ಬೆಳ್ತಂಗಡಿ: ಅಕ್ರಮವಾಗಿ ಮೊಬೈಲ್ ಸಿಮ್ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡುತ್ತಿದ್ದ ಇಬ್ಬರು ಅರೆಸ್ಟ್

ಬೆಳ್ತಂಗಡಿ: ಪರಿಚಿತರನ್ನು ಪುಸಲಾಯಿಸಿ ಅವರ ಹೆಸರಲ್ಲಿ ಮೊಬೈಲ್ ಸಿಮ್ ಗಳನ್ನು ಪಡೆದು ಅದನ್ನು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಬೆಳ್ತಂಗಡಿಯ ನಿವಾಸಿಗಳಾದ ಬಿಬಿಎ ವಿದ್ಯಾರ್ಥಿ ಶಹಾದ್ ಮೊಹಮ್ಮದ್ ಸಮೀರ್‌ (21), ಮೊಹಮ್ಮದ್ ಅಜೀಮ್‌ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 86 ಸಿಮ್ ಕಾರ್ಡ್‌ಗಳು ಸಹಿತ ₹ 5.49 ಲಕ್ಷ ಮೌಲ್ಯದ ಸ್ವತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

 

ಆರೋಪಿಗಳು ಮರೋಳಿ ಗ್ರಾಮದ ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಯುವಕರು ಭಾರಿ ಸಂಖ್ಯೆಯಲ್ಲಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿ, ವಿದೇಶದಲ್ಲಿರುವವರಿಗೆ ಅಕ್ರಮವಾಗಿ ಮಾರಾಟ ಮಾಡಲು ಸಂಚು ರೂಪಿಸಿದ ಬಗ್ಗೆ ಸೆನ್‌ ಠಾಣೆಯ ಪಿಎಸ್‌ಐ ಗುರಪ್ಪ ಕಂಟಿ ಅವರಿಗೆ ಮಾಹಿತಿ ಬಂದಿತ್ತು.

 

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು, ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್‌ನ ಸಾಜೀದ್ ಸೂಚನೆಯಂತೆ ವಿದೇಶಕ್ಕೆ ಮಾರಾಟ ಮಾಡಲು ಗೆಳೆಯರನ್ನು ಪುಸಲಾಯಿಸಿ ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಆರೋಪಿ ಸಮೀರ್‌ನಿಂದ 86 ಸಿಮ್‌ ಕಾರ್ಡ್‌, ಎರಡು ಮೊಬೈಲ್ ಫೋನ್‌, ಸಾಗಾಟಕ್ಕೆ ಬಳಸಿದ ಮಾರುತಿ ಸ್ವಿಫ್ಟ್‌ ಕಾರನ್ನು ಹಾಗೂ ಇನ್ನೊಬ್ಬ ಆರೋಪಿ ಅಜೀಮ್‌ನಿಂದ ಒಂದು ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Check Also

ಕಾಪು: ಎರಡು ಗುಂಪುಗಳ ನಡುವೆ ಹೊಡೆದಾಟ- ಪ್ರಕರಣ ದಾಖಲು

ಕಾಪು: ಮಣಿಪುರ ಗ್ರಾಮದ ರಹಮಾನಿಯ ಜುಮ್ಮಾ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಎರಡು ಯುವಕರ ಗುಂಪು ಸೇರಿಕೊಂಡು ಶಾಂತಿ ಭಂಗ …

Leave a Reply

Your email address will not be published. Required fields are marked *

You cannot copy content of this page.