ತಾಜಾ ಸುದ್ದಿ

ಬ್ರಹ್ಮಾವರ: ನಾಟಿವೈದ್ಯ ಹಂದಾಡಿ ಗೋವಿಂದ ಪೂಜಾರಿ ನಿಧನ

ಬ್ರಹ್ಮಾವರ:ಹಿರಿಯ ನಾಟಿವೈದ್ಯ, ಕೃಷಿಕ ಹಂದಾಡಿ ಗೋವಿಂದ ಪೂಜಾರಿ (82) ಅಸೌಖ್ಯದಿಂದ ಮೇ 3ರಂದು ಹಂದಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿಿ, ಪುತ್ರ, ಇಬ್ಬರು ಪುತ್ರಿಿಯರನ್ನು ಅಗಲಿದ್ದಾಾರೆ. ಹಿರಿಯ ಕೃಷಿಕರಾದ ಗೋವಿಂದ ಪೂಜಾರಿಯವರು ಸ್ತ್ರೀ ಸಂಬಂಧಿತ ಅನಾರೋಗ್ಯ ಸಮಸ್ಯೆೆಗಳಿಗೆ ಔಷಧಿ ಕೊಡುತ್ತಿಿದ್ದರು. ಜಾನುವಾರುಗಳ ಕಾಲುಬಾಯಿ, ಕೆಚ್ಚಲುಬಾವಿನಂತಹ ಕಾಯಿಲೆಗಳು ಮತ್ತು ಗರ್ಭಧಾರಣೆ ಇತ್ಯಾಾದಿಗಳಿಗೆ ಸಂಬಂಧಿಸಿ ನಾಟಿ ಔಷಧಿ ಕೊಡುತ್ತಿಿದ್ದರು. ವಿವಿಧ ಕೃಷಿ ಪ್ರಯೋಗಗಳನ್ನು ನಡೆಸಿ ಇತರ ಕೃಷಿಕರಿಗೆ ಮಾರ್ಗದರ್ಶಿಯಾಗಿದ್ದರು. ಪಂಚಾಯಿತಿದಾರರಾಗಿಯೂ ಕಾರ್ಯನಿರ್ವಹಿಸಿದ್ದರು.

Read More »

ಮಣಿಪಾಲ: ಬ್ಯಾಂಕಿನವರ ಹೆಸರಿನಲ್ಲಿ ಯುವತಿ ಕರೆ | ಕ್ರೆಡಿಟ್ ಕಾರ್ಡ್‌ನಿಂದ ಸಾವಿರಾರು ರೂ. ವಂಚನೆ

ಮಣಿಪಾಲ: ಬ್ಯಾಂಕಿನವರ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್‌ನಿಂದ ಸಾವಿರಾರು ರೂ. ಹಣ ಜಮೆ ಮಾಡುವ ಮೂಲಕ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಶಶಿಧರ(46) ಎಂಬವರಿಗೆ ಮೇ 1ರಂದು ಬ್ಯಾಂಕಿನವರು ಎಂದು ಹೇಳಿ ಅಪರಿಚಿತ ಯುವತಿ ಕರೆ ಮಾಡಿದ್ದು, ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಮೋಸದಿಂದ ಕ್ರೆಡಿಟ್ ಕಾರ್ಡ್ ನಂಬರ್‌ ಹಾಗೂ ಸಿವಿವಿ ನಂಬ‌ರ್ ಪಡೆದುಕೊಂಡಿದ್ದಳು. ಬಳಿಕ ಓಟಿಪಿಯನ್ನು ಪಡೆದುಕೊಂಡು ಕ್ರೆಡಿಟ್ ಕಾರ್ಡ್‌ನಿಂದ 74,216ರೂ. ಹಣವನ್ನು ಜಮೆ ಮಾಡಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.

Read More »

ಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸೋದು ಸುರಕ್ಷಿತ- ಇಂಡಿಯನ್‌ ಆಯಿಲ್‌ ಸ್ಪಷ್ಟನೆ..!

