ತಾಜಾ ಸುದ್ದಿ

ಬಿಜೆಪಿಯಿಂದ ಕೆಎಸ್‌ ಈಶ್ವರಪ್ಪ 6 ವರ್ಷಗಳ ಕಾಲ ಉಚ್ಛಾಟನೆ

ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಗನಿಗೆ ಟಿಕೆಟ್ ಕೈತಪ್ಪಿದ ನಂತರ ಬಂಡೆದ್ದಿರುವ ಕೆಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ಮುಜುಗರ ತಂದಿತ್ತು. ಈಶ್ವರಪ್ಪ ಮನವೊಲಿಸಲು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ನಾಯಕರು ಪ್ರಯತ್ನ ಮಾಡಿದ್ದರು. ಆದರೆ ಯಾವುದಕ್ಕೂ ಬಗ್ಗದ ಈಶ್ವರಪ್ಪ ಸ್ಪರ್ಧೆ ಮಾಡಿದ್ದಾರೆ.   ತಮ್ಮ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಭಾವಚಿತ್ರ ಬಳಸುವ ಮೂಲಕ ಬಿಜೆಪಿಗೆ ಮತ್ತಷ್ಟು ತಲೆನೋವು ತಂದಿದ್ದರು. …

Read More »

ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

ಯಾದಗಿರಿ: ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಫಯಾಜ್ ಎಂಬಾತ ಯಾದಗಿರಿ ನಗರದಲ್ಲಿ ದಲಿತ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಯಾದಗಿರಿ ನಗರದ ಶಹಾಪುರಪೇಟೆಯ ಯುವಕ ರಾಕೇಶ್ (22) ಮೃತಪಟ್ಟ ಯುವಕ. ರವಿವಾರ ರಾತ್ರಿ ರಾಕೇಶ್ ರೊಟ್ಟಿ ಕೇಳಿದಕ್ಕೆ ನಡೆದ ಮಾತಿನ ಚಕಮಕಿಯಿಂದಾಗಿ ಫಯಾಜ್ ರಾಕೇಶನ ಮನೆಗೆ ನುಗ್ಗಿ ಮಲಗಿದ್ದ ಯುವಕನ ಗುಪ್ತಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ. ಪ್ರತಿ ನಿತ್ಯ ರಾಕೇಶ ಎಂಬಾತ ರೊಟ್ಟಿ ಕೇಂದ್ರಗಳಿಗೆ ಅಥವಾ ಅಕ್ಕ-ಪಕ್ಕದ ಮನೆಯಲ್ಲಿ ರೊಟ್ಟಿ ಕೇಳಿ ಪಡೆದು ಊಟ ಮಾಡುತ್ತಿದ್ದು, ರವಿವಾರ ರಾತ್ರಿ ಸಹ ರೊಟ್ಟಿ …

Read More »

ಕ್ಯಾಪ್ಟನ್‌ ಬ್ರಿಜೇಶ್ ಚೌಟರು ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ಬಗ್ಗೆ ಪ್ರಧಾನಿ ಮೆಚ್ಚುಗೆ

ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು, ಬ್ರಿಜೇಶ್ ಚೌಟ ಸೇನಾ ಹಿನ್ನೆಲೆ ಹೊಂದಿರುವ ಅಭ್ಯರ್ಥಿ ಎನ್ನುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಸೇನೆಯಲ್ಲಿ ಪ್ರತಿ ದಾಳಿ ಕಾರ್ಯಾಚರಣೆಗೆ ಹೆಸರಾಗಿರುವ ಗೋರ್ಖಾ ರೆಜಿಮೆಂಟಿನಲ್ಲಿ ನೀವು ಸೇವೆಗೈದಿದ್ದೀರಿ ಎನ್ನುವುದು ಶ್ಲಾಘನೀಯ. ಅಲ್ಲದೆ, ಮಂಗಳೂರು ಲಿಟ್ ಫೆಸ್ಟ್ ಆಯೋಜಿಸುವ ಮೂಲಕ ನೀವು ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆಯನ್ನು ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ …

Read More »

