ತಾಜಾ ಸುದ್ದಿ

ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ

ಜಾಮ್ನರ್ : ರಜೆ ಕಳೆಯಲು ಮನೆಗೆ ಬಂದಿದ್ದ ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಜಾಮ್ನರ್ ನಲ್ಲಿ ಈ ಘಟನೆ ನಡೆದಿದೆ. ಜಾಮ್ನರ್ ಗಣಪತಿ ನಗರ ನಿವಾಸಿ ಪ್ರಕಾಶ್ ಗೋವಿಂದ ಕಪ್ಡೆ (37). ಅವರು ಈ ಹಿಂದೆ ಕೇಂದ್ರ ಸಚಿವ ನಾರಾಯಣ್ ರಾಣೆ, ಸಚಿವ ಛಗನ್ ಭುಜ್ಬಲ್ ಮತ್ತು ಕ್ರಿಕೆಟಿಗ ಸಚಿನ್ ತೆಡುಲ್ಕರ್ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದ್ದರು. ಮೃತರು ತಾಯಿ, ತಂದೆ, ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. …

Read More »

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೆ ಬೈಕ್ ಸವಾರ ಬಲಿ..!

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಪುತ್ತೂರಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಮೃತಪಟ್ಟ ಯುವಕ. ಮೋಕ್ಷಿತ್ ಗೌಡ ಪುರುಷರಕಟ್ಟೆಯಲ್ಲಿರುವ ಬಿಂದು ಫ್ಯಾಕ್ಟರಿಯಲ್ಲಿ ಸಿಫಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪುರುಷರಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದರು‌. ಮೋಕ್ಷಿತ್ ಸರ್ವಿಸ್ ಗೆ ಇಟ್ಟಿದ್ದ ತನ್ನ ಬೈಕನ್ನು ವಾಪಾಸು ತರುತ್ತಿದ್ದ ವೇಳೆ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯಲ್ಲಿ ಈ …

Read More »

ಕೇವಲ 5 ರೂಪಾಯಿಯ ಕುರ್ಕುರೆ ತಂದುಕೊಡಲಿಲ್ಲ ಎಂದು ಗಂಡನಿಗೆ ಡಿವೋರ್ಸ್…!

ಆಗ್ರಾ: ಒಂದು ಸಣ್ಣ ಕಾರಣದಿಂದಾಗಿ ಪತ್ನಿಯೊಬ್ಬಳು ಪತಿಯ ಜೊತೆ ಇರಲು ಸಾಧ್ಯವಿಲ್ಲವೆಂದು ವಿಚ್ಚೇದನ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಒಂದು ವರ್ಷದ ಹಿಂದೆ ಮದುವೆಯಾದ ದಂಪತಿ ಜೀವನದಲ್ಲಿ ಮನಸ್ತಾಪ ಆಗುವಂಥ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಪತ್ನಿಗೆ ಹುರಿದ ತಿನಿಸು ಅಂದ್ರೆ ಪ್ರಾಣ.ಅದರಲ್ಲೂ ಕುರ್ಕುರೆ ಆಕೆಗೆ ಅಚ್ಚುಮೆಚ್ಚು. ಈ ಕಾರಣದಿಂದ ಪ್ರತಿದಿನ ಪತಿಯ ಬಳಿ ತಪ್ಪದೇ 5 ರೂಪಾಯಿ ಕುರ್ಕುರೆ ತರುವಂತೆ ಹೇಳುತ್ತಿದ್ದಳು. ಆರಂಭದಲ್ಲಿ ಪತಿ ಪತ್ನಿ ಹೇಳಿದಂತೆ ಕುರ್ಕುರೆ ತಂದುಕೊಡುತ್ತಿದ್ದ ಆದರೆ ದಿನಗಳು ಕಳೆಯುತ್ತ ಹೋದಂತೆ ಪತಿ ಕೆಲಸದಲ್ಲಿ ನಿರತರಾಗಿದ್ದಾಗ, ಕುರ್ಕುರೆ ತರಲು …

Read More »

