ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ

ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ತಾರೀಕು 19.05.2024ರ ರವಿವಾರ ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರಗಿತು. ಹತ್ತನೆಯ ಹನ್ನೊಂದನೆಯ ಹಾಗೂ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶ್ರೀ ಆದಿಶಂಕರಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಶ್ರೀ ಶಂಕರಾಚಾರ್ಯರ ಚಿತ್ರಕ್ಕೆ ದೀಪ ಪ್ರಜ್ವಲನ ಹಾಗೂ ಪುಷ್ಪಾರ್ಚನೆಯನ್ನು ಸಲ್ಲಿಸುವುದರ ಮೂಲಕ ಶ್ರೀ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು(ರಿ) ಇದರ ಅಧ್ಯಕ್ಷರಾದ ಶ್ರೀ ಕೆ ಮಂಜುನಾಥ್ ಹೆಬ್ಬಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿಯ ಶ್ರೀ ಶಾರದಾ ಮಂಟಪದ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ ಭಂಡಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದವಿದ್ಯಾರ್ಥಿನಿ ಹರ್ಷಿತಾ ರಚಿಸಿದ್ದ ಶ್ರೀ ಶಂಕರಾಚಾರ್ಯರ ಸುಂದರ ಚಿತ್ರವನ್ನು ಸಹ ಪೂಜಾ ಪೀಠದಲ್ಲಿ ಇರಿಸಲಾಯಿತು.ನಂತರ 9:30 ರಿಂದ 11 ಗಂಟೆಯ ತನಕ ಪ್ರಬಂಧ ಸ್ಪರ್ಧೆಯ ಬರವಣಿಗೆಯು ನಡೆಯಿತು. 11 ರಿಂದ 12 ಗಂಟೆಯ ತನಕ ಶ್ರೀ ಶಾರದಾ ಭಜನಾ ಮಂಡಳಿ ಕುಂಜಿಬೆಟ್ಟು ಉಡುಪಿ ಇವರು ಶ್ರೀಶಂಕರಾಚಾರ್ಯ ವಿರಚಿತ ಐದು ಸ್ತೋತ್ರಗಳನ್ನು ಸುಷ್ರಾವ್ಯವಾಗಿ ಹಾಡಿದರು.ವಿದ್ಯಾರ್ಥಿಗಳು ಹಾಗೂ ಪೋಷಕರು ಜೊತೆಗೂಡಿದ್ದರು. ನಂತರ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ತಮ್ಮ ಅನಿಸಿಕೆಯನ್ನು ನೀಡಿ ಈ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡದ್ದರಿಂದ ಮನೆಯವರೆಲ್ಲರಿಗೂ ಶ್ರೀ ಶ್ರೀ ಶಂಕರಾಚಾರ್ಯರ ಮಹಾನ್ ವ್ಯಕ್ತಿತ್ವದ ಪರಿಚಯವಾಯಿತು ಎಂದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಶಂಕರ ತತ್ವ ಪ್ರಚಾರ ಸಮಿತಿಯ ಸಂಚಾಲಕರಾದ ಶ್ರೀ ಟಿ ವಿಶ್ವನಾಥ ಶಾನಭಾಗ್ ಹಾಗೂ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಚ್ ಪಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ಟಿ ವಿಶ್ವನಾಥ ಶಾನುಭಾಗ್ ರವರು ಮಾತನಾಡುತ್ತಾ ಶ್ರೀ ಶಂಕರರು ಎರಡು ಜೀವಗಳಲ್ಲಿ ಭೇದವಿಲ್ಲವೆಂಬ ಅದ್ವೈತ ತತ್ವವನ್ನು ಪ್ರಚಾರ ಮಾಡಿದವರು , ಆದುದರಿಂದ ಅವರ ಜಯಂತಿಯ ಆಚರಣೆಯನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ ತಮ್ಮ ಮನೆಯಲ್ಲಿ ಆಚರಿಸಬೇಕು ಎಂದು ಕರೆ ನೀಡಿದರು. ಶ್ರೀ ರವಿರಾಜ್ ಹೆಚ್‍ ಪಿ ಅವರು ಮಾತನಾಡುತ್ತಾ ಈ ಕಾರ್ಯಕ್ರಮವು ಮುಂದಿನ ವರ್ಷಗಳಲ್ಲಿ ಇನ್ನೂ ಹಲವು ಸಂಘಟನೆಗಳೊಂದಿಗೆ ಸೇರಿಕೊಂಡು ಇನ್ನೂ ದೊಡ್ಡ ಮಟ್ಟದಲ್ಲಿ ಆಚರಿಸುವಂತಾಗಲಿ ಎಂದು ಕರೆ ನೀಡಿದರು ಹಾಗೂ ಸಾಹಿತ್ಯ ಪರಿಷತ್ತಿನ ಮನೆಗೊಂದು ಗ್ರಂಥಾಲಯ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು. ಇಂಚರ ಸರ್ಜಿಕಲ್ ಕ್ಲಿನಿಕ್ ನ ನಿರ್ದೇಶಕರಾದ ಡಾ ವೈ ಸುದರ್ಶನ ರಾವ್ ಇವರು ಸ್ವಾಗತಿಸಿದರು.ಶ್ರೀ ಎಲ್ಲೂರು ಲಕ್ಷ್ಮಿ ನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ ವೈ ಭುವನೇಂದ್ರ ರಾವ್ ಹಾಗೂ ಶ್ರೀ ವೈ ಶಾಂತಿನಾಥ ರಾವ್ ಇವರು ದಿವಂಗತ ಸಾತ್ವಿಕ್ ಶಾಸ್ತ್ರಿ ಸ್ಮಾರಕ ವಿದ್ಯಾರ್ಥಿ ವೇತನವನ್ನು ವಿತರಿಸಿದರು ನಂತರ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ದಂಡ ತೀರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ದಿವ್ಯ ಲಕ್ಷ್ಮಿ ಇವಳಿಗೆ ಬಹುಮಾನವನ್ನು ಶ್ರೀ ಟಿ ವಿಶ್ವನಾಥ ಶಾನುಭಾಗ್ ಪ್ರದಾನಿಸಿದರು ದ್ವಿತೀಯ ಸ್ಥಾನ ಪಡೆದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಮ್ಯ ಕೆ ಇವರಿಗೆ ಶ್ರೀ ರವಿರಾಜ್ ಟಿ ಪಿ ಇವರು ಪ್ರಶಸ್ತಿಯನ್ನು ಪ್ರದಾನಿಸಿದರು. ಡಾ. ವೈ ರವೀಂದ್ರನಾಥ ರಾವ್ ಹಾಗೂ ಶ್ರೀ ವೈ ಭುವನೇಂದ್ರ ರಾವ್ ಹಾಗೂ ಶ್ರೀಮತಿ ಮೀರಾ ರಾಜೇಶ್ ಇವರು ತೀರ್ಪುಗಾರರಾಗಿ ಸಹಕರಿಸಿದ್ದರು. ಇವರನ್ನು ಡಾ| ವೈ ಸುದರ್ಶನ್ ರಾವ್ ಹಾಗೂ ಡಾ ವಿದ್ಯಾ ಎಸ್ ರಾವ್ ಇವರು ಗೌರವಿಸಿದರು. ಕಾರ್ಯಕ್ರಮದ ಸಂಚಾಲಕಿಯಾದ ಡಾ| ವಿದ್ಯಾ ಎಸ್ ರಾವ್ ಇವರ ಧನ್ಯವಾದ ಸಮರ್ಪಣೆ ಹಾಗೂ ಭೋಜನದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.ಶ್ರೀಮತಿ ಸುನಿತಾ ಪ್ರಸಾದ್ ರಾವ್ ಇವರು ಕಾರ್ಯಕ್ರಮವನ್ನು ನಿರೂಪಿಸಿದ್ದರು.

Check Also

ಮಣಿಪಾಲ: ಪರೀಕ್ಷೆಯಲ್ಲಿ ಅನುತ್ತೀರ್ಣ – ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: 10 ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.ಮೃತ ಬಾಲಕನನ್ನು ಕಾಪು …

Leave a Reply

Your email address will not be published. Required fields are marked *

You cannot copy content of this page.