ತಾಜಾ ಸುದ್ದಿ

ಸಾಲ ಭಾದೆ; ಉಡುಪಿ ಮೂಲದ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಬೆಂಗಳೂರು  : ಉಡುಪಿ ಮೂಲದ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ಮೃತರನ್ನು ಉಡುಪಿ ಅಂಬಲಪಾಡಿ ಮೂಲದ ಸುಕನ್ಯಾ (58) ಜೊತೆ 28 ವರ್ಷದ ಅವಳಿ ಮಕ್ಕಳಾದ ನಿಖಿತ್‌ ಮತ್ತು ನಿಶ್ಚಿತ್‌ ಎಂದು ಗುರುತಿಸಲಾಗಿದೆ. ಸುಕನ್ಯಾ ಪತಿ ಜಯಾನಂದ್‌ ಫ್ಯಾಕ್ಟರಿ ನಡೆಸುತ್ತಿದ್ದರು. ಕೊರೊನಾ ಲಾಕ್ ಡೌನ್ ನಿಂದಾಗಿ ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಜಯಾನಂದ್‌ ಫ್ಯಾಕ್ಟರಿ ಬಂದ್‌ ಮಾಡಿದ್ದರು. ಜಯಾನಂದ್‌ ಸಾಕಷ್ಟು ಸಾಲ ಮಾಡಿದ್ದರಿಂದ ಸುಕನ್ಯಾ ಮನೆಯಲ್ಲಿ ಟ್ಯೂಷನ್‌ ಹೇಳಿಕೊಡುತ್ತಿದ್ದರು. ಇಬ್ಬರು ಮಕ್ಕಳಲ್ಲಿ ಓರ್ವ ಮಗ …

Read More »

ಮಂಗಳೂರು: ತುಳು ರಂಗಕರ್ಮಿ, ಮೇರುನಟ, ನಿರ್ದೇಶಕ ವಿ.ಜಿ ಪಾಲ್ ನಿಧನ

ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ವಿ.ಜಿ. ಪಾಲ್‌ ಎಂದೇ ಖ್ಯಾತರಾಗಿರುವ ರಂಗಕರ್ಮಿ, ಸಂಘಟಕ, ನಿರ್ದೇಶಕ ವೇಣುಗೋಪಾಲ್‌ ಟಿ. ಕೋಟ್ಯಾನ್‌ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಂಗಳೂರಿನ‌ ಬೊಕ್ಕಪಟ್ಣದಲ್ಲಿ 1946ರಲ್ಲಿ ಜನಿಸಿದ ಅವರು ಬೊಕ್ಕಪಟ್ಣ ಶಾಲೆಯಲ್ಲಿ ಶಿಕ್ಷಣ, ಬಳಿಕ ಐಟಿಐ ಶಿಕ್ಷಣ ಪಡೆದ ಅವರು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿದ್ದರು. ಅವರು ಸುಮಾರು 3 ಸಾವಿರಕ್ಕೂ ಅಧಿಕ ‌ನಾಟಕಗಳಲ್ಲಿ ಅಭಿನಯಿಸಿದ್ದರು.ಇವರು ೧೦೧ ಸಿನಿಮಾಗಳಲ್ಲಿ ನಟಿಸಿದ್ದು, ದುಬೈ ಕೊಲ್ಲಿ ರಾಷ್ಟ್ರಗಳಿಗೆ ತುಳು ಸಿನಿಮಾ ಪರಿಚಯಿಸಿದ ಕೀರ್ತಿ ವಿ.ಜಿ. ಪಾಲ್‌ …

Read More »

ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು

ಬಂಟ್ವಾಳ: ಇಲ್ಲಿನ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಕ್ಷ (28) ಮೃತಪಟ್ಟ ಯುವಕ. ಲೋಹಿತಾಶ್ವ ಅವರು ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಂ, ಪ್ರಮೋದ್, ದಯಾನಂದ ಅವರಿಂದಿಗೆ ಕಾರ್‌ನಲ್ಲಿ ಶಂಭೂರಿಗೆ ಹೋಗಿದ್ದರು. ಈ ವೇಳೆ ಸ್ನೇಹಿತರು ಸ್ನಾನಕ್ಕೆಂದು ನದಿಗೆ ಇಳಿದಿದ್ದರೂ ಲೋಹಿತಾಕ್ಷ ಅವರು ದಡದಲ್ಲಿ ಕುಳಿತಿದ್ದರು. ಅದರೆ ಸ್ನೇಹಿತರು ಸ್ನಾನ ಮಾಡಿ ಹಿಂದಿರುಗಿದ ವೇಳೆ ಅವರು ನೀರಿನಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ನದಿ ದಡದಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ …

Read More »

ಮಲ್ಪೆ: ಬೀಚ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಆರು ಮಂದಿ ಬಂಧನ

ಮಲ್ಪೆ: ಬಡಾನಿಡಿಯೂರು ಗ್ರಾಮದ ಕದಿಕೆ ಬೀಚ್‌ನ ಸಮುದ್ರ ತೀರದಲ್ಲಿ ನಸುಕಿನ ವೇಳೆ ಮದ್ಯ ಸೇವಿಸುತ್ತಿದ್ದ ಆರು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ರಾತ್ರಿ ವೇಳೆ ಬೀಚ್‌ನಲ್ಲಿ ಮದ್ಯಪಾನ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಿಂದ ದಾಳಿ ನಡೆಸಿದ ಪೊಲೀಸರು ಸಂತೋಷ್(36), ಯಶವಂತ್ (39), ದಿಕ್ಷೀತ್(24), ಪ್ರಸಾದ್(28), ಲೊಕೇಶ್(39), ದೀರಜ್(33) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!

ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಜೆಪಿ ನಗರದ 3 ನೇ ಹಂತದಲ್ಲಿ ಈ ಘಟನೆ ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. . ಘಟನೆ ನಡೆದ ಸ್ಥಳಕ್ಕೆ ಜೆಪಿ ನಗರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.   ತಾಯಿ ಸುಕನ್ಯಾ (48), ಮಕ್ಕಳಾದ ನಿಖಿತ್, ನಿಶಿತ್ (28) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಖಾಸಗಿ ಬ್ಯಾಂಕ್ ಕಿರುಕುಳಕ್ಕೆ ಬೇಸತ್ತು ಪತಿ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More »

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಯ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್‌ ಜಾಬೀರ್‌ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಜಾಬೀರ್‌ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ನಿವಾಸಿಯಾಗಿದ್ದಾನೆ.

Read More »

ಲೋಕಸಭಾ ಚುನಾವಣೆ| ದ.ಕನ್ನಡದ 19 ಮಂದಿಯ ಗಡಿಪಾರು

ಮಂಗಳೂರು: ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್ವಾಲ್ ರೌಡಿಗಳ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದ 19 ಮಂದಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಈ‌ ಕ್ರಮ ಕೈಗೊಂಡಿದ್ದಾರೆ. ಮೂಡುಬಿದಿರೆ ವಿಶಾಲನಗರದ ಹುಡ್ಕೊ ಕಾಲೊನಿಯ ಅತ್ತೂರು ನಸೀಬ್‌ (40), ಕಾಟಿಪಳ್ಳ ದುರ್ಗಾಪರಮೇಶ್ವರಿನಗರದ ಶ್ರೀನಿವಾಸ ಎನ್‌ (24), ಬಜಪೆ ಶಾಂತಿಗುಡ್ಡೆಯ ಬದ್ರಿಯಾನಗರದ ಮಹಮ್ಮದ್ ಸಫ್ವಾನ್‌ (28), ಕಾವೂರು ಕೆಎಚ್‌ಬಿ ಕಾಲೊನಿಯ ಜಯೇಶ್‌ ಅಲಿಯಾಸ್‌ ಸಚ್ಚು (28), ನೀರುಮಾರ್ಗ ಪೆದಮಲೆ ಭಟ್ರಕೋಡಿಯ ವರುಣ್‌ ಪೂಜಾರಿ (30), ಅಶೋಕನಗರ ಕೋಡಿಕಲ್‌ನ ಮಹಮ್ಮದ್ ಅಜೀಜ್‌ …

