ದೇಶ

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು-ತಾಯಿ ಮಾಡಿದ್ದೇನು ಗೊತ್ತಾ…?

ಪ್ರೇಮಿಗಳ ದಿನ ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ನಡೆದದ್ದು ಮಾರಿಹಬ್ಬ… ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ …

Read More »

ಯೂಟ್ಯೂಬ್ ನೂತನ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ

ನವದೆಹಲಿ: ಯೂಟ್ಯೂಬ್ ಸಿಇಒ ಸುಸಾನ್ ವೊಜ್ಸಿಕಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ಭಾರತ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ. ಯೂಟ್ಯೂಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಸಾನ್ ವೊಜ್ಸಿಕಿ ಅವರು ಒಂಬತ್ತು ವರ್ಷಗಳ ನಂತರ ವಿಶ್ವದ ಅತಿದೊಡ್ಡ ಆನ್‌ಲೈನ್ ವೀಡಿಯೊ ಪ್ಲಾಟ್‌ಫಾರ್ಮ್‌ನ ಚುಕ್ಕಾಣಿ ತ್ಯಜಿಸಿದ್ದಾರೆ. ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್ ಅವರು ಯೂಟ್ಯೂಬ್‌ನ ಹೊಸ ಮುಖ್ಯಸ್ಥರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. 54 ವರ್ಷದ ಸುಸಾನ್ ವೊಜ್ಸಿಕಿ ಅವರು “ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಬಗ್ಗೆ ನಾನು ಆಸಕ್ತಿ …

Read More »

ಹಿಂದೂ ಯುವತಿಯರೇ ಪರ್ಸ್‌ನಲ್ಲಿ ಲಿಪ್‌ಸ್ಟಿಕ್‌ ಬದಲು ಚಾಕು ಇಟ್ಟುಕೊಳ್ಳಿ: ಸಾಧ್ವಿ ಪ್ರಾಚಿ

ಭೋಪಾಲ್‌: ಹಿಂದೂ ಯುವತಿಯರೇ ನಿಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್‌, ಬಾಚಣಿಗೆ ಇಟ್ಟುಕೊಳ್ಳೋದನ್ನ ಬಿಡಿ. ಅದರ ಬದಲು ಚಾಕು ಇಟ್ಟುಕೊಳ್ಳಿ ಎಂದು ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಕರೆಕೊಟ್ಟಿದ್ದಾರೆ. ಭೋಪಾಲ್‌ನಲ್ಲಿ ಮಾತನಾಡಿದ ಅವರು, ಮುಸ್ಲಿಂ ಹೆಣ್ಣುಮಕ್ಕಳಂತೆ ಹಿಂದೂ ಹೆಣ್ಣುಮಕ್ಕಳು ತಮ್ಮ ಸಂಪ್ರದಾಯವನ್ನು ಬಿಡಬಾರದು. ಪ್ರೀತಿಯ ನಾಟಕವಾಡಿ ಜಿಹಾದಿಗಳು ನಿಮ್ಮ ಕುತ್ತಿಗೆ ಹಿಸುಕಲು ಮುಂದಾದ್ರೆ ಅದಕ್ಕೂ ಮೊದಲೇ ನೀವು ಅವರ ಕುತ್ತಿಗೆ ಹಿಸುಕಿ ಎಂದು ಸಾಧ್ವಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

Read More »

BREAKING NEWS: ಪಂಜಾಬ್‌ನಲ್ಲಿ ಜಾಫರ್ ಎಕ್ಸ್‌ಪ್ರೆಸ್ ಸ್ಫೋಟ

ಪೇಶಾವರ : ಪಂಜಾಬ್‌ನ ಚಿಚಾವಟ್ನಿಯಲ್ಲಿ ಗುರುವಾರ ಬೆಳಗ್ಗೆ ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್ ಚಿಚಾವಟ್ನಿ ರೈಲು ನಿಲ್ದಾಣದಿಂದ ಹಾದು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಜಾಫರ್ ಎಕ್ಸ್‌ಪ್ರೆಸ್, ಪೇಶಾವರದಿಂದ ಬರುತ್ತಿತ್ತು. ಫೋನ್‌ನಲ್ಲಿ ಡಾನ್‌ನೊಂದಿಗೆ ಮಾತನಾಡಿದ ಪಾಕಿಸ್ತಾನ ರೈಲ್ವೇಸ್ ವಕ್ತಾರ ಬಾಬರ್ ಅಲಿಗೆ ಸಣ್ಣ ಪುಟ್ಟ ಗಾಯ ಸಂಭವಿಸಿದೆ ಎಂದು ವರದಿಯಾಗಿದೆ. ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದವೇಲೆ …

Read More »

ಶ್ರದ್ಧಾ ವಾಲ್ಕರ್ ಹತ್ಯಾ ಮಾದರಿಯಲ್ಲಿಯೇ ಮತ್ತೊಂದು ಕೊಲೆ, ಕೊಂದು ಫ್ರಿಡ್ಜ್ ನಲ್ಲಿಟ್ಟ ಹಂತಕ..!