ಪಡುಬಿದ್ರಿ: ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾದ ಯುವಕನ ಶವ ಹೆಜಮಾಡಿಯಲ್ಲಿ ಪತ್ತೆ

ಪಡುಬಿದ್ರಿ: ಕಳೆದ ಮೂರು ದಿನಗಳ ಹಿಂದೆ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆ ಬಾಗಿಲಲ್ಲಿ ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾದ ಯುವಕನ ಶವ ಹೆಜಮಾಡಿ ಕೋಡಿ ಸಮುದ್ರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಶವವಾಗಿ ಪತ್ತೆಯಾದ ಯುವಕ ಬಜಪೆ ಅದ್ಯಪಾಡಿ ಹಳೆ ವಿಮಾನ ನಿಲ್ದಾಣ ಬಳಿ ನಿವಾಸಿ ಅಭಿಲಾಶ್ (24). ಈತ ಮಂಗಳೂರು ರೈಲ್ವೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಾಹಿಸುತ್ತಿದ್ದು, ತನ್ನ ಸುಮಾರು ಹತ್ತು ಮಂದಿ ಗೆಳೆಯರೊಂದಿಗೆ ಮುಲ್ಕಿಯ ಕೊಳಚಿ ಕಂಬಳ ಶಾಂಭವಿ ಹೊಳೆಗೆ ಮರುವಾಯಿ ಚಿಪ್ಪು ಹಾಗೂ ಏಡಿ ಹಿಡಿಯಲು ಬಂದಿದ್ದು, ಅಲ್ಲಿ …

Read More »

ಉಡುಪಿ: ಸಿಡಿಲು ಬಡಿದು ವ್ಯಕ್ತಿ ಸಾವು..!

ಉಡುಪಿ: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಸಿದ್ಧಾಪುರ ಗ್ರಾಮದ ಸುರೇಶ ಶೆಟ್ಟಿ (38) ಮೃತರು. ಉಡುಪಿ ಜಿಲ್ಲೆಯ ಹಲವೆಡೆ ಇಂದು ಸಂಜೆ ಧಾರಕಾರ ಮಳೆಯಾಗಿದೆ. ಈ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ ಸುರೇಶ್ ಶೆಟ್ಟಿ ಗಂಭೀರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

Read More »

ಉಡುಪಿ: ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯ

ಉಡುಪಿ: ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಉಡುಪಿಯ ಜಾಕೀರ್‌ ಹುಸೇನ್‌ ಅವರು ರಿಕ್ಷಾದಲ್ಲಿ ಅಂಬಾಗಿಲು ಕಡೆಯಿಂದ ಅಂಬಲಪಾಡಿ ಕಡೆಗೆ ಹೋಗುತ್ತಿರುವಾಗ ಚಾಲಕ ಸುಧಾಕರ ಅವರು ರಿಕ್ಷಾವನ್ನು ಅತಿವೇಗದಿಂದ ಚಲಾಯಿಸಿದ ಪರಿಣಾಮ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಮ್ಮದ್‌ ರಯಾನ್‌ ಹುಸೇನ್‌, ರಪಾನ್‌ ಜಾಕೀರ್‌ ಹುಸೇನ್‌ ಹಾಗೂ ಲೋನ್ಜಕೀರ್‌ ಹುಸೇನ್‌ ಗಾಯಗೊಂಡಿದ್ದಾರೆ.

Read More »

ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಹೆಚ್.ಡಿ. ರೇವಣ್ಣ ಬಿಡುಗಡೆ

ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಹಳೆ ನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.   ಇಂದು ಕೋರ್ಟ್ ನಲ್ಲಿ ನ್ಯಾಯಾಧೀಶರಿಂದ ಬಿಡುಗಡೆ ಆದೇಶ ಬಂದಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಹೆಚ್ ಡಿ ರೇವಣ್ಣಗೆ ಬಿಡುಗಡೆ ಭಾಗ್ಯ ದೊರೆತಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ಕುರಿತಂತೆ ಆದೇಶ ಹೊರಡಿಸಿದ್ದು, ಎಚ್ ಡಿ ರೇವಣ್ಣ …

