ತಾಜಾ ಸುದ್ದಿ

ಮಂಗಳೂರು: ವಾಕಿಂಗ್ ತೆರಳಿದ್ದ ಯುವಕ ನಾಪತ್ತೆ..!

ಮಂಗಳೂರು: ನಗರ ಮೋರ್ಗನ್ ಗೇಟ್ ಬಳಿಯ ರೈಲ್ವೇ ಟ್ರಾಕ್ ಪಕ್ಕದಲ್ಲಿ ವಾಕಿಂಗ್ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಮಂಗಳೂರು ನಡೆದಿದೆ. ನಾಪತ್ತೆಯಾದ ಯುವಕ ವೈದ್ಯನಾಥ ನಗರದ ನಿವಾಸಿ ವಿಕಾಸ್(26 ಎಂದು ಗುರುತಿಸಲಾಗಿದೆ. ಇವರು ತಮ್ಮ ಸಂಬಂಧಿಯೊಂದಿಗೆ ಮನೆಯಿಂದ ಶುಕ್ರವಾರ ಸಂಜೆ ವಾಕಿಂಗ್ ತೆರಳಿದವರು ವಾಪಸ್ ಬಂದಿಲ್ಲ. ಈ ಬಗ್ಗೆ ಆತನ ತಾಯಿ ಸೀತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಕೋಟ್ಯಂತರ ರೂ. ಗೋಡಂಬಿ ವಂಚನೆ; ದೂರು ದಾಖಲು

ಬ್ರಹ್ಮಾವರ: ಫ್ಯಾಕ್ಟರಿಯೊಂದರಿಂದ ಸೂರತ್‌ ಮತ್ತು ಅಹ್ಮದಾಬಾದ್‌ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ತಲುಪಿಸದೆ ವಂಚಿಸಲಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏ. 2ರಂದು ಲಾರಿ ಚಾಲಕ 1,21,76,598 ರೂ. ಮೌಲ್ಯದ 24.69 ಮೆಟ್ರಿಕ್‌ ಟನ್‌ ರಮ್ಜಾನ್ ಸೊಧಾ, ಮಹೇಂದ್ರಪುರಿ ಲಾಲ್‌ಪುರಿ ಗುಶಾಯಿ ಗೋಡಂಬಿ ತುಂಬಿಸಿ ಸೂರತ್‌ ಮತ್ತು ಅಹ್ಮದಾಬಾದ್‌ ಕಡೆಗೆ ಹೊರಟಿದ್ದನು. ಈ ಲಾರಿಯು ಏ. 5ರಂದು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿಲ್ಲ. ಬಳಿಕ ಚಾಲಕನ ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ಈ ಬಗ್ಗೆ ಫ್ಯಾಕ್ಟರಿ ಮಾಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ …

Read More »

ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಸ್ ಢಿಕ್ಕಿ ಹೊಡೆದು ಮೃತ್ಯು..!

ಉಡುಪಿ: ಖಾಸಗಿ ಬಸ್ ವೊಂದು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾವನ್ನಪ್ಪಿದ ವ್ಯಕ್ತಿ ಬ್ಯಾಂಡ್ ವಾದಕ ಕಟಪಾಡಿ ತೇಕಲತೋಟದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕುಮಾರ್‌ (55) ಎಂದು ತಿಳಿದು ಬಂದಿದೆ. ಪಾದಚಾರಿಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ಕಳೆದುಕೊಂಡ ಬಸ್ ಡಿವೈಡರ್ ಮೇಲೆ ಏರಿ …

Read More »

ಯುವಕನ ಮೇಲೆ ದುಷ್ಕರ್ಮಿಗಳ ತಂಡದಿಂದ ಹಲ್ಲೆ…!!

ಹೆಬ್ರಿ : ಕಾರ್ಕಳ ಸಮೀಪದ ಮುದ್ರಾಡಿ ಗ್ರಾಮದ ಬಲ್ಲಾಡಿ ದರ್ಖಾಸು ಜಂಕ್ಷನ್ ಬಳಿ ತಂಡವೊಂದು ಮುದ್ರಾಡಿ ಗ್ರಾಮದ ಸುನಿಲ್‌ (32) ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ ‌ ರಾತ್ರಿ 7.15ರ ವೇಳೆ ಸುನಿಲ್‌ ಸ್ನೇಹಿತರ ಜತೆ ಮಾತನಾಡುತ್ತಿದ್ದಾಗ ಜೀಪು ಮತ್ತು ಬೈಕ್‌ನಲ್ಲಿ ಬಂದ ಚಂದ್ರ, ದಿವಾಕರ, ಮಂಜುನಾಥ ಮತ್ತು ಪ್ರವೀಣ ಎಂಬವರು ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಸುನಿಲ್‌ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More »