ನವದೆಹಲಿ: ಕಡುಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸೋದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಇಂಡಿಯನ್‌ ಆಯಿಲ್‌ ಸ್ಪಷ್ಟಪಡಿಸಿದೆ. ಕಡುಬೇಸಿಗೆಯಲ್ಲಿ ವಾಹನಗಳಿಗೆ ಫುಲ್‌ ಟ್ಯಾಂಕ್‌ ಪೆಟ್ರೋಲ್‌, ಡೀಸೆಲ್‌ ಹಾಕಿಸಬೇಡಿ ಎಂದು ವಾಹನ ಸವಾರರಿಗೆ ಇಂಡಿಯನ್‌ ಆಯಿಲ್‌ ಕಂಪನಿ ಎಚ್ಚರಿಕೆ ನೀಡಿದೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದೀಗ ಈ ಬಗ್ಗೆ ಕಂಪನಿ ಸ್ಪಷ್ಟೀಕರಣ ನೀಡಿದೆ. ಆಟೋಮೊಬೈಲ್ ತಯಾರಕರು ಕಾರ್ಯಕ್ಷಮತೆಯ ಅಗತ್ಯತೆ ಮತ್ತು ಅಂತರ್ನಿರ್ಮಿತ ಸುರಕ್ಷತಾ ಅಂಶಗಳೊಂದಿಗೆ ಸುತ್ತುವರಿದ ಪರಿಸ್ಥಿತಿಗಳ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾಹನಗಳನ್ನು ವಿನ್ಯಾಸಗೊಳಿಸುತ್ತಾರೆ. ಪೆಟ್ರೋಲ್/ಡೀಸೆಲ್ ವಾಹನಗಳಿಗೆ …

Read More »

ಕಾರ್ಕಳ: ಟೆರೇಸಿನಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಕ್ಕೆ ಬಿದ್ದು ಸಾವು

ಅಜೆಕಾರು: ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸಿನಲ್ಲಿ ಮಲಗಿದ್ದ ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅಜೆಕಾರು ಬೊಂಡುಕುಮೇರಿ ಆಶ್ರಯ ನಗರ ನಿವಾಸಿ ಸುಂದರ್‌ ನಾಯ್ಕ (55) ಮೃತ ಶಿಕ್ಷಕ. ಅವರು ರಾತ್ರಿ ಸುಮಾರು 10.30ರ ವೇಳೆಗೆ ಟೆರೇಸಿನಲ್ಲಿ ಮಲಗಿದ್ದರು. ಬೆಳಗ್ಗೆ 6.30ರ ವೇಳೆಗೆ ಮನೆಯವರು ನೋಡುವಾಗ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಗಾಢ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ.

Read More »

ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ದೆಹಲಿ: ಕೇಂದ್ರ ಸರಕಾರ ದೇಶದಾದ್ಯಂತ ಆಧಾರ್ ಕಾರ್ಡ್‌ಅನ್ನು ಕಡ್ಡಾಯಗೊಳಿಸಿದೆ. ಭಾರತೀಯ ನಾಗರಿಕರನ್ನು ಗುರುತಿಸುವುದಕ್ಕಾಗಿ ಹಾಗೂ ದೇಶದ ಭದ್ರತೆ ದೃಷ್ಠಿಯಿಂದ ಆಧಾರ್ ಕಾರ್ಡ್‌ನ್ನು ಜಾರಿಗೊಳಿಸಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್‌ಗಳ ಅಪ್ಡೇಟ್ ಮಾಡಲು, ಹೊಸ ಆಧಾರ್‌ ಮಾಡಿಸಲು ಸೈಬರ್ ಸೆಂಟರ್ ಗಳು ಸರಕಾರಿ ಕಛೇರಿಗಳ ಮುಂದೆ ಮುಗಿ ಬೀಳುತ್ತಾರೆ. ಇದೀಗ ನಾಯಿಗಳಿಗೂ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಯಾಕಂದ್ರೆ ಇದೀಗ ನಾಯಿಗಳಿಗೂ ಆಧಾರ್ ಹೊಂದಿರಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆಯಂತೆ. …

Read More »

ಕರಾವಳಿ ಕರಾಟೆಪಟುಗಳಿಗೆ ಕಪ್ಪುಪಟ್ಟಿ

ತಾ 28.04.2024 ರಂದುಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ಇದರ ವತಿಯಿಂದ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ (ರಿ) ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮಶಾಲೆ ಇಲ್ಲಿ 2024 ನೇ ಸಾಲಿನ ಕರಾಟೆ ಕಪ್ಪು ಪಟ್ಟಿ ವಿಭಾಗದ ಪರೀಕ್ಷೆಯು ಜರುಗಿತು. ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ಎನ್. ಬಿ. ವಿಜಯ ಬಲ್ಲಾಳ್,ಮುಖ್ಯ ಅತಿಥಿಗಳಾದ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀ ಪ್ರಭಾಕರ್ ಪೂಜಾರಿ, ಯಕ್ಷಗಾನ ಕಲಾಕೇಂದ್ರ ಗುಂಡಿಬೈಲು ಇದರ ಅಧ್ಯಕ್ಷರಾದ ಶ್ರೀ ಬಾಬು ಗೌಡ, ವ್ಯಾಯಾಮಶಾಲೆ ಯ ಅಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿ, …

Read More »

