ತಾಜಾ ಸುದ್ದಿ

ಮಂಗಳೂರು: 2 ತಿಂಗಳು ಮೀನುಗಾರಿಕೆ ಸ್ಥಗಿತ…

ಮಂಗಳೂರು: ಇನ್ನೇನು ನಾಲ್ಕೈದು ದಿನಗಳೊಳಗೆ ಮುಂಗಾರು ಕರಾವಳಿಗೆ ಪ್ರವೇಶಿಸಲಿದೆ. ಆದ್ದರಿಂದ ಮುಂದಿನ ಎರಡು ತಿಂಗಳ ಕಾಲ ಮೀನುಗಾರಿಕೆ ಸ್ಥಗಿತಗೊಳ್ಳಲಿದೆ. ಮಿನುಗಾರಿಕೆ ಸ್ಥಗಿತಗೊಳಿಸಿ ಬೋಟುಗಳು ಈಗಾಗಲೇ ತೀರ ಸೇರುತ್ತಿದ್ದು, ಮೀನುಗಾರರು ಬಲೆ ಹೆಣೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೂನ್ 1 ರಿಂದ ಜುಲೈ 31 ರವರೆಗೆ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧವಿದ್ದು, ಕಡಲ ಮಕ್ಕಳು ಸಮುದ್ರಕ್ಕೆ ಇಳಿಯದೆ ತೀರ ಸೇರಲೇಬೇಕಿದೆ. ರಾಜ್ಯ ಸರಕಾರದ ಸೂಚನೆ ಹಾಗೂ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಂತೆ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದನ್ನು ಸರಕಾರ ನಿಷೇಧಿಸಿದೆ. …

Read More »

ಕುಂದಾಪುರ: ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣ: ತಂದೆ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಅಪ್ರಾಪ್ತೆಯನ್ನು ವಿವಾಹವಾದ ಪ್ರಕರಣದಲ್ಲಿ ಯುವತಿಯ ತಂದೆ ಸಂತೋ಼ಷ್ ಶೆಟ್ಟಿ, ಬಾವ ರಾಜೇಶ್ ಶೆಟ್ಟಿ ಹಾಗೂ ಮದುವೆಯಾದ ವ್ಯಕ್ತಿ ತೊಂಭಟ್ಟು ನಿವಾಸಿ ಭರತ್ ಶೆಟ್ಟಿ(37) ಯ ಸಹಿತ ಮೂವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆ ಬಾಲಕಿಗೆ 17 ವರ್ಷ 8 ತಿಂಗಳಾಗಿದ್ದು, ವಿವಾಹ ಮಾಡಿಕೊಂಡಿರುವ ಆರೋಪಿ ಭರತ್ ಶೆಟ್ಟಿಗೆ 37 ವರ್ಷವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ವಿವಾಹ ಮಾಡಿರುವುದಾಗಿ ತಿಳಿದುಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ …

Read More »

ಸುರತ್ಕಲ್: ರೌಡಿಶೀಟರ್ ಕೊಲೆಗೆ ಯತ್ನ, ಕೋಡಿಕೆರೆ ಗ್ಯಾಂಗ್ ಕೃತ್ಯ ಆರೋಪ

ಸುರತ್ಕಲ್: ರೌಡಿಶೀಟರ್ ಓರ್ವನ ಕೊಲೆಗೆ ಯತ್ನ ನಡೆಸಿರುವ ಘಟನೆ ಸುರತ್ಕಲ್ ಬಳಿಯ ಕುಳಾಯಿ ಬಾರ್ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ.ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೋಜ್ ಕೋಡಿಕೆರೆ ಗ್ಯಾಂಗ್ ನವರು ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೀಡಾದ ಕೋಡಿಕೆರೆ ನಿವಾಸಿ ಭರತ್ ಶೆಟ್ಟಿ (32) ಸುರತ್ಕಲ್ ಠಾಣೆಗೆ ದೂರು ನೀಡಿದ್ದಾನೆ. ಭರತ್ ಶೆಟ್ಟಿ ಸುರತ್ಕಲ್ ಮತ್ತು ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಆರೋಪಿಯಾಗಿದ್ದು, ರೌಡಿ ಶೀಟರ್ ಆಗಿದ್ದು, ಕೋಡಿಕೆರೆ ಗ್ಯಾಂಗಿನಲ್ಲೇ ಇದ್ದ ಭರತ್ ಶೆಟ್ಟಿಗೆ ಗ್ಯಾಂಗ್ ಲೀಡರ್ ಮನೋಜ್ ಕೋಡಿಕೆರೆ ಜೊತೆ ವೈಮನಸ್ಸು ಉಂಟಾಗಿತ್ತು. ನಿನ್ನೆ …

