ತಾಜಾ ಸುದ್ದಿ

ಸಖತ್ ಟೇಸ್ಟಿ: ಕಹಿ ಇರದಂತೆ ಹಾಗಲಕಾಯಿ ಚಿಪ್ಸ್ ಹೀಗೆ ಮಾಡಿ

ಹಾಗಲಕಾಯಿ ಅಂದ ಕೂಡಲೇ ಮೊದಲು ನೆನಪಾಗುವುದು ಅದರ ಕಹಿ ರುಚಿ. ಕಹಿಯಾಗಿದ್ದರು ಹಾಗಲಕಾಯಿ ದೇಹದ ಆರೋಗ್ಯ (Healthy Body) ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹ (Diabetes) ನಿಯಂತ್ರಣಕ್ಕೆ ಹಾಗಲಕಾಯಿ ರಾಮಬಾಣ. ಹಾಗಲಕಾಯಿಯಲ್ಲಿ ಮಾಡುವ ಖಾದ್ಯಗಳು ಕಹಿಯಾಗಿರುತ್ತದೆ ಎನ್ನುವ ಕಾರಣಕ್ಕೆ ಎಷ್ಟೋ ಮಂದಿ ಅದನ್ನು ತಿನ್ನಲು ಮುಖ ಮುರಿಯುತ್ತಾರೆ. ಆದರೆ ರುಚಿಕರವಾಗಿ ಹಾಗಲಕಾಯಿ ಚಿಪ್ಸ್‌ ಮಾಡಿ ನೋಡಿ, ಹಾಗಲಕಾಯಿ ಅಂದರೆ ಮಾರುದ್ದ ಓಡೋರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇದನ್ನು ಕಹಿ ಇಲ್ಲದೇ, ಗರಿಗರಿಯಾಗಿ ಮಾಡಬಹುದು. ಆಗ ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಕಹಿ ರುಚಿಯಿಲ್ಲದೇ, …

Read More »

ಕಾಸರಗೋಡು: ರಸ್ತೆ ಅಪಘಾತಕ್ಕೆ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಬಲಿ

ಕಾಸರಗೋಡು: ಟಿಪ್ಪರ್ ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿರುವ ಅಪಘಾತಕ್ಕೆ ಬೈಕ್ ಸವಾರ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಬಲಿಯಾಗಿರುವ ಘಟನೆ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಪ್ಪಳ ನಯಾಬಜಾ‌ರ್ ನಾಟೇಕಲ್ ನಿವಾಸಿ ಮುಹಮ್ಮದ್ ಮಿಸ್ಸಾಹ್ (21) ಮೃತಪಟ್ಟ ಯುವಕ. ಸಹಸವಾರ ಮಿಸ್ಲಾಬ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಸ್ಸಾಹ್ ಬೈಕಿನಲ್ಲಿ ಕಾಸರಗೋಡಿಗೆ ತೆರಳಿ ಮಿಸ್ಲಾಬ್ ನೊಂದಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇವರಿಬ್ಬರೂ ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು. ಈ …

Read More »

ಉಡುಪಿ: ನಿಯಂತ್ರಣ ತಪ್ಪಿದ ಬೈಕ್ -21 ವರ್ಷದ ಯುವಕ ಮೃತ್ಯು

ಉಡುಪಿ:ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿದ ಘಟನೆ ಉಡುಪಿಯ ನಿಟ್ಟೂರು ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ 21 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೃತನನ್ನು ಸ್ವಸ್ತಿಕ್ ಎಂದು ಗುರುತಿಸಲಾಗಿದ್ದು, ಇಲ್ಲಿನ ನಿಟ್ಟೂರಿನ ಕಾಂಚನಾ ಹುಂಡೈ ಕಾರ್ ಶೋ ರೂಂ ಬಳಿ ಅಪಘಾತ ಸಂಭವಿಸಿದೆ. ಮಾರ್ಚ್ 08 ರ ನಸುಕಿನ ವೇಳೆ ಸ್ವಸ್ತಿಕ್ ತನ್ನ ಮೋಟಾರು ಬೈಕನ್ನು ಚಲಾಯಿಸಿಕೊಂಡು ಉಡುಪಿ ಕಡೆಗೆ ಬರುವ ಸಂಧರ್ಭದಲ್ಲಿ, ನಿಟ್ಟೂರಿನ ಹುಂಡೈ ಶೋರೂಮ್ ಬಳಿ ಬರುತ್ತಿದ್ದಂತೆ ವಾಹನದ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ …

Read More »

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

ಧರ್ಮಸ್ಥಳ:ಶಿವರಾತ್ರಿಯಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ಶಿವೈಕ್ಯವಾಗಿದೆ. ಲತಾ ಹೆಸರಿನ ಆನೆಯು ಶಿವರಾತ್ರಿಯಂದು ಮೃತಪಟ್ಟಿದೆ. 60ವರ್ಷ ಪ್ರಾಯದ ಲತಾ ಕಳೆದ 50ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು. ಇಂದು ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ. ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ, ಇಬ್ಬರು ಮಂಕಾಗಿದ್ದಾರೆ. ಲತಾ ಅನೆಯ ಅಂತ್ಯ ಸಂಸ್ಕಾರ ಇಂದು ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ.

