ತಾಜಾ ಸುದ್ದಿ

ಗಾಂಧಿ ಆಸ್ಪತ್ರೆಯ 30ರ ಸಂಭ್ರಮದಿ ರಾಜಾಂಗಣದಲ್ಲಿ ಹರಿದು ಬಂದ ಗಂಗಾ ಹಾಗು ಅನುರೂಫ್ ಅಪರೂಪದ ವಯೋಲಿನ್ ನಾದಕ್ಕೆ ಮನಸೋತ ಕೃಷ್ಣನಗರಿ

ಖ್ಯಾತ ಬಾಲ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರನ್ ರವರ ವಯೋಲಿನ್ ವಾದನ ಕಛೇರಿ ಬುಧವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು. ಅಪಾರ ಜನಪ್ರಿಯತೆ ಯನ್ನು ಪಡೆದುಕೊಂಡಿರುವ ಈ ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ, ಗೌರವಿಸಿ ಹರಸಿದರು . ಗುರು ವಿದ್ವಾನ್ ಶ್ರೀ ಅನುರೂಪ್ ಹಾಗು ಪಕ್ಕವಾದ್ಯದಲ್ಲಿ ಸಹಕರಿಸಿದರನ್ನು ಪ್ರಸಾದ ನೀಡಿ ಗೌರವಿಸಿದರು ರಾಜಾಂಗಣ ದಲ್ಲಿ ನಡೆದ ಕಿಕ್ಕಿರಿದ ಕಲಾಪ್ರಿಯರು ಪಿಟೀಲುವಾದನದ ಸುಧೆಯನ್ನು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆಯ …

Read More »

ಉಳ್ಳಾಲ : ಎರಡು ಸ್ಕೂಟರ್‌ಗಳ ಮಧ್ಯೆ ಅಪಘಾತ – ಸಹ ಸವಾರ ಸಾವು..!

ಉಳ್ಳಾಲ : ಎರಡು ಸ್ಕೂಟರ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಸಹ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಗರದ ಹೊರವಲಯದ ಕಲ್ಲಾಪು ಜಂಕ್ಷನ್ ನಲ್ಲಿ ನಡೆದಿದೆ. ಉಳ್ಳಾಲ ಕೋಟೆಪುರ, ಕೋಡಿ ನಿವಾಸಿ ಅಹಮ್ಮದ್ ನಿಷಾದ್ (22) ಮೃತಪಟ್ಟ ಯುವಕ. ನಿಷಾದ್ ಮುಂಜಾನೆ 4ಗಂಟೆಯ ವೇಳೆಗೆ ಸಯ್ಯದ್ ಹಫೀಜ್ ಎಬುವರೊಂದಿಗೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಮಂಗಳೂರಿನಿಂದ ತೊಕ್ಕೊಟ್ಟಿಗೆ ಬರುತ್ತಿದ್ದರು. ಈ ವೇಳೆ ಕಲ್ಲಾಪು ಜಂಕ್ಷನ್ ನಲ್ಲಿ ತೊಕ್ಕೊಟ್ಟಿನಿಂದ ಬಂದು ಗ್ಲೋಬಲ್ ಮಾರ್ಕೆಟ್ ಗೆ ಕ್ರಾಸ್ ಆಗುತ್ತಿದ್ದ ಸ್ಕೂಟ‌ರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ …

Read More »