Read More »

ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಭೂಮಿಯ 9 ಮತ್ತು 11 ದಾಖಲೆ ನೀಡಲು ಲಂಚ ಸ್ವೀಕರಿಸುತ್ತಿದ್ದ ಉಪ್ಪೂರು ಪಿಡಿಒ ಇನಾಯತ್‌ ಉಲ್ಲಾ ಬೇಗ್‌ ಹಾಗೂ ಬಿಲ್‌ ಕಲೆಕ್ಟರ್‌ ಸಂಜಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ರವಿ ಡಿಲಿಮಾ ಅವರಿಂದ 13,300 ರೂ. ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ಎಸ್‌ಪಿ ನಟರಾಜ್‌ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ. ಪ್ರಕಾಶ್‌ ಅವರ ನೇತೃತ್ವದಲ್ಲಿ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ್‌, ರಫೀಕ್‌ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈರ್ವರಿಗೂ ಜೂ. 12ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Read More »

ಮಂಗಳೂರು : ಸಹಾಯದ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ! ಆರೋಪಿ ಅರೆಸ್ಟ್

ಮಂಗಳೂರು: ಚಿಕಿತ್ಸೆಗೆಂದು ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪರಿಚಯಸ್ಥನೇ ಆಸ್ಪತ್ರೆಯಲ್ಲಿ ನಿರಂತರ ಅತ್ಯಾಚಾರ ಎಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆರೋಪಿ ಕೇರಳ ಮೂಲದ ಸಜಿತ್ ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೈಲ್ಸ್ ಗೆ ಚಿಕಿತ್ಸೆಗೆ ಯುವತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಜಿತ್, ಚಿಕಿತ್ಸೆಯ ಬಳಿಕ ಆಸ್ಪತ್ರೆಯ ಕೊಠಡಿಯಲ್ಲಿದ್ದ ವೇಳೆ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ನಗ್ನ ಫೋಟೋಗಳನ್ನ ತೆಗೆದಿದ್ದು, ಬೆದರಿಕೆ ಹಾಕುತ್ತಿದ್ದ. ಆ ಬಳಿಕ ನಗ್ನ ಫೋಟೋ ಇದೆ ಎಂದು ಬೆದರಿಸಿ, ಆಕೆಯನ್ನು ಮಂಗಳೂರಿನ ಖಾಸಗಿ …

Read More »

ಇಂದಿನಿಂದ ಮೂರು ದಿನ ಪ್ರಧಾನಿ ಮೋದಿ ʻಧ್ಯಾನʼ

ಕನ್ಯಾಕುಮಾರಿ : ಕಳೆದ ಎರಡು ತಿಂಗಳಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದಿನಗಳ ಕಾಲ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ ಧ್ನಾಯ ಕೈಗೊಳ್ಳಲಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ರಾಕ್ ಮೆಮೋರಿಯಲ್ ನಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ಮಂಗಳವಾರ ತಿಳಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗವು ಪ್ರಧಾನಿಯವರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು …

Read More »

ಲವ್ ಜಿಹಾದ್ – ನಾಪತ್ತೆಯಾಗಿದ್ದ ಶಿಕ್ಷಕಿ ಅನ್ಯಕೋಮಿನ ಯುವಕನ ಜೊತೆ ರೆಜಿಸ್ಟರ್ ಮ್ಯಾರೇಜ್…!!

