ತಾಜಾ ಸುದ್ದಿ

ಮಂಗಳೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

ಮಂಗಳೂರು: ಕಾವೂರಿನ ಪೆಟ್ರೋಲ್‌ ಪಂಪ್‌ವೊಂದರಲ್ಲಿ ಏಣಿ ವಿದ್ಯುತ್‌ ತಂತಿಗೆ ತಗಲಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉತ್ತರ ಪ್ರದೇಶದ ವಾರಾಣಾಸಿ ಮೂಲದ ಪಂಪ್‌ ಸಿಬಂದಿ ಸಂದೀಪ್‌ ಕುಮಾರ್‌ ವರ್ಮ (45) ಅವರು ಮೃತಪಟ್ಟಿದ್ದಾರೆ. ಪಂಪ್‌ನಲ್ಲಿ ಎಲೆಕ್ಟ್ರಿಶಿಯನ್‌ ಆಗಿ ಕೆಲಸ ಮಾಡುತ್ತಿದ್ದ ಅವರು ರವಿವಾರ ಕೆಲಸ ನಿಮಿತ್ತ ಏಣಿ ಕೊಂಡೊಯ್ದು ವಿದ್ಯುತ್‌ ಕಂಬಕ್ಕೆ ಒರಗಿಸಿಟ್ಟಿದ್ದರು. ಈ ಸಂದರ್ಭ ವಿದ್ಯುತ್‌ ಪ್ರವಹಿಸಿ ಸಂದೀಪ್‌ ಕುಮಾರ್‌ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಆ ವೇಳೆಗಾಗಲೇ ಮೃತಪಟ್ಟಿದ್ದಾರೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. …

Read More »

ಉಡುಪಿ: ಮನ ಸೂರೆಗೊಂಡ ವಿದುಷಿ ಸ್ಮೃತಿಯ ಭರತನಾಟ್ಯ

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಆಶ್ರಯದಲ್ಲಿ ನಡೆಸುವ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 43ರಲ್ಲಿ ಬೆಂಗಳೂರಿನ ವಿದುಷಿ ಸ್ಮೃತಿಯವರಿಂದ ಭರತನಾಟ್ಯ ಸೋಮವಾರದಂದು ಸಂಪನ್ನಗೊಂಡಿತು. ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೆ ಪ್ರತಿ ಸೋಮವಾರ ವೇದಿಕೆಯನ್ನು ನೃತ್ಯ ಶಂಕರ ಸರಣಿ ಮೂಲಕ ಕೊಡವೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಅನುವು ಮಾಡಿ ಕೊಡುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಸ್ಮೃತಿಯ ಕಾರುಬಾರು: 2-3ನೇ ತರಗತಿಯ ಪುಟ್ಟ ಸ್ಮೃತಿ ಶಾಲೆಯ ವಿವಿಧ ಸಾಂಸ್ಕತಿಕ ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ, ತನಗೇ ಅರಿವಿಲ್ಲದೆ ನೃತ್ಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಳು. …

Read More »

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್( ರಿ) ಉಡುಪಿ ಸಂಸ್ಥೆಯ ವತಿಯಿಂದ ಜಿಲ್ಲಾಮಟ್ಟದ ವಿಪ್ರ “ಭಕ್ತಿಸಂಗೀತ ಸ್ಪರ್ಧೆ”

ವಿಪ್ರ ಬಾಂಧವರಿಗಾಗಿ… ಮುಖ್ಯವಾಗಿ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಿ ಅವರ ಪ್ರತಿಭೆಯನ್ನು ಗುರುತಿಸುವುದಕೋಸ್ಕರ ಜಿಲ್ಲಾ ಮಟ್ಟದ ಭಕ್ತಿ ಗೀತೆ ಸ್ಪರ್ಧೆಯನ್ನು ದಿನಾಂಕ 12.05.2024ನೇ ಭಾನುವಾರ ಬ್ರಾಹ್ಮಿ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಸ್ಪರ್ಧೆಯು ನಾಲ್ಕು ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳು ಕ್ರಮವಾಗಿ 5000/-, 3000/- ಮತ್ತು 2000 /- ರೂ.ಗಳ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಈ ಭಕ್ತಿಗೀತೆಸ್ಪರ್ಧೆಯು 5 ವರ್ಷದಿಂದ 10 ವರ್ಷದವರೆಗೆ, 10 ವರ್ಷ ಮೇಲ್ಪಟ್ಟು 15 , 15 ವರ್ಷ ಮೇಲ್ಪಟ್ಟು …