ಮಣಿಪಾಲ : ಗಾಂಜಾ ಸೇವನೆ : ಏಳು ಮಂದಿ ಅರೆಸ್ಟ್

ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ 14ರಂದು ಮಣಿಪಾಲ ವಿದ್ಯಾರತ್ನ ನಗರದ ಐರಿಶ್ ಫ್ಲಾಜಾದ ಬಳಿ ನಿಶಾಂತ್(22), ಅಮಿತ್(20), ಮೇ 12ರಂದು ಪ್ರಜ್ವಲ್(21), ಆರ್ಯನ್ (20), ಪ್ರಧುಮಾನ್, ಹೆಮಾನ್ಯ(20), ಸುಭಾಸ್(23) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಪರೀಕ್ಷಿಸಿದ ವೈದ್ಯರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಶ್ವ ಮೇ 15ರ ಮುಂಜಾನೆ 5.30ಕ್ಕೆ ಮನೆಗೆ ನುಗ್ಗಿ ಅಂಜಲಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಸದ್ಯ ಶೋಧ ನಡೆಸಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಶ್ವ ವೃತಿಯಲ್ಲಿ ಕಳ್ಳ. ಪ್ರವೃತಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ. ಮದ್ಯವ್ಯಸನಿ ಚಟಕ್ಕೆ ಬಲಿಯಾಗಿ ಕಳ್ಳತನ ಮಾಡಿ ಹಲವು ಸಲ ಸಿಕ್ಕಿ ಹಾಕಿಕೊಂಡಿದ್ದ. ಹಂತಕನ‌ ಪತ್ತೆಗೆ ಎರಡು ಪೊಲೀಸ್ ಟೀಮ್ …

Read More »

ಕೋವಿಶೀಲ್ಡ್ ಆಯ್ತು.. ಈಗ ಕೋವ್ಯಾಕ್ಸಿನ್‌ನಲ್ಲೂ ಸೈಡ್ ಎಫೆಕ್ಟ್‌ ಪತ್ತೆ …

ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಅಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ ಎನ್ನಲಾಗಿದೆ. ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಎನ್ನುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿಯಿಂದ ತಿಳಿದುಬಂದಿದೆ. ಕೋವ್ಯಾಕ್ಸಿನ್ ಪಡೆದವರಲ್ಲಿ ಅಧ್ಯಯನಕ್ಕೊಳಪಡಿಸಿದ್ದ 926 ಮಂದಿಯ ಪೈಕಿ ಶೇ.50 …

Read More »

ಕೋಟ: 3 ವರ್ಷದ ಮಗುವನ್ನು ಕಾರಿನಲ್ಲೆ ಮರೆತು ಮದುವೆಗೆ ಹೋದ ದಂಪತಿ – ಉಸಿರುಗಟ್ಟಿ ಸಾವನಪ್ಪಿದ ಬಾಲಕಿ3 ವರ್ಷದ ಮಗುವನ್ನು ಕಾರಿನಲ್ಲೆ ಮರೆತು ಮದುವೆಗೆ ಹೋದ ದಂಪತಿ – ಉಸಿರುಗಟ್ಟಿ ಸಾವನಪ್ಪಿದ ಬಾಲಕಿ

ಕೋಟ: ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನಲ್ಲಿ ಉಸಿರುಗಟ್ಟಿ ಸಾವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ …

Read More »

ಉಡುಪಿ: ಟೀ ಕುಡಿಯುತ್ತಿದ್ದಾಗ ಕುಸಿದು ಬಿದ್ದು ಯುವಕ ಮೃತ್ಯು

ಉಡುಪಿ: ಟೀ ಕುಡಿಯುವಾಗ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದ ಬಡಗಬೆಟ್ಟು ನಿವಾಸಿ ಮಂಜುನಾಥ (28) ಮೃತಪಟ್ಟಿದ್ದಾರೆ. ಅವರು ಸಾಸ್ತಾನ ಟೋಲ್‌ಗೇಟ್‌ನಲ್ಲಿ ಟೋಲ್ ಕಲೆಕ್ಟರ್ ಕೆಲಸ ಮಾಡಿಕೊಂಡಿದ್ದು, ಅನಾರೋಗ್ಯ ಸಮಸ್ಯೆಯಿಂದಾಗಿ ಕೆಲಸಕ್ಕೆ ಹೋಗಿರಲಿಲ್ಲ. ಬೀಡಿನಗುಡ್ಡೆಯಲ್ಲಿರುವ ಬಾವನ ಮನೆಯಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭ ಬಿದ್ದಿದ್ದರು. ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು, ಮಂಜುನಾಥ ಅವರು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೇರಳದಲ್ಲಿ ‘ಮೆದುಳು ತಿನ್ನುವ ಅಮೀಬಾ’ದಿಂದ ಉಂಟಾಗುವ ಅಪರೂಪದ ಸೋಂಕಿನ ‘PAM’ ಪ್ರಕರಣ ವರದಿ