ಕಾಸರಗೋಡು: ದಕ್ಷಿಣಕನ್ನಡ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಪತ್ತೆಯಾಗಿದ್ದು, ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ನಡೆಸಿದ್ದಾರೆ ಎಂದು ಆರೋಪಿಸಿವೆ. ಕಾಸರಗೋಡಿನ ಬದಿಯಡ್ಕದಲ್ಲಿ ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ಯುವತಿ ನಾಪತ್ತೆಯಾಗಿದ್ದಳು. ಮೇ.23ರಂದು ಮನೆಯಿಂದ ಹೊರಟ ಯುವತಿ ದಿಢೀರ್ ನಾಪತ್ತೆಯಾಗಿದ್ದಳು, ಈ ಕುರಿತಂತೆ ಯುವತಿಯ ತಂದೆ ಬದಿಯಡ್ಕದಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಈ ನಡುವೆ ಯುವತಿ ಹಾಗೂ ಯುವಕನೊಬ್ಬನ ಪೋಟೋ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿ ಮದುವೆ ಕುರಿತಂತೆ ನೋಟಿಸ್ …

Read More »

ಪುತ್ತೂರು: ನೇಣು ಬಿಗಿದು ಮಹಿಳೆ ಆತ್ಮಹತ್ಯೆಗೆ ಶರಣು..!

ಪುತ್ತೂರು: ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಮರೀಲ್ ಕಾಡಮನೆ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಆಟೋ ರಿಕ್ಷಾ ಚಾಲಕ, ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್ ಎಂಬವರ ಪತ್ನಿ ಸಂಧ್ಯಾ (45) ಎಂದು ಗುರುತಿಸಲಾಗಿದೆ. ಕಳೆದ 20 ವರ್ಷಗಳಿಂದ ಮನೋಜ್ ಅವರು ಪುತ್ತೂರಿನ ಮರೀಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮೇ 27ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆ ಮಾಡಲು ಮನೆಯಿಂದ ತೆರಳಿದ್ದ ಮನೋಜ್, ಮೇ 28ರಂದು ಬೆಳಿಗ್ಗೆ ಮನೆಗೆ ಹೋದಾಗ ಪತ್ನಿ ಮನೆಯ ಹಾಲ್‌ನ ಕಿಟಕಿಗೆ ನೇಣು ಬಿಗಿದು ಅಸ್ವಸ್ಥ …

Read More »

ಮಂಗಳೂರು- ಧರ್ಮಸ್ಥಳ ಸೂಪರ್‌ಫಾಸ್ಟ್ ಬಸ್ಸು ಆರಂಭ..!

ಮಂಗಳೂರು:ಕೆಎಸ್‌ಆರ್‌ಟಿಸಿ – | ಮಂಗಳೂರು ವಿಭಾಗ ಮಂಗಳೂರು ಮತ್ತು ಧರ್ಮಸ್ಥಳ ನಡುವೆ ನಾಲ್ಕು ‘ಸೂಪರ್‌ಫಾಸ್ಟ್’ – ಬಸ್ಸುಗಳನ್ನು ಪ್ರಾರಂಭಿಸಿದೆ. ಬಿಜೈಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಿಂದ ಕಾರ್ಯನಿರ್ವಹಿಸಲಿರುವ ಬಸ್ಸುಗಳು ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ನಿಲ್ಲಲಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳು ಬಿಜೈ ನಿಲ್ದಾಣದಿಂದ ಬೆಳಗ್ಗೆ 6.15, 6.40,7.15, 10, 10.45, 11.35, ಮಧ್ಯಾಹ್ನ12.15, 4.30,ಸಂಜೆ 5.15 ಮತ್ತು ಸಂಜೆ 6 ಗಂಟೆಗೆ ಹೊರಡಲಿದೆ. ಧರ್ಮಸ್ಥಳದಿಂದ ಬೆಳಗ್ಗೆ 7.45, 8.15, 8.45, 9.10ಕ್ಕೆ ಮಧ್ಯಾಹ್ನ1,2 2 1, 2.15, 3 ಹಾಗೂ …

Read More »

ರಘುಪತಿ ಭಟ್ ಕಾಲೆಳೆದ ಹಿಜಾಬ್ ಹೋರಾಟಗಾರ್ತಿ..!

ಉಡುಪಿ : ರಘುಪತಿ ಭಟ್ ಅವರೇ, ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ ಎಂದು ಹಿಜಾಬ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಬಿಜೆಪಿಯಿಂದ ಉಚ್ಚಾಟಿತ ಮಾಜಿ ಶಾಸಕ ರಘುಪತಿ ಭಟ್ ಕಾಲೆಳೆದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ ಅವರನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ …

Read More »

You cannot copy content of this page.