Read More »

ಪುತ್ತೂರು: ಯುವಕ ನಾಪತ್ತೆ; ದೂರು ದಾಖಲು

ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿ ಯುವಕನೊಬ್ಬ ನಾಪತ್ತೆಯಾದ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಮೂಲೆ ನಿವಾಸಿ ದಿ.ಸಂಕಪ್ಪ ಪೂಜಾರಿ ಅವರ ಪುತ್ರ ದಿವಾಕರ (38) ನಾಪತ್ತೆಯಾದ ಯುವಕ. ಅಡುಗೆ ಕೆಲಸಕ್ಕೆ ಸಹಾಯಕರಾಗಿ ಹೋಗುತ್ತಿದ್ದ ಇವರು, ಏ.27 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ದಿವಾಕರ ಅವರ ಮೊಬೈಲ್‌ ಸ್ವಿಚ್ ಆಫ್ ಆಗಿದೆ ಎಂದು ಅವರ ಚಿಕ್ಕಪ್ಪ ಸೀತಾರಾಮ ಪೂಜಾರಿಯವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Read More »

ಉಡುಪಿ : ಹಾರ್ನ್ ಹಾಕಿದ್ದಕ್ಕೆ ಎಕ್ಸ್ ಪ್ರೆಸ್ ಬಸ್ ಚಾಲಕನಿಗೆ ಕಾರು ಚಾಲಕನಿಂದ ಹಲ್ಲೆ..!

ಉಡುಪಿ : ಹಾರ್ನ್ ಹಾಕಿ ಓವರ್ ಟೇಕ್ ಮಾಡಿದಕ್ಕೆ ಕಾರು ಚಾಲಕನೊಬ್ಬ ಬಸ್ಸನ್ನು ಅಡ್ಡಗಟ್ಟಿ  ಬಸ್ ಡ್ರೈವರಿಗೆ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಿತಕ್ಕೊಳಗಾದ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಮಾಸ್ಟರ್ ಹೆಸರಿನ ಎಕ್ಸ್ ಪ್ರೆಸ್ ಬಸ್  ಪಡುಬಿದ್ರೆ ಯ ಎರ್ಮಾಳ್ ಬಳಿ ಮುಂದಿನಿಂದ ಹೋಗುತ್ತಿದ್ದ ಕಾರು ಚಾಲಕನಿಗೆ ಹಾರ್ನ್ ಹಾಕಿ ಓವರ್ ಡೇಕ್ ಮಾಡಲು ಯತ್ನಿಸಿದ್ದಾನೆ. ಬಸ್ಸಿನ ಕರ್ಕಶ ಹಾರ್ನ್‌ಗೆ  ಆಕ್ರೋಶಗೊಂಡ ಕಾರು ಚಾಲಕ ಬಸ್ಸನ್ನು ಅಡ್ಡಗಟ್ಟಿ ಚಾಲಕನ …

Read More »

ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರಿಂದ ಕಣ್ಮನ ಸೆಳೆಯುವ ನೃತ್ಯ ಪ್ರದರ್ಶನ

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ 22.04.2024 ರ ಸಂಜೆ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಿದರು . ಸಾಂಪ್ರದಾಯಿಕ ಪುಷ್ಪಅಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಶ್ರದ್ಧಾ ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು . ನಡುವೆ ಪ್ರದರ್ಶಿಸಿದ “ಆಡಿಸಿದಳೇ ಯಶೋಧ -ಜಗದೋದ್ಧಾರನ ” ಮತ್ತು “ದುರ್ಗೆ ” ನೃತ್ಯವು ಪ್ರೇಕ್ಷಕರನ್ನು ಕಣ್ಮನಗೊಳಿಸಿತ್ತು . ಕೀಳಂಜೆ ಶ್ರೀ ಕೃಷ್ಣರಾಜ …

Read More »

ಕರಂಬಳ್ಳಿ : ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ,ಸನ್ಮಾನ

ಉಡುಪಿ ಜಿಲ್ಲಾ ಕೃಷಿಕ ಸಂಘ , ಕರಂಬಳ್ಳಿ ವಲಯ , ಕರಂಬಳ್ಳಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಜಂಟಿ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಾಕ್ಷಿಕೆ , ತೋಟಗಾರಿಕಾ ಹಣ್ಣು ಬೆಳೆಸುವ ಬಗ್ಗೆ ಮಾಹಿತಿ , ತಾರಸಿ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಶರ್ಮ , ಬಂಟಕಲ್ಲು. (ಮಲ್ಲಿಗೆ ಕೃಷಿ ) ಕುದಿ ಶ್ರೀನಿವಾಸ ಭಟ್ (ಹಣ್ಣ್ಣಿನ ಬೆಳೆ ) ಹಾಗು ಕುಮಾರಸ್ವಾಮಿ ಉಡುಪ (ತಾರಸಿ ಕೃಷಿ) ಅವರು ವೈಜ್ಞಾನಿಕ ಪದ್ದತಿಯಲ್ಲಿ …