ಬಂಟ್ವಾಳ: ಸ್ಕೂಟರ್ ಗೆ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಸಾವು

ಬಂಟ್ವಾಳ: ಟಿಪ್ಪರ್ ಲಾರಿಯೊಂದು ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ‌ ಬಳಿ ನಡೆದಿದೆ. ಮೃತರನ್ನು ನರಿಕೊಂಬು ಗ್ರಾಮದ ಪೊಯಿತ್ತಾಜೆ ನಿವಾಸಿ ಸುಬ್ಬ ಭಂಡಾರಿ(68) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅವರು ಬಿ.ಸಿ.ರೋಡಿನಲ್ಲಿ ನಡೆದ ಮದುವೆಗೆ ಬಂದಿದ್ದ ವೇಳೆ ಅಪಘಾತ ನಡೆದಿದೆ. ಅಪಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೊಂಚ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಂಟ್ವಾಳ ‌ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ‌ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ‌ ಸಾಮೂಹಿಕ ವಿವಾಹ- 123 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಜರುಗಿದ 52ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಒಟ್ಟು 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಶ್ರೀ ಧರ್ಮಸ್ಥಳ ದೇವಸ್ಥಾನದ ಮುಂಭಾಗದಿಂದ ಅಮೃತವರ್ಷಿಣಿ ಸಭಾಭವನದವರೆಗೆ ಸಾಮೂಹಿಕ ವಿವಾಹದ ಮೆರವಣಿಗೆ ನಡೆಯಿತು. ಬ್ಯಾಂಡ್, ವಾಲಗ, ನಂದಿ, ಆನೆಗಳು, ಹಕ್ಕಿ ನಿಶಾನೆ, ತಟ್ಟಿರಾಯ ಮೊದಲಾದ ವಿಶೇಷ ಆಕರ್ಷಣೆಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ವಧೂ – ವರರು ಭಾಗವಹಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಚಿತ್ರನಟ ದೊಡ್ಡಣ್ಣ ಮತ್ತಿತರರು ಪಾಲ್ಗೊಂಡಿದ್ದರು. ಈ ಹಿಂದೆ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ …

Read More »

ಮಂಗಳೂರು: ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್ – 16 ಲಕ್ಷದ ಸೊತ್ತು ವಶಕ್ಕೆ

ಮಂಗಳೂರು: ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 16,13,800 ರೂ. ಮೌಲ್ಯದ ಸೊತ್ತು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳ್ಳಾಲ ಪೋಸ್ಟ್ ಆಫೀಸ್ ಮುಂಭಾಗ, ಬಸ್ತಿಪಡ್ಪು ನಿವಾಸಿ ಮೊಹಮ್ಮದ್ ಇಶಾನ್(35), ಉಳ್ಳಾಲ, ಟಿ.ಸಿ. ರೋಡ್, ಅಕ್ಕರೆಕೆರೆ ನಿವಾಸಿ ಜಾಫರ್ ಸಾದಿಕ್(35) ಬಂಧಿತ ಆರೋಪಿಗಳು. ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ಬೃಹತ್ ಪ್ರಮಾಣದ ಎಂಡಿಎಂಎ ಮಾದಕದ್ರವ್ಯವನ್ನು ಅಕ್ರಮವಾಗಿ ದಾಸ್ತಾನಿರಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಬಂದ ಖಚಿತ ಮಾಹಿತಿ ಲಭ್ಯವಾಗಿತ್ತು. …

Read More »

ಬೆಳ್ತಂಗಡಿ: ತಂಡದಿಂದ ಮನೆಗೆ ನುಗ್ಗಿ ತಾಯಿ ಮತ್ತು ಮಗನ ಮೇಲೆ ಹಲ್ಲೆ..!

ಬೆಳ್ತಂಗಡಿ: ತಂಡವೊಂದು ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆಂಜ ಗ್ರಾಮದ ನಿವಾಸಿ ಸೇಸಮ್ಮ ಎಂಬವರ ಮನೆಯಲ್ಲಿ ಎ.30ರಂದು ರಾತ್ರಿ ಪೂಜಾ ಕಾರ್ಯ ನಡೆಯುತ್ತಿದ್ದ ಸಂದರ್ಭ ಅವರ ಸಂಬಂಧಿಕರೇ ಆದ ಯೋಗೀಶ್, ಆನಂದ ಬೀಜದಡಿ, ಶೇಖ‌ರ್, ಆನಂದ ಕುಲಾಡಿ, ಅಣ್ಣು ಗೌಡ, ಹರೀಶ್ ಹಾಗೂ ಇತರರು ಮನೆ ಬಳಿ ಬಂದು ಸೇಸಮ್ಮ ಅವರ ಮಗ ಹರೀಶ್ ನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದಾರೆ. ಇದಾದ …

Read More »

You cannot copy content of this page.