ಮಣಿಪಾಲ: ಸ್ಕೂಟರ್, ಕಾರಿಗೆ ಡಿಕ್ಕಿ – ಕಾರು ಚಾಲಕ ಪರಾರಿ, ಮೂವರಿಗೆ ಗಾಯ

ಮಣಿಪಾಲ: ಸ್ಕೂಟರ್‌ ಹಾಗೂ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾದ ಘಟನೆ ನಡೆದಿದೆ. ಮಣಿಪಾಲದ ಅಲ್ಕಾ ಹಾಗೂ ಸಹಸವಾರೆ ನಯನಾ ಅವರು ಸ್ಕೂಟರ್‌ನಲ್ಲಿ ಬಿಗ್‌ ಬಾಸ್‌ ಹೊಟೇಲ್‌ ಸಮೀಪ ಇರುವ ಯು ಟರ್ನ್ ತಲುಪುತ್ತಿದ್ದಂತೆ ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ಅತೀ ವೇಗದಿಂದ ಆಗಮಿಸಿದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರ ತ್ವನೀರ್‌ ಕೌರ್‌ಗೂ ಡಿಕ್ಕಿ ಹೊಡೆದಿದ್ದಾನೆ. ಮೂರು ಮಂದಿ ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಣಿಪಾಲ ಪೊಲೀಸ್‌ …

Read More »

ಮಂಗಳೂರು: ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಏರ್ ಬುಲೆಟ್ ಪತ್ತೆ

ಮಂಗಳೂರು: ಹೆಬ್ಬಾವುವೊಂದರ ದೇಹದಲ್ಲಿ ಬರೋಬ್ಬರಿ 11 ಏರ್‌ ಬುಲ್ಲೆಟ್‌ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಹೆಬ್ಬಾವು ಸಂಚಾರವಿದ್ದು, ಮಂಗಳೂರಿನ ಆನೆಗುಂಡಿ ಬಳಿ ಹೆಬ್ಟಾವೊಂದು ಪರ್ಶಿಯನ್‌ ಬೆಕ್ಕನ್ನು ತಿಂದು ನುಂಗಲಾರದೆ ಸಂಕಷ್ಟಪಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಉರಗತಜ್ಞರಿಗೆ ಕರೆ ಮಾಡಿದರು. ಆಗ ಹೆಬ್ಬಾವಿನ ದೇಹ ತಪಾಸಣೆಗೆ ಒಳಪಡಿಸಿದಾಗ ದೇಹದಲ್ಲಿ 11 ಬುಲ್ಲೆಟ್‌ ಪತ್ತೆಯಾಯಿತು. ಹೆಬ್ಬಾವು ಪರ್ಶಿಯನ್‌ ಕ್ಯಾಟ್‌ ತಿನ್ನುವಾಗ ಅದರ ಕತ್ತಿನ ಕೆಳ ಭಾಗದಲ್ಲಿ ಬಲೆ ಸಿಲುಕಿ ನುಂಗಲಾರದೆ ಕಷ್ಟಪಡುತ್ತಿತ್ತು. ಉರಗತಜ್ಞ ಭುವನ್‌ ದೇವಾಡಿಗ ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ …

Read More »

ಮಲ್ಪೆ: ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಮೃತ್ಯು…!!

ಮಲ್ಪೆ: ಮಲ್ಪೆ ಬೀಚ್ಗೆ ಪ್ರವಾಸಕ್ಕೆ ಬಂದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಮೃತರನ್ನು ಮಂಡ್ಯ ಮೂಲದ ನಾಗೇಂದ್ರ(21) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಕಲಿಯುತ್ತಿದ್ದು, ಒಟ್ಟು ಐವರು ಮಲ್ಪೆ ಬೀಚ್ಗೆ ಪ್ರವಾಸಕ್ಕೆ ಬಂದಿದ್ದರು. ಇವರೆಲ್ಲ ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಕೂಡಲೇ ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆ ಎತ್ತಿದರು. ಬಳಿಕ ತಮ್ಮ ಆ್ಯಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಅವರು ದಾರಿಮಧ್ಯೆ ಮೃತಪಟ್ಟರು …

Read More »

