋಗಿಯ ಸಂಬಂಧಿಗಳಿಗೆ ತಿಳುವಳಿಕೆ ನೀಡಿ, ತದನಂತರ ಚಿಕಿತ್ಸೆ ಆರಂಭಿಸಬೇಕು ಎಂದು ಹೇಳಿದ್ದಾರೆ.

Read More »

ಹಿಂದೂ ವಿರೋಧಿ ಕ್ರಿಶ್ಚಿಯನ್ ಮಿಷನರಿ ಶಾಲೆಗಳನ್ನ ತ್ಯಜಿಸಿ, ಈ ಬಗ್ಗೆ ಪೋಷಕರು ಚಿಂತಿಸಲು ಇದು ಸಕಾಲ – ಶಾಸಕ ಭರತ್ ಶೆಟ್ಟಿ ವೈ

ಮಂಗಳೂರು : ಕ್ರಿಶ್ಚಿಯನ್ ಮಿಷಿನರಿ ಶಾಲೆಗಳಲ್ಲಿ ಹಿಂದೂ ವಿರೋಧಿ ಭಾವನೆ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೂ ಸಾಂಪ್ರದಾಯಿಕ ಹೂ ಮುಡಿಯಲು,ಬಳೆ ಹಾಕಲು,ತಿಲಕ ಹಾಕಲು ಹೀಗೆ ಹಲವು ಆಚಾರಗಳನ್ನು ನಮ್ಮ ಹೆಣ್ಮಕಳ್ಳಿಂದ ದೂರ ಮಾಡಿದ ಕ್ರಿಶ್ಚಿಯನ್ ಮಿಷನರಿಗಳು ಇದೀಗ ರಾಮ ಮಂದಿರದ ವಿರುದ್ದದ ದ್ವೇಷ ಭಾವನೆ ಪಸರಿಸಲು ಹೂಡುತ್ತಿರುವ ಷಡ್ಯಂತ್ರ ಸಹಿಸಲು ಅಸಾಧ್ಯ. ಸಂಬಂಧಪಟ್ಟ ಶಾಲೆಯ ಶಿಕ್ಷಕಿ ವಿರುದ್ದ ಆಡಳಿತ ಮಂಡಳಿ ಕ್ರಮ ಜರುಗಿಸ ಇಲ್ಲದಿದ್ದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ. ನಗರದ ಜೆರೋಸ ಶಾಲೆಯ ಶಿಕ್ಷಕಿ ಶ್ರೀರಾಮ ಹಾಗೂ …

Read More »

ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ- ಇಬ್ಬರು ವಶಕ್ಕೆ

ವಿಟ್ಲ: ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ನಡೆದ ಕೋಟ್ಯಂತರ ನಗ ನಗದು ಕಳ್ಳತನ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯ ವಿಶೇಷ ತಂಡ ತನಿಖೆ ಕೈಗೆತ್ತಿಕೊಂಡಿದ್ದು, ಬ್ಯಾಂಕ್‌್ ಹಾಗೂ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದೆ. ಇದರ ಆಧಾರದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ವಾಹನದ ಸುಳಿವು ಸಿಕ್ಕಿದ್ದು, ಮತ್ತಷ್ಟು ವಾಹನ ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ದೃಶ್ಯಾವಳಿ ಕಳುಹಿಸಲಾಗಿದೆ. ಇನ್ನು ಕಳ್ಳರು ಮೊದಲೇ ಬ್ಯಾಂಕ್‌ನ ಸಮಗ್ರ ಮಾಹಿತಿ ಪಡೆದುಕೊಂಡಿದ್ದು, ಎಲ್ಲಾ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ಕಿಟಕಿ ಮೂಲಕ ನುಗ್ಗಿದ್ದಾರೆ. ಭಾರೀ ಮೊತ್ತದ ಕಳವು ನಡೆದ ಬಳಿಕ …

Read More »

You cannot copy content of this page.