Read More »

ಬಾಂಬ್ ಬ್ಲಾಸ್ಟ್ ಗೆ ಬಿಗ್ ಟ್ವಿಸ್ಟ್ : ಉಗ್ರ ಸಮೀರ್ ಟ್ರೇನಿಂಗ್ ಕೊಟ್ಟ ಯುವಕನಿಂದಲೇ ಸ್ಫೋಟ..!

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾಮ ಫ್ಲಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಸಯ್ಯದ್ ಸಮೀರ್ ಟ್ರೈನಿಂಗ್ ಕೊಟ್ಟ ಯುವಕನಿಂದಲೇ ಇದೀಗ ಬಾಂಬ್ ಸಸ್ಪೋತಿಸಲಾಗಿದೆ ಎಂಬ ಸ್ಪೋಟಕವಾದ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.   ಹೌದು, ಕಳೆದ ಎರಡು ದಿನಗಳಿಂದ ಬಳ್ಳಾರಿಯಲ್ಲಿ ಚೆನ್ನಾಗಿ ಅಧಿಕಾರಿಗಳ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ಬಳ್ಳಾರಿ ಜೈಲಿನಲ್ಲಿದ್ದ ಶಂಕಿತ ಉಗ್ರ ಸುಲೇಮಾನ್ ಹಾಗೂ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ 20 ವರ್ಷದ ಸಯ್ಯದ್ ಸಮೀರ್ ಜೊತೆ ಮೂವರನ್ನು ತೀವ್ರ ವಿಚಾರಣೆಗೆ …

Read More »

ಉಡುಪಿ: ನೇಜಾರಿನಲ್ಲಿ ನಾಲ್ವರ ಕೊಲೆ ಪ್ರಕರಣ: ಮಾ.13ಕ್ಕೆ ಚೌಗುಲೆ ನ್ಯಾಯಾಲಯಕ್ಕೆ ಹಾಜರು?

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಗುರುವಾರ ಆಪಾದನೆ ಪೂರ್ವ ವಿಚಾರಣೆ ನಡೆದಿದ್ದು, ಆರೋಪಿ ಮೇಲೆೆ ಆಪಾದನೆ ವಾಚಿಸುವ ಪ್ರಕ್ರಿಯೆಯನ್ನು ಮಾ.13ಕ್ಕೆ ನಿಗದಿ ಪಡಿಸಿ ನ್ಯಾಯಾಲಯ ಆದೇಶ ನೀಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ನೇರವಾಗಿ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ನೇಮಕಾತಿ ಪತ್ರದೊಂದಿಗೆ . ಹಾಜರಾತಿ ಪ್ರಮಾಣಪತ್ರ(ಮೆಮೊ ಫೆಟರೇಷನ್) ವನ್ನು ನ್ಯಾಯಾಲಯಕ್ಕ ಸಲ್ಲಿಸಿದರು. ಆರೋಪಿ …

Read More »

ಬಾಲರಾಮನಿಂದ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ

ಉಡುಪಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆಯಾಗಿ ಕೆಲವೇ ದಿನಗಳಲ್ಲಿ ಉಡುಪಿಯ ಮಲ್ಪೆ ವಡಭಾಂಡೇಶ್ವರದ ಇತಿಹಾಸ ಪ್ರಸಿದ್ಧ ಬಲರಾಮನ ಸನ್ನಿಧಿಯೂ ನವೀಕರಣಗೊಳ್ಳುತ್ತಿರುವುದು ಒಂದು ಯೋಗಾನುಯೋಗವೇ ಸರಿ. ಈ ಹಿನ್ನೆಲೆಯಲ್ಲಿ ಉಭಯ ಸನ್ನಿಧಿಗಳ ಬಾಂಧವ್ಯದ ದ್ಯೋತಕವಾಗಿ ಶ್ರೀ ಪೇಜಾವರ ಶ್ರೀಗಳು ಶುಕ್ರವಾರದಂದು ಅಯೋದ್ಯೆಯ ಬಲರಾಮನ ಸನ್ನಿಧಿಯಲ್ಲಿ ಸಂಕರ್ಷಣ ಶಾಲಗ್ರಾಮವೊಂದನ್ನಿಟ್ಟು ಪವಿತ್ರ ಕಲಶೋದಕದಿಂದ ಅಭಷೇಕ ಸಹಿತ ಪೂಜೆ ಮಾಡಿ ವಡಭಾಂಡೇಶ್ವರದ ಬಲರಾಮನ ದಿವ್ಯ ಸನ್ನಿಧಿಗೆ ಕಳುಹಿಸಿಕೊಟ್ಟರು.