Read More »

ಮಂಗಳೂರು: ವ್ಯಕ್ತಿಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾದ ದುಷ್ಕರ್ಮಿಗಳು..!

ಮಂಗಳೂರು: ದಾರಿ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಸುಮಾರು ಎರಡೂವರೆ ಪವನ್‌ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆ ಪೋಲಿಸ್ ಠಾಣಾ ವ್ಯಾಪ್ತಿಯ ಪೈವಳಿಕೆ-ಚೇವಾರ್ ರಸ್ತೆಯ ಕಟ್ಟದಪಮನೆ ಎಂಬಲ್ಲಿ ನಡೆದಿದೆ. ಕಟ್ಟದಮನೆ ಗೋಪಾಲ ಕೃಷ್ಣ ಭಟ್ ಚಿನ್ನದ ಸರ ಕಳೆದುಕೊಂಡವರು. ಇವರು ಬೆಳಗ್ಗೆ ಮನೆ ಸಮೀಪದ ತೋಟಕ್ಕೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಹೆಲ್ಮೆಟ್ ಧಾರಿಯಾಗಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ದಾರಿ …

Read More »

ಮಂಗಳೂರು : ಮತದಾರರ ಪಟ್ಟಿಯಲ್ಲಿ ಅಬ್ದುಲ್ ನಾಯಿ ಹಾಗೂ ಗಡಸ್ ಹೆಸರು ಸೇರ್ಪಡೆ

ಮಂಗಳೂರು: ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವಾಗ ಎಷ್ಟು ಎಚ್ಚರವಹಿಸಿದರೂ ಕೂಡ ಕೆಲವೊಂದು ಎಡವಟ್ಟುಗಳು ನಡೆಯುತ್ತಲೇ ಇರುತ್ತದೆ.ಆದರೆ ಇಲ್ಲಿ ಮತದಾರರ ಪಟ್ಟಿಯಲ್ಲಿ ಎರಡು ವಿಚಿತ್ರ ಹೆಸರುಗಳು ಸೇರ್ಪಡೆಯಾಗಿದೆ. ಇದಕ್ಕಿಂತ ಒಂದು ಹೆಜ್ಜೆ ಹೋಗಿ ನಾಯಿ-ಹಸುಗಳೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿದೆ ಎನ್ನವಂತೆ ಎರಡು ಮತ ಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಹೆಸರುಗಳು ಹೊಟ್ಟೆ ಹುಣ್ಣಾಗುವಂತೆ ನಗು ತರಿಸಿದರೂ ಮತದಾರರ ಪಟ್ಟಿಯಲ್ಲಿ ಪ್ರಾಣಿಗಳೂ ಸ್ಥಾನ ಪಡೆದಿರುವುದನ್ನು ಕಂಡ ಸಾರ್ವಜನಿಕರು ಈ ರೀತಿಯ ಪ್ರಮಾದ ಎಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪುತ್ತೂರು …

Read More »

ಕುಂದಾಪುರ: ಇನ್ನೋವಾ ಕಾರು ಮರಕ್ಕೆ ಡಿಕ್ಕಿಯಾಗಿ ಯುವತಿ ಸಾವು ,ನಾಲ್ವರಿಗೆ ಗಾಯ

ಕುಂದಾಪುರ: ಇಲ್ಲಿನ ತೆಕ್ಕಟ್ಟೆ ಗುಡ್ಡೆಅಂಗಡಿ ರಾಷ್ಟ್ರೀಯ ಹೆದ್ದಾರಿ ಕೊಯ್ಕಾಡಿ ತಿರುವಿನಲ್ಲಿ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣದ ಕಡೆಗೆ ಆರು ಮಂದಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಯಿತು. ಪರಿಣಾಮ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬೆಂಗಳೂರು ಮೂಲದ ವಿಘ್ನೇಶ್‌ (28), ಚೇತನ್‌ (28), ಐಶ್ವರ್ಯಾ (27), …

Read More »

You cannot copy content of this page.