ಮಂಗಳೂರಿನ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಯುಗಾದಿ ಸಂಭ್ರಮ ಹೆಚ್ಚಿಸಿದ ಶೆಟ್ಟಿ ಸಹೋದರಿಯರು

ಮಂಗಳೂರು:  ಪ್ರಭಾವಿ ಇನ್‌ಫ್ಲುಯೆನ್ಸರ್‌ಗಳಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಅವರು ಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಕಲ್ಯಾಣ್‌ ಜ್ಯುವೆಲ್ಲರ್ಸ್‌ನಲ್ಲಿ ಯುಗಾದಿ ಸಂಭ್ರಮವನ್ನು ಹೆಚ್ಚಿಸಿದರು. ಅವರ ಉಪಸ್ಥಿತಿಯು ವಾರ ಕಾಲ ನಡೆದ ಯುಗಾದಿ ಆಚರಣೆಯ ಸಂಭ್ರಮವನ್ನು ಹೆಚ್ಚಿಸಿತಲ್ಲದೆ , ಯುಗಾದಿ ಸಂದರ್ಭಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಭರಣಗಳ ಸಂಗ್ರಹವನ್ನೂ ಅನಾವರಣಗೊಳಿಸಿದರು. ಯುಗಾದಿ ಆಚರಣೆಯ ಸಿದ್ದತೆಗಳು ಬಿರುಸಿನಿಂದ ಸಾಗಿರುವಾಗ, ನಿಸ್ಸಂದೇಹವಾಗಿಯೂ ಶೆಟ್ಟಿ ಸಹೋದರಿಯರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕಲ್ಯಾಣ್‌ ಜ್ಯುವೆಲ್ಲರ್ಸ್‌ನಲ್ಲಿ ತಮ್ಮ ಫಾಲೋವರ್‌ಗಳ ಜತೆ ʻಭೇಟಿ ಮಾಡಿ, ಶುಭಾಶಯ ಹೇಳಿʼ (ಮೀಟ್‌ ಅಂಡ್‌ ಗ್ರೀಟ್‌) ಮಾದರಿಯ ಕಾರ್ಯಕ್ರಮದಲ್ಲಿ ಶೆಟ್ಟಿ …

Read More »

ಉಡುಪಿ: ಅಮೆಝಾನ್ ಕಸ್ಟಮರ್‌ಕೇ‌ರ್ ಹೆಸರಿನಲ್ಲಿ 90 ಸಾವಿರ ರೂ. ಆನ್‌ಲೈನ್‌ ವಂಚನೆ

ಉಡುಪಿ: ಅಮೆಝಾನ್ ಕಂಪೆನಿಯ ಕಸ್ಟಮರ್‌ಕೇರ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ಸಾವಿರಾರು ರೂ.ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಬೆಳ್ಳೆಯ ರೋಶನ್ ಜಾಯ್(43) ಎಂಬವರು ಅಮೆಝಾನ್ ಕಂಪನಿಯಲ್ಲಿ ಆನ್‌ಲೈನ್ ಮೂಲಕ ಗ್ಲೀಸರ್ ಬುಕ್ ಮಾಡಿದ್ದು ಈ ವಸ್ತು ಬಾರದ ಕಾರಣ ಗೂಗಲ್‌ನಲ್ಲಿ ಅಮೆಝಾನ್ ಕಂಪನಿಯ ಕಸ್ಟಮರ್ ಕೇರ್ ನಂಬ‌ರ್ ಹುಡುಕಿ ನಂಬ್ರಕ್ಕೆ ಕರೆ ಮಾಡಿದ್ದರು. ಈ ವೇಳೆ ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ರೋಶನ್, ತನ್ನ ವೈಯಕ್ತಿಕ ಮಾಹಿತಿ, ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದರು. ತದನಂತರದಲ್ಲಿ ರೋಶನ್ ಅವರ ಗಮನಕ್ಕೆ ಬಾರದೇ ಅವರ …

Read More »

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ : 3 ನಾಮಪತ್ರ ತಿರಸ್ಕೃತ…!!

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಾಮಪತ್ರಗಳ ಪರಿಶೀಲನೆಯು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯಿತು. 13 ಅಭ್ಯರ್ಥಿಗಳು ಒಟ್ಟು 19 ನಾಮಪತ್ರಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡು, 10 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಘೋಷಿಸಿದರು. ಪಕ್ಷೇತರ ಅಭ್ಯರ್ಥಿಗಳಾದ ಕೆ.ಆರ್ ಕುಸುಮ, ರಾಜ್ ಬಲ್ಲಾಳ್ ಹಾಗೂ ಹೆಚ್ ಸುರೇಶ್ ಪೂಜಾರಿ ಅವರ ನಾಮಪತ್ರಗಳು ತಿರಸ್ಕಾರಗೊಂಡಿವೆ.ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ. ಜಯಪ್ರಕಾಶ್ ಹೆಗ್ಡೆ, ಭಾರತೀಯ …

Read More »

H5N1 ಇದು ಕೋವಿಡ್‌ಗಿಂತ ಭೀಕರ ಸೋಂಕು…ಜಗತ್ತಿಗೆ ಹರಡುವ ಆತಂಕದಲ್ಲಿ ತಜ್ಞರು..!