ಕಾರ್ಕಳ : ಕಂಬಳ ಕ್ರೀಡಾಂಗಣದಲ್ಲಿ ಕೇರಳ ಮೂಲದ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ : ಮಿಯ್ಯಾರು ಕಂಬಳ ಕ್ರೀಡಾಂಗಣದಲ್ಲಿ ಕೇರಳ ಮೂಲದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ವಿಜೇಶ್ ಯಾನೆ ಮೋಹನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಏ. 19 ರಾತ್ರಿಯಿಂದ ಏ.20ರ ಬೆಳಗಿನ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ವಿಜೇಶ್ ಮಾಳದಲ್ಲಿ ವಾಸಿಸುತ್ತಿದ್ದು ಶೇಂದಿ ವ್ಯಾಪಾರ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ

Read More »

ಬ್ರಿಜೇಶ್ ಚೌಟ ಪರ ರೋಡ್ ಶೋ: ಎಪ್ರಿಲ್ 23ಕ್ಕೆ ಪುತ್ತೂರಿಗೆ ಅಣ್ಣಾಮಲೈ

ಪುತ್ತೂರು  : ಮಾಜಿ ಐಪಿಎಸ್ ಅಧಿಕಾರಿ ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಎಪ್ರಿಲ್ 23 ರಂದು ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರವಾಗಿ ರೋಡ್ ಶೋ ನಡೆಯಲಿದೆ ಎಪ್ರಿಲ್ 23 ರಂದು ಬೆಳಿಗ್ಗೆ 8.30ಕ್ಕೆ ಅಣ್ಣಾಮಲೈ ಅವರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸುವರು. 10.30ಕ್ಕೆ ಪುತ್ತೂರಿಗೆ ಬರಲಿದ್ದು, ದರ್ಬೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸುವರು. ಬಳಿಕ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯ ಕಾರ್ಯಕ್ರಮಕ್ಕೆ ತೆರಳುವರು. ಮಧ್ಯಾಹ್ನ 3 ಗಂಟೆಗೆ ಬೆಳ್ತಂಗಡಿ ಶಾಸಕ …

Read More »

ಕಾರ್ಕಳ: ವಿದ್ಯುತ್ ಶಾಕ್ ಹೊಡೆದು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವು

ಕಾರ್ಕಳ : ರಾತ್ರಿ ವೇಳೆ ಕಾರ್ಕಳ ತಾಲೂಕಿನ ಕೆದಿಂಜೆಯಲ್ಲಿ ವಿದ್ಯುತ್‌ ಶಾಕ್‌ನಿಂದ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಅನಂತೇಶ್ವರ (29) ಎಂಬವರು ಮೃತಪಟ್ಟ ಘಟನೆ ಸಂಭವಿಸಿದೆ. ರಾತ್ರಿ 9 ಗಂಟೆ ವೇಳೆಗೆ ರಾಡ್‌ ಕಟ್ಟಿಂಗ್‌ ಕೆಲಸ ಮಾಡುತ್ತಿರುವ ವೇಳೆ ವಿದ್ಯುತ್‌ ಶಾಕ್‌ ಹೊಡೆದಿದೆ. ಸ್ಥಳೀಯರು ಅವರನ್ನು ತತ್‌ಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಾಕ್‌ಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ವೇಳೆ ಪರಿಸರದಲ್ಲಿ ಮಳೆಯ ಜತೆ ಗುಡುಗು-ಮಿಂಚು ಕೂಡ ಬರುತ್ತಿತ್ತು ಎನ್ನಲಾಗಿದೆ.

Read More »

ಮಂಗಳೂರು: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಮೇಯರ್ ಕವಿತಾ ಸನಿಲ್

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ (Kavita Sanil) ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.ಬಳಿಕ ಮಾತನಾಡಿದ ಕವಿತಾ ಸನಿಲ್, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ನಾನು ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು. ದೇಶಕ್ಕೆ ಮೋದಿ ನಾಯಕತ್ವ ಅಗತ್ಯವಿದೆ. ಅವರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಇದಕ್ಕೂ ಮೊದಲು ನನ್ನ ರಾಜಕೀಯ ಗುರು ಬಿ. ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ ಎಂದರು.

Read More »

You cannot copy content of this page.