December 21, 2024
WhatsApp Image 2024-07-24 at 9.33.10 PM

ಮಂಗಳೂರು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು .
ಆಯ್ಕೆ ಪ್ರಕ್ರಿಯೆಯನ್ನು ಎಡಪದವು ಮಹಾ ಶಕ್ತಿ ಕೇಂದ್ರದ ಪ್ರಭಾರಿ ಸೋಹನ್ ಅತಿಕಾರಿ ಇವರು ನಡೆಸಿಕೊಟ್ಟರು .
ಕೊಳವೂರು ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಳ್ಳಾಜೆ , ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ದುರ್ಗಾಕೋಡಿ , ಸದಸ್ಯರಾಗಿ ಅಜಯ್ ಅಮೀನ್ ನಾಗಂದಡಿ , ಶೇಖರ್ ನೆಲಚ್ಚಿಲ್ , ಸದಾನಂದ ಶೆಟ್ಟಿ ಕೊಳವೂರು ಗುತ್ತು ಇವರು ಆಯ್ಕೆಯಾದರು .
ಈ ಸಂಧರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ , ಉಪಾಧ್ಯಕ್ಷರಾದ ಸುಶ್ಮಾ ಸಂತೋಷ್ , ಸದಾಸ್ಯರಾದ ಮಾಲತಿ ಗಿರೀಶ್ , ಎಡಪದವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್ , ಜಿಲ್ಲಾ SC ಮೋರ್ಚಾದ ಪದಾಧಿಕಾರಿಗಳಾದ ಹೊನ್ನಯ ಅಟ್ಟೆಪದವು , ರಮೇಶ್ ಅಟ್ಟೆಪದವು , ಕೊಳವೂರು 1 ನೇ ವಾರ್ಡಿನ ಕಾರ್ಯದರ್ಶಿ ಅಶೋಕ್ ಸಪಲಿಗ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .

About The Author

Leave a Reply

Your email address will not be published. Required fields are marked *

You cannot copy content of this page.