ನವದೆಹಲಿ: ಕೇರಳದ ಐದು ವರ್ಷದ ಬಾಲಕಿಗೆ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಎಂದು ಕರೆಯಲ್ಪಡುವ ಅಪರೂಪದ ಮೆದುಳಿನ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಬಾಲಕಿಯನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಐಎಎನ್ಎಸ್ ತನ್ನ ವರದಿಯಲ್ಲಿ ತಿಳಿಸಿದೆ. ಮಗುವಿಗೆ ಆರಂಭದಲ್ಲಿ ಮಲಾಪುರಂನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದಾಗ್ಯೂ, ಅವರ ಸ್ಥಿತಿ ಹದಗೆಟ್ಟ ನಂತರ, ಅವರನ್ನು ಚಿಕಿತ್ಸೆಗಾಗಿ ಕೋಜಿಕೋಡ್ಗೆ ಸ್ಥಳಾಂತರಿಸಲಾಯಿತು. ಕೇರಳದಲ್ಲಿ ಪಿಎಎಂ ಪ್ರಕರಣ ಪತ್ತೆ: ಸೋಂಕು ಹೇಗೆ ಉಂಟಾಗುತ್ತದೆ? ಪಿಎಎಂಗೆ …

Read More »

ಪುತ್ತೂರು: ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ಪುತ್ತೂರು:  ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಅವರು ನಿನ್ನೆ ವಿಪರೀತ ಜ್ವರವಿದ್ದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಈ ಬಗ್ಗೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಅಡಿ ಭಾಗದಲ್ಲಿ ಗೆಡ್ಡೆಯ ಬಗ್ಗೆ ಸೂಚನೆ ನೀಡಿದ್ದರು. ಬಳಿಕ ಗೆಡ್ಡೆಯನ್ನ ತೆಗೆಯಬೇಕು ಎಂದು ಹೇಳಿ ಆಪರೇಷನ್ ಮಾಡಬೇಕೆಂದು ವೈದ್ಯರು ಕೃಷ್ಣಪ್ಪ ಮನೆಯವರಿಗೆ ಸೂಚನೆ ನೀಡಿದರು.ಈ ಬಗ್ಗೆ ಆಪರೇಷನ್ ಮಾಡಲು ಮೃತರ ಹೆಂಡತಿ ಸರೋಜಿನಿ ಮತ್ತು ಅತ್ತಿಗೆಯ …

Read More »

ಉಡುಪಿ: ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ..!

ಮಲ್ಪೆ: ಆದಿವುಡುಪಿ ಬಳಿಯ ಹೊಟೇಲೊಂದಕ್ಕೆ ಮಂಗಳವಾರ ಹತ್ತಿಕೊಂಡ ಬೆಂಕಿಯನ್ನು ನಂದಿಸಲು ಧಾವಿಸಿ ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರಿಲ್ಲದೆ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ! ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅರ್ಧಗಂಟೆಯ ಬಳಿಕ ಬಂದ ವಾಹನ ಮತ್ತು ಸಿಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎಂಬುದು ಗೊತ್ತಾಯಿತು. ತತ್‌ಕ್ಷಣ ನೀರು ತುಂಬಿಕೊಂಡು ಬರುತ್ತೇವೆ ಎಂದು ಮಲ್ಪೆಯತ್ತ ತೆರಳಿದ ವಾಹನ ಮರಳಿ ಬರಲೇ ಇಲ್ಲ ಎಂದು ನಗರಸಭೆ ಸದಸ್ಯ ಸುಂದರ್‌ ಜೆ. ಕಲ್ಮಾಡಿ ಆರೋಪಿಸಿದ್ದಾರೆ. ಅಷ್ಟರಲ್ಲಿ ಮಳೆ …

Read More »

You cannot copy content of this page.