ಲಿವಿಂಗ್ ಟುಗೆದರ್ ನಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ ಫಿಡ್ಜ್‌ನಲ್ಲಿಟ್ಟ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವರ್ಷ ಇದೇ ರೀತಿ Shraddha Wakar ಎಂಬಾಕೆಯ ಕೊಲೆ ನಡೆದಿತ್ತು. ಆಕೆಯ ಶವವನ್ನು ಕತ್ತರಿಸಿ 35 ಭಾಗ ತುಂಡರಿಸಿ ಫ್ರಿಡ್ಜ್‌ನಲ್ಲಿರಿಸಿ ಬಳಿಕ ವಿಲೇವಾರಿ ಮಾಡಲಾಗಿತ್ತು. ಇದೀಗ ಅಂತದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಲೀವ್‌ ಇನ್‌ ರಿಲೇಷನ್‌ನಲ್ಲಿದ್ದ ತನ್ನ ಗೆಳತಿ ನಿಕ್ಕಿ ಯಾದವ್‌ಳನ್ನು ಸಾಹಿಲ್‌ ಗೆಹ್ಲೋಟ್‌ (24) ಕೊಲೆ ಮಾಡಿದ್ದ. ನಂತರ ಮೊಬೈಲ್‌ ಡೇಟಾ ಕೇಬಲ್‌ ಅನ್ನು ಆಕೆಯ ಕತ್ತಿಗೆ ಸುತ್ತಿ …

Read More »

ಮಹಿಳಾ ಪ್ರೀಮಿಯರ್ ಲೀಗ್ ; RCB ಮಹಿಳಾ ತಂಡದ ‘ಮೆಂಟರ್’ ಆಗಿ ಟೆನಿಸ್ ತಾರೆ ‘ಸಾನಿಯಾ ಮಿರ್ಜಾ’ ನೇಮಕ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಹಿಳಾ ಪ್ರೀಮಿಯರ್ ಲೀಗ್ ( WPL) ನ ಮೊದಲ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡದ ‘ಟೀಮ್ ಮೆಂಟರ್’ ಆಗಿ ನೇಮಕಗೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಂದು ನಡೆಯಲಿದೆ. ಸಾನಿಯಾ ಮಿರ್ಜಾ ಅವರನ್ನು ಮಾರ್ಗದರ್ಶಕರಾಗಿ ನೇಮಿಸಿದ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯಸ್ಥ ಮತ್ತು ಉಪಾಧ್ಯಕ್ಷ ರಾಜೇಶ್ ವಿ ಮೆನನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಸಾನಿಯಾ ಮಿರ್ಜಾ ಅವರನ್ನು RCB ಮಹಿಳಾ ತಂಡದ ಮಾರ್ಗದರ್ಶಕರಾಗಿ …

Read More »

BIGG NEWS : 13 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಿಸಿದ ರಾಷ್ಟ್ರಪತಿ

ನವದೆಹಲಿ : ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಜಡ್ಜ್‌ ಹುದ್ದೆಯಿಂದ ನಿವೃತ್ತರಾಗಿದ್ದ ಕರ್ನಾಟಕ ಮೂಲದ ನ್ಯಾ. ಎಸ್‌.ಅಬ್ದುಲ್‌ ನಜೀರ್‌ ಸೇರಿದಂತೆ 13 ಜನರನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದಾರೆ.   7 ಜನರನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದ್ದರೆ, 6 ಜನರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ನೂತನ ರಾಜ್ಯಪಾಲರ ಪಟ್ಟಿ ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್ ನೇಮಕ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಾಲ್ಯ ತ್ರಿವಿಕ್ರಮ್ ಪರ್ನಾಯಕ್ ಸಿಕ್ಕಿಂ ರಾಜ್ಯಪಾಲರಾಗಿ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಾರ್ಖಂಡ್ ರಾಜ್ಯಪಾಲರಾಗಿ …