Read More »

ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಕೇಸ್: ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಕೋರ್ಟ್​ ಗೆ ಸಿಐಡಿ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದ ಸಿಐಡಿ, ಇದೀಗ ಎಫ್​ಎಸ್​​ಎಲ್​ ವರದಿ ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. 2023ರ ಜುಲೈ 18ರಂದು ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದ ಘಟನೆ ನಡೆದಿತ್ತು. ಬಳಿಕ ಇದು ದೊಡ್ಡ ವಿವಾದವಾಗಿತ್ತು. ನಂತರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು.

Read More »

ಸುಳ್ಯ: ಕೂಜಿಮಲೆ ನಕ್ಸಲರಿಗಾಗಿ ಮುಂದುವರೆದ ಕೂಂಬಿಂಗ್ ಕಾರ್ಯಾಚರಣೆ

ಸುಳ್ಯ: ದಕ್ಷಿಣಕನ್ನಡ ಹಾಗೂ ಕೊಡಗಿನ ಗಡಿಭಾಗ ಕಲ್ಮಕಾರಿನ ಗಡಿಯೊಂದರಲ್ಲಿ ದಿನಸಿ ಅಂಗಡಿಯಲ್ಲಿ ಸಾಮಾಗ್ರಿ ಖರೀದಿಸಿದ್ದ ನಕ್ಸಲರ ತಂಡದ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದೆ. ದಕ್ಷಿಣ ಕನ್ನಡ ಗಡಿ ಮತ್ತು ಮಡಿಕೇರಿ ತಾಲ್ಲೂಕಿನ ಕಡಮಕಲ್ಲು, ಕೂಜಿಮಲೆ ಅರಣ್ಯ ವ್ಯಾಪ್ತಿಯ ಕಲ್ಮಕಾಡು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಾಲ್ವರು ಬಂದೂಕುದಾರಿಗಳು ಆಗಮಿಸಿದ್ದರು. ಗ್ರಾಮದ ಅಂಗಡಿಯೊಂದಕ್ಕೆ ಆಗಮಿಸಿದ ಅವರು, 25 ಕೆಜಿ ಅಕ್ಕಿ ಸೇರಿ ಸುಮಾರು 3,500 ರೂಪಾಯಿಯ ದಿನಸಿ ಪದಾರ್ಥವನ್ನ ಖರೀದಿಸಿ ಅಲ್ಲಿಂದ ತೆರಳಿದ್ದಾರೆ. ತಂಡದಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಇದೀಗ …

Read More »

ಉಡುಪಿಯ ನಂ.1 ಬೀಡಿ ಮಾಲೀಕ ಟಿ.ಕೃಷ್ಣಪ್ಪ ನಿಧನ

ಉಡುಪಿ: ನಂ.1 ಬೀಡಿ ಮಾರ್ಕಿನ ಮಾಲೀಕ ತಾಂಗದಗಡಿ ನಿವಾಸಿ ಟಿ.ಕೃಷ್ಣಪ್ಪ ಅವರು ಇಂದು ನಸುಕಿನ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 78 ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಟಿ.ಕೃಷ್ಣಪ್ಪ ಅವರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು‌ 51 ವರ್ಷಗಳ ಹಿಂದೆ ನಂ.1 ಬೀಡಿಯನ್ನು ಕರಾವಳಿಗೆ ಪರಿಚಯಿಸಿದ್ದರು. ಅಂದಿನಿಂದ ಇಂದಿನಿಂದವರೆಗೂ ನಂ.1 ಬೀಡಿ ಕರಾವಳಿಯಾದ್ಯಂತ ಪ್ರಖ್ಯಾತಿ ಪಡೆದಿದೆ. ಮೃತರು ಪತ್ನಿ, ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Read More »

You cannot copy content of this page.