ಮಂಗಳೂರು ( ಅಮೆರಿಕಾ ) :“ಇದು ಕೋವಿಡ್‌ಗಿಂತ ನೂರು ಪಟ್ಟು ಕೆಟ್ಟದಾಗಿದೆ ಮತ್ತು ಸೋಂಕಿತರಲ್ಲಿ ಅರ್ಧದಷ್ಟು ಜನ ಸಾವಿಗೀಡಾಗುವ ಸಂಭವ ಇದೆ.” ಹೀಗಂತ ಮಾರಣಾಂತಿಕ ಸೋಂಕೊಂದರ ಬಗ್ಗೆ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಯುಕೆ ಮೂಲದ ‘ಟ್ಯಾಬ್ಲಾಯ್ಡ್‌ ಡೈಲಿ ಮೇಲ್‌’ ವರದಿ ಮಾಡಿದ್ದು, ಈ ವಿಚಾರವನ್ನು ಇತ್ತೀಚೆಗೆ ಸಂಶೋಧಕರು ನಡೆಸಿದ H5N1ಕುರಿತಾದ ಚರ್ಚೆಯಲ್ಲಿ ಎತ್ತಲಾಗಿದೆ. ಸಂಶೋಧಕರು ಭೀಕರವಾದ ಪರಿಣಾಮ ಬೀರಬಲ್ಲ ಅಂತಹ ಒಂದು ಸೋಂಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಡೈಲಿ ಮೇಲ್‌ ವರದಿ ಪ್ರಕಾರ ಈ ವೈರಸ್ ಜಾಗತಿಕ …

Read More »

ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡದಲ್ಲಿ 90 ಸಾವಿರ ಲೀ. ಮದ್ಯ ವಶಕ್ಕೆ

ಮಂಗಳೂರು : ಲೋಕಸಭಾ ಚುನಾವಣೆ 2024ಕ್ಕೆ ನೀತಿ ಸಂಹಿತೆ ಜಾರಿಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು 90,443 ಲೀಟರ್‌ಗಳಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದಾಗಿನಿಂದ 1,95,47,179 ರೂಪಾಯಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದ್ದರೆ, ಏ.3 ರಂದು 8,69,950 ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಈ ವರೆಗೆ 278 ಎಫ್ಐಆರ್ ದಾಖಲಾಗಿದೆ. ರಾಜ್ಯದಲ್ಲಿ ಲೋಕಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಏ.26 ರಂದು ಮೊದಲ ಹಂತದಲ್ಲಿ ನಡೆದರೆ ಮೇ.7 ರಂದು 2 ನೇ ಹಂತದಲ್ಲಿ ಮತದಾನ ನಡೆಯಲಿದೆ.ರಾಷ್ಟ್ರೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಎನ್‌ಜಿಆರ್‌ಎಸ್) …

Read More »

ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ ಸೌಜನ್ಯ ಪರ ಹೋರಾಟ ಸಮಿತಿ- ನೋಟಾ ಅಭಿಯಾನ

ಮಂಗಳೂರು: ಸೌಜನ್ಯಪರ ಹೋರಾಟ ನಡೆಸುತ್ತಿರುವ ಸಮಿತಿ ಇದೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸೌಜನ್ಯಪರ ಹೋರಾಟ ಸಮಿತಿಯ ಮುಖಂಡ ಗಿರೀಶ್ ಮಟ್ಟಣ್ಣನವರ್ ಕಳೆದ 11 ವರ್ಷಗಳಿಂದ ಸೌಜನ್ಯಗಳಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸಿದರು ಕೂಡ ಪ್ರಮುಖ ರಾಜಕೀಯ ಪಕ್ಷಗಳಿಂದ ಸ್ಪಂದನೆ ಸಿಗದ ಕಾರಣ ಈ ನೋಟಾ ಜಾಗೃತಿ ಅಭಿಯಾನ ಪ್ರಾರಂಭಿಸಲಾಗಿದೆ ಎಂದರು. ನೋಟ ಬಗ್ಗೆ ಜನ ಜಾಗೃತಿ ಅಗತ್ಯವಿದೆ ಎಂದು ನ್ಯಾಯಾಲಯವೇ ಹೇಳಿದೆ. ಚುನಾವಣಾ ಆಯೋಗವೂ …

Read More »

You cannot copy content of this page.