Read More »

ಧಾರೆ ಸೀರೆ, ಮೈ ತುಂಬಾ ಚಿನ್ನಾಭರಣ ತೊಟ್ಟು ಪರೀಕ್ಷೆ ಬರೆದ ಮಧುಮಗಳು : ವಿಡಿಯೋ ವೈರಲ್

ಕೇರಳ : ಕೇರಳದ ವಧುವೊಬ್ಬಳು ಬಿಳಿ ಕೋಟ್ ಧರಿಸಿ ಸ್ಕೆತಾಸ್ಕೋಪ್ ಹಿಡಿದು ಪ್ರಾಯೋಗಿಕ ಪರೀಕ್ಷೆ ಬರೆದಿರುವ ವಿಡಿಯೋ ವೈರಲ್ ಆಗಿದೆ. ಮದುವೆಯ ದಿನದಂದು ಪರೀಕ್ಷೆ ಬರೆಯಲು ಬಂದ ಯುವತಿ ನೆಟ್ಟಿಗರ ಮೆಚ್ಚುಗೆಗೆ ವ್ಯಕ್ತವಾಗಿದ್ದಾರೆ.ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಮತ್ತು ಇತರ ಸಾಮಾಜಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.   ವಧು ಶ್ರೀ ಲಕ್ಷ್ಮಿ ಅನಿಲ್ ಎಂದು ಗುರುತಿಸಲಾಗಿದ್ದು, ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿನಿ. ಆಕೆಯ ಪರೀಕ್ಷೆಯ ದಿನಾಂಕವು ತನ್ನ ಮದುವೆಯ ದಿನಾಂಕ ಒಟ್ಟಿಗೆ ಬಂದಿದ್ದರಿಂದ ಮದುವೆಯ ಉಡುಪು ಹಾಗೂ ಮೇಕ್‌ಅಪ್ …

Read More »

ಕನ್ಯಾಕುಮಾರಿಯಲ್ಲಿ ಮಂಗಳೂರಿನ ಮೀನುಗಾರರ ಮೇಲೆ ಹಲ್ಲೆ..!

ಮಂಗಳೂರು : ಮಂಗಳೂರಿನ ಮೀನುಗಾರ ಬೋಟುಗಳ ಮೇಲೆ ಕಲ್ಲು ಎಸೆದು ದಾಳಿ ನಡೆಸಿ ಹಲ್ಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಕನ್ಯಾಕುಮಾರಿ ಬಳಿ ತಮಿಳುನಾಡು ವೀನುಗಾರರು ಈ ದುಷ್ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. 7-8 ಅಡಿ ಆಳದಲ್ಲಿ ಮೀನುಗಾರಿಗೆ ತೆರಳಿದ್ದ ಮಂಗಳೂರಿನ ಬೋಟುಗಳನ್ನು ಸುತ್ತುವರಿದು ಹಿಗ್ಗಾಮುಗ್ಗಾ ಕಲ್ಲುಗಳನ್ನು ಎಸೆಯುವ ಮೂಲಕ ಈ ದಾಳಿ ನಡೆಸಿದ್ದಾರೆ. ಕಲ್ಲೇಟಿನಿಂದ ಮಂಗಳೂರಿನ ಮೀನುಗಾರರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Read More »

ಸರ್ಕಾರದಿಂದ ʼವೈದ್ಯರಿಗೆ ಹೊಸ ಡ್ರೆಸ್ ಕೋಡ್‌ʼ : ಶಾರ್ಟ್ಸ್, ಜೀನ್ಸ್, ಸ್ಕರ್ಟ್, ಮೇಕಪ್ ನಿಷೇಧ

ಹರಿಯಾಣ : ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ರೋಗಿಗಳು ಗುರುತಿಸಲು ಸುಲಭವಾಗಲು ಹರಿಯಾಣ ಸರ್ಕಾರ ಹೊಸ ಡ್ರೆಸ್ ಕೋಡ್ ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಏಕರೂಪತೆಯನ್ನು ತರಲು ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್ ಹಾಗೂ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ. ಪುರುಷರು ತಮ್ಮ ಕಾಲರ್‌ಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸುವಂತಿಲ್ಲ ಎನ್ನಲಾಗಿದೆ. ‘ಡ್ರೆಸ್ ಕೋಡ್ ಅನ್ನು ಅನುಸರಿಸದ ಸಿಬ್ಬಂದಿಗಳ …

Read More »

You cannot copy content of this page.