Read More »

ಉಡುಪಿ: KSRTC ಬಸ್ ಢಿಕ್ಕಿ – ಪಾದಚಾರಿ ಮೃತ್ಯು..!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಉಡುಪಿ ಅಂಬಾಗಿಲು ಬಿರಿಯಾನಿ ಸ್ಪಾಟ್ ಹೋಟೆಲ್ ಎದುರುಗಡೆ ರಾಹೆ-66 ರಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಜಯರಾಮ್ (67) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ರಸ್ತೆ ದಾಟುತ್ತಿದ್ದ ಜಯರಾಮ್ ಅವರಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಅವರು, ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಮಣಿಪಾಲ್ ಎಂಐಟಿಯ 3ನೇ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಮಾಹೆ – ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸ್ವಯಂಸೇವಕರಿಗೆ ಮಣಿಪಾಲದಲ್ಲಿ ಮೇ 13 ರಿಂದ ಮೇ 20 ರವರೆಗೆ ಆಯೋಜಿಸಿದ್ದ ವಿಶೇಷ ಶಿಬಿರವನ್ನ ಉದ್ಘಾಟಿಸಿ ಭಾಷಣ ಮಾಡಿದರು. ಮಾಜಿ ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಕಾರ್ಯಕ್ರಮ ಸಮನ್ವಯ ಅಧಿಕಾರಿ ಡಾ.ಗಣನಾಥ್ ಎಕ್ಕಾರ್ ಅವರು ವಿದ್ಯಾರ್ಥಿ ಸಮೂಹವನ್ನು ಪರಿಸರ ಸೇವೆಗೆ ಪ್ರೇರೇಪಿಸುವ ಕುರಿತು ಪ್ರಮುಖ ಟಿಪ್ಪಣಿ ನೀಡಿದರು. ಎನ್‌ಎಸ್‌ಎಸ್ ಒಂದು ಅನುಭವವಾಗಿದ್ದು, ಇದು ಅನುಭವದ ಕಲಿಕೆಯನ್ನು ಹೊಂದಲು ಮತ್ತು ನಾಯಕತ್ವದ ಅಭಿವೃದ್ಧಿ ಮತ್ತು ಜ್ಞಾನವನ್ನು ಗಳಿಸಲು ಒಂದು ಅದ್ಭುತ ಅವಕಾಶವಾಗಿದೆ, ಇವು …

Read More »

ವಾರಣಾಸಿ: ಇಂದು ಬೆಳಗ್ಗೆ 11:40ರ ಶುಭ ಮುಹೂರ್ತದಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು (ಮಂಗಳವಾರ) ಬೆಳಗ್ಗೆ 11:40ರ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಲಿಸುವುದಕ್ಕೂ ಮುನ್ನ ಗಂಗಾ ನದಿಯಲ್ಲಿ ಸ್ನಾನ ಮಾಡಲಿದ್ದಾರೆ. ಬಳಿಕ ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆಯಲಿದ್ದಾರೆ. ಮಂಗಳವಾರ ಅಭಿಜಿತ್ ಮುಹೂರ್ತ, ಆನಂದ ಯೋಗ, ಸರ್ವಾರ್ಥಸಿದ್ಧಿ ಯೋಗ ಜೊತೆಗೆ ಭೌಮ ಪುಷ್ಯ ನಕ್ಷತ್ರದ ಕಾಕತಾಳೀಯ ಸಂಗಮವಾಗಿದ್ದು, ಇದು ಉತ್ತಮ ಮಹತ್ವದ ದಿನ ಎಂದು ಅಯೋಧ್ಯ ರಾಮ ಮಂದಿರ ಶಂಕುಸ್ಥಾಪನೆಗೆ ಶುಭ ಮುಹೂರ್ತ ನೀಡಿದ್ದ ಪಂಡಿತ್ ಗಣೇಶ್ವರ ಶಾಸ್ತ್ರಿ …

Read More »

You cannot copy content of this page.