Read More »

LPG ಸಿಲಿಂಡರ್​ ಬೆಲೆಯಲ್ಲಿ ಭಾರೀ ಇಳಿಕೆ : ಮಹಿಳಾ ದಿನದಂದೆ ಮಾಹಿತಿ ಕೊಟ್ಟ ಪ್ರಧಾನಿ

ನವದೆಹಲಿ : ಮಹಿಳಾ ದಿನಾಚರಣೆ ಹಾಗೂ ಶಿವರಾತ್ರಿ ದಿನದಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ. ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಬರೊಬ್ಬರಿ 100 ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ ಎಂದು ಸ್ವತಹ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದಾರೆ. ಎಲ್​​ಪಿಜಿ ಹೆಚ್ಚು ಹೆಚ್ಚಾಗಿ ಕೈಗೆಟುಕುವಂತೆ ಮಾಡುವ ಮೂಲಕ ಮಹಿಳೆಯರ ಯೋಗಕ್ಷೇಮ, ಕುಟುಂಬದ ಆರೋಗ್ಯಕರ ವಾತಾವರಣ ಕಾಪಾಡಲು ನಾವು ಮುಂದಾಗಿದ್ದೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸರಳವಾಗಿ ಬದುಕುವ ಖಾತ್ರಿಪಡಿಸುವುದು ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

Read More »

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣ: ದರೋಡೆಗೈದ ಚಿನ್ನಾಭರಣ ಪತ್ತೆ

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದು, ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ದರೋಡೆಕೋರರು ದರೋಡೆಗೈದ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪತ್ತೆ ಮಾಡಲಾಗಿದೆ. ಕೇರಳದ ಪೈವಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಕರ್ನಾಟಕ ಪೊಲೀಸರಿಗೆ ಚಿನ್ನವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಅಡ್ಯಡ್ಕದಲ್ಲಿರುವ ಬ್ಯಾಂಕ್‌ನಿಂದ 4,20,70,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು …

Read More »

ಮಂಗಳೂರು : ಲಂಚ ಸ್ವೀಕಾರ ಮಾಡುವಾಗ ಸರ್ವೆಯರ್ ಲೋಕಾಯುಕ್ತ ಬಲೆಗೆ

ಮಂಗಳೂರು : ಲಂಚದ ಹಣ ಸ್ವೀಕಾರ ಮಾಡುವಾಗ ಜಮೀನು ಸರ್ವೆಯರ್ ಒಬ್ಬರು ಲೋಕಾಯುಕ್ತದ ಬಲೆಗೆ ಬಿದ್ದಿದ್ದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶೀತಲ್ ರಾಜ್ ಬಂಧಿತ ಆರೋಪಿಯಾಗಿದ್ದಾನೆ. ಜಮೀನಿನ ಪಹಣಿಯಲ್ಲಿನ ಹೆಸರನ್ನು ತೆಗೆಯಲು ನಿಯಮದಂತೆ ಜಮೀನನ್ನು ಸರ್ವೆ ಮಾಡಿ ನಕ್ಷೆ ತಯಾರಿಸಿ ತತ್ಕಾಲ್ ಪೋಡಿ ಮುಖಾಂತರ ತೆಗೆಯುವ ಪ್ರಕ್ರೀಯೆ ಇರುತ್ತದೆ.ಗುರುಪುರ ಹೋಬಳಿಯಲ್ಲಿರುವ ನೀರುಮಾರ್ಗ ಗ್ರಾಮದ ಶ್ರೀಮತಿ ಲಿಲ್ಲಿ ಪೀಟರ್ ವಾಸ್ ಅವರಿಗೆ 72 ವರ್ಷ ವಾಗಿದ್ದು ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರವಾಗಿ ದೂರುದಾರರು ಸ್ಟೆಲ್ಲಾ ಜನೆಟ್ ವಾಸ್ ಇವರ ಹೆಸರಿಗೆ …

Read More »

You